ಸದಾ ಕಾಲ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿ ನಿಸ್ವಾರ್ಥ ಸೇವೆಯಿಂದ ಸಮಾಜಕ್ಕಾಗಿ ಏನಾದರೂ ಒಂದಿಷ್ಟು ಕೆಲಸ ಮಾಡುವ ಕನಸು ಹೊತ್ತು ಅವಿರತವಾಗಿ ಶ್ರಮಿಸುತ್ತಿರುವ ಸರಳತೆಯಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತಹ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಹೃದಯಿಗಳಾದ ನೀವು ಜಯಶೀಲರಾಗಬೇಕೆಂಬುದೇ ನನ್ನ ಆಶಯ.
ವಿ ದಾಸಣ್ಣ ಪಾವಗಡ ಸಂಸ್ಥಾಪಕರು ಮತ್ತು ಕಾರ್ಯದರ್ಶಿಗಳು, ವಿಶ್ವ ಗ್ರಾಮೋದಯ ಟ್ರಸ್ಟ್ ಪಾವಗಡ. www.vishwagramodaya.org
0 Comments
The true social workers are real political persons. Politics is for social services. But many people think that it is to enjoy power, earn name, fame and money. Social service is an eye washing trick for them. Since the true social workers are not aware of service technic, fake person acts like social servant. The person like Ramesha Niratanka are rare in politics. I personally welcome him if he wants to come to politics.
Kallarepura Mahadevaiah ರಮೇಶ ಎಂ.ಎಚ್. MSW, PGDELT ಸಮಾಜಕಾರ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ಕಾರಣಕ್ಕಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದ, `ನಿರುತ ಪ್ರಕಾಶನ’ ಸಂಸ್ಥೆಯ ಮುಖ್ಯಸ್ಥರಾದ ಮತ್ತು ನನ್ನ ಆತ್ಮೀಯರಾದ ಮಾನ್ಯ ರಮೇಶ ಎಂ.ಎಚ್. ರವರು ರಾಜಕೀಯ ಕ್ಷೇತ್ರ ಪ್ರವೇಶಿಸುತ್ತಿರುವುದು ನನಗಂತೂ ಒಂದು ಸಂತಸದ ಸುದ್ದಿಯೆ. ಮಿತ್ರ ರಮೇಶರವರು ವಿದ್ಯಾವಂತ, ಸಮಾಜಕಾರ್ಯ ಸಾಹಿತ್ಯ ಪ್ರಕಾಶಕ, ಉತ್ತಮ ಸಂಘಟಕ, ಯೋಜನೆ ಮತ್ತು ಅನುಷ್ಠಾನ ನಿಪುಣ, ಕನ್ನಡ ಪ್ರೇಮಿ, ಶ್ರೇಷ್ಠ ಮಾತುಗಾರ, ವಿಕಾಶವಾದಿ ಹಾಗೂ ಸಹೃದಯಿ. ಇಂಥವರು ರಾಜಕೀಯಕ್ಕೆ ಬಂದರೆ ಸಮುದಾಯ, ಸಮಾಜಗಳು ನಿಶ್ಚಯವಾಗಿಯೂ ಅಭ್ಯುದಯದತ್ತ ಮುಖ ಮಾಡಬಹುದು.
ಸಮಾಜಕಾರ್ಯಕರ್ತರು ರಾಜಕೀಯ ಕ್ಷೇತ್ರಕ್ಕೆ ಬರಬೇಕು. ಸಮಾಜದಲ್ಲಿ ನಾಯಕತ್ವದ ಕುರಿತು ಮತ್ತು ಅಭಿವೃದ್ದಿ ಹಾಗೂ ಸಮಾಜದ ಸಬಲಿಕರಣದ ಕುರಿತು ಅಧ್ಯಯನ, ಪಾಠ ಕಲಿಸುವುದರೊಟ್ಟಿಗೆ, ಸಮಾಜದ ಒಟ್ಟಿಗೆ, ಸಮಾಜಕಾರ್ಯ ಕ್ಷೇತ್ರದ ಅಭಿವೃದ್ಧಿ, ಸಬಲತೆ ಹಾಗೂ ವಿಸ್ತರಣೆಗೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಅವಶ್ಯಕತೆ ಇದೆ. ನಿಮ್ಮ ಈ ಒಳ್ಳೆಯ ಆಲೋಚನೆ ಮತ್ತು ನಿರ್ಧಾರ ಸಮಾಜದ ಸಂಘಟನೆಯೊಂದಿಗೆ ಸಫಲವಾಗಲಿ ಹಾಗೂ ಮಾದರಿಯಾಗಲಿ ಎಂದು ಶುಭಹಾರೈಸುತ್ತೇನೆ.
ನಿಮ್ಮ ಅನುಭವ ಹಾಗೂ ನೀವು ಅನುಷ್ಠಾನಗೊಳಿಸುತ್ತಿರುವ ಕಾರ್ಯಚಟುವಟಿಕೆಗಳಿಗೆ, ಒಬ್ಬ ಸಮಾಜ ಕಾರ್ಯಕರ್ತನಾಗಿ ನಾನು ಯಾವಾಗಲೂ ಚಿರಋಣಿ. ಇಲ್ಲಿಯವರೆಗೂ ನಿಮ್ಮನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗಿಲ್ಲ ಹಾಗೂ ನಿಮ್ಮ ಯಾವ ತರಗತಿ, ಅಧಿವೇಶನ, ಸಭೆ, ವಿಚಾರ ಸಂಕಿರಣ, ಸಮ್ಮೇಳನ, ವಿಚಾರಗೋಷ್ಠಿ ಅಥವಾ ಚರ್ಚೆಯಲ್ಲಿ ಪಾಲ್ಗೊಳ್ಳಲು ಆಗಿಲ್ಲ. ಆದರೂ ನಿಮ್ಮ ವ್ಯಕ್ತಿತ್ವ, ನಿಮ್ಮ ಕಾರ್ಯವೈಖರಿ ಹಾಗೂ ನಿಮ್ಮ ಕಾರ್ಯಚಟುವಟಿಕೆಗಳು ನನಗೆ ಸದಾ ಪ್ರೇರಣೆ ಹಾಗೂ ಸ್ಫೂರ್ತಿದಾಯಕ ಆಗಿವೆ ಎಂದು ನಾನು ಮನಃಪೂರ್ವಕವಾಗಿ ಹೇಳಲು ಇಚ್ಚಿಸುತ್ತೇನೆ. ನೀವು ಕೈಗೊಳ್ಳುವ ಕಾರ್ಯಕ್ಷೇತ್ರ ಸದಾ ವಿಸ್ತಾರವಾಗುತ್ತಾ ಸಾಗಲಿ ಹಾಗೂ ಆ ಪ್ರತಿಯೊಂದು ಕಾರ್ಯಕ್ಷೇತ್ರವೂ ಸಮಾಜಕಾರ್ಯ ವೃತ್ತಿಗೆ, ಈ ಸಮಾಜಕ್ಕೆ ಹಾಗೂ ನಿಮ್ಮ ಬೆಳವಣಿಗೆ ಮತ್ತು ವಿಕಾಸಕ್ಕೆ ಪೂರಕವಾಗಿ, ಮಾದರಿಯಾಗಿ, ಪ್ರೇರಣೆಯಾಗಿ ಹಾಗೂ ಸ್ಪೂರ್ತಿದಾಯಕವಾಗಿ ಯಶಸ್ವಿಯಾಗಲಿ ಎಂದು ಶುಭಹಾರೈಕೆಗಳು ಹಾಗೂ ಪ್ರಾರ್ಥನೆ. ರಮೇಶ ಆಡಿನ (MSW, M.Phil., Ph.D. Pursuing), ಅರಭಾವಿ. ತಾ|| ಗೋಕಾಕ, ಜಿ|| ಬೆಳಗಾವಿ |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|