ದೈನಂದಿನ ಜೀವನದಲ್ಲಿ ನಿಮ್ಮ ಗೆಲುವು ನಿಮ್ಮ ವೈಫಲ್ಯಕ್ಕಿಂತ ಹೆಚ್ಚು ಗೋಚರಿಸುತ್ತದೆ. ಆದುದರಿಂದ ನೀವು ಯಶಸ್ವಿಯಾಗುವ ಸಾಧ್ಯತೆಗಳನ್ನು ಹೆಚ್ಚು ಅಂದಾಜು ಮಾಡುತ್ತೀರಿ. ಕೆಲವೊಮ್ಮೆ ನೀವು ಭ್ರಮೆಗೆ ಒಳಗಾಗಿ ತಪ್ಪಾಗಿ ಅಂದಾಜು ಮಾಡುತ್ತೀರಾ. ನೀವು ಜನಪ್ರಿಯ ಲೇಖಕರನ್ನು ನೋಡಿರುತ್ತೀರಾ, ಆದರೆ ಪ್ರತಿ ಜನಪ್ರಿಯ ಲೇಖಕನ ಹಿಂದೆ 100 ಇತರ ಬರಹಗಾರರು ಇರುತ್ತಾರೆ, ಅವರ ಪುಸ್ತಕಗಳು ಎಂದಿಗೂ ಮಾರಾಟವಾಗಿರುವುದಿಲ್ಲ. ಅವರ ಹಿಂದೆ ಇನ್ನೂ 100 ಬರಹಗಾರರಿಗೆ ಪ್ರಕಾಶಕರು ದೊರಕಿರುವುದಿಲ್ಲ. ಅವರ ಹಿಂದೆ ನೋಡಿದಾಗ ಇನ್ನೂ 100 ಬರಹಗಾರರಿರುತ್ತಾರೆ, ಅವರ ಅಪೂರ್ಣ ಬರಹಗಳ ಪ್ರತಿಗಳು ಡ್ರಾಯರ್ಗಳಲ್ಲಿ ಧೂಳು ಬಿದ್ದು ಹಾಗೇ ಉಳಿದುಕೊಂಡಿರುತ್ತವೆ ಮತ್ತು ಇವುಗಳಲ್ಲಿ ಪ್ರತಿಯೊಂದರ ಹಿಂದೆ 100 ಜನರು ಒಂದು ದಿನ ಪುಸ್ತಕ ಬರೆಯಬೇಕೆಂಬ ಕನಸು ಕಂಡಿರುತ್ತಾರೆ. ಆದರೆ ನೀವು ಯಶಸ್ವಿ ಲೇಖಕರ ಬಗ್ಗೆ ಮಾತ್ರ ಕೇಳಿರುತ್ತೀರಿ (ಈ ದಿನಗಳಲ್ಲಿ, ಅವರಲ್ಲಿ ಹಲವರು ಅವರ ಬರಹಗಳನ್ನು ಸ್ವಯಂ ಪ್ರಕಟಿಸಿಕೊಂಡಿರುತ್ತಾರೆ), ಮತ್ತು ಸಾಹಿತ್ಯಿಕವಾಗಿ ಕೂಡ ಯಶಸ್ಸನ್ನು ಗುರುತಿಸಲು ವಿಫಲವಾಗಿರುತ್ತೀರಿ. ಇದು ಉದಾಹರಣೆ ಅಷ್ಟೇ, ಇದರಂತೆ ಛಾಯಾಗ್ರಾಹಕರು, ವಾಣಿಜ್ಯೋದ್ಯಮಿಗಳು, ಕಲಾವಿದರು, ಕ್ರೀಡಾಪಟುಗಳು, ವಾಸ್ತುಶಿಲ್ಪಿಗಳು, ನೊಬೆಲ್ ಪ್ರಶಸ್ತಿ ವಿಜೇತರು, ದೂರದರ್ಶನ ನಿರೂಪಕರು ಮತ್ತು ಸೌಂದರ್ಯ ರಾಣಿಯರಿಗೂ ಇದು ಅನ್ವಯಿಸುತ್ತದೆ. ಮಾಧ್ಯಮಗಳು ವಿಫಲವಾದವರ ಬಗ್ಗೆ ತಿಳಿದುಕೊಳ್ಳಲು ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ. ಇದು ಅವರ ಕೆಲಸವೂ ಅಲ್ಲ ಎಂಬಂತೆ ಉಳಿದುಕೊಂಡಿರುತ್ತಾರೆ. ಇಂತಹ ಪಕ್ಷಪಾತ ಮತ್ತು ತಪ್ಪು ಅಂದಾಜನ್ನು ತಪ್ಪಿಸಲು, ನೀವೇ ಸ್ವತಃ ಇದರ ಅಗೆಯುವಿಕೆಯನ್ನು ಮಾಡಬೇಕಾಗುತ್ತದೆ ಮತ್ತು ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ.
ಕೃಪೆ: The Art of Thinking Clearly ಲೇಖಕರು: ರೋಲ್ಫ್ ಡೊಬೆಲ್ಲಿ
0 Comments
ಒಮ್ಮೆ ನನ್ನ ಪರಿಚಿತ ಡಾಕ್ಟರೊಬ್ಬರು ಮಾತನಾಡುತ್ತಾ ನನ್ನ ಪಕ್ಕದ ಮನೆಯ ಕೆಲಸದಾಕೆ ನನಗೆ 50,000 ಹಣದ ಸಹಾಯ ಮಾಡಿ ಎಂದಳು. ಆಗ ಅವಳ ಕಷ್ಟ ಕೇಳಿ ಸಹಾಯ ಮಾಡಲು ಚಿಂತಿಸಿದೆ. ನನ್ನ ಗಂಡ ಹಾಗೂ ಮನೆಯವರಿಗೆ ತಿಳಿಸದೆ ಸಹಾಯ ಮಾಡಲು ನಿರ್ಧರಿಸಿದೆ. 50,000 ಅತ್ಯಂತ ದೊಡ್ಡಮಟ್ಟದ ಹಣವಾಗಿರಲಿಲ್ಲ. ಅದನ್ನು ಮನೆ ಕೆಲಸದಾಕೆ ವಾಪಸ್ಸು ನೀಡದಿದ್ದರೆ ನನ್ನ ಬದುಕಿನಲ್ಲಿ ಅತ್ಯಂತ ದೊಡ್ಡ ಬದಲಾವಣೆಯೇನು ಆಗುತ್ತಿರಲಿಲ್ಲ ಎಂದು ಚಿಂತಿಸಿ, ಮನೆ ಕೆಲಸದಾಕೆಗೆ 50,000 ಸಹಾಯ ಮಾಡಿದೆ. ಆ ಹಣ ನೀಡುವಾಗ ಆಕೆಗೆ ಒಂದು ಮಾತು ಹೇಳಿದೆ, “ನಾನು ನಿನಗೆ ಹಾಗೂ ನಿನ್ನ ಕಷ್ಟ ನೋಡಿ ಸಹಾಯ ಮಾಡುತ್ತಿದ್ದೇನೆ. ಅಕಸ್ಮಾತ್ ನೀನು ಹಣ ಹಿಂತಿರುಗಿಸದೆ ಮೋಸ ಮಾಡಿದರೆ, ಖಂಡಿತ ನಾನು ಮುಂದೊಂದು ದಿನ ಪ್ರಾಮಾಣಿಕವಾಗಿ ಯಾರಾದರೂ ಅವರ ಕಷ್ಟ ಕಾಲದಲ್ಲಿ ಸಹಾಯ ಕೇಳಿದಾಗ ಸಹಾಯ ಮಾಡಲು ಮುಂದಾಗುವುದಿಲ್ಲ. ಹಾಗಾಗಿ ನೀನು ನನ್ನ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದ್ದೆ. ಆದರೆ ಮನೆ ಕೆಲಸದಾಕೆ 1 ವಾರಕ್ಕೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದಳು. ಸುಮಾರು ಬಾರಿ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಸುಮಾರು 3 ತಿಂಗಳು ಆಕೆಯನ್ನು ನನಗೆ ಹುಡುಕಲು ಸಾಧ್ಯವಾಗಲಿಲ್ಲ. ಆ 3 ತಿಂಗಳು ನನಗೆ ನನ್ನ ಈ ಉಪಕಾರ ಭಾವನೆ ಹಾಗೂ ನನ್ನ ನಿರ್ಧಾರದಿಂದ ಮನಸ್ಸಿನ ನೆಮ್ಮದಿ ಹಾಳಾಗಿತ್ತು. ಆದರೆ ಸುಮಾರು 6 ತಿಂಗಳು ಕಳೆದ ನಂತರ ಆಕೆ ನನ್ನ ಪೂರ್ತಿ ಹಣ ನನ್ನ ಖಾತೆಗೆ ವರ್ಗಾವಣೆ ಮಾಡಿ ಡಾಕ್ಟರ್ ನೀವು ಅಂದು ಹಣ ನೀಡುವಾಗ ಒಂದು ಮಾತು ಹೇಳಿದ್ದಿರಿ, ಅಕಸ್ಮಾತ್ ನೀನು ಹಣ ಹಿಂತಿರುಗಿಸದಿದ್ದರೆ ನೀವು ಮುಂದಿನ ದಿನಗಳಲ್ಲಿ ಯಾರಾದರೂ ಸಹಾಯ ಕೇಳಿದಾಗ ಮಾಡುವುದಿಲ್ಲ ಎಂದು. ಹಾಗಾಗಿ ನಾನು ನಿಮ್ಮ ಹಣ ಹಿಂತಿರುಗಿಸುತ್ತಿದ್ದೇನೆ ಎಂದಳು.
ಕೆಲವೊಮ್ಮೆ ಈ ರೀತಿಯ ಘಟನೆಗಳಿಂದಾಗಿ ನಾವು ಮತ್ತಷ್ಟು ಪ್ರಬುದ್ಧರನ್ನಾಗಿಸುತ್ತದೆ, ನಿತ್ಯ ಜೀವನದಿಂದ ಕಲಿಯುವ ಪಾಠ ಸದಾ ನಮ್ಮ ಜೀವನ ಸುಂದರವಾಗಿರುತ್ತವೆ ಅಲ್ಲವೆ? ರಮೇಶ ನಿರಾತಂಕ Follow the Ramesha Nirathanka Channel on WhatsApp: https://whatsapp.com/channel/0029Va4OLwtEVccDbgEAFY1Y IN AN ARTICLE IN BITS AND PIECES, (SOURCE : CARNEGIE, DALE. HOW TO WIN FRIENDS AND INFLUENCE PEOPLE)6/28/2023 In an article in Bits and Pieces,* some suggestions are made on how to keep a disagreement from becoming an argument: Welcome the disagreement. Remember the slogan,“When two partners always agree, one of them is not necessary.” If there is some point you haven’t thought about, be thankful if it is brought to your attention. Perhaps this disagreement is your opportunity to be corrected before you make a serious mistake. Distrust your first instinctive impression. Our first natural reaction in a disagreeable situation is to be defensive. Be careful. Keep calm and watch out for your first reaction. It may be you at your worst, not your best. Control your temper. Remember, you can measure the size of a person by what makes him or her angry. Listen first. Give your opponents a chance to talk. Let them finish. Do not resist, defend or debate. This only raises barriers. Try to build bridges of understanding. Don’t build higher barriers of misunderstanding. Look for areas of agreement. When you have heard your opponents out, dwell first on the points and areas on which you agree. Be honest. Look for areas where you can admit error and say so. Apologize for your mistakes. It will help disarm your opponents and reduce defensiveness. Promise to think over your opponents’ ideas and study them carefully. And mean it. Your opponents may be right. It is a lot easier at this stage to agree to think about their points than to move rapidly ahead and find yourself in a position where your opponents can say: “We tried to tell you, but you wouldn’t listen.” Thank your opponents sincerely for their interest. Anyone who takes the time to disagree with you is interested in the same things you are. Think of them as people who really want to help you, and you may turn your opponents into friends. Postpone action to give both sides time to think through the problem. Suggest that a new meeting be held later that day or the next day, when all the facts may be brought to bear. In preparation for this meeting, ask yourself some hard questions: Could my opponents be right? Partly right? Is there truth or merit in their position or argument? Is my reaction one that will relieve the problem, or will it just relieve any frustration? Will my reaction drive my opponents further away or draw them closer to me? Will my reaction elevate the estimation good people have of me? Will I win or lose?
IN AN ARTICLE IN BITS AND PIECES, (SOURCE : CARNEGIE, DALE. HOW TO WIN FRIENDS AND INFLUENCE PEOPLE) ಒಂದು ದಿನ ಬುದ್ಧನು ಸ್ವಲ್ಪ ಸಮಯದವರೆಗೆ ಒಬ್ಬನೇ ಹೋಗಲು ನಿರ್ಧರಿಸಿದನು. ಅವನು ತನ್ನ ಮುಖ್ಯ ಶಿಷ್ಯರಾದ ಆನಂದ, ಶಾರಿಪುತ್ರ ಮತ್ತು ಇತರರನ್ನು ಆಶ್ರಮದಲ್ಲಿಯೇ ಇರುವಂತೆ ಕೇಳಿಕೊಂಡನು. ಇದು ಅತ್ಯಂತ ಅಸಾಮಾನ್ಯವಾಗಿತ್ತು. ಏಕೆಂದರೆ ಸಾಮಾನ್ಯವಾಗಿ ಬುದ್ಧನು ಎಲ್ಲಿಗೆ ಹೋದರೂ, ಅವನ ಭಕ್ತರು ಮತ್ತು ಶಿಷ್ಯರು ಅವನೊಂದಿಗೆ ಇರುತ್ತಿದ್ದರು ಮತ್ತು ಅವರನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಗೌರವಿಸುತ್ತಿದ್ದರು. ಅವರು ಯಾವಾಗಲೂ ಅವರ ಸುಂದರ ರೂಪವನ್ನು ನೋಡಲು, ಅವರ ಶಾಂತವಾದ ಮಾತುಗಳನ್ನು ಕೇಳಲು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರ ಸೇವೆ ಮಾಡಲು ಬಯಸುತ್ತಾರೆ. ಆದರೆ, ಈ ಸಮಯದಲ್ಲಿ, ಬುದ್ಧನು ಅವರು ಬೇರೆ ರೀತಿಯಲ್ಲಿ ಹೇಳುವವರೆಗೆ ಅವರನ್ನು ಅನುಸರಿಸಬೇಡಿ ಎಂದು ಅವರಿಗೆ ಸೂಚಿಸಿದರು.
ಹೊಸ ಸ್ಥಳಗಳನ್ನು ಅನ್ವೇಷಿಸುತ್ತಾ, ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಅನೇಕ ಜನರು ಅವನನ್ನು ಗುರುತಿಸಲಿಲ್ಲ. ಪರಿವಾರವಿಲ್ಲದ ಕಾರಣ, ಜನಸಂದಣಿ ಇಲ್ಲದ ಕಾರಣ ಅವರು ಗೌತಮ ಬುದ್ಧ ಎಂದು ಭಾವಿಸಿರಲಿಲ್ಲ. ಅವನು ಇತರ ಸನ್ಯಾಸಿಗಳಂತೆ ಏಕಾಂಗಿಯಾಗಿ ಅಲೆದಾಡುತ್ತಿದ್ದನು. ದಾರಿಯಲ್ಲಿ, ಬುದ್ಧನು ಭಿಕ್ಷೆಗಾಗಿ ಒಬ್ಬ ವ್ಯಕ್ತಿಯನ್ನು ಸಂಪರ್ಕಿಸಿದನು. ಆದಾಗ್ಯೂ, ಮನುಷ್ಯನು ವಿಚಲಿತನಾಗಿದ್ದನು ಮತ್ತು ತನ್ನ ಏಕೈಕ ಹಸು ಕೆಲವು ನಿಮಿಷಗಳ ಹಿಂದೆ ಸತ್ತಿದ್ದರಿಂದ ಕೋಪಗೊಂಡಿದ್ದನು. ಕೋಪದ ಭರದಲ್ಲಿ, ಅವರು ಬುದ್ಧನ ಮೇಲೆ ಕೂಗಲು ಪ್ರಾರಂಭಿಸಿದರು ಮತ್ತು ಅವನ ಮೇಲೆ ನಿಂದನೆಗಳನ್ನು ಎಸೆದರು. ಋಷಿ ಸುಮ್ಮನೆ ಹೊರನಡೆದರು. ಆದರೆ, ಹತ್ತಿರದ ಹಳ್ಳಿಗನೊಬ್ಬ ಬುದ್ಧನ ಅಸ್ಪಷ್ಟ ಉಪಸ್ಥಿತಿಯನ್ನು ಅನುಭವಿಸಿದನು ಮತ್ತು ಅವನನ್ನು ಗುರುತಿಸಿದನು. ಅವರು ನಿಂದಿಸಿದವರನ್ನು ಸಮಾಧಾನ ಪಡಿಸಿದರು ಮತ್ತು "ಅವರು ಯಾರೆಂದು ನಿಮಗೆ ತಿಳಿದಿದೆಯೇ?" ಎಂದು ಪ್ರಶ್ನಿಸಿದರು. ಯಾರಾದರೂ ನಿನಗೆ ಬೈದು ಬುದ್ಧಿ ಹೇಳಬಹುದು. ಆದರೆ ತಾಳ್ಮೆ ಕಳೆದುಕೊಳ್ಳಬೇಡ, ಪ್ರತಿಕ್ರಿಯಿಸಬೇಡ, ಅವರು ಬೈಯುವ ಸಂದರ್ಭದಲ್ಲಿ ನಿನ್ನ ವಾದ ಮಂಡಿಸಬೇಡ, ಮೌನ ವಹಿಸು, ಸಹಿಸಿಕೊ, ನೋವಾಗಬಹುದು.
ಎಲ್ಲರೂ ನಿನ್ನನ್ನು ಸರಿಯಾಗಿಯೇ ಅರ್ಥೈಸಿಕೊಳ್ಳಬೇಕೆಂಬ ನಿಯಮವಿಲ್ಲ. ಬೈದವರನ್ನು ದ್ವೇಷಿಸಬೇಡ, ಅನುಮಾನಿಸಬೇಡ, ಅವಮಾನಿಸಬೇಡ, ಇರಲಿ, ಅವರಿಗೆ ಎಂದಾದರೂ ಒಂದು ದಿನ ಸತ್ಯದ ಅರಿವು ಅವರಿಗಾಗುತ್ತದೆ ಎಂದು ತಿಳಿದು ನಕ್ಕು ಸುಮ್ಮನಾಗು. ಅವರಿಗೆ ಅರಿವಾಗಲಿಲ್ಲವೆಂದರೂ ಪರವಾಗಿಲ್ಲ. ನಿನ್ನಲ್ಲಿ ದ್ವೇಷದ ಮೊಳಕೆಯೊಡೆದರೆ ನಿನಗೆ ಅದರಿಂದಾಗುವ ಲಾಭವೇನಿದೆ, ದ್ವೇಷ ವಿಷದಂತೆ ನಿನ್ನನ್ನು ಹಾಳು ಮಾಡುತ್ತದೆ, ದ್ವೇಷ ಒಡಲಲಿ ಇಟ್ಟುಕೊಂಡ ಬೆಂಕಿಯಂತೆ, ನಿನ್ನನ್ನು ಸುಟ್ಟ ನಂತರ ಪರರ ಸುಡುತ್ತದೆ ಅಲ್ಲವೆ. ನಡೆಯುತ್ತಿರುವ ಘಟನೆಯನ್ನು ನಿಯಂತ್ರಿಸಲು ನಿನಗೆ ಸಾಧ್ಯವಿಲ್ಲ ಎಂದು ಕಂಡುಬಂದರೆ, ಆ ಘಟನೆಗೆ ನೀನು ಹೇಗೆ ಪ್ರತಿಕ್ರಯಿಸಬೇಕು ಎಂಬ ಜಾಣ್ಮೆಯನ್ನಾದರೂ ತೋರಿಸು, ಅದೇ ನಿನ್ನ ಸಾಮರ್ಥ್ಯ. ಬೋಧಿಸುವುದು ಸುಲಭ, ಆದರೆ ಆಚರಿಸುವುದು ಕಷ್ಟ. ಆತ್ಮೀಯರಿಗೂ, ಪರಿಚಿತರಿಗೂ, ಎದುರಾಳಿಗಳಿಗೂ ಹಲವು ವ್ಯತ್ಯಾಸಗಳಿರುವುದನ್ನು ನಾವು ನಮ್ಮ ಬದುಕಿನ ಓಟದಲ್ಲಿ ಗುರು6/28/2023 ಬದುಕಿನ ಓಟದಲ್ಲಿ ಹಲವಾರು ಜನ ನಮ್ಮನ್ನು ಸಂಧಿಸುತ್ತಾರೆ. ಕೆಲವರು ಆತ್ಮೀಯರಾಗುತ್ತಾರೆ, ಇನ್ನೂ ಹಲವರು ಪರಿಚಿತರಾಗುತ್ತಾರೆ, ಇನ್ನೂ ಕೆಲವರು ನಮ್ಮ ಎದುರಾಳಿಗಳಾಗಿಬಿಡುತ್ತಾರೆ. ಆತ್ಮೀಯರಿಗೂ, ಪರಿಚಿತರಿಗೂ, ಎದುರಾಳಿಗಳಿಗೂ ಹಲವು ವ್ಯತ್ಯಾಸಗಳಿರುವುದನ್ನು ನಾವು ನಮ್ಮ ಬದುಕಿನ ಓಟದಲ್ಲಿ ಗುರುತಿಸಬೇಕಾಗುತ್ತದೆ. ಪರಿಚಿತರಿಗೆ ಹಾಗೂ ಎದುರಾಳಿಗಳಿಗೆ ಕಾರಣಗಳನ್ನು ಹುಡುಕುತ್ತಾ, ಅವರ ಬಗ್ಗೆ ಚಿಂತಿಸುತ್ತಾ ಕೂರಲು ಸಮಯವಿರುವುದಿಲ್ಲ. ನಾವು ಚಿಂತಿಸಬೇಕಾಗಿರುವುದು ನಮ್ಮ ಆತ್ಮೀಯರಿಗೆ ಮಾತ್ರ. ನಮ್ಮ ಆತ್ಮೀಯರಿಂದ ಕಲಿಯುವುದು ಬಹಳಷ್ಟಿರುತ್ತದೆ.
ಆತ್ಮೀಯ ಹಂತಕ್ಕೆ ಒಂದೇ ಸಲ ಸ್ನೇಹಿತರಾಗಲು ಆಗುವುದಿಲ್ಲ. ಹಲವಾರು ವರ್ಷಗಳ ಗೆಳೆತನ, ಸಂದರ್ಭಗಳ ಒಡನಾಟ, ಇಬ್ಬರ ಅಭಿರುಚಿಗಳ ಮೇಲೆ ಮತ್ತೊಬ್ಬರ ಆತ್ಮೀಯ ಬಳಗದಲ್ಲಿ ಸೇರಿಕೊಳ್ಳಬಹುದೇ ಅಥವಾ ಬೇಡವೇ ಎಂಬ ಜಿಜ್ಞಾಸೆಯ ಹಂತ ದಾಟಿದ ನಂತರ ಒಬ್ಬರ ಆತ್ಮೀಯರಾಗಿ ಮತ್ತೊಬ್ಬರು ಸೇರಿಕೊಳ್ಳುತ್ತಾರೆ. ಆತ್ಮೀಯರಾದಾಗ ನಂಬಿಕೆ ಗಾಢವಾಗಿ ಬೆಳೆಯುತ್ತದೆ. ಯಾವುದೇ ಮುಲಾಜಿಲ್ಲದೆ ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಬಹುದಾಗಿದೆ. ಆತ್ಮೀಯರಿಗೆ ಮುಲಾಜಿಲ್ಲದೆ ಟೀಕಿಸುವ ಅಥವಾ ತಪ್ಪುಗಳನ್ನು ಸರಿಪಡಿಸುವ ಅಧಿಕಾರವಿರುತ್ತದೆ. ಆತ್ಮೀಯರಲ್ಲಿ ನನಗೆ ಈ ಕೆಲಸ ಆಗಬೇಕು, ನಿನ್ನ ಕಷ್ಟ ಸುಖಗಳು ನನಗೆ ಗೊತ್ತಿಲ್ಲ ಎಂದು ಹೇಳಿ ಕೆಲಸ ಮಾಡಿಸಿಕೊಳ್ಳಬಹುದು. ಒಟ್ಟಿಗೆ ಓದಿರುತ್ತೇವೆ, ಒಂದೇ ಕಡೆ ಕೆಲಸ ಮಾಡುತ್ತಿರುತ್ತೇವೆ, ಒಂದೇ ಕುಟುಂಬದ ಸದಸ್ಯರಾಗಿರುತ್ತೇವೆ ಆದರೆ ಹಲವು ಸಲ ಈ ಆತ್ಮೀಯತೆಯ ಕೊರತೆ ನಮ್ಮಲ್ಲಿ ಎದ್ದು ಕಾಣುತ್ತದೆ. ಇತ್ತೀಚೆಗೆ ಪ್ರೊ. ವೆಂಕಟ್ ಪುಲ್ಲಾ ಭಾರತದಲ್ಲಿ ಸಮಾಜಕಾರ್ಯ ವಿಷಯದಲ್ಲಿ ಡಾಕ್ಟರೇಟ್ ಪಡೆದರು. ಆಸ್ಟ್ರೇಲಿಯಾದಲ್ಲಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಹಲವು ವರ್ಷಗಳ ಹಿಂದೆ (ಸುಮಾರು 90ರ ದಶಕದಲ್ಲಿ) TISS (Tata Institute of Social Science) ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಒಬ್ಬ ಅರ್ಹ ವಿದ್ಯಾರ್ಥಿಗೆ 500/- ಗಳ ಸಹಾಯವನ್ನು ನೀಡಿದ್ದರಂತೆ. ಪ್ರೊ. ವೆಂಕಟ್ ಪುಲ್ಲಾ ರವರಿಗೂ ಬರುತ್ತಿದ್ದ ಸಂಬಳ ಐದಾರು ಸಾವಿರವಿದ್ದಿರಬಹುದು. ಆ 500/- ರೂ.ಗಳು ಸಹಾಯ ಪಡೆದ ವಿದ್ಯಾರ್ಥಿ ಮುಂದೊಂದು ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಪಡೆದ ನಂತರ ಪ್ರೊ. ವೆಂಕಟ್ ಪುಲ್ಲಾ ರವರಿಗೆ ತಾನು ಪಡೆದ ಸಹಾಯಧನವನ್ನು ಹಿಂತಿರುಗಿಸಲು ಭೇಟಿಯಾದರು. ಆಗ ಪ್ರೊ. ವೆಂಕಟ್ ಪುಲ್ಲಾ ರವರು ನಾನು ನಿನಗೆ ಸಹಾಯ ಮಾಡಿದಂತೆ ನೀನು ಒಬ್ಬ ಅರ್ಹ ವಿದ್ಯಾರ್ಥಿಯನ್ನು ಹುಡುಕಿ ಅವನಿಗೆ ನಿನ್ನ ಕೈಲಾದ ಮಟ್ಟಿಗೆ ಸಹಾಯ ಮಾಡು ಎಂದು ಸಲಹೆ ಇತ್ತರಂತೆ. ಈ ರೀತಿಯಾಗಿ ಸಹಾಯ ಪಡೆದವರು ಇಂದು ವಿಶ್ವದಾದ್ಯಂತ ಸುಮಾರು 400ಕ್ಕೂ ಹೆಚ್ಚು ಮಂದಿ ಇದ್ದಾರಂತೆ. ಪ್ರೊ. ವೆಂಕಟ್ ಪುಲ್ಲಾ ರವರಿಂದ ಮೊದಲು ಸಹಾಯ ಪಡೆದ ವ್ಯಕ್ತಿ ತಾನು ಸಹಾಯ ನೀಡಿದ ವ್ಯಕ್ತಿಯೊಂದಿಗೆ ಮಾತನಾಡಿ ಅದೇ ರೀತಿ ಒಬ್ಬರಿಂದ ಒಬ್ಬರು ಮಾತನಾಡಿಕೊಂಡು ಎಲ್ಲರೂ ಇತ್ತೀಚಿಗೊಮ್ಮೆ ಪ್ರೊ. ವೆಂಕಟ್ ಪುಲ್ಲಾ ರವರನ್ನು ಆಹ್ವಾನಿಸಿದರಂತೆ. ಆಗ ಪ್ರೊ. ವೆಂಕಟ್ ಪುಲ್ಲಾ ರವರಿಗೆ ತಾನು ಸಹಾಯ ನೀಡಿದ ತನ್ನ ಶಿಷ್ಯ ಮಾತ್ರ ಗೊತ್ತಿತ್ತು. ಅದೇ ರೀತಿ ಅಲ್ಲಿದ್ದ ಎಲ್ಲರಿಗೂ ಅವರವರು ಸಹಾಯ ನೀಡಿದ ವ್ಯಕ್ತಿಗಳು ಮಾತ್ರ ಗೊತ್ತಿತ್ತು. ಆದರೆ ಅಲ್ಲಿ ಒಟ್ಟಿಗೆ ಸೇರಿದ್ದು 300 ಕ್ಕೂ ಹೆಚ್ಚು ಜನರು ಇದ್ದರು. ಪ್ರೊ. ವೆಂಕಟ್ ಪುಲ್ಲಾ ರವರು ಅವರೆಲ್ಲರನ್ನೂ ಉದ್ದೇಶಿಸಿ ಮಾತನಾಡಿದರಂತೆ. ಒಂದು ಪುಟ್ಟ ಸಹಾಯ ಯಾವ ರೀತಿ ಇತರರ ಬದುಕನ್ನು ಬದಲಾಯಿಸಬಲ್ಲದು ಎಂಬುದು ಇದಕ್ಕೆ ನಿದರ್ಶನವಾಗಿದೆ. ಹಾಗಾಗಿ ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಒಂದು ಪುಟ್ಟ ಸಹಾಯದಿಂದ ಸುಮಾರು 400 ಕ್ಕೂ ಹೆಚ್ಚು ಜನರು ಪ್ರೊ. ವೆಂಕಟ್ ಪುಲ್ಲಾ ರವರ ವ್ಯಕ್ತಿತ್ವಕ್ಕೆ ಮಾರುಹೋದರು. ಹಾಗೆಯೇ ಇಂದು ಪ್ರೊ. ವೆಂಕಟ್ ಪುಲ್ಲಾ ರವರು ಸಮಾಜಕಾರ್ಯ ವಿಶ್ವವಿದ್ಯಾಲಯ ಮಾಡಬೇಕೆಂದು ಹೊರಟರೆ ಇಂತಹ ಮಹತ್ವದ ಕೆಲಸಕ್ಕೆ 400 ಜನರು ಪ್ರೊ. ವೆಂಕಟ್ ಪುಲ್ಲಾ ರವರ ಬೆಂಬಲಕ್ಕೆ ನಿಲ್ಲುವುದರಲ್ಲಿ ಆಶ್ಚರ್ಯವೇನಿಲ್ಲವಲ್ಲ.
ರಮೇಶ ಎಂ.ಎಚ್. ನಿರಾತಂಕ www.mhrspl.com www.nirutapublications.org ಅನಿವಾರ್ಯವಾಗಿ ನಮ್ಮ ರಾಜಕೀಯದ (ಎಲ್ಲಾ ಪಕ್ಷಗಳಿಗೂ ಅನ್ವಯ) ದೊಂಬರಾಟಗಳನ್ನು ನಾವು ಗಮನಿಸುವುದಾದರೆ ನಾವು ಮೂರ್ಖರ ಆಳ್ವಿಕೆಯಲ್ಲಿ ಬದುಕುತ್ತಿರುವ ಬುದ್ಧಿಜೀವಿಗಳಲ್ಲದಿದ್ದರೂ ಸಾಮಾನ್ಯರಾಗಿದ್ದೇವೆ. ಜನಸಾಮಾನ್ಯರು ಮೌನವಾಗಿ ಕಾಸು ಪಡೆದು, ಮತ ಚಲಾಯಿಸಿದ್ದರ ಪರಿಣಾಮ ಇಂದು ಸರಿಯಾದ ಆರೋಗ್ಯಕರ ಸಮಾಜ, ಆಸ್ಪತ್ರೆಗಳು ನಮಗೆ ಇಲ್ಲವಾಗಿವೆ. ಬರಿ ನಮ್ಮ ಮನೆ, ನಾನು ಸರಿಯಾಗಿ ಕಾಸು ಕೂಡಿಟ್ಟುಕೊಂಡರೆ ಸಾಕು ಎಂದು ಬದುಕಿದ್ದರ ಪ್ರತಿಫಲ ಇಂದು ಕಾಸು ಕೆಲಸಕ್ಕೆ ಬಾರದ ಸಂಗತಿಯಾಗಿದೆ. ಸಣ್ಣ ಸಣ್ಣ ವಿಷಯಗಳಲ್ಲೂ ನಾವು ಅಪ್ರಾಮಾಣಿಕರಾಗಿ ಬದುಕಿದ್ದರ ಫಲ ಪ್ರಕೃತಿ ಇಂದು ಪಾಠ ಕಲಿಸಲು ಮುಂದಾಗಿದೆ. ಪಾಠ ಕಲಿತು ಪ್ರಾಮಾಣಿಕವಾಗಿ ಬದುಕದಿದ್ದರೆ ಮನುಜ ಕುಲದ ವಿನಾಶ ಖಂಡಿತ. ಇತರೆ ಜೀವಿಗಳನ್ನು ಹೊರತುಪಡಿಸಿ ಮನುಜ ಕುಲಕ್ಕೆ ಮಾತ್ರ ಕೊರೋನ ಅಂದರೆ ಮನುಷ್ಯ ಜೀವಿಯಷ್ಟು ಪ್ರಕೃತಿಯಲ್ಲಿ ಇನ್ನೊಂದು ಅಪ್ರಾಮಾಣಿಕ ಜೀವಿಯನ್ನು ನಾವೂ ಕಾಣಲಾರೆವು...
#ನಿರಾತಂಕಕವನ ನಾನು ಓದಿದ್ದು ನ್ಯಾಷನಲ್ ಕಾಲೇಜ್ ಬಸವನಗುಡಿಯಲ್ಲಿ. ನಮಗೆ ದಿನನಿತ್ಯ ಎಚ್. ನರಸಿಂಹಯ್ಯ ರವರ ದರ್ಶನವಾಗುತ್ತಿತ್ತು. ಎಚ್.ಎನ್. ಹಾಲ್ ನಲ್ಲಿ ದೊಡ್ಡದಾಗಿ ಅವರ ಒಂದು ವಾಕ್ಯ ಬರೆಸಿದ್ದಾರೆ. "ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ ಎಂದು" ಆದರೆ ಕೆಲವೊಮ್ಮೆ ಪ್ರಶ್ನೆಗಳಿಗೆ ಉತ್ತರ ದೊರಕುವುದಿಲ್ಲ ಎಂಬ ಸತ್ಯದ ಅರಿವಾಗುತ್ತಿದೆ.
ಆದರೆ ಪ್ರಶ್ನಿಸುವುದನ್ನು ನಿಲ್ಲಿಸಬಾರದು. ಯಾರಿಗೋ ಹೆದರಿ ಮನಸ್ಸಿನ ಭಾವನೆ ಹೊರಗೆ ಹಾಕದಿದ್ದರೆ ಹೇಡಿ ಅನಿಸುತ್ತದೆ. ನಮ್ಮ ನಮ್ಮ ಅನುಕೂಲಗಳಿಗೆ ತಕ್ಕಂತೆ ಬದುಕುವುದು ಕಲಿತರೆ ಸಮಾಜ ಹಾಳಾಗುತ್ತದೆ. ಹಾಳಾದ ಸಮಾಜದಲ್ಲಿ ನಮ್ಮ ಮುಂದಿನ ಜನಾಂಗ ಹಾಗೂ ನಮ್ಮದೇ ಮಕ್ಕಳು ಬದುಕಬೇಕಾಗುತ್ತದೆ. ಸತ್ಯಶೋಧನೆಯ ಹುಡುಕಾಟದ ಪ್ರಯಾಣದಲ್ಲಿ ಹೆದರುವ ಅವಶ್ಯಕತೆ ಇಲ್ಲ. ರಮೇಶ ಎಂ.ಎಚ್. ನಿರಾತಂಕ ಅವನು ನನ್ನ ಆತ್ಮೀಯ ಗೆಳೆಯ, ಮಹೇಶ್ ಚುನಾವಣಾ ಪ್ರಚಾರದ ವೇಳೆ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕೇಳಿಕೊಂಡೆ. ಅವನು ಆನಂದದಿಂದ ನಮ್ಮ ಲೇಔಟ್ ನವರನ್ನೆಲ್ಲಾ ಸೇರಿಸುತ್ತೇನೆ. ನಾನೆ ಆ ಲೇಔಟ್ ನ ಸಂಘದ ಅಧ್ಯಕ್ಷ, ಒಮ್ಮೆ ಅಭ್ಯರ್ಥಿಯನ್ನು ಕರೆದುಕೊಂಡು ಬನ್ನಿ ಎಂದರು. ನಾನು ಸರಿ ಎಂದು ನನ್ನ ಇನ್ನೂ ಕೆಲವು ಗೆಳೆಯರಿಗೆ ಹೇಳಿ ಆ ಲೇಔಟ್ ಗೆ ಪ್ರಚಾರಕ್ಕೆ ಹೋದೆ. ಅಲ್ಲಿ ನನ್ನ ಇನ್ನೊಬ್ಬ ಪ್ರಾಣ ಸ್ನೇಹಿತ ಕೂಡ ಆ ಸಭೆಗೆ ಬಂದಿದ್ದ. ಅವನನ್ನು ನಮ್ಮ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಪ್ಪ ಎಂದು ವಿನಂತಿಸಿದೆ. ಅದಕ್ಕೆ ಅವನು ಸಮ್ಮತಿಸಿದ, ಈ ನನ್ನ ಪ್ರಾಣ ಸ್ನೇಹಿತನಿಗೆ ಹಲವು ಉಪಕಾರಗಳನ್ನು ನಾನು ಮಾಡಿದ್ದೆ. ಅವನ ಮಗನಿಗೆ ಒಂದು ಪ್ರಮುಖ ಶಾಲೆಯಲ್ಲಿ ಸೀಟು, ಅವನ ಪುಸ್ತಕ ಪ್ರಕಟಣೆ ಮಾಡಿದ್ದೆ ಹಾಗೂ ನಾನು ಅವನಿಗೆ ಒಂದು ಸೈಟು ತೋರಿಸಿ ಖರೀದಿ ಮಾಡಲು ನೆರವಾಗಿದ್ದೆ. ಹೀಗೆ ಹತ್ತು ಹಲವು ಉಪಕಾರ ಮಾಡಿದ್ದೆ. ಹಾಗಾಗಿ ಅವನು ನನ್ನ ಪರ ಪ್ರಚಾರ ಮಾಡುತ್ತಾನೆ ಎಂದು ನಂಬಿದ್ದೆ ಕೂಡ.
ಕೆಲವು ದಿನಗಳು ಕಳೆದ ನಂತರ ನನ್ನ ಸ್ನೇಹಿತ ಮಹೇಶ ಸಿಕ್ಕಿದ್ದ. ನಾನು ಎಂದಿನಂತೆ ಪ್ರಚಾರ ಹೇಗೆ ನಡೆಯುತ್ತಿದೆ ಎಂದು ಕೇಳಿದೆ ಹಾಗೂ ನನ್ನ ಪ್ರಾಣಕ್ಕಿಂತ ಶಶಿಧರನೂ ನಿನಗೆ ಸಹಾಯ ಮಾಡುತ್ತಿರುವನೆ ಎಂದೆ? ಅದಕ್ಕೆ ಅವನು ಸಹಾಯ ಮಾಡುವುದು ಹಾಗಿರಲಿ, ನೀನು ಅಂದು ಸಭೆ ಮಾಡಿ ಹೊರಟ ನಂತರ ನಿನ್ನ ಎದುರಾಳಿ ಪಕ್ಷದ ಅಭ್ಯರ್ಥಿಯನ್ನು ಕರೆಸಿ ನಿನ್ನ ಅಭ್ಯರ್ಥಿ ವಿರುದ್ಧ ಪ್ರಚಾರ ನಡೆಸಿದ ಎಂದನು! ನನಗೆ ಕೇಳಿ ಆಶ್ಚರ್ಯವಾಯಿತು….. ಕಾಡುವ ಪ್ರಶ್ನೆಗಳು ಪ್ರಶ್ನೆ 1: ನನ್ನ ಸ್ನೇಹಿತ ನನ್ನ ಅಭ್ಯರ್ಥಿಯ ಪರ ಪ್ರಚಾರ ಮಾಡಬೇಕೆಂದೇನಿಲ್ಲ. ಆದರೆ ಸುಳ್ಳು ಹೇಳುವ ಅವಶ್ಯಕತೆ ಏನಿತ್ತು. ಉತ್ತರ : ಪ್ರಶ್ನೆ 2: ನನ್ನ ಹತ್ತಿರ ಆವೊಂದು ಸಹಾಯ ಪಡೆದ ಮೇಲೆ ಈ ರೀತಿ ನನ್ನ ಅಭ್ಯರ್ಥಿಯ ವಿರುದ್ಧ ಪ್ರಚಾರ ಮಾಡಿದ್ದು ಸರಿಯೆ? ಉತ್ತರ: ಪ್ರಶ್ನೆ 3: ಇನ್ನು ಮುಂದೆ ಅವನು ಮತ್ತೊಮ್ಮೆ ನನ್ನ ಸಹಾಯ ಕೇಳಿದರೆ ಮಾಡಬೇಕೇ ? ಉತ್ತರ: ಪ್ರಶ್ನೆ 4: ಈ ಘಟನೆಯಿಂದಾಗಿ ನಾನು ಅವನನ್ನು ದ್ವೇಷಿಸಬೇಕೇ ? ಉತ್ತರ: ರಮೇಶ ಎಂ.ಎಚ್. ನಿರಾತಂಕ ಕೆಲವೊಮ್ಮೆ ನಮ್ಮ ಅನಿಸಿಕೆ ಸರಿ ಎಂದು ನಾವು ಹೇಳಿದರೆ ಅದನ್ನು ಒಪ್ಪದ ನನ್ನ ಸ್ನೇಹಿತ ಅದು ಹೀಗೂ ಇರಬಹುದು, ಅದು ಹಾಗೂ ಇರಬಹುದು ಎಂದು ರಾತ್ರಿಯಿಂದ ಬೆಳಗ್ಗಿನ ಜಾವದ ತನಕ ಚರ್ಚೆ ನಡೆಸಿ, ನಂತರ ನಿನ್ನ ಅನಿಸಿಕೆ ನಿನಗೆ ಇರಲಿ, ನನ್ನ ಅನಿಸಿಕೆ ನನಗಿರಲಿ ಗೆಳೆಯ ಎಂದು ವಿಷಯಗಳ ಚರ್ಚೆ ನಿಲ್ಲಿಸಿಬಿಡುತ್ತೇವೆ. ಕೊನೆಗೆ ನನ್ನನ್ನು ಅವನು ಒಪ್ಪಲಿಲ್ಲ, ಅವನನ್ನು ನಾನು ಒಪ್ಪಲಿಲ್ಲ. ಇಬ್ಬರ ನಡುವೆ ಮತ್ತೆ ನೂರು ಪ್ರಶ್ನೆಗಳು ಎದ್ದು, ಆ ನೂರು ಪ್ರಶ್ನೆಗಳು ತಲೆಯಲ್ಲಿ ಕೊರೆಯುತ್ತವೆ. ನನ್ನ ಸ್ನೇಹಿತ ನನ್ನ ವಾದವನ್ನು ಒಪ್ಪಿಕೊಳ್ಳದಿದ್ದರಿಂದ ಅವನ ಬಗೆಗೆ ಅಸಮಾಧಾನ ಹೆಚ್ಚಾಗತೊಡಗುತ್ತವೆ. ಮತ್ತೆ ನನ್ನ ಸ್ನೇಹಿತನಿಗೂ ಅದೇ ರೀತಿಯ ಅನುಭವ ಆಗಿದೆ. ಇದಕ್ಕೆ ಪರಿಹಾರವೆಂಬಂತೆ ಇತ್ತೀಚಿಗೆ ನಾನು ಅಂತಿಮವಾಗಿ ನನ್ನ ಸ್ನೇಹಿತನನ್ನು ಒಪ್ಪಿಸಲು ಜೋತು ಬೀಳುವುದು. ನಿನ್ನ ಅನಿಸಿಕೆ, ನನ್ನ ಅನಿಸಿಕೆ ಎರಡೂ ತಪ್ಪಿರಬಹುದು, ಆದರೆ ಬುದ್ಧನು ಕಂಡುಕೊಂಡ ಸತ್ಯದ ಬೆಳಕಿನಲ್ಲಿ ನಮ್ಮ ವಾದವನ್ನು ಮಾಡೋಣ ಎನ್ನುತ್ತ ಬುದ್ಧ ಈ ರೀತಿ ಹೇಳಿರುತ್ತಾನೆ ಎಂದು ಬುದ್ಧನ ಎರಡು ವಾಕ್ಯ Quote ಮಾಡಿ ಹೇಳಿದರೆ ತಕ್ಷಣ ನನ್ನ ಸ್ನೇಹಿತ ಇರಬಹುದು ಎಂದು ಒಪ್ಪಿ ವಾದಗಳಿಗೆ ತೆರೆ ಎಳೆದುಬಿಡುತ್ತಾನೆ. ಹಲವು ಸಂದರ್ಭಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಬುದ್ಧನ ದಾರಿ ಹೊರತು ಅನ್ಯಮಾರ್ಗವಿಲ್ಲ ಎನಿಸಿಬಿಡುತ್ತದೆ.
ರಮೇಶ ಎಂ.ಎಚ್. ನಿರಾತಂಕ ಅದೊಮ್ಮೆ ಅಂತರ್ಜಾಲ ತಾಣದಲ್ಲಿ ಓದಿದ ನೆನಪು. ಒಬ್ಬ ಗೃಹಿಣಿ ಒಂದು ಸುಂದರವಾದ ಹೂವಿನ ಗಿಡವನ್ನು ಮನೆಗೆ ತರುತ್ತಾರೆ. ಸುಮಾರು 2 ವರ್ಷಗಳ ಕಾಲ ನೀರನ್ನು ಹಾಕುತ್ತಾ ಪೋಷಣೆ ಮಾಡುತ್ತಾರೆ. ಆದರೆ ಆ ಹೂವಿನ ಗಿಡದಲ್ಲಿ ಯಾವುದೇ ಬೆಳವಣಿಗೆ ಕಂಡುಬರುವುದಿಲ್ಲ. ಅವರು ಆ ಹೂವಿನ ಗಿಡದಲ್ಲಿ ಯಾವುದೇ ಬದಲಾವಣೆ ಕಂಡುಬಾರದಿದ್ದಾಗ ಅನುಮಾನ ಬಂದು ಗಿಡವನ್ನು ಕುಂಡದಿಂದ ಬೇರ್ಪಡಿಸಿ ನೋಡುತ್ತಾರೆ. ಆಗ ಅವರಿಗೆ ತಿಳಿದದ್ದು ಅವರು ಮನೆಗೆ ತಂದು ಬೆಳೆಸಿದ್ದು ಪ್ಲಾಸ್ಟಿಕ್ ನಿಂದ ಮಾಡಿದ ನೈಜ ಹೂ ಗಿಡದಂತೆ ಭಾಸವಾಗುವ ಪ್ಲಾಸ್ಟಿಕ್ ಹೂವಿನ ಗಿಡ. ಆದರೆ ನೈಜ ಹೂವಿನ ಗಿಡದಂತೆ ಕಾಣಿಸುತ್ತಿರುತ್ತದೆ. ನೈಜ ಗಿಡದ ಪಕ್ಕ ಅದನ್ನು ಇಟ್ಟು ಹೋಲಿಸಿ ನೋಡಿದರೆ ಅದು ಪ್ಲಾಸ್ಟಿಕ್ ಗಿಡ ಎಂಬಂತೆ ಯಾವುದೇ ಅನುಮಾನ ಬಾರದಿರುವುದು ಅಚ್ಚರಿ ಮೂಡಿಸುತ್ತದೆ.
ಹಾಗೆಯೇ ಸಂಬಂಧಗಳಲ್ಲಿಯೂ ನಮಗೆ ಪ್ಲಾಸ್ಟಿಕ್ ಗಿಡದಂತಹ ಸಂಬಂಧಗಳಿರುತ್ತವೆ. ನಾವು ಅಗಾಧವಾಗಿ ನಮ್ಮ ಸಂಬಂಧಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಕೂಡಿವೆ ಎಂದುಕೊಳ್ಳುತ್ತೇವೆ. ಆದರೆ ಕೆಲವು ಅಗ್ನಿ ಪರೀಕ್ಷೆಗಳು ಒದಗಿಬಂದಾಗ ನಮ್ಮ ಸಂಬಂಧಗಳು ಪ್ಲಾಸ್ಟಿಕ್ ಗಿಡದಂತೆ ನೈಜವಾದ ಸಂಬಂಧಗಳಲ್ಲ ಎಂದು ಅನಿಸಿಬಿಡುತ್ತದೆ. ಮನುಷ್ಯ ಬಟ್ಟೆ ತೊಡುವಷ್ಟು ಸುಲಭವಾಗಿ ಮುಖವಾಡವನ್ನು ತೊಡಬಲ್ಲ. ನೈಜವಾಗಿ ಪ್ರೀತಿಸುತ್ತಿದ್ದೇನೆ ಎಂಬಂತೆ ನಟಿಸಿ ನಂಬಿಸಬಲ್ಲ. ನಂಬಿಸಿ ನಡುನೀರಿನಲ್ಲಿ ಕೈಕೊಡಲೂ ಬಲ್ಲ. ಒಳಗೆ ಅಳುತ್ತಾ ನಗುಮುಖದಿಂದ ಮಾತನಾಡಲೂ ಬಲ್ಲ. ಒಳಗೆ ಕತ್ತಿ ಮಸೆದು ತನ್ನ ಕಾರ್ಯವನ್ನು ಸಾಧಿಸಿಕೊಂಡು ದ್ವೇಷವನ್ನು ಸಾಧಿಸಲೂ ಬಲ್ಲ. ಇತ್ತೀಚಿನ ಆಧುನಿಕ ಜಗತ್ತಿನಲ್ಲಿ ನಮ್ಮ ಸಂಪರ್ಕದಲ್ಲಿರುವ ಬಹುಪಾಲು ಜನರು ಇದೇ ರೀತಿ ಮುಖವಾಡ ಹೊತ್ತು ನಟಿಸುತ್ತಿರುತ್ತಾರೆ. ನಟಿಸಲೇ ಬೇಕಾದ ಅನಿವಾರ್ಯತೆ ಒದಗಿಬಂದು ಬಿಡುತ್ತದೆ. ಇನ್ನು ಬಹುಪಾಲು ಜನ ನಾವು ನಟಿಸದೆ ಇರದ ದಿನಗಳೇ ಇಲ್ಲ ಎಂದರೆ ತಪ್ಪಾಗಲಾರದು. ಆದರೆ ಕೆಲವೇ ಕೆಲವರು ನೈಜವಾಗಿ ಬದುಕನ್ನು ಸಾಗಿಸುತ್ತಿರುವವರೂ ನಮ್ಮ ಜೊತೆಯಲ್ಲೇ ಇರುತ್ತಾರೆ. ಅವರನ್ನು ಗುರುತಿಸಿ ಅವರೊಂದಿಗೆ ಸ್ನೇಹ, ವ್ಯವಹಾರ ಮಾಡಲು ನಾವುಗಳು ಕಲಿತುಕೊಳ್ಳಬೇಕಷ್ಟೆ. Honesty saves everyones time ಎಂಬಂತೆ ಬದುಕಲು ನಮಗೆ ಅತ್ಯಂತ ಕಷ್ಟಕರವಾದ ದಿನಗಳಲ್ಲಿ ನಾವು ಬದುಕುತ್ತೇವೆ. ಅಕಸ್ಮಾತ್ ಒಮ್ಮೆ ನಿಮ್ಮ ಸ್ನೇಹಿತರಿಗೆ ಹಣ ಕೊಡಿ. ಅವನು ಹಣವನ್ನು ತೆಗೆದುಕೊಂಡು ಮೋಸ ಮಾಡಿ ಓಡಿ ಹೋದರೆ ಜನ ಓಡಿ ಹೋದವನನ್ನು ಬಯ್ಯುವುದು ಕಡಿಮೆ. ಸ್ನೇಹವನ್ನು ನಂಬಿ ಹಣ ಕೊಟ್ಟ ನಿಮ್ಮನ್ನೇ ಬಯ್ಯುವುದು. ಇದು ಸಾಮಾನ್ಯ. ವ್ಯವಹಾರ ಮಾಡಲು ಗೊತ್ತಿರದ ಮೂರ್ಖನೆಂದು ಜನ ಹಣ ಕೊಟ್ಟವನನ್ನೇ ನಿಂದಿಸುತ್ತಾರೆ ಅಲ್ಲವೇ. ಸ್ನೇಹಕ್ಕೆ ನಂಬಿ ಹಣ ಕೊಟ್ಟೆಯಲ್ಲ ಶಹಭಾಷ್ ಎಂದು ಯಾರೂ ನಿಮ್ಮನ್ನು ಹೊಗಳುವುದಿಲ್ಲ. ಹಾಗಾಗಿ ಪ್ಲಾಸ್ಟಿಕ್ ಸಂಬಂಧಗಳ ಬಗ್ಗೆ ಎಚ್ಚರಿಕೆ ಸೂಕ್ತ ಎಂದು ಅನಿಸುತ್ತದೆ. ವಂದನೆಗಳೊಂದಿಗೆ ರಮೇಶ ಎಂ.ಎಚ್. www.socialworkfootprints.org ಅದೊಂದು ದಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಬಿ.ಎ. ತರಗತಿಯಲ್ಲಿ ಸಮಾಜಶಾಸ್ತ್ರ ಪಾಠ ಮಾಡುತ್ತಿದ್ದ ನಮ್ಮ ಗುರುಗಳು ಒಂದು ನೈಜ ಕಥೆಯನ್ನು ಹೇಳಿದ್ದರು. ಅವರ ಸ್ನೇಹಿತ ಶೇಖರ್ (ಅವರ ಹೆಸರು ಮರೆತಿದ್ದೇನೆ) ವೈಚಾರಿಕ ಪ್ರಜ್ಞೆಯಿಂದ ಕೂಡಿದ್ದರಂತೆ. ಅವರು ಯಾವುದೇ ಅವೈಜ್ಞಾನಿಕ ಪದ್ಧತಿಯನ್ನು ಆಚರಣೆ ಮಾಡುತ್ತಿರಲಿಲ್ಲವಂತೆ. ಯಾವುದೇ ಶ್ರಾದ್ಧ, ತಿಥಿಗಳಿಗೆ ಕುರಿತಂತೆ ಅವರಿಗೆ ಯಾವುದೇ ನಂಬಿಕೆ ಇರಲಿಲ್ಲವಂತೆ. ಅದನ್ನು ಆಚರಿಸುವವರನ್ನು ಕಂಡರೆ ಅವರಿಗೆ ವಿರೋಧಿಸುತ್ತಿದ್ದರಂತೆ.
ಕೆಲವು ವರ್ಷಗಳ ನಂತರ ಶೇಖರ್ ರವರ ತಂದೆ ಮರಣ ಹೊಂದಿದರು. ಆಗ ಶೇಖರ್ ತಂದೆಯ ಶ್ರಾದ್ಧ, ತಿಥಿ, ಪುಣ್ಯ ನೆರವೇರಿಸಬೇಕಾದ ಅನಿವಾರ್ಯತೆ ಒದಗಿಬಂತು. ಆಗ ಶೇಖರ್ ತಂದೆಯ ತಿಥಿಯ ನಂತರ ತಲೆಯ ಕೂದಲನ್ನು ತೆಗೆಸಿದರಂತೆ. ಇದು ಕಾಲೇಜಿನ ಇತರ ಸಹೋದ್ಯೋಗಿಗಳಿಗೆ ಇದುವರೆಗೂ ವೈಚಾರಿಕ ಪ್ರಜ್ಞೆ ಎಂದು ಬೋಧನೆ ನೀಡುತ್ತಿದ್ದ ಶೇಖರ್ ತಾವೇ ಅಂಧಾನುಕರಣೆ ಮಾಡುತ್ತಿದ್ದಾರೆ ಎಂದು ಗುಸುಗುಸು ಶುರುವಾಯಿತು. ಅವರ ಆತ್ಮೀಯ ಸ್ನೇಹಿತರು ಅಲ್ಲ ಶೇಖರ್, ನೀನು ಇಷ್ಟು ದಿವಸ ಅಂಧಾನುಕರಣೆ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸಿ ಅತ್ಯಂತ ವೈಚಾರಿಕನೆಂಬಂತೆ ಬಿಂಬಿಸಿಕೊಂಡು ಇಂದು ನೀನೇ ತಿಥಿ, ಶ್ರಾದ್ಧ ಮಾಡಿ ತಲೆ ಬೋಳಿಸಿಕೊಂಡು ಬಂದಿರುವೆ. ಈ ರೀತಿ ಹೇಳುವುದೊಂದು, ಮಾಡುವುದೊಂದು ನಿನ್ನ ಘನತೆಗೆ ತಕ್ಕುದಾದುದೆ ಎಂದು ಪ್ರಶ್ನಿಸಿದರಂತೆ. ಇದಕ್ಕೆ ಉತ್ತರಿಸಿದ ಶೇಖರ್ ಹೌದಪ್ಪ, ನಾನು ವೈಚಾರಿಕನಾಗಿಯೇ ಇದ್ದೇನೆ. ಆದರೆ ನಾನು ಸಂಪ್ರದಾಯ ಆಚರಿಸದೆ ಹಾಗೆಯೇ ನನ್ನ ಇಷ್ಟ ಬಂದ ಹಾಗೆ ಇದ್ದರೆ ನನ್ನ ವೃದ್ಧಾಪ್ಯದಲ್ಲಿರುವ ತಾಯಿ ಹಾಗೂ ನನ್ನ ಕುಟುಂಬದವರಿಗೆ ಬೇಸರ ತರಿಸಿದಂತಾಗುತ್ತದೆ. ನನ್ನ ವೈಚಾರಿಕತೆ ಏನಿದ್ದರೂ ನನ್ನ ವೈಯಕ್ತಿಕವಾದದ್ದು. ಇದನ್ನು ನನ್ನ ವೃದ್ಧ ತಾಯಿಗೆ ತಿಳಿಹೇಳಿ ಅರ್ಥ ಮಾಡಿಸಲು ಹೋಗಿ ಅವರು ಹಿಂಸೆ ಪಡುವುದನ್ನು ಹಾಗೂ ಸಂಕಟ ಪಡುವುದನ್ನು ನಾನು ನೋಡಲಾರೆ. ನನ್ನ ವೈಚಾರಿಕ ಪ್ರಜ್ಞೆ ಅವರಿಗೆ ನೋವು ನೀಡುವುದಾದರೆ ಮಾನಸಿಕವಾಗಿ ನಾನು ವೈಚಾರಿಕವಾಗಿದ್ದು ಲೌಕಿಕವಾಗಿ ವೈಚಾರಿಕತೆ ಬದಿಗಿಟ್ಟು ಅವರ ಸಂತಸಕ್ಕಾಗಿ ನಾನು ಮಾಡಬೇಕಾದ ಆಚರಣೆಗಳೆಲ್ಲವನ್ನೂ ಮಾಡಿ ಮುಗಿಸುತ್ತೇನೆ. ಅದು ತಪ್ಪೇ ಎಂದರಂತೆ. ಎಷ್ಟೋ ಸಂದರ್ಭಗಳಲ್ಲಿ ವ್ಯಕ್ತಿಗಳ ಹಲವು ಸಂಕೀರ್ಣ ಕಾಲಘಟ್ಟಗಳಲ್ಲಿ ಅವರಿಗೆ ಸರಿ ಎನಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರನ್ನು ಟೀಕಿಸಿ, ಅವರನ್ನು ಅನುಮಾನದಿಂದ ನೋಡುವ ಬದಲು ವ್ಯಕ್ತಿಯನ್ನು ಕೇಳಿ ಅವರು ಇರುವ ಸ್ಥಿತಿಯನ್ನು ಅರ್ಥೈಸಿಕೊಳ್ಳುವುದು ಒಳಿತಲ್ಲವೇ. ವಂದನೆಗಳೊಂದಿಗೆ ರಮೇಶ ಎಂ.ಎಚ್. www.socialworkfootprints.org ಒಂದು ಪುಸ್ತಕ ನಮ್ಮ ಚಿಂತನೆಯ ವಿಧಾನವನ್ನು ಬದಲಿಸಿಬಿಡಬಲ್ಲದು. ಅದೇ ಒಂದು ಪುಸ್ತಕವೇಕೆ, ಒಂದು ಪುಸ್ತಕದೊಳಗಿನ ವಾಕ್ಯದಿಂದಲೂ ನಮ್ಮ ಜೀವನ ಬದಲಾಯಿಸಿಕೊಂಡುಬಿಡಬಹುದು. ಆದರೆ ನಮಗೆ ಬದಲಾಯಿಸಿಕೊಳ್ಳುವ ತಾಕತ್ತು ಇರಬೇಕು ಅಷ್ಟೆ. ಒಂದು ದೀಪ ಸುತ್ತಲೂ 4 ಅಡಿ ಬೆಳಕು ನೀಡುತ್ತದೆ. ಅದೇ ದೀಪವನ್ನು ಹಿಡಿದು ಕತ್ತಲಲ್ಲಿ ನಡೆಯುತ್ತಾ ಸಾಗಿದರೆ ದಾರಿಯುದ್ದಕ್ಕೂ ಬೆಳಕು ನೀಡಬಲ್ಲದು. ನಾವು ತಲುಪಬೇಕಾಗಿರುವ ಜಾಗವನ್ನು ದೀಪದ ಬೆಳಕಿನಿಂದ ತಲುಪಿಬಿಡಬಹುದು. ಅಂತೆಯೇ ಒಂದು ಪುಸ್ತಕದಲ್ಲಿನ ವಿಚಾರಗಳು ಹಲವು ವಿಭಿನ್ನ ವಿಚಾರ, ಚಿಂತನೆ, ಪ್ರಶ್ನೆಗಳನ್ನು ನಮ್ಮ ತಲೆಯೊಳಗೆ ಬಿತ್ತುತ್ತವೆ ಎಂದರೆ ತಪ್ಪಾಗಲಾರದು. ಇದರಿಂದಾಗಿ ಮತ್ತೆ ಹಲವು ಪುಸ್ತಕಗಳನ್ನು ಓದಲೇಬೇಕಾದ ಅನಿವಾರ್ಯತೆ ಒದಗಿಬಂದು ಬಿಡುತ್ತದೆ.
ಡಾ. ಸಿ.ಆರ್. ಗೋಪಾಲ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ (SMIORE) ಇಂದು ಬೆಳಿಗ್ಗೆ ಡಾ. ಸಿ.ಆರ್. ಗೋಪಾಲ್ ರವರು ನನಗೊಂದು Whatsapp ಕಳುಹಿಸಿದ್ದರು. “Dear Ramesh, Can you do me a favour. You know me for the last 10 years. In my books, as a publisher you have written me few good things about me. You have never got a chance to analyze my personality. Now you can do it here. You can talk to me or you can put it on paper. You should be analysis my personality, my positives and negatives without any hesitation, so that I can correct myself. Feel free to do it, I will not misuse.” ಡಾ. ಸಿ.ಆರ್ ಗೋಪಾಲ್ ಹಾಗೂ ನನ್ನ ಪರಿಚಯವಾಗಿ ಸುಮಾರು 10 ವರ್ಷ ಕಳೆದಿವೆ. ಅವರಿಗೆ ಈಗ 67 ವರ್ಷಗಳು. ಅವರು MSW ಸ್ನಾತಕೋತ್ತರ ಪದವಿಯನ್ನು ಪಡೆದು, ಬೆಂಗಳೂರು ವಿಶ್ವವಿದ್ಯಾಲಯ ದಿಂದ Ph.D. ಅನ್ನು ಪಡೆದಿದ್ದಾರೆ. ದಿ ಸೊಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ಸ್ (ಲಿ) ರಲ್ಲಿ ಕೆಲಸ ನಿರ್ವಹಿಸಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇದುವರೆಗೂ 10 ಪುಸ್ತಕಗಳನ್ನು ರಚಿಸಿದ್ದಾರೆ. ಅತ್ಯಂತ ಸೌಮ್ಯ, ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು. ನನಗೂ ಡಾ. ಸಿ.ಆರ್. ಗೋಪಾಲ್ ರವರಿಗೂ ಎಚ್.ಎಂ. ಮರುಳಸಿದ್ಧಯ್ಯ ರವರ ಮನೆಯಲ್ಲಿ ಆಗಾಗ ಭೇಟಿ ಆಗುತ್ತಿತ್ತು ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ನಂತರದ ದಿನಗಳಲ್ಲಿ ನಮ್ಮ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಇರಲು ಕೋರಿಕೊಂಡೆವು. ನಂತರ ಪತ್ರಿಕೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಅದನ್ನು ಹೊರತರಲು ನಮ್ಮ ಸಂಸ್ಥೆ ಹಾಗೂ ತಂಡಕ್ಕೆ ಸಹಕಾರ ನೀಡುತ್ತಾ, ಸಹಕರಿಸಿದರು.
ಬದುಕಿನಲ್ಲಿ ಅನುಭವಗಳು ಪಾಠ ಕಲಿಸುತ್ತಾ ಸಾಗುತ್ತವೆ. ನಾವು ಪಾಠ ಕಲಿತಿದ್ದೇವೆ ಅನಿಸುತ್ತದೆ. ಆದರೆ ಮತ್ತೆ ಮತ್ತೆ ಎಡವಿ ಬೀಳುತ್ತಿರುತ್ತೇವೆ. ಸಾವಿನವರೆಗೂ ಪಾಠ ಕಲಿಯುತ್ತಿರಲೇಬೇಕು ಅನಿಸುತ್ತದೆ. ಕೆಲವೊಮ್ಮೆ ನಮ್ಮ ಜಾನಪದ ಕಥೆಗಳು, ಹಿರಿಯರ ಅನುಭವದ ಮಾತುಗಳು ನಾವು ಸರಿಯಾಗಿ ಅರ್ಥಮಾಡಿಕೊಂಡರೆ ಬದುಕಿನಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ. ನನ್ನ ಜೀವನದಲ್ಲಿ ನಾನು ಓದಿದ ಮೂರು ಕತೆಗಳು ಇಂದಿಗೂ ನನಗೆ ಕ್ಲಿಷ್ಟಕರ ಸಮಯದಲ್ಲಿ ಕೆಲವು ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿವೆ.
ನಾನು ಈ ಕತೆ ಓದಿ ಬಹಳ ವರ್ಷಗಳು ಕಳೆದಿವೆ. ಹಾಗಾಗಿ ಎಲ್ಲಿ ಓದಿದೆ ಎಂಬ ನೆನಪಿಲ್ಲ, ಆದರೆ ಇಂದಿಗೂ ನನ್ನನ್ನು ಕಾಡುವ ಕಥೆಗಳಾಗಿವೆ. ರಾಮಕೃಷ್ಣ ಪರಮಹಂಸರು ಈ ಕಥೆ ಹೇಳಿದರು ಎಂದು ನೆನಪು. ಬಾಲ್ಯದಿಂದ ಹತ್ತಾರು ಗೆಳೆಯರು ನಮ್ಮ ಜೀವನದಲ್ಲಿ ಬಂದು ಹೋಗುತ್ತಾರೆ. ಶಾಲಾ ದಿನಗಳಲ್ಲಿ ನನಗೊಬ್ಬ ಅತ್ಯಂತ ಆತ್ಮೀಯ ನವೀನ್ ಎಂಬ ಗೆಳೆಯನಿದ್ದ. ಬಾಲ್ಯದ ಆತ್ಮೀಯ ಗೆಳೆತನದಲ್ಲಿ ಇರುವಂತೆ ಅತ್ಯಂತ ನಿಷ್ಕಲ್ಮಷ ಬಾಂಧವ್ಯವಿತ್ತು. ಜೊತೆಗೆ ನಾವು ಶಾಲೆಗೆ ಹೋಗುವುದು, ಆಟವಾಡುವುದು, ಒಟ್ಟಿಗೆ ಕಾಲಕಳೆಯುವುದು ಸಾಮಾನ್ಯವಾಗಿತ್ತು. 7ನೇ ತರಗತಿ ಪಾಸಾದ ನಂತರ ನಾನು ಬೇರೆ ಶಾಲೆಗೆ ಸೇರಿಕೊಂಡೆ. 10ನೇ ತರಗತಿಯ ತನಕವೂ ನವೀನನ ಒಡನಾಟದಲ್ಲಿ ಇರುತ್ತಿದ್ದೆ. ನಂತರದ ದಿನಗಳಲ್ಲಿ ಅವನನ್ನು ಕಾಣಲು ಆಗುತ್ತಿರಲಿಲ್ಲ. ಇತ್ತೀಚೆಗೆ ನನ್ನ ಇನ್ನೊಬ್ಬ ಸ್ನೇಹಿತನಿಂದ ತಿಳಿಯಿತು. 10ನೇ ತರಗತಿಯಲ್ಲಿ ನವೀನನಿಗೆ ಅತ್ಯಂತ ಉತ್ತಮ ಅಂಕಗಳು ಬಂದು ಪಾಸಾಗಿದ್ದನು. ಆದರೂ ಬಡತನದ ಕಾರಣದಿಂದ ಕಾಲೇಜಿಗೆ ಸೇರಲಾಗಲಿಲ್ಲ ಹಾಗೂ ಅವನು ಹತ್ತು ಸಾವಿರ ಸಾಲ ಮಾಡಿಕೊಂಡು ತೀರಿಸಲಾಗದೆ, ನೇಣು ಬಿಗಿದುಕೊಂಡು ಸತ್ತು ಹೋದನಂತೆ. ಒಮ್ಮೆ ಅಂತರರಾಷ್ಟ್ರೀಯ ಮಟ್ಟದ ಒಂದು ಸ್ವಯಂ ಸೇವಾ ಸಂಸ್ಥೆಯವರು ಹಿರಿಯ ನಾಗರೀಕರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಲು ನಿಧಿ ಸಂಗ್ರಹಣೆಯ ಅಭಿಯಾನವನ್ನು ಕೈಗೊಂಡರು. ಭಾರತದಾದ್ಯಂತ ಕಣ್ಣಿನ ಪೊರೆ ಸಮಸ್ಯೆಯ ಕುರಿತಾಗಿ ಸುಮಾರು ಐದು ಪುಟಗಳ ವರದಿಯನ್ನು ತಯಾರಿಸಿ ಹಲವಾರು ಜಾಹೀರಾತು ನೀಡಲಾಯಿತು. ಈ ವಿಸ್ತೃತ ವರದಿಯಲ್ಲಿ ಕಣ್ಣಿನ ಸಮಸ್ಯೆಯ ಕುರಿತು ಅಂಕಿ ಅಂಶಗಳು ಹಾಗೂ ಈ ಸಮಸ್ಯೆಯನ್ನು ಹೋಗಲಾಡಿಸಲು ಬೇಕಾದ ಅಪಾರವಾದ ಹಣವನ್ನು ದೇಣಿಗೆ ನೀಡಲು ಕೋರಲಾಗಿತ್ತು. ಜಾಹೀರಾತು ನೀಡಿ ಸುಮಾರು ದಿನಗಳು ಕಳೆದರೂ ಅಂದುಕೊಂಡ ಮಟ್ಟಿಗೆ ನಿಧಿ ಸಂಗ್ರಹಣೆ ಆಗಲಿಲ್ಲ. ನಂತರ ನಿಧಿ ಸಂಗ್ರಹಣೆ ಯಶಸ್ವಿಯಾಗಿ ಮಾಡಲು ಏನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ನಿಧಿ ಸಂಗ್ರಹಣೆಗಾಗಿ ಒಂದು ವಿನೂತನ ಪ್ರಯೋಗ ಮಾಡಲು ನಿರ್ಧರಿಸಿದರು. ನಿಧಿ ಸಂಗ್ರಹಣೆಗಾಗಿ ವಿಸ್ತೃತವಾದ ವರದಿಯನ್ನು ಹಲವರು ಸಂಘ ಸಂಸ್ಥೆಗಳಿಗೆ ಕೊಟ್ಟು ದೇಣಿಗೆ ಕೇಳುವ ಬದಲು ಒಂದು ಸಣ್ಣ ಪ್ಲಾಸ್ಟಿಕ್ ಹಾಳೆಯನ್ನು ಒಂದು Envelope ಗೆ ಹಾಕಿ ಒಂದು ಕಾಗದದಲ್ಲಿ ಈ ರೀತಿ ಬರೆಯಲಾಗಿತ್ತು. "ಮಾನ್ಯರೇ, ಈ ಪ್ಲಾಸ್ಟಿಕ್ ಕಾಗದದ ಹಾಳೆ ತೆಗೆದುಕೊಂಡು ನಿಮ್ಮ ಕಣ್ಣಿನ ಮುಂದೆ ಇರಿಸಿಕೊಳ್ಳಿ. ನಿಮಗೆ ನಿಮ್ಮ ಮುಂದಿರುವ ವ್ಯಕ್ತಿ ವಸ್ತುಗಳನ್ನು ನೋಡಲು ಪ್ರಯತ್ನಿಸಿ. ಖಂಡಿತವಾಗಿ ನಿಮ್ಮ ಮುಂದಿರುವ ವ್ಯಕ್ತಿ ಅಥವಾ ವಸ್ತುಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಅತ್ಯಂತ ಅಸ್ಪಷ್ಟವಾಗಿ ಹಾಗೂ ಮಂಜು ಮುಸುಕಿದಂತೆ ಕಾಣಿಸುತ್ತವೆ. ಅಕಸ್ಮಾತ್ ನಿಮ್ಮ ಮುಂದೆ ದೊಡ್ಡದಾಗಿ ಏನಾದರೂ ಅಕ್ಷರಗಳಲ್ಲಿ ಬರೆದಿದ್ದರೆ ಓದಲು ಕಷ್ಟವಾಗಬಹುದು ಅಲ್ಲವೇ? ಹಾಗಾದರೆ ಭಾರತದಲ್ಲಿ ಲಕ್ಷಾಂತರ ಜನರು ಈ ರೀತಿ ಕಣ್ಣಿನ ಪೊರೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಈ ಲಕ್ಷಾಂತರ ಜನರನ್ನು ಮುಕ್ತಿಗೊಳಿಸಲು ನೀವು ಕೊಡುವ 2500 /- ರೂ.ಗಳ ದೇಣಿಗೆ ಉಪಯುಕ್ತಕರವಾಗಿರುತ್ತದೆ. ಒಬ್ಬರಿಗೆ 2500/- ರೂ. ಇಂದ ಶಸ್ತ್ರ ಚಿಕಿತ್ಸೆ ಮಾಡಿ ಅವರು ಮೊದಲಿನಂತೆ ಸ್ಪಷ್ಟವಾಗಿ ವಸ್ತುಗಳನ್ನು ನೋಡುವಂತೆ ಮಾಡಬಹುದು. ಹಾಗಾಗಿ ನೀವು ಕೊಡುವ ದೇಣಿಗೆ ಒಂದು ಮಹೋನ್ನತ ಕಾರ್ಯಕ್ಕೆ ಸದ್ಬಳಕೆಯಾಗುವುದು. ನಿಮ್ಮ ಸಹಕಾರ ಈ ಸಮಸ್ಯೆಯನ್ನು ಹೋಗಲಾಡಿಸಲು ಅತ್ಯಂತ ಉಪಯುಕ್ತವಾಗುತ್ತದೆ" ಎಂದು ಬರೆಯಲಾಗಿತ್ತು. ಹೀಗೆ ಬರೆಯಲಾಗಿದ್ದ Envelope ಹಾಗೂ ಪ್ಲಾಸ್ಟಿಕ್ ಹಾಳೆಯನ್ನು ಹಲವಾರು ಜನರಿಗೆ ಕಳುಹಿಸಿಕೊಡಲಾಯಿತು. ಕಳುಹಿಸಿಕೊಟ್ಟ ಕೆಲವೇ ದಿನಗಳಲ್ಲಿ ದೇಣಿಗೆ ಸಂಗ್ರಹಣೆ ಅತ್ಯಂತ ಯಶಸ್ವಿಯಾಗಿ ಪ್ರಾರಂಭವಾಯಿತು ಹಾಗೂ ಲಕ್ಷಾಂತರ ಜನರಿಗೆ ಕಣ್ಣಿನ ಪೊರೆಯಿಂದ ಶಸ್ತ್ರ ಚಿಕಿತ್ಸೆ ಮಾಡಿಸಲಾಯಿತು.
ಈ ಮೇಲ್ಕಂಡ ಉದಾಹರಣೆಯಿಂದ ಹತ್ತು ಹಲವು ಪಾಠಗಳನ್ನು ನಾವು ಕಲಿಯಬಹುದು. ವಿಸ್ತೃತವಾಗಿ ಪುಟಗಟ್ಟಲೆ ವರದಿ ಬರೆದಾಕ್ಷಣ ದೇಣಿಗೆ ಸಂಗ್ರಹವಾಗುವುದಿಲ್ಲ. ಹೇಳಬೇಕಾಗಿದ್ದನ್ನು ಅತ್ಯಂತ ವಿನೂತನವಾಗಿ ಹೇಳಬೇಕಾಗುತ್ತದೆ. ಯಾವುದೇ ಒಂದು ಸಮಸ್ಯೆ ಹೋಗಲಾಡಿಸಲು ಕೋಟ್ಯಾಂತರ ರೂ.ಗಳ ಹಣವನ್ನು ದೇಣಿಗೆಯಾಗಿ ಸಂಗ್ರಹಿಸಲು ಸಾರ್ವಜನಿಕವಾಗಿ ಕೋರಿಕೆ ಇಟ್ಟಾಕ್ಷಣ ಅಷ್ಟೊಂದು ದೊಡ್ಡ ಮಟ್ಟದ ಹಣ ನೋಡಿದಾಕ್ಷಣ ನಾವು ಕೊಡುವ ಚಿಕ್ಕ ದೇಣಿಗೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಜನರು ದೇಣಿಗೆ ಕೊಡಲು ಸಾಮಾನ್ಯವಾಗಿ ಮುಂದೆ ಬರುವುದಿಲ್ಲ. ದೇಣಿಗೆ ಕೊಡುವ ಹಣ ನೇರವಾಗಿ ಯಾರೋ ಒಬ್ಬರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಉಪಯುಕ್ತ ಎಂಬುದನ್ನು ಅರಿತರೆ ನಮ್ಮ ಹಣ ಸದ್ವಿನಿಯೋಗವಾಗುತ್ತದೆ ಎಂಬುದನ್ನು ಅರಿತರೆ ದೇಣಿಗೆ ನೀಡುವವರು ಸಂತೋಷದಿಂದ ದೇಣಿಗೆ ನೀಡಲು ಮುಂದೆ ಬರುತ್ತಾರೆ. ಈ ಮೇಲ್ಕಂಡ ಉದಾಹರಣೆಯಿಂದ ಇನ್ನು ಹತ್ತು ಹಲವು ವಿಭಿನ್ನ ಆಯಾಮಗಳನ್ನು ನಾವು ಕಲಿಯಬಹುದಾಗಿದೆ. ನಾವು ನಿಧಿ ಸಂಗ್ರಹಣೆ ಮಾಡುವುದಕ್ಕೆ ಉಪಯೋಗಿಸಿದ ವಿನೂತನ ಪ್ರಯೋಗಗಳನ್ನು ದಿನನಿತ್ಯದ ಕೆಲಸಗಳಲ್ಲಿ ನಾವು ತೋರಬೇಕಾಗುತ್ತದೆ. ಯಾವುದೇ ವಿನೂತನ ಆಲೋಚನೆ ಅರಿವಿನೊಂದಿಗೆ ಕೆಲಸ ನಿರ್ವಹಿಸಿದರೆ ಯಾಂತ್ರಿಕ ರೀತಿಯಲ್ಲಿ ಪ್ರತಿನಿತ್ಯದ ಕೆಲಸವನ್ನು ಮಾಡುತ್ತಿದ್ದರೆ ಯಾವುದೇ ರೀತಿಯ ಉನ್ನತ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ಮೇಲ್ಕಂಡ ಲೇಖನದ ಕುರಿತಾಗಿ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ Comment Box ನಲ್ಲಿ ತಿಳಿಸಿ ಹಾಗೂ ನಿಮ್ಮ ಇದೇ ರೀತಿಯಾದಂತಹ ಅನುಭವಗಳಾಗಿದ್ದಲ್ಲಿ ಅವುಗಳನ್ನು ಬರೆದು ಕಳುಹಿಸಿಕೊಡಿ. ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಇಲ್ಲಿ ಪ್ರಕಟಿಸುವುದರಿಂದ ಸಾವಿರಾರು ಜನಕ್ಕೆ ಈ ಲೇಖನವು Whatsapp ಹಾಗೂ ಅಂತರ್ಜಾಲ ತಾಣದಲ್ಲಿ ತಲುಪಿ ಹಲವರಿಗೆ ಉಪಯುಕ್ತವಾಗಬಹುದು. ರಮೇಶ ಎಂ.ಎಚ್. ನಿರಾತಂಕ ಸುಮಾರು 2003 ಬೆಂಗಳೂರು ಉತ್ತರ ತಾಲ್ಲೂಕಿನ ಕೆಲವು ಹಳ್ಳಿಗಳನ್ನು ಬಿಡಿಎ ವಿಶ್ವೇಶ್ವರಯ್ಯ ಮುಂದುವರಿದ ಬಡಾವಣೆ ರಚಿಸಲು ಭೂಸ್ವಾಧೀನ ಮಾಡಿಕೊಳ್ಳತೊಡಗಿತು. ನಮ್ಮ ಊರಿನ ಜಮೀನುದಾರ ರಂಗಪ್ಪನಿಗೆ ಸುಮಾರು 110 ಎಕರೆ ಜಮೀನಿತ್ತು. ರಂಗಪ್ಪನ ಮಗಳನ್ನು ನಮ್ಮದೇ ಊರಿನ ವಿದ್ಯಾವಂತ ಅನಂತಕುಮಾರ್ ಗೆ ಮದುವೆ ಮಾಡಿದರು. ಅನಂತಕುಮಾರ್ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದನು. ಹಾಗೆಯೇ ಕೆಲವೊಂದು ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಮಾಡುತ್ತಿದ್ದನು. ಮಾವ ರಂಗಪ್ಪನ ಜಮೀನು ಬಿಡಿಎ ಭೂಸ್ವಾಧೀನ ಮಾಡಿಕೊಳ್ಳುತ್ತದೆಂದು ಮಾವನಿಗೆ ತಲೆಕೆಡಿಸಿ ಯಾರಿಗಾದರೂ ಮಾರಿಬಿಡೋಣ ಎಂಬ ಉಪಾಯ ಹೇಳಿಕೊಟ್ಟನು. ಅದರಂತೆಯೇ ಅಳಿಯನಿಗೆ ಜಮೀನು ಮಾರಲು ಮಾವ ರಂಗಪ್ಪ ಒಪ್ಪಿಕೊಂಡರು. ಕಿಲಾಡಿ ಅನಂತಕುಮಾರ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಹುಡುಕಿ ಎಕರೆಗೆ 8 ಲಕ್ಷದಂತೆ ವ್ಯಾಪಾರ ಮಾಡಿ ಸುಮಾರು 60 ಎಕರೆ ಮಾರಾಟ ಮಾಡಿದನು. ತನ್ನ ಮಾವನಿಗೆ ಎಕರೆಗೆ 6 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ ಎಂದು ಕರೆದುಕೊಂಡು ಹೋಗಿ ರಿಜಿಸ್ಟರ್ ಮಾಡಿಸಿಕೊಟ್ಟನು. ಇದಾದ ಕೆಲವೇ ದಿನಗಳಲ್ಲಿ ಸುಮಾರು 1 ಕೋಟಿ 20 ಲಕ್ಷ ಲಾಭ ಮಾಡಿಕೊಂಡು ಅಳಿಯ ಅನಂತಕುಮಾರ್ ಸಾಹುಕಾರನಾದನು. ಇದು ಊರು ತುಂಬೆಲ್ಲಾ ಹಬ್ಬಿತು. ಆಗ ನನಗಿನ್ನೂ ಸುಮಾರು 20-21 ರ ಆಸುಪಾಸಿನ ವಯಸ್ಸು. ನಾನು ನನಗೆ ತಿಳಿದ ಇನ್ನೊಬ್ಬ ವಿದ್ಯಾವಂತ ಮಹದೇವನಿಗೆ, ತನ್ನ ಮಾವನಿಗೆ ಮೋಸ ಮಾಡಿದ ಅನಂತಕುಮಾರ ನಾಲಾಯಕ್ ಎಂದೆ. ಅದಕ್ಕೆ ಮಹದೇವ ನಾನು ಅದೇ ರೀತಿ ವ್ಯಾಪಾರ ಮಾಡುವಾಗ ನನ್ನ ಕಮಿಷನ್ ಇಟ್ಟುಕೊಳ್ಳುತ್ತೇನೆ. ಅದು ವ್ಯಾಪಾರ, ಅಳಿಯ ಆದರೇನು, ಮಾವ ಆದರೇನು ವ್ಯಾಪಾರ ವ್ಯಾಪಾರವೇ ಎಂದನು.
ರಮೇಶ ಎಂ.ಎಚ್. ನಿರಾತಂಕ ನಾನು ನನ್ನ ಆತ್ಮೀಯ ಸ್ನೇಹಿತ ಬೆಳಗಿನ ಜಾವ 5.00 ಗಂಟೆಗೆ ಬೆಂ.ವಿ.ವಿ.ಯ ಆವರಣದಲ್ಲಿ ಫಿಟ್ನೆಸ್ ತರಗತಿಗೆ ಹೋಗುತ್ತೇವೆ. ಈ ತರಗತಿಯಲ್ಲಿ ನಮಗೆ ಇನ್ನೊಬ್ಬ ರಾಮು ಎಂಬುವವನ ಪರಿಚಯವಾಯಿತು. ನಮ್ಮಿಬ್ಬರಿಗೂ ರಾಮು ಆತ್ಮೀಯನಾದ. ಸುಮಾರು 1 ವರ್ಷಗಳ ಕಾಲ ಒಡನಾಟದಲ್ಲಿ ನಾವು ಮೂರೂ ಜನರು ಆತ್ಮೀಯ ಸ್ನೇಹಿತರಾದೆವು. ಕೆಲವೊಮ್ಮೆ ನಾವು ಮೂರೂ ಜನರು ಭಾನುವಾರಗಳಂದು ಬೆಂಗಳೂರು ವಿಶ್ವವಿದ್ಯಾಲಯದ ಕಾಡಿನಲ್ಲಿ 10 ಕಿಲೋಮೀಟರ್ ಗಳ ನಡಿಗೆಯ ನಂತರ ಎಳನೀರು, ಊಟ ಎಲ್ಲವೂ ಆಗುತ್ತಿದ್ದವು. ರಾಮು ಒಂದು ದಿನ ನನ್ನಲ್ಲಿಗೆ ಬಂದು ನನಗೆ ತುರ್ತಾಗಿ 1 ಲಕ್ಷ ಸಾಲ ಬೇಕು ಎಂದು ಕೇಳಿದ. ನನಗೆ ಇತ್ತೀಚೆಗೆ ಪರಿಚಯವಾದ ರಾಮುವಿನ ಮೇಲೆ ಸ್ವಲ್ಪ ನಂಬಿಕೆ ಬರಲಿಲ್ಲ. ಒಂದೆರಡು ದಿನ ಕಾಲಾವಕಾಶ ಕೊಡು, ನನಗೆ ಸಾಧ್ಯವಾದರೆ ಹಣ ಕೊಡುತ್ತೇನೆ ಎಂದೆ. ಹಾಗೆಯೇ 1 ವರ್ಷದ ಆತ್ಮೀಯತೆಯಲ್ಲಿ ರಾಮುವಿಗೆ ಹಣ ಕೊಡುವುದಿಲ್ಲ ಎಂದು ಹೇಳುವುದಕ್ಕೆ ಮನಸ್ಸಿಗೆ ಕಷ್ಟಕರವಾಗುತ್ತಿತ್ತು.
ಮೊನ್ನೆ ನಡೆದ ಯಡಿಯೂರಪ್ಪ ನವರ ಹುಟ್ಟುಹಬ್ಬದಂದು ಅವರು ನಡೆದುಕೊಂಡ ರೀತಿ ಸಿದ್ದರಾಮಯ್ಯರವರು ತೋರಿದ ಪ್ರೀತಿಯಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಇಬ್ಬರು ಮಹಾನ್ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ.
ಬುದ್ದ ಹಾಗೂ ಮಹಾವೀರ ಒಮ್ಮೆಗೆ ಅಕ್ಕಪಕ್ಕದ ಕೋಣೆಯಲ್ಲಿ ತಂಗಿರುತ್ತಾರೆ. ಆದರೆ ಮಾರನೆಯ ದಿನ ಇಬ್ಬರೂ ಮಾತನಾಡದೆ ಅವರವರ ಪಾಡಿಗೆ ಹೊರಟುಬಿಡುತ್ತಾರೆ. ಆಗ ಅವರ ಅನುಯಾಯಿಗಳು ನಾಯಿಗಳು ಕಿತ್ತಾಡುವ ರೀತಿಯಲ್ಲಿ ಕಿತ್ತಾಡುತ್ತಾರೆ. ಬುದ್ದನ ಅನುಯಾಯಿಗಳು ಬುದ್ದ ಶ್ರೇಷ್ಠ ಎಂದು, ಮಹಾವೀರನ ಅನುಯಾಯಿಗಳು ಮಹಾವೀರ ಶ್ರೇಷ್ಠ ಎಂದು ಹಾಗೂ ಕೆಲವೊಬ್ಬರು ಇಬ್ಬರೂ ಮಹಾನ್ ego ಹೊಂದಿದ ವ್ಯಕ್ತಿಗಳು ಎಂದು. ಇಬ್ಬರು ಭೇಟಿಯಾಗಿದ್ದರೆ ಮಹತ್ವದ ಜ್ಞಾನ ಉದಯಿಸುತ್ತಿತ್ತು ಎಂದುಕೊಂಡರಂತೆ. ಕೊನೆಯಲ್ಲಿ ಅನುಯಾಯಿಗಳು ಗೊಂದಲ ಪರಿಹರಿಸಿಕೊಳ್ಳಲು ತಮ್ಮ ಗುರುಗಳ ಬಳಿ ಕೇಳುತ್ತಾರೆ, ಯಾರು ಶ್ರೇಷ್ಠ ಎಂದು? ಆಗ ಗುರುಗಳು ಇಬ್ಬರು ತುಂಬಿದ ಕೊಡಗಳಿದ್ದಂತೆ. ಹಂಚಿಕೊಳ್ಳಲು ಏನು ಇಲ್ಲದ ಕಾರಣ ಅವರು ಮಾತನಾಡಲಿಲ್ಲ ಎನ್ನುತ್ತಾರೆ. ಮೂರ್ಖರ ಹಾಗೆ ಅನುಯಾಯಿಗಳು ಬಡಿದಾಡಿಕೊಂಡು ಅಸಹ್ಯ ಭಾಷೆ ಒರಟುತನ ಬಿಡಬೇಕಾಗಿದೆ. (ಮೂಲ ಓಶೊಃ ರವರದ್ದು. ಯಾವಾಗಲೋ ಓದಿದ ನೆನಪು) ಸುಮ್ಮನೆ ಅಸಭ್ಯವಾಗಿ ಕಮೆಂಟ್ ಮಾಡಿ ಮನುಷ್ಯತ್ವವನ್ನೆ ಮರೆಯುವವರು ಜಗದ ಹೆಜ್ಜೆ ಗುರುತುಗಳಲ್ಲಿ ಮಾಯವಾಗಿ ಬಿಡುವರು. ಅರೆಬೆಂದವರು ಅರಚುವುದು, ಕಿರಿಚುವುದು, ಕೆಸರೆರಚುವುದು ಸಾಮಾನ್ಯ. ಅರಚುವವರನ್ನು, ಕಿರಿಚುವವರನ್ನು, ಕೆಸರೆರಚುವವರನ್ನು ನೋಡಿಯೂ ನೋಡದಂತೆ ಪ್ರತಿಕ್ರಿಯೆ ನೀಡದಿರುವುದು ಮಾನ್ಯ. ರಮೇಶ ಎಂ.ಎಚ್. ನಿರಾತಂಕ ಅದು ಅಕಸ್ಮಾತಾಗಿ ಆದ ಪರಿಚಯ, ಸಮಾಜಕಾರ್ಯ ಕ್ಷೇತ್ರದಲ್ಲಿ ಅವರಿಗೆ ಅಗಾಧವಾದ ಪಾಂಡಿತ್ಯ, ದೆಹಲಿ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಸಿಂಹಗಾಂಭೀರ್ಯದಿಂದ ಬದುಕಿದ್ದವರು, ಅಮೇರಿಕಾದಲ್ಲಿ ಆಗಿನ ಕಾಲಕ್ಕೆ ಉನ್ನತ ವ್ಯಾಸಂಗಕ್ಕೆ ಹೋಗಿದ್ದರಂತೆ, ಹೆಂಡತಿ ಅಂತರರಾಷ್ಟ್ರೀಯ ಮಟ್ಟದ ಲೇಖಕಿ, ಅವರ ಪುಸ್ತಕ ಆಗಿನ ಕಾಲಕ್ಕೆ Macmillan ಪಬ್ಲಿಕೇಷನ್ ನಿಂದ ಪ್ರಕಟಣೆಯಾಗಿತ್ತು. ನಿವೃತ್ತಿಯ ನಂತರ ವಿಜಯನಗರದಲ್ಲಿ ವಾಸವಾಗಿದ್ದರು, ಸಮಾಜಕಾರ್ಯ ಶಾಲೆಯ ಯಾರಾದರು ಕರೆದರೆ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎಂಬುದು ಅವರ ಆಸೆ ಆದರೆ ಯಾರೂ ಅವರನ್ನು ಕರೆಯಲಿಲ್ಲ.
ಅದೊಂದು ದಿನ ಹಿರಿಯ ಸಮಾಜಕಾರ್ಯಕರ್ತರೊಬ್ಬರು ಫೇಸ್ ಬುಕ್ ಮೂಲಕ ಪರಿಚಿತರಾದರು. ಪರಿಚಯ ಕೆಲವೇ ದಿನಗಳಲ್ಲಿ ಸ್ನೇಹವಾಯಿತು. ಸ್ನೇಹ ತಂದೆ ಮಗನ ರೀತಿಯ ಬಾಂಧವ್ಯವನ್ನು ಸೃಷ್ಟಿಸಿತು. ಆದರೆ ಒಮ್ಮೆಯೂ ಅವರನ್ನು ನಾನು ಭೇಟಿಯಾಗಿರಲಿಲ್ಲ.
ನನ್ನ ಜೀವನದ ಪ್ರತಿ ವಿಷಯದಲ್ಲಿ ಅವರಿಗೆ ಆಸಕ್ತಿ. ಅವರ ಜೀವನದ ಪ್ರತಿ ವಿಷಯವನ್ನು ಅವರು ನನಗೆ ಹೇಳುತ್ತಿದ್ದರು. ದಿನಕ್ಕೆ ಒಮ್ಮೊಮ್ಮೆ ಹಲವು ಬಾರಿ ದೂರವಾಣಿಯ ಮೂಲಕ ಮಾತನಾಡುತ್ತಿದ್ದೆವು. ಅವರ 3 ಪುಸ್ತಕಗಳನ್ನು ನನಗೆ ಪ್ರಕಟಿಸಲು ಅವಕಾಶ ಮಾಡಿಕೊಟ್ಟರು. ಈ ಒಡನಾಟ ಸುಮಾರು ಎರಡು ವರ್ಷ ನಿರಂತರವಾಗಿ ನಡೆಯಿತು. ಮುನಿಸು, ಕೋಪ, ಹಟ ಹಾಗೂ ಭಿನ್ನಾಭಿಪ್ರಾಯ ಹಾಗೂ ಹರಟೆ ಎಲ್ಲವೂ ಸರಾಗವಾಗಿ ನಡೆದಿತ್ತು. ನನ್ನ ವಯಸ್ಸಿನ ಅಂತರ ಮರೆತು ನನ್ನಲ್ಲಿ ಅವರ ಎಲ್ಲ ಜೀವನದ ಪುಟಗಳನ್ನು ತೆರೆದಿಟ್ಟರು. ಯೋಗಕ್ಕೆ ಸೇರಿಕೊ, ದೇಹದ ತೂಕ ಕಡಿಮೆ ಮಾಡು. ಇಂಗ್ಲೀಷ್ ಚೆನ್ನಾಗಿ ಕಲಿ. ಅಂತರರಾಷ್ಟ್ರೀಯ ಮಟ್ಟದ ಹೆಸರು ಮಾಡು ಎಂದು ಪದೇ ಪದೇ ಹೇಳುತ್ತಿದ್ದರು. ಬೆಳಿಗ್ಗೆ 5.00 ಗಂಟೆಗೆ ಎಂದಿನಂತೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸುತ್ತು ಹೊಡೆಯುವ ಅಭ್ಯಾಸ.
ಪ್ರತಿ ದಿನ ನನಗೆ ಪರಿಚಿತರಲ್ಲದ ಅಪ್ಪ ಮಗ ನನ್ನಂತೆಯೆ ನಸುಕಿನಲ್ಲಿ ಸುತ್ತಲು ಬರುತ್ತಿದ್ದರು. ನನಗೆ ತಿಳಿದವರೊಬ್ಬರು ನೋಡಿ ಸಾರ್ ಅಪ್ಪ ಮಗ ಇಬ್ಬರೂ ಒಂದೇ ಸಾರಿ ಬೆಳಿಗ್ಗೆ ಬರುತ್ತಾರೆ. ಆದರೆ ಮಗನಿಗೆ ಸ್ವಲ್ಪ ಮಂದ ಬುದ್ದಿ, ಆದರೆ ಅಪ್ಪ ಕೋಟ್ಯಾಧೀಶ್ವರ ಅಂದರು. ಸರಿ ಎಂದು ಸುಮ್ಮನಾದೆ. ಸ್ವಲ್ಪ ಸಮಯದ ನಂತರ ಮಗನ ಶೂಗಳನ್ನು ಗಮನಿಸಿದೆ. ಇನ್ನೇನು ಕಿತ್ತುಹೋಗುವ, ತುಂಬಾ ಹಳೆಯದಾದ ಹಾಗೆ ಕಾಣಿಸುತ್ತಿದ್ದವು. ಮನಸ್ಸಿನಲ್ಲಿ "ಕೋಟ್ಯಾಧಿಪತಿ ಆದರೇನು ಅಪ್ಪ ಮಗನಿಗೆ ಸರಿಯಾದ ಒಂದು ಜೊತೆ ಜೋಡು ಕೊಡಿಸಿಲ್ಲವಲ್ಲ ಅಂದುಕೊಂಡೆ." ಅಪ್ಪನ ಬಗ್ಗೆ ನನ್ನ ತಲೆಯಲ್ಲಿ ಕೊಳಕು ಭಾವನೆ ಬಂತು. ಅಷ್ಟರಲ್ಲಿ ಅವರ ಸ್ನೇಹಿತರೊಬ್ಬರು ನಿಮ್ಮ ಮಗನ ಶೂ ಹರಿದಿದೆ ಬೇರೆಯದು ಕೊಡಿಸಿಲ್ಲವೇಕೆ ಎಂದರು? ಇಲ್ಲ ಸಾರ್, ಆರ್ಡರ್ ಮಾಡಿ ಆರು ತಿಂಗಳಾಯಿತು. ಇನ್ನೂ ಬಂದಿಲ್ಲ ಎಂದರು. ನಾನು ಥಟ್ಟನೆ ಅವರೆಡೆಗೆ ತಿರುಗಿ ಕಿವಿಗೊಟ್ಟೆ. ಆಗ ಅವರು "ನನ್ನ ಮಗನ ಕಾಲಿನಲ್ಲಿ ಆರು ಬೆರಳುಗಳಿವೆ. ಸಾಮಾನ್ಯವಾದ ಅಂಗಡಿಗಳಲ್ಲಿ ಸಿಗುವ ಶೂಗಳು ಅವನಿಗೆ ಹೊಂದುವುದಿಲ್ಲ, ಅವನಿಗೆ ವಿಶೇಷವಾಗಿ ತಮಿಳುನಾಡಿನಿಂದ ನನ್ನ ಮಗನ ಕಾಲಿನ ಅಳತೆಗೆ ಶೂ ಆರ್ಡರ್ ಕೊಟ್ಟು ಮಾಡಿಸಬೇಕು" ಎಂದರು. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|