ದೈನಂದಿನ ಜೀವನದಲ್ಲಿ ನಿಮ್ಮ ಗೆಲುವು ನಿಮ್ಮ ವೈಫಲ್ಯಕ್ಕಿಂತ ಹೆಚ್ಚು ಗೋಚರಿಸುತ್ತದೆ. ಆದುದರಿಂದ ನೀವು ಯಶಸ್ವಿಯಾಗುವ ಸಾಧ್ಯತೆಗಳನ್ನು ಹೆಚ್ಚು ಅಂದಾಜು ಮಾಡುತ್ತೀರಿ. ಕೆಲವೊಮ್ಮೆ ನೀವು ಭ್ರಮೆಗೆ ಒಳಗಾಗಿ ತಪ್ಪಾಗಿ ಅಂದಾಜು ಮಾಡುತ್ತೀರಾ. ನೀವು ಜನಪ್ರಿಯ ಲೇಖಕರನ್ನು ನೋಡಿರುತ್ತೀರಾ, ಆದರೆ ಪ್ರತಿ ಜನಪ್ರಿಯ ಲೇಖಕನ ಹಿಂದೆ 100 ಇತರ ಬರಹಗಾರರು ಇರುತ್ತಾರೆ, ಅವರ ಪುಸ್ತಕಗಳು ಎಂದಿಗೂ ಮಾರಾಟವಾಗಿರುವುದಿಲ್ಲ. ಅವರ ಹಿಂದೆ ಇನ್ನೂ 100 ಬರಹಗಾರರಿಗೆ ಪ್ರಕಾಶಕರು ದೊರಕಿರುವುದಿಲ್ಲ. ಅವರ ಹಿಂದೆ ನೋಡಿದಾಗ ಇನ್ನೂ 100 ಬರಹಗಾರರಿರುತ್ತಾರೆ, ಅವರ ಅಪೂರ್ಣ ಬರಹಗಳ ಪ್ರತಿಗಳು ಡ್ರಾಯರ್‌ಗಳಲ್ಲಿ ಧೂಳು ಬಿದ್ದು ಹಾಗೇ ಉಳಿದುಕೊಂಡಿರುತ್ತವೆ ಮತ್ತು ಇವುಗಳಲ್ಲಿ ಪ್ರತಿಯೊಂದರ ಹಿಂದೆ 100 ಜನರು ಒಂದು ದಿನ ಪುಸ್ತಕ ಬರೆಯಬೇಕೆಂಬ ಕನಸು ಕಂಡಿರುತ್ತಾರೆ. ಆದರೆ ನೀವು ಯಶಸ್ವಿ ಲೇಖಕರ ಬಗ್ಗೆ ಮಾತ್ರ ಕೇಳಿರುತ್ತೀರಿ (ಈ ದಿನಗಳಲ್ಲಿ, ಅವರಲ್ಲಿ ಹಲವರು ಅವರ ಬರಹಗಳನ್ನು ಸ್ವಯಂ ಪ್ರಕಟಿಸಿಕೊಂಡಿರುತ್ತಾರೆ), ಮತ್ತು ಸಾಹಿತ್ಯಿಕವಾಗಿ ಕೂಡ ಯಶಸ್ಸನ್ನು ಗುರುತಿಸಲು ವಿಫಲವಾಗಿರುತ್ತೀರಿ. ಇದು ಉದಾಹರಣೆ ಅಷ್ಟೇ, ಇದರಂತೆ ಛಾಯಾಗ್ರಾಹಕರು, ವಾಣಿಜ್ಯೋದ್ಯಮಿಗಳು, ಕಲಾವಿದರು, ಕ್ರೀಡಾಪಟುಗಳು, ವಾಸ್ತುಶಿಲ್ಪಿಗಳು, ನೊಬೆಲ್ ಪ್ರಶಸ್ತಿ ವಿಜೇತರು, ದೂರದರ್ಶನ ನಿರೂಪಕರು ಮತ್ತು ಸೌಂದರ್ಯ ರಾಣಿಯರಿಗೂ ಇದು ಅನ್ವಯಿಸುತ್ತದೆ. ಮಾಧ್ಯಮಗಳು ವಿಫಲವಾದವರ ಬಗ್ಗೆ ತಿಳಿದುಕೊಳ್ಳಲು ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ. ಇದು ಅವರ ಕೆಲಸವೂ ಅಲ್ಲ ಎಂಬಂತೆ ಉಳಿದುಕೊಂಡಿರುತ್ತಾರೆ. ಇಂತಹ ಪಕ್ಷಪಾತ ಮತ್ತು ತಪ್ಪು ಅಂದಾಜನ್ನು ತಪ್ಪಿಸಲು, ನೀವೇ ಸ್ವತಃ ಇದರ ಅಗೆಯುವಿಕೆಯನ್ನು ಮಾಡಬೇಕಾಗುತ್ತದೆ ಮತ್ತು ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಕೃಪೆ: The Art of Thinking Clearly ಲೇಖಕರು: ರೋಲ್ಫ್ ಡೊಬೆಲ್ಲಿ In daily life, because triumph is made more visible than failure, you systematically overestimate your chances of succeeding. As an outsider, you succumb to an illusion, and you mistake how minuscule the probability of success really is. Rick, like so many others, is a victim of Survivorship Bias. Behind every popular author you can find 100 other writers whose books will never sell. Behind them are another 100 who haven’t found publishers. Behind them are yet another 100 whose unfinished manuscripts gather dust in drawers. And behind each one of these are 100 people who dream of – one day – writing a book. You, however, hear of only the successful authors (these days, many of them self-published) and fail to recognise how unlikely literary success is. The same goes for photographers, entrepreneurs, artists, athletes, architects, Nobel Prize winners, television presenters and beauty queens. The media is not interested in digging around in the graveyards of the unsuccessful. Nor is this its job. To elude the survivorship bias, you must do the digging yourself. Source: The Art of Thinking Clearly Author: Rolf Dobelli Follow the Ramesha Nirathanka Channel on WhatsApp:
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|