ಸುಮಾರು 2003 ಬೆಂಗಳೂರು ಉತ್ತರ ತಾಲ್ಲೂಕಿನ ಕೆಲವು ಹಳ್ಳಿಗಳನ್ನು ಬಿಡಿಎ ವಿಶ್ವೇಶ್ವರಯ್ಯ ಮುಂದುವರಿದ ಬಡಾವಣೆ ರಚಿಸಲು ಭೂಸ್ವಾಧೀನ ಮಾಡಿಕೊಳ್ಳತೊಡಗಿತು. ನಮ್ಮ ಊರಿನ ಜಮೀನುದಾರ ರಂಗಪ್ಪನಿಗೆ ಸುಮಾರು 110 ಎಕರೆ ಜಮೀನಿತ್ತು. ರಂಗಪ್ಪನ ಮಗಳನ್ನು ನಮ್ಮದೇ ಊರಿನ ವಿದ್ಯಾವಂತ ಅನಂತಕುಮಾರ್ ಗೆ ಮದುವೆ ಮಾಡಿದರು. ಅನಂತಕುಮಾರ್ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದನು. ಹಾಗೆಯೇ ಕೆಲವೊಂದು ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಮಾಡುತ್ತಿದ್ದನು. ಮಾವ ರಂಗಪ್ಪನ ಜಮೀನು ಬಿಡಿಎ ಭೂಸ್ವಾಧೀನ ಮಾಡಿಕೊಳ್ಳುತ್ತದೆಂದು ಮಾವನಿಗೆ ತಲೆಕೆಡಿಸಿ ಯಾರಿಗಾದರೂ ಮಾರಿಬಿಡೋಣ ಎಂಬ ಉಪಾಯ ಹೇಳಿಕೊಟ್ಟನು. ಅದರಂತೆಯೇ ಅಳಿಯನಿಗೆ ಜಮೀನು ಮಾರಲು ಮಾವ ರಂಗಪ್ಪ ಒಪ್ಪಿಕೊಂಡರು. ಕಿಲಾಡಿ ಅನಂತಕುಮಾರ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಹುಡುಕಿ ಎಕರೆಗೆ 8 ಲಕ್ಷದಂತೆ ವ್ಯಾಪಾರ ಮಾಡಿ ಸುಮಾರು 60 ಎಕರೆ ಮಾರಾಟ ಮಾಡಿದನು. ತನ್ನ ಮಾವನಿಗೆ ಎಕರೆಗೆ 6 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ ಎಂದು ಕರೆದುಕೊಂಡು ಹೋಗಿ ರಿಜಿಸ್ಟರ್ ಮಾಡಿಸಿಕೊಟ್ಟನು. ಇದಾದ ಕೆಲವೇ ದಿನಗಳಲ್ಲಿ ಸುಮಾರು 1 ಕೋಟಿ 20 ಲಕ್ಷ ಲಾಭ ಮಾಡಿಕೊಂಡು ಅಳಿಯ ಅನಂತಕುಮಾರ್ ಸಾಹುಕಾರನಾದನು. ಇದು ಊರು ತುಂಬೆಲ್ಲಾ ಹಬ್ಬಿತು. ಆಗ ನನಗಿನ್ನೂ ಸುಮಾರು 20-21 ರ ಆಸುಪಾಸಿನ ವಯಸ್ಸು. ನಾನು ನನಗೆ ತಿಳಿದ ಇನ್ನೊಬ್ಬ ವಿದ್ಯಾವಂತ ಮಹದೇವನಿಗೆ, ತನ್ನ ಮಾವನಿಗೆ ಮೋಸ ಮಾಡಿದ ಅನಂತಕುಮಾರ ನಾಲಾಯಕ್ ಎಂದೆ. ಅದಕ್ಕೆ ಮಹದೇವ ನಾನು ಅದೇ ರೀತಿ ವ್ಯಾಪಾರ ಮಾಡುವಾಗ ನನ್ನ ಕಮಿಷನ್ ಇಟ್ಟುಕೊಳ್ಳುತ್ತೇನೆ. ಅದು ವ್ಯಾಪಾರ, ಅಳಿಯ ಆದರೇನು, ಮಾವ ಆದರೇನು ವ್ಯಾಪಾರ ವ್ಯಾಪಾರವೇ ಎಂದನು.
ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|