ಅವನು ನನ್ನ ಆತ್ಮೀಯ ಗೆಳೆಯ, ಮಹೇಶ್ ಚುನಾವಣಾ ಪ್ರಚಾರದ ವೇಳೆ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕೇಳಿಕೊಂಡೆ. ಅವನು ಆನಂದದಿಂದ ನಮ್ಮ ಲೇಔಟ್ ನವರನ್ನೆಲ್ಲಾ ಸೇರಿಸುತ್ತೇನೆ. ನಾನೆ ಆ ಲೇಔಟ್ ನ ಸಂಘದ ಅಧ್ಯಕ್ಷ, ಒಮ್ಮೆ ಅಭ್ಯರ್ಥಿಯನ್ನು ಕರೆದುಕೊಂಡು ಬನ್ನಿ ಎಂದರು. ನಾನು ಸರಿ ಎಂದು ನನ್ನ ಇನ್ನೂ ಕೆಲವು ಗೆಳೆಯರಿಗೆ ಹೇಳಿ ಆ ಲೇಔಟ್ ಗೆ ಪ್ರಚಾರಕ್ಕೆ ಹೋದೆ. ಅಲ್ಲಿ ನನ್ನ ಇನ್ನೊಬ್ಬ ಪ್ರಾಣ ಸ್ನೇಹಿತ ಕೂಡ ಆ ಸಭೆಗೆ ಬಂದಿದ್ದ. ಅವನನ್ನು ನಮ್ಮ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಪ್ಪ ಎಂದು ವಿನಂತಿಸಿದೆ. ಅದಕ್ಕೆ ಅವನು ಸಮ್ಮತಿಸಿದ, ಈ ನನ್ನ ಪ್ರಾಣ ಸ್ನೇಹಿತನಿಗೆ ಹಲವು ಉಪಕಾರಗಳನ್ನು ನಾನು ಮಾಡಿದ್ದೆ. ಅವನ ಮಗನಿಗೆ ಒಂದು ಪ್ರಮುಖ ಶಾಲೆಯಲ್ಲಿ ಸೀಟು, ಅವನ ಪುಸ್ತಕ ಪ್ರಕಟಣೆ ಮಾಡಿದ್ದೆ ಹಾಗೂ ನಾನು ಅವನಿಗೆ ಒಂದು ಸೈಟು ತೋರಿಸಿ ಖರೀದಿ ಮಾಡಲು ನೆರವಾಗಿದ್ದೆ. ಹೀಗೆ ಹತ್ತು ಹಲವು ಉಪಕಾರ ಮಾಡಿದ್ದೆ. ಹಾಗಾಗಿ ಅವನು ನನ್ನ ಪರ ಪ್ರಚಾರ ಮಾಡುತ್ತಾನೆ ಎಂದು ನಂಬಿದ್ದೆ ಕೂಡ.
ಕೆಲವು ದಿನಗಳು ಕಳೆದ ನಂತರ ನನ್ನ ಸ್ನೇಹಿತ ಮಹೇಶ ಸಿಕ್ಕಿದ್ದ. ನಾನು ಎಂದಿನಂತೆ ಪ್ರಚಾರ ಹೇಗೆ ನಡೆಯುತ್ತಿದೆ ಎಂದು ಕೇಳಿದೆ ಹಾಗೂ ನನ್ನ ಪ್ರಾಣಕ್ಕಿಂತ ಶಶಿಧರನೂ ನಿನಗೆ ಸಹಾಯ ಮಾಡುತ್ತಿರುವನೆ ಎಂದೆ? ಅದಕ್ಕೆ ಅವನು ಸಹಾಯ ಮಾಡುವುದು ಹಾಗಿರಲಿ, ನೀನು ಅಂದು ಸಭೆ ಮಾಡಿ ಹೊರಟ ನಂತರ ನಿನ್ನ ಎದುರಾಳಿ ಪಕ್ಷದ ಅಭ್ಯರ್ಥಿಯನ್ನು ಕರೆಸಿ ನಿನ್ನ ಅಭ್ಯರ್ಥಿ ವಿರುದ್ಧ ಪ್ರಚಾರ ನಡೆಸಿದ ಎಂದನು! ನನಗೆ ಕೇಳಿ ಆಶ್ಚರ್ಯವಾಯಿತು….. ಕಾಡುವ ಪ್ರಶ್ನೆಗಳು ಪ್ರಶ್ನೆ 1: ನನ್ನ ಸ್ನೇಹಿತ ನನ್ನ ಅಭ್ಯರ್ಥಿಯ ಪರ ಪ್ರಚಾರ ಮಾಡಬೇಕೆಂದೇನಿಲ್ಲ. ಆದರೆ ಸುಳ್ಳು ಹೇಳುವ ಅವಶ್ಯಕತೆ ಏನಿತ್ತು. ಉತ್ತರ : ಪ್ರಶ್ನೆ 2: ನನ್ನ ಹತ್ತಿರ ಆವೊಂದು ಸಹಾಯ ಪಡೆದ ಮೇಲೆ ಈ ರೀತಿ ನನ್ನ ಅಭ್ಯರ್ಥಿಯ ವಿರುದ್ಧ ಪ್ರಚಾರ ಮಾಡಿದ್ದು ಸರಿಯೆ? ಉತ್ತರ: ಪ್ರಶ್ನೆ 3: ಇನ್ನು ಮುಂದೆ ಅವನು ಮತ್ತೊಮ್ಮೆ ನನ್ನ ಸಹಾಯ ಕೇಳಿದರೆ ಮಾಡಬೇಕೇ ? ಉತ್ತರ: ಪ್ರಶ್ನೆ 4: ಈ ಘಟನೆಯಿಂದಾಗಿ ನಾನು ಅವನನ್ನು ದ್ವೇಷಿಸಬೇಕೇ ? ಉತ್ತರ: ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|