ಆತ್ಮೀಯರಿಗೂ, ಪರಿಚಿತರಿಗೂ, ಎದುರಾಳಿಗಳಿಗೂ ಹಲವು ವ್ಯತ್ಯಾಸಗಳಿರುವುದನ್ನು ನಾವು ನಮ್ಮ ಬದುಕಿನ ಓಟದಲ್ಲಿ ಗುರು6/28/2023 ಬದುಕಿನ ಓಟದಲ್ಲಿ ಹಲವಾರು ಜನ ನಮ್ಮನ್ನು ಸಂಧಿಸುತ್ತಾರೆ. ಕೆಲವರು ಆತ್ಮೀಯರಾಗುತ್ತಾರೆ, ಇನ್ನೂ ಹಲವರು ಪರಿಚಿತರಾಗುತ್ತಾರೆ, ಇನ್ನೂ ಕೆಲವರು ನಮ್ಮ ಎದುರಾಳಿಗಳಾಗಿಬಿಡುತ್ತಾರೆ. ಆತ್ಮೀಯರಿಗೂ, ಪರಿಚಿತರಿಗೂ, ಎದುರಾಳಿಗಳಿಗೂ ಹಲವು ವ್ಯತ್ಯಾಸಗಳಿರುವುದನ್ನು ನಾವು ನಮ್ಮ ಬದುಕಿನ ಓಟದಲ್ಲಿ ಗುರುತಿಸಬೇಕಾಗುತ್ತದೆ. ಪರಿಚಿತರಿಗೆ ಹಾಗೂ ಎದುರಾಳಿಗಳಿಗೆ ಕಾರಣಗಳನ್ನು ಹುಡುಕುತ್ತಾ, ಅವರ ಬಗ್ಗೆ ಚಿಂತಿಸುತ್ತಾ ಕೂರಲು ಸಮಯವಿರುವುದಿಲ್ಲ. ನಾವು ಚಿಂತಿಸಬೇಕಾಗಿರುವುದು ನಮ್ಮ ಆತ್ಮೀಯರಿಗೆ ಮಾತ್ರ. ನಮ್ಮ ಆತ್ಮೀಯರಿಂದ ಕಲಿಯುವುದು ಬಹಳಷ್ಟಿರುತ್ತದೆ.
ಆತ್ಮೀಯ ಹಂತಕ್ಕೆ ಒಂದೇ ಸಲ ಸ್ನೇಹಿತರಾಗಲು ಆಗುವುದಿಲ್ಲ. ಹಲವಾರು ವರ್ಷಗಳ ಗೆಳೆತನ, ಸಂದರ್ಭಗಳ ಒಡನಾಟ, ಇಬ್ಬರ ಅಭಿರುಚಿಗಳ ಮೇಲೆ ಮತ್ತೊಬ್ಬರ ಆತ್ಮೀಯ ಬಳಗದಲ್ಲಿ ಸೇರಿಕೊಳ್ಳಬಹುದೇ ಅಥವಾ ಬೇಡವೇ ಎಂಬ ಜಿಜ್ಞಾಸೆಯ ಹಂತ ದಾಟಿದ ನಂತರ ಒಬ್ಬರ ಆತ್ಮೀಯರಾಗಿ ಮತ್ತೊಬ್ಬರು ಸೇರಿಕೊಳ್ಳುತ್ತಾರೆ. ಆತ್ಮೀಯರಾದಾಗ ನಂಬಿಕೆ ಗಾಢವಾಗಿ ಬೆಳೆಯುತ್ತದೆ. ಯಾವುದೇ ಮುಲಾಜಿಲ್ಲದೆ ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಬಹುದಾಗಿದೆ. ಆತ್ಮೀಯರಿಗೆ ಮುಲಾಜಿಲ್ಲದೆ ಟೀಕಿಸುವ ಅಥವಾ ತಪ್ಪುಗಳನ್ನು ಸರಿಪಡಿಸುವ ಅಧಿಕಾರವಿರುತ್ತದೆ. ಆತ್ಮೀಯರಲ್ಲಿ ನನಗೆ ಈ ಕೆಲಸ ಆಗಬೇಕು, ನಿನ್ನ ಕಷ್ಟ ಸುಖಗಳು ನನಗೆ ಗೊತ್ತಿಲ್ಲ ಎಂದು ಹೇಳಿ ಕೆಲಸ ಮಾಡಿಸಿಕೊಳ್ಳಬಹುದು. ಒಟ್ಟಿಗೆ ಓದಿರುತ್ತೇವೆ, ಒಂದೇ ಕಡೆ ಕೆಲಸ ಮಾಡುತ್ತಿರುತ್ತೇವೆ, ಒಂದೇ ಕುಟುಂಬದ ಸದಸ್ಯರಾಗಿರುತ್ತೇವೆ ಆದರೆ ಹಲವು ಸಲ ಈ ಆತ್ಮೀಯತೆಯ ಕೊರತೆ ನಮ್ಮಲ್ಲಿ ಎದ್ದು ಕಾಣುತ್ತದೆ.
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|