ಒಮ್ಮೆ ನನ್ನ ಪರಿಚಿತ ಡಾಕ್ಟರೊಬ್ಬರು ಮಾತನಾಡುತ್ತಾ ನನ್ನ ಪಕ್ಕದ ಮನೆಯ ಕೆಲಸದಾಕೆ ನನಗೆ 50,000 ಹಣದ ಸಹಾಯ ಮಾಡಿ ಎಂದಳು. ಆಗ ಅವಳ ಕಷ್ಟ ಕೇಳಿ ಸಹಾಯ ಮಾಡಲು ಚಿಂತಿಸಿದೆ. ನನ್ನ ಗಂಡ ಹಾಗೂ ಮನೆಯವರಿಗೆ ತಿಳಿಸದೆ ಸಹಾಯ ಮಾಡಲು ನಿರ್ಧರಿಸಿದೆ. 50,000 ಅತ್ಯಂತ ದೊಡ್ಡಮಟ್ಟದ ಹಣವಾಗಿರಲಿಲ್ಲ. ಅದನ್ನು ಮನೆ ಕೆಲಸದಾಕೆ ವಾಪಸ್ಸು ನೀಡದಿದ್ದರೆ ನನ್ನ ಬದುಕಿನಲ್ಲಿ ಅತ್ಯಂತ ದೊಡ್ಡ ಬದಲಾವಣೆಯೇನು ಆಗುತ್ತಿರಲಿಲ್ಲ ಎಂದು ಚಿಂತಿಸಿ, ಮನೆ ಕೆಲಸದಾಕೆಗೆ 50,000 ಸಹಾಯ ಮಾಡಿದೆ. ಆ ಹಣ ನೀಡುವಾಗ ಆಕೆಗೆ ಒಂದು ಮಾತು ಹೇಳಿದೆ, “ನಾನು ನಿನಗೆ ಹಾಗೂ ನಿನ್ನ ಕಷ್ಟ ನೋಡಿ ಸಹಾಯ ಮಾಡುತ್ತಿದ್ದೇನೆ. ಅಕಸ್ಮಾತ್ ನೀನು ಹಣ ಹಿಂತಿರುಗಿಸದೆ ಮೋಸ ಮಾಡಿದರೆ, ಖಂಡಿತ ನಾನು ಮುಂದೊಂದು ದಿನ ಪ್ರಾಮಾಣಿಕವಾಗಿ ಯಾರಾದರೂ ಅವರ ಕಷ್ಟ ಕಾಲದಲ್ಲಿ ಸಹಾಯ ಕೇಳಿದಾಗ ಸಹಾಯ ಮಾಡಲು ಮುಂದಾಗುವುದಿಲ್ಲ. ಹಾಗಾಗಿ ನೀನು ನನ್ನ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದ್ದೆ. ಆದರೆ ಮನೆ ಕೆಲಸದಾಕೆ 1 ವಾರಕ್ಕೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದಳು. ಸುಮಾರು ಬಾರಿ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಸುಮಾರು 3 ತಿಂಗಳು ಆಕೆಯನ್ನು ನನಗೆ ಹುಡುಕಲು ಸಾಧ್ಯವಾಗಲಿಲ್ಲ. ಆ 3 ತಿಂಗಳು ನನಗೆ ನನ್ನ ಈ ಉಪಕಾರ ಭಾವನೆ ಹಾಗೂ ನನ್ನ ನಿರ್ಧಾರದಿಂದ ಮನಸ್ಸಿನ ನೆಮ್ಮದಿ ಹಾಳಾಗಿತ್ತು. ಆದರೆ ಸುಮಾರು 6 ತಿಂಗಳು ಕಳೆದ ನಂತರ ಆಕೆ ನನ್ನ ಪೂರ್ತಿ ಹಣ ನನ್ನ ಖಾತೆಗೆ ವರ್ಗಾವಣೆ ಮಾಡಿ ಡಾಕ್ಟರ್ ನೀವು ಅಂದು ಹಣ ನೀಡುವಾಗ ಒಂದು ಮಾತು ಹೇಳಿದ್ದಿರಿ, ಅಕಸ್ಮಾತ್ ನೀನು ಹಣ ಹಿಂತಿರುಗಿಸದಿದ್ದರೆ ನೀವು ಮುಂದಿನ ದಿನಗಳಲ್ಲಿ ಯಾರಾದರೂ ಸಹಾಯ ಕೇಳಿದಾಗ ಮಾಡುವುದಿಲ್ಲ ಎಂದು. ಹಾಗಾಗಿ ನಾನು ನಿಮ್ಮ ಹಣ ಹಿಂತಿರುಗಿಸುತ್ತಿದ್ದೇನೆ ಎಂದಳು.
ಕೆಲವೊಮ್ಮೆ ಈ ರೀತಿಯ ಘಟನೆಗಳಿಂದಾಗಿ ನಾವು ಮತ್ತಷ್ಟು ಪ್ರಬುದ್ಧರನ್ನಾಗಿಸುತ್ತದೆ, ನಿತ್ಯ ಜೀವನದಿಂದ ಕಲಿಯುವ ಪಾಠ ಸದಾ ನಮ್ಮ ಜೀವನ ಸುಂದರವಾಗಿರುತ್ತವೆ ಅಲ್ಲವೆ? ರಮೇಶ ನಿರಾತಂಕ Follow the Ramesha Nirathanka Channel on WhatsApp: https://whatsapp.com/channel/0029Va4OLwtEVccDbgEAFY1Y
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|