ಮೊನ್ನೆ ನಡೆದ ಯಡಿಯೂರಪ್ಪ ನವರ ಹುಟ್ಟುಹಬ್ಬದಂದು ಅವರು ನಡೆದುಕೊಂಡ ರೀತಿ ಸಿದ್ದರಾಮಯ್ಯರವರು ತೋರಿದ ಪ್ರೀತಿಯಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಇಬ್ಬರು ಮಹಾನ್ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ.
ಬುದ್ದ ಹಾಗೂ ಮಹಾವೀರ ಒಮ್ಮೆಗೆ ಅಕ್ಕಪಕ್ಕದ ಕೋಣೆಯಲ್ಲಿ ತಂಗಿರುತ್ತಾರೆ. ಆದರೆ ಮಾರನೆಯ ದಿನ ಇಬ್ಬರೂ ಮಾತನಾಡದೆ ಅವರವರ ಪಾಡಿಗೆ ಹೊರಟುಬಿಡುತ್ತಾರೆ. ಆಗ ಅವರ ಅನುಯಾಯಿಗಳು ನಾಯಿಗಳು ಕಿತ್ತಾಡುವ ರೀತಿಯಲ್ಲಿ ಕಿತ್ತಾಡುತ್ತಾರೆ. ಬುದ್ದನ ಅನುಯಾಯಿಗಳು ಬುದ್ದ ಶ್ರೇಷ್ಠ ಎಂದು, ಮಹಾವೀರನ ಅನುಯಾಯಿಗಳು ಮಹಾವೀರ ಶ್ರೇಷ್ಠ ಎಂದು ಹಾಗೂ ಕೆಲವೊಬ್ಬರು ಇಬ್ಬರೂ ಮಹಾನ್ ego ಹೊಂದಿದ ವ್ಯಕ್ತಿಗಳು ಎಂದು. ಇಬ್ಬರು ಭೇಟಿಯಾಗಿದ್ದರೆ ಮಹತ್ವದ ಜ್ಞಾನ ಉದಯಿಸುತ್ತಿತ್ತು ಎಂದುಕೊಂಡರಂತೆ. ಕೊನೆಯಲ್ಲಿ ಅನುಯಾಯಿಗಳು ಗೊಂದಲ ಪರಿಹರಿಸಿಕೊಳ್ಳಲು ತಮ್ಮ ಗುರುಗಳ ಬಳಿ ಕೇಳುತ್ತಾರೆ, ಯಾರು ಶ್ರೇಷ್ಠ ಎಂದು? ಆಗ ಗುರುಗಳು ಇಬ್ಬರು ತುಂಬಿದ ಕೊಡಗಳಿದ್ದಂತೆ. ಹಂಚಿಕೊಳ್ಳಲು ಏನು ಇಲ್ಲದ ಕಾರಣ ಅವರು ಮಾತನಾಡಲಿಲ್ಲ ಎನ್ನುತ್ತಾರೆ. ಮೂರ್ಖರ ಹಾಗೆ ಅನುಯಾಯಿಗಳು ಬಡಿದಾಡಿಕೊಂಡು ಅಸಹ್ಯ ಭಾಷೆ ಒರಟುತನ ಬಿಡಬೇಕಾಗಿದೆ. (ಮೂಲ ಓಶೊಃ ರವರದ್ದು. ಯಾವಾಗಲೋ ಓದಿದ ನೆನಪು) ಸುಮ್ಮನೆ ಅಸಭ್ಯವಾಗಿ ಕಮೆಂಟ್ ಮಾಡಿ ಮನುಷ್ಯತ್ವವನ್ನೆ ಮರೆಯುವವರು ಜಗದ ಹೆಜ್ಜೆ ಗುರುತುಗಳಲ್ಲಿ ಮಾಯವಾಗಿ ಬಿಡುವರು. ಅರೆಬೆಂದವರು ಅರಚುವುದು, ಕಿರಿಚುವುದು, ಕೆಸರೆರಚುವುದು ಸಾಮಾನ್ಯ. ಅರಚುವವರನ್ನು, ಕಿರಿಚುವವರನ್ನು, ಕೆಸರೆರಚುವವರನ್ನು ನೋಡಿಯೂ ನೋಡದಂತೆ ಪ್ರತಿಕ್ರಿಯೆ ನೀಡದಿರುವುದು ಮಾನ್ಯ. ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|