ಅದೊಂದು ದಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಬಿ.ಎ. ತರಗತಿಯಲ್ಲಿ ಸಮಾಜಶಾಸ್ತ್ರ ಪಾಠ ಮಾಡುತ್ತಿದ್ದ ನಮ್ಮ ಗುರುಗಳು ಒಂದು ನೈಜ ಕಥೆಯನ್ನು ಹೇಳಿದ್ದರು. ಅವರ ಸ್ನೇಹಿತ ಶೇಖರ್ (ಅವರ ಹೆಸರು ಮರೆತಿದ್ದೇನೆ) ವೈಚಾರಿಕ ಪ್ರಜ್ಞೆಯಿಂದ ಕೂಡಿದ್ದರಂತೆ. ಅವರು ಯಾವುದೇ ಅವೈಜ್ಞಾನಿಕ ಪದ್ಧತಿಯನ್ನು ಆಚರಣೆ ಮಾಡುತ್ತಿರಲಿಲ್ಲವಂತೆ. ಯಾವುದೇ ಶ್ರಾದ್ಧ, ತಿಥಿಗಳಿಗೆ ಕುರಿತಂತೆ ಅವರಿಗೆ ಯಾವುದೇ ನಂಬಿಕೆ ಇರಲಿಲ್ಲವಂತೆ. ಅದನ್ನು ಆಚರಿಸುವವರನ್ನು ಕಂಡರೆ ಅವರಿಗೆ ವಿರೋಧಿಸುತ್ತಿದ್ದರಂತೆ.
ಕೆಲವು ವರ್ಷಗಳ ನಂತರ ಶೇಖರ್ ರವರ ತಂದೆ ಮರಣ ಹೊಂದಿದರು. ಆಗ ಶೇಖರ್ ತಂದೆಯ ಶ್ರಾದ್ಧ, ತಿಥಿ, ಪುಣ್ಯ ನೆರವೇರಿಸಬೇಕಾದ ಅನಿವಾರ್ಯತೆ ಒದಗಿಬಂತು. ಆಗ ಶೇಖರ್ ತಂದೆಯ ತಿಥಿಯ ನಂತರ ತಲೆಯ ಕೂದಲನ್ನು ತೆಗೆಸಿದರಂತೆ. ಇದು ಕಾಲೇಜಿನ ಇತರ ಸಹೋದ್ಯೋಗಿಗಳಿಗೆ ಇದುವರೆಗೂ ವೈಚಾರಿಕ ಪ್ರಜ್ಞೆ ಎಂದು ಬೋಧನೆ ನೀಡುತ್ತಿದ್ದ ಶೇಖರ್ ತಾವೇ ಅಂಧಾನುಕರಣೆ ಮಾಡುತ್ತಿದ್ದಾರೆ ಎಂದು ಗುಸುಗುಸು ಶುರುವಾಯಿತು. ಅವರ ಆತ್ಮೀಯ ಸ್ನೇಹಿತರು ಅಲ್ಲ ಶೇಖರ್, ನೀನು ಇಷ್ಟು ದಿವಸ ಅಂಧಾನುಕರಣೆ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸಿ ಅತ್ಯಂತ ವೈಚಾರಿಕನೆಂಬಂತೆ ಬಿಂಬಿಸಿಕೊಂಡು ಇಂದು ನೀನೇ ತಿಥಿ, ಶ್ರಾದ್ಧ ಮಾಡಿ ತಲೆ ಬೋಳಿಸಿಕೊಂಡು ಬಂದಿರುವೆ. ಈ ರೀತಿ ಹೇಳುವುದೊಂದು, ಮಾಡುವುದೊಂದು ನಿನ್ನ ಘನತೆಗೆ ತಕ್ಕುದಾದುದೆ ಎಂದು ಪ್ರಶ್ನಿಸಿದರಂತೆ. ಇದಕ್ಕೆ ಉತ್ತರಿಸಿದ ಶೇಖರ್ ಹೌದಪ್ಪ, ನಾನು ವೈಚಾರಿಕನಾಗಿಯೇ ಇದ್ದೇನೆ. ಆದರೆ ನಾನು ಸಂಪ್ರದಾಯ ಆಚರಿಸದೆ ಹಾಗೆಯೇ ನನ್ನ ಇಷ್ಟ ಬಂದ ಹಾಗೆ ಇದ್ದರೆ ನನ್ನ ವೃದ್ಧಾಪ್ಯದಲ್ಲಿರುವ ತಾಯಿ ಹಾಗೂ ನನ್ನ ಕುಟುಂಬದವರಿಗೆ ಬೇಸರ ತರಿಸಿದಂತಾಗುತ್ತದೆ. ನನ್ನ ವೈಚಾರಿಕತೆ ಏನಿದ್ದರೂ ನನ್ನ ವೈಯಕ್ತಿಕವಾದದ್ದು. ಇದನ್ನು ನನ್ನ ವೃದ್ಧ ತಾಯಿಗೆ ತಿಳಿಹೇಳಿ ಅರ್ಥ ಮಾಡಿಸಲು ಹೋಗಿ ಅವರು ಹಿಂಸೆ ಪಡುವುದನ್ನು ಹಾಗೂ ಸಂಕಟ ಪಡುವುದನ್ನು ನಾನು ನೋಡಲಾರೆ. ನನ್ನ ವೈಚಾರಿಕ ಪ್ರಜ್ಞೆ ಅವರಿಗೆ ನೋವು ನೀಡುವುದಾದರೆ ಮಾನಸಿಕವಾಗಿ ನಾನು ವೈಚಾರಿಕವಾಗಿದ್ದು ಲೌಕಿಕವಾಗಿ ವೈಚಾರಿಕತೆ ಬದಿಗಿಟ್ಟು ಅವರ ಸಂತಸಕ್ಕಾಗಿ ನಾನು ಮಾಡಬೇಕಾದ ಆಚರಣೆಗಳೆಲ್ಲವನ್ನೂ ಮಾಡಿ ಮುಗಿಸುತ್ತೇನೆ. ಅದು ತಪ್ಪೇ ಎಂದರಂತೆ. ಎಷ್ಟೋ ಸಂದರ್ಭಗಳಲ್ಲಿ ವ್ಯಕ್ತಿಗಳ ಹಲವು ಸಂಕೀರ್ಣ ಕಾಲಘಟ್ಟಗಳಲ್ಲಿ ಅವರಿಗೆ ಸರಿ ಎನಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರನ್ನು ಟೀಕಿಸಿ, ಅವರನ್ನು ಅನುಮಾನದಿಂದ ನೋಡುವ ಬದಲು ವ್ಯಕ್ತಿಯನ್ನು ಕೇಳಿ ಅವರು ಇರುವ ಸ್ಥಿತಿಯನ್ನು ಅರ್ಥೈಸಿಕೊಳ್ಳುವುದು ಒಳಿತಲ್ಲವೇ. ವಂದನೆಗಳೊಂದಿಗೆ ರಮೇಶ ಎಂ.ಎಚ್. www.socialworkfootprints.org
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|