ಅದೊಂದು ದಿನ ಹಿರಿಯ ಸಮಾಜಕಾರ್ಯಕರ್ತರೊಬ್ಬರು ಫೇಸ್ ಬುಕ್ ಮೂಲಕ ಪರಿಚಿತರಾದರು. ಪರಿಚಯ ಕೆಲವೇ ದಿನಗಳಲ್ಲಿ ಸ್ನೇಹವಾಯಿತು. ಸ್ನೇಹ ತಂದೆ ಮಗನ ರೀತಿಯ ಬಾಂಧವ್ಯವನ್ನು ಸೃಷ್ಟಿಸಿತು. ಆದರೆ ಒಮ್ಮೆಯೂ ಅವರನ್ನು ನಾನು ಭೇಟಿಯಾಗಿರಲಿಲ್ಲ. ನನ್ನ ಜೀವನದ ಪ್ರತಿ ವಿಷಯದಲ್ಲಿ ಅವರಿಗೆ ಆಸಕ್ತಿ. ಅವರ ಜೀವನದ ಪ್ರತಿ ವಿಷಯವನ್ನು ಅವರು ನನಗೆ ಹೇಳುತ್ತಿದ್ದರು. ದಿನಕ್ಕೆ ಒಮ್ಮೊಮ್ಮೆ ಹಲವು ಬಾರಿ ದೂರವಾಣಿಯ ಮೂಲಕ ಮಾತನಾಡುತ್ತಿದ್ದೆವು. ಅವರ 3 ಪುಸ್ತಕಗಳನ್ನು ನನಗೆ ಪ್ರಕಟಿಸಲು ಅವಕಾಶ ಮಾಡಿಕೊಟ್ಟರು. ಈ ಒಡನಾಟ ಸುಮಾರು ಎರಡು ವರ್ಷ ನಿರಂತರವಾಗಿ ನಡೆಯಿತು. ಮುನಿಸು, ಕೋಪ, ಹಟ ಹಾಗೂ ಭಿನ್ನಾಭಿಪ್ರಾಯ ಹಾಗೂ ಹರಟೆ ಎಲ್ಲವೂ ಸರಾಗವಾಗಿ ನಡೆದಿತ್ತು. ನನ್ನ ವಯಸ್ಸಿನ ಅಂತರ ಮರೆತು ನನ್ನಲ್ಲಿ ಅವರ ಎಲ್ಲ ಜೀವನದ ಪುಟಗಳನ್ನು ತೆರೆದಿಟ್ಟರು. ಯೋಗಕ್ಕೆ ಸೇರಿಕೊ, ದೇಹದ ತೂಕ ಕಡಿಮೆ ಮಾಡು. ಇಂಗ್ಲೀಷ್ ಚೆನ್ನಾಗಿ ಕಲಿ. ಅಂತರರಾಷ್ಟ್ರೀಯ ಮಟ್ಟದ ಹೆಸರು ಮಾಡು ಎಂದು ಪದೇ ಪದೇ ಹೇಳುತ್ತಿದ್ದರು. ಇದ್ದಕ್ಕಿದ್ದಂತೆ ಅವರ ಫೋನ್ ಒಂದು ದಿನ ಬರಲಿಲ್ಲ. ನಾನೇ ಅವರಿಗೆ ಕರೆ ಮಾಡಿದೆ. ಅವರು ಊರಿನಲ್ಲಿ ಇಲ್ಲಾ ಅಂದರು. ಎರಡು ದಿನ ಕಾದೆ ಉತ್ತರವಿಲ್ಲ. ನಂತರ ಅವರು ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡಿದರು. ನಾನು ನಿನ್ನನ್ನು ಸಂಪರ್ಕಿಸುವ ತನಕ ನೀನು ನನಗೆ ಕರೆ ಮಾಡಬೇಡ ಎಂದು ಬರೆದಿದ್ದರು. ನಂತರ ಕೆಲವು ದಿನಗಳ ನಂತರ ನನಗೆ ಹುಷಾರಿಲ್ಲ, ಹಾಗಾಗಿ ನಾನು ನಿನ್ನಿಂದ ದೂರವಿದ್ದೆ ಎಂದರು.
ಅವರ email password, Facebook password, ನನ್ನ ಬಳಿ ಇತ್ತು. ಆಗಾಗ್ಗೆ ನನಗೆ ಅವರ email ಗಳನ್ನು ಚೆಕ್ ಮಾಡಲು ನೀಡಿದ್ದರು. ಅದರ ನೆನಪಾಗಿ ಅವರ ಅನುಮತಿ ಇಲ್ಲದೆ E mail ಗಳನ್ನು ನೋಡಿದೆ. ಮಗನಿಗೆ ಅವರು "ಅಚ್ಚಾ, ಈ ತಿಂಗಳ ಎಲೆಕ್ಟ್ರಿಕ್ ಬಿಲ್, ಫೋನ್ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ, ನೀನು ಪಾವತಿಸು. ನಿನಗೆ ಇದರಿಂದಾಗಿ ತೊಂದರೆ ಕೊಡುತ್ತಿದ್ದೇನೆ" ಎಂದು ಬರೆದಿದ್ದರು. ನನಗೆ ದುಃಖ ಒಮ್ಮೆಲೇ ಒತ್ತರಿಸಿ ಬಂತು. ನಾನು ಅವರಿಗೆ ``ಸಾರ್ ನಾನು ನಿಮ್ಮ ಪುಸ್ತಕ ಚೆನ್ನಾಗಿ ಮಾರಾಟವಾಗುತ್ತಿದೆ ಹಾಗಾಗಿ ನಿಮಗೆ ರೂ.20,000/- ಕಳುಹಿಸಿ ಕೊಡುತ್ತೇನೆ'' ಎಂದು ಬರೆದೆ. ನನಗೆ ಗೊತ್ತು ಪುಸ್ತಕ ಮಾರಾಟದಿಂದ ನಿನಗೆ ಹಣ ಬಂದಿಲ್ಲ ಎಂದು ಹಾಗಾಗಿ ಹಣ ಕಳುಹಿಸಕೂಡದು ಹಾಗೂ ನನ್ನನ್ನು ನೋಡಲು ಆಸ್ಪತ್ರೆಗೆ ಬರಬೇಡ, ನನ್ನನ್ನು ನೀನು ನಾನಿರುವ ಈ ಸ್ಥಿತಿಯಲ್ಲಿ ನೀನು ನೋಡುವುದು ನನಗೆ ಇಷ್ಟವಿಲ್ಲ. ಮುಂದೊಂದು ಜನುಮದಲ್ಲಿ ಸಾಧ್ಯವಾದರೆ ಭೇಟಿಯಾಗೋಣ ಎಂದು ಬರೆದಿದ್ದರು. ನನಗೆ ಸಂಕಟ, ಕಣ್ಣ ಹನಿ ಎಲ್ಲವೂ ಒತ್ತರಿಸಿ ಬಂದವು. ಅದಾದ ಸುಮಾರು 15 ದಿನಗಳ ನಂತರ ನನ್ನ ಹುಟ್ಟುಹಬ್ಬಕ್ಕೆ ಶುಬಾಷಯಗಳನ್ನು ಫೇಸ್ ಬುಕ್ ಮೂಲಕ ಕೋರಿದರು. ಅದಾದ ಸುಮಾರು 18 ದಿನಗಳ ನಂತರ ಅವರ ಮಗಳಿಂದ ಕರೆ ಬಂತು. "ಅಪ್ಪ ನಿಮ್ಮನ್ನು ಕೊನೆಘಳಿಗೆಯಲ್ಲಿ ನೆನೆಸಿಕೊಂಡರು ಹಾಗೂ ನೀವು ಅಪ್ಪನನ್ನು ನೋಡಲು ಬರಬಾರದಂತೆ. ಬಂದರೆ ನಿಮ್ಮ ಹಣ ಖರ್ಚು ಆಗುತ್ತದೆ" ಎಂದು ಹೇಳಿದರು. ಅದುವರೆಗೂ ತಡೆದಿದ್ದ ಕಣ್ಣೀರನ್ನು ಅಂದು ತಡೆಯಲು ಸಾಧ್ಯವಾಗಲಿಲ್ಲ. ಹೀಗೆ ನನ್ನ ಜೊತೆ ಮಧುರ ನೆನಪನ್ನು ಉಳಿಸಿ ಹೋಗಿದ್ದು Krishnan Nair. ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|