ಶ್ರೀ ರಮೇಶ ಎಂ.ಎಚ್ ರವರು ಮೂಲತಃ ಸ್ಥಳೀಯ ಮುದ್ದಯ್ಯನಪಾಳ್ಯದವರಾದ ಕೃಷಿ ಹಿನ್ನೆಲೆಯುಳ್ಳ ಕುಟುಂಬದ ಶ್ರೀ ಹನುಮಯ್ಯ ಹಾಗೂ ಶ್ರೀಮತಿ ಚಿಕ್ಕಹನುಮಕ್ಕ ದಂಪತಿಗಳಿಗೆ ಹಿರಿಯ ಮಗನಾಗಿ ಜನಿಸಿರುತ್ತಾರೆ. ಇವರು ಪ್ರಾಥಮಿಕ ಶಿಕ್ಷಣವನ್ನು ಮುದ್ದಯ್ಯನಪಾಳ್ಯದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿರುತ್ತಾರೆ. 2002 ರಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದು, ನಂತರ 2004 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿರುತ್ತಾರೆ. 2008 ಮತ್ತು 2009 ರ ಅವಧಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ, ಸಮಾಜಕಾರ್ಯ ವಿಭಾಗದ ಸಂಯೋಜಿತ ಅನುಪಮಾ ಕಾಲೇಜಿನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿರುತ್ತಾರೆ. ಸಮಾಜಸೇವಾ ಕಾರ್ಯಗಳಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿದ್ದು, ನಿರಾತಂಕ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು 2007 ರಲ್ಲಿ ಪ್ರಾರಂಭಿಸಿದರು. ಇವರ ಸಮಾಜಸೇವಾ ಆಶಯದ ಕಲ್ಪನೆಗಳನ್ನು ನಿರಾತಂಕ ಸಂಸ್ಥೆಯ ಮೂಲಕ ಕೈಗೊಂಡು ಅನೇಕ ಸಮಾಜಮುಖಿ ಕಾರ್ಯಗಳನ್ನು ಸಮಾಜಕ್ಕೆ ತಲುಪಿಸಿದ್ದಾರೆ. ಅನೇಕ ಪ್ರಗತಿಪರ ಚಿಂತಕರು ಮತ್ತು ಹಿರಿಯ ಸಮಾಜಕಾರ್ಯ ವೃತ್ತಿಪರರು ಸಮಾಜಸೇವಾ ಚಟುವಟಿಕೆಗಳಲ್ಲಿ ನಿರಾತಂಕ ಸಂಸ್ಥೆಗೆ ಮಾರ್ಗದರ್ಶನವನ್ನು ನೀಡಿ, ಪ್ರೋತ್ಸಾಹಿಸಿದ್ದಾರೆ.
ಪ್ರಶಸ್ತಿಗಳು
ಪ್ರಶಸ್ತಿಗಳು
- “ನಾಗರೀಕ ನಾಯಕತ್ವ ತರಬೇತಿ (B.Clip)”ಯನ್ನು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (B.PAC) ರವರಿಂದ 2014 ರಲ್ಲಿ ಪಡೆದುಕೊಂಡಿದ್ದಾರೆ.
- ನ್ಯಾಷನಲ್ ಅಸೋಸಿಯೇಷನ್ ಆಫ್ ಪ್ರೊಫೆಷನಲ್ ಸೋಷಿಯಲ್ ವರ್ಕರ್ಸ್ ಇನ್ ಇಂಡಿಯಾ (NAPSWI) ರವರು 2019 ನೇ ಸಾಲಿನ “ಯುವ ಸಾಧಕ ಪ್ರಶಸ್ತಿ” ಯನ್ನು ನೀಡಿದ್ದಾರೆ.
- 2014 ರಲ್ಲಿ ನಡೆದ ಬೆಂಗಳೂರು ಯುವ ಜನೋತ್ಸವದಲ್ಲಿ “ಬೆಂಗಳೂರು ಯುವ ಪ್ರಶಸ್ತಿ”ಯನ್ನು ಪಡೆದುಕೊಂಡಿದ್ದಾರೆ.
- ಬೆಂಗಳೂರಿನ ನ್ಯಾಷನಲ್ ಕಾಲೇಜ್ ವತಿಯಿಂದ 2003 ರಲ್ಲಿ ಸಮಾಜಶಾಸ್ತ್ರದಲ್ಲಿ ಅತ್ಯುನ್ನತ ಪ್ರಾವೀಣ್ಯತೆಗಾಗಿ “ಡಾ. ಮರ್ತುವ್‌ಕುಡಿ ಆರ್ ವೆಂಕಟಮ್ಮ ಸ್ಮಾರಕ ಪ್ರಶಸ್ತಿ”ಯನ್ನು ನೀಡಿದ್ದಾರೆ.