Participated in the Sports Day organized by NIPM at Bangalore University campus on 21-01-2024, brought me a sense of joy and fulfillment.
0 Comments
"I am delighted to have taken part in the National Workshop on 'Indian Code of Ethics and Standards in Social Work Education and Practice' at Tumkur University, in collaboration with the Indian Society of Professional Social Work (ISPSW). My sincere gratitude to Dr. Ramesh and Dr. Parashuram for extending the warm invitation. I want to thank all the attendees for their valuable contributions, which greatly contributed to the success of this insightful event. I eagerly look forward to more meaningful interactions in the future!"
ದಿನಾಂಕ: 16-01-2024 ರಂದು ಕಾರ್ಮಿಕ ಮಂತ್ರಿಗಳಾದ ಶ್ರೀಯುತ ಸಂತೋಷ್ ಲಾಡ್ ಅವರನ್ನು ನಾನು ಮತ್ತು ಕೆಪಿಸಿಸಿ ವಕ್ತಾರರು ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರೂ ಆದ ಕುಸುಮ ಹನುಮಂತರಾಯಪ್ಪ ರವರು ಭೇಟಿ ಮಾಡಿದೆವು.
FOLLOW THE RAMESHA NIRATHANKA CHANNEL ON WHATSAPP:"The tendency to closely bond with others, acting for the welfare of others as well as oneself, may be deeply rooted in human nature, forged in the remote past as those who bonded together and became part of a group had an increased chance of survival. This need to form close social ties persists up to the present day. In studies, such as one conducted by Dr. Larry Scherwitz, examining the risk factors for coronary heart disease, it has been found that the people who were most self-focused (those who referred to themselves using the pronouns ‘I,’ ‘me,’ and ‘my,’ most often in an interview) were more likely to develop coronary heart disease, even when other health-threatening behaviors were controlled. Scientists are discovering that those who lack close social ties seem to suffer from poor health, higher levels of unhappiness, and a greater vulnerability to stress." (from "The Art of Happiness")
ದೈನಂದಿನ ಜೀವನದಲ್ಲಿ ನಿಮ್ಮ ಗೆಲುವು ನಿಮ್ಮ ವೈಫಲ್ಯಕ್ಕಿಂತ ಹೆಚ್ಚು ಗೋಚರಿಸುತ್ತದೆ. ಆದುದರಿಂದ ನೀವು ಯಶಸ್ವಿಯಾಗುವ ಸಾಧ್ಯತೆಗಳನ್ನು ಹೆಚ್ಚು ಅಂದಾಜು ಮಾಡುತ್ತೀರಿ. ಕೆಲವೊಮ್ಮೆ ನೀವು ಭ್ರಮೆಗೆ ಒಳಗಾಗಿ ತಪ್ಪಾಗಿ ಅಂದಾಜು ಮಾಡುತ್ತೀರಾ. ನೀವು ಜನಪ್ರಿಯ ಲೇಖಕರನ್ನು ನೋಡಿರುತ್ತೀರಾ, ಆದರೆ ಪ್ರತಿ ಜನಪ್ರಿಯ ಲೇಖಕನ ಹಿಂದೆ 100 ಇತರ ಬರಹಗಾರರು ಇರುತ್ತಾರೆ, ಅವರ ಪುಸ್ತಕಗಳು ಎಂದಿಗೂ ಮಾರಾಟವಾಗಿರುವುದಿಲ್ಲ. ಅವರ ಹಿಂದೆ ಇನ್ನೂ 100 ಬರಹಗಾರರಿಗೆ ಪ್ರಕಾಶಕರು ದೊರಕಿರುವುದಿಲ್ಲ. ಅವರ ಹಿಂದೆ ನೋಡಿದಾಗ ಇನ್ನೂ 100 ಬರಹಗಾರರಿರುತ್ತಾರೆ, ಅವರ ಅಪೂರ್ಣ ಬರಹಗಳ ಪ್ರತಿಗಳು ಡ್ರಾಯರ್‌ಗಳಲ್ಲಿ ಧೂಳು ಬಿದ್ದು ಹಾಗೇ ಉಳಿದುಕೊಂಡಿರುತ್ತವೆ ಮತ್ತು ಇವುಗಳಲ್ಲಿ ಪ್ರತಿಯೊಂದರ ಹಿಂದೆ 100 ಜನರು ಒಂದು ದಿನ ಪುಸ್ತಕ ಬರೆಯಬೇಕೆಂಬ ಕನಸು ಕಂಡಿರುತ್ತಾರೆ. ಆದರೆ ನೀವು ಯಶಸ್ವಿ ಲೇಖಕರ ಬಗ್ಗೆ ಮಾತ್ರ ಕೇಳಿರುತ್ತೀರಿ (ಈ ದಿನಗಳಲ್ಲಿ, ಅವರಲ್ಲಿ ಹಲವರು ಅವರ ಬರಹಗಳನ್ನು ಸ್ವಯಂ ಪ್ರಕಟಿಸಿಕೊಂಡಿರುತ್ತಾರೆ), ಮತ್ತು ಸಾಹಿತ್ಯಿಕವಾಗಿ ಕೂಡ ಯಶಸ್ಸನ್ನು ಗುರುತಿಸಲು ವಿಫಲವಾಗಿರುತ್ತೀರಿ. ಇದು ಉದಾಹರಣೆ ಅಷ್ಟೇ, ಇದರಂತೆ ಛಾಯಾಗ್ರಾಹಕರು, ವಾಣಿಜ್ಯೋದ್ಯಮಿಗಳು, ಕಲಾವಿದರು, ಕ್ರೀಡಾಪಟುಗಳು, ವಾಸ್ತುಶಿಲ್ಪಿಗಳು, ನೊಬೆಲ್ ಪ್ರಶಸ್ತಿ ವಿಜೇತರು, ದೂರದರ್ಶನ ನಿರೂಪಕರು ಮತ್ತು ಸೌಂದರ್ಯ ರಾಣಿಯರಿಗೂ ಇದು ಅನ್ವಯಿಸುತ್ತದೆ. ಮಾಧ್ಯಮಗಳು ವಿಫಲವಾದವರ ಬಗ್ಗೆ ತಿಳಿದುಕೊಳ್ಳಲು ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ. ಇದು ಅವರ ಕೆಲಸವೂ ಅಲ್ಲ ಎಂಬಂತೆ ಉಳಿದುಕೊಂಡಿರುತ್ತಾರೆ. ಇಂತಹ ಪಕ್ಷಪಾತ ಮತ್ತು ತಪ್ಪು ಅಂದಾಜನ್ನು ತಪ್ಪಿಸಲು, ನೀವೇ ಸ್ವತಃ ಇದರ ಅಗೆಯುವಿಕೆಯನ್ನು ಮಾಡಬೇಕಾಗುತ್ತದೆ ಮತ್ತು ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ.
ಕೃಪೆ: The Art of Thinking Clearly ಲೇಖಕರು: ರೋಲ್ಫ್ ಡೊಬೆಲ್ಲಿ ಒಮ್ಮೆ ನನ್ನ ಪರಿಚಿತ ಡಾಕ್ಟರೊಬ್ಬರು ಮಾತನಾಡುತ್ತಾ ನನ್ನ ಪಕ್ಕದ ಮನೆಯ ಕೆಲಸದಾಕೆ ನನಗೆ 50,000 ಹಣದ ಸಹಾಯ ಮಾಡಿ ಎಂದಳು. ಆಗ ಅವಳ ಕಷ್ಟ ಕೇಳಿ ಸಹಾಯ ಮಾಡಲು ಚಿಂತಿಸಿದೆ. ನನ್ನ ಗಂಡ ಹಾಗೂ ಮನೆಯವರಿಗೆ ತಿಳಿಸದೆ ಸಹಾಯ ಮಾಡಲು ನಿರ್ಧರಿಸಿದೆ. 50,000 ಅತ್ಯಂತ ದೊಡ್ಡಮಟ್ಟದ ಹಣವಾಗಿರಲಿಲ್ಲ. ಅದನ್ನು ಮನೆ ಕೆಲಸದಾಕೆ ವಾಪಸ್ಸು ನೀಡದಿದ್ದರೆ ನನ್ನ ಬದುಕಿನಲ್ಲಿ ಅತ್ಯಂತ ದೊಡ್ಡ ಬದಲಾವಣೆಯೇನು ಆಗುತ್ತಿರಲಿಲ್ಲ ಎಂದು ಚಿಂತಿಸಿ, ಮನೆ ಕೆಲಸದಾಕೆಗೆ 50,000 ಸಹಾಯ ಮಾಡಿದೆ. ಆ ಹಣ ನೀಡುವಾಗ ಆಕೆಗೆ ಒಂದು ಮಾತು ಹೇಳಿದೆ, “ನಾನು ನಿನಗೆ ಹಾಗೂ ನಿನ್ನ ಕಷ್ಟ ನೋಡಿ ಸಹಾಯ ಮಾಡುತ್ತಿದ್ದೇನೆ. ಅಕಸ್ಮಾತ್ ನೀನು ಹಣ ಹಿಂತಿರುಗಿಸದೆ ಮೋಸ ಮಾಡಿದರೆ, ಖಂಡಿತ ನಾನು ಮುಂದೊಂದು ದಿನ ಪ್ರಾಮಾಣಿಕವಾಗಿ ಯಾರಾದರೂ ಅವರ ಕಷ್ಟ ಕಾಲದಲ್ಲಿ ಸಹಾಯ ಕೇಳಿದಾಗ ಸಹಾಯ ಮಾಡಲು ಮುಂದಾಗುವುದಿಲ್ಲ. ಹಾಗಾಗಿ ನೀನು ನನ್ನ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದ್ದೆ. ಆದರೆ ಮನೆ ಕೆಲಸದಾಕೆ 1 ವಾರಕ್ಕೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದಳು. ಸುಮಾರು ಬಾರಿ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಸುಮಾರು 3 ತಿಂಗಳು ಆಕೆಯನ್ನು ನನಗೆ ಹುಡುಕಲು ಸಾಧ್ಯವಾಗಲಿಲ್ಲ. ಆ 3 ತಿಂಗಳು ನನಗೆ ನನ್ನ ಈ ಉಪಕಾರ ಭಾವನೆ ಹಾಗೂ ನನ್ನ ನಿರ್ಧಾರದಿಂದ ಮನಸ್ಸಿನ ನೆಮ್ಮದಿ ಹಾಳಾಗಿತ್ತು. ಆದರೆ ಸುಮಾರು 6 ತಿಂಗಳು ಕಳೆದ ನಂತರ ಆಕೆ ನನ್ನ ಪೂರ್ತಿ ಹಣ ನನ್ನ ಖಾತೆಗೆ ವರ್ಗಾವಣೆ ಮಾಡಿ ಡಾಕ್ಟರ್ ನೀವು ಅಂದು ಹಣ ನೀಡುವಾಗ ಒಂದು ಮಾತು ಹೇಳಿದ್ದಿರಿ, ಅಕಸ್ಮಾತ್ ನೀನು ಹಣ ಹಿಂತಿರುಗಿಸದಿದ್ದರೆ ನೀವು ಮುಂದಿನ ದಿನಗಳಲ್ಲಿ ಯಾರಾದರೂ ಸಹಾಯ ಕೇಳಿದಾಗ ಮಾಡುವುದಿಲ್ಲ ಎಂದು. ಹಾಗಾಗಿ ನಾನು ನಿಮ್ಮ ಹಣ ಹಿಂತಿರುಗಿಸುತ್ತಿದ್ದೇನೆ ಎಂದಳು.
ಕೆಲವೊಮ್ಮೆ ಈ ರೀತಿಯ ಘಟನೆಗಳಿಂದಾಗಿ ನಾವು ಮತ್ತಷ್ಟು ಪ್ರಬುದ್ಧರನ್ನಾಗಿಸುತ್ತದೆ, ನಿತ್ಯ ಜೀವನದಿಂದ ಕಲಿಯುವ ಪಾಠ ಸದಾ ನಮ್ಮ ಜೀವನ ಸುಂದರವಾಗಿರುತ್ತವೆ ಅಲ್ಲವೆ? ರಮೇಶ ನಿರಾತಂಕ Follow the Ramesha Nirathanka Channel on WhatsApp: https://whatsapp.com/channel/0029Va4OLwtEVccDbgEAFY1Y ಜಾನ್ ಸಿ ಮ್ಯಾಕ್ಸ್ ವೆಲ್ ಒಬ್ಬ ಅಮೇರಿಕನ್ ಲೇಖಕ, ಭಾಷಣಕಾರ ಮತ್ತು ಪಾದ್ರಿಯಾಗಿದ್ದು, ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಇವರು ಹೆಚ್ಚಿನ ಪುಸ್ತಕಗಳನ್ನು ನಾಯಕತ್ವದ ಮೇಲೆ ಕೇಂದ್ರೀಕರಿಸಿ ಬರೆದಿದ್ದಾರೆ. ಇವರು ಬರೆದ “How Successful People Think” ಪುಸ್ತಕವು ಉತ್ತಮ ಪ್ರತಿಕ್ರಿಯೆ ಪಡೆದು ಪ್ರಸಿದ್ಧಿಯನ್ನು ಹೊಂದಿದೆ. ಈ ಪುಸ್ತಕದಲ್ಲಿ ಅವರು ಈ ರೀತಿಯಾಗಿ ಬರೆದಿದ್ದಾರೆ - ಒಬ್ಬ ವ್ಯಕ್ತಿ ದೊಡ್ಡ ಚಿತ್ರ ಚಿಂತನೆ ಅಂದರೆ ಉನ್ನತ ಮಟ್ಟದ ಚಿಂತನೆಯನ್ನು ಹೊಂದಿದ್ದರೆ ಅವನು ಯಾವುದೇ ವೃತ್ತಿಯಲ್ಲಿದ್ದರೂ ಅದರಿಂದ ಲಾಭವನ್ನು ಪಡೆಯುತ್ತಾನೆ ಎಂದು ಹೇಳಿದ್ದಾರೆ.
ಮಹೋನ್ನತ ಚಿಂತನೆಯುಳ್ಳವರು ಬೇಗ ಅಭಿವೃದ್ಧಿಯನ್ನು ಹೊಂದುತ್ತಾರೆ. ಪ್ರತಿಯೊಂದು ಮಾಹಿತಿಯನ್ನು ಕಟ್ಟುನಿಟ್ಟಾದ ಪರಿಕಲ್ಪನಾ ಚೌಕಟ್ಟಿನೊಳಗೆ ಹೊಂದಿಸಲು ಇವರು ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಇವರು ವ್ಯಾಪಕವಾದ ಆಲೋಚನೆಗಳನ್ನು ಹೊಂದಿದ್ದು, ಜಟಿಲವಾದ ಸಮಸ್ಯೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ದೊಡ್ಡ ಚಿತ್ರಣವನ್ನು ನೋಡುವ ಜನರು ತಮ್ಮ ಪ್ರತೀ ಅನುಭವದಲ್ಲಿ ಹೊಸ ಪಾಠವನ್ನು ಕಲಿಯುತ್ತಾರೆ. ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಯಶಸ್ಸು ಪಡೆದು ತಮ್ಮ ಪ್ರವೃತ್ತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಾರೆ. ವಿಭಿನ್ನವಾದ ಅನುಭವಗಳು, ಒಳ್ಳೆಯದು ಮತ್ತು ಕೆಟ್ಟದ್ದನ್ನು ತಿಳಿದುಕೊಳ್ಳುವುದರಿಂದ ನಾವು ಉನ್ನತವಾಗಿ ಆಲೋಚಿಸಲು ಮತ್ತು ದೊಡ್ಡ ಚಿತ್ರಣವನ್ನು ಅರ್ಥ ಮಾಡಿಕೊಳ್ಳಬಹುದು. ಇದರಿಂದ ಹೆಚ್ಚು ಕಲಿಯುವ ಅನುಭವದೊಂದಿಗೆ ಯಶಸ್ಸನ್ನು ಪಡೆಯಬಹುದು ಎಂದು ಮ್ಯಾಕ್ಸ್ ವೆಲ್ ಅವರು ತಮ್ಮ ಪುಸ್ತಕ ಮುಖಾಂತರ ತಿಳಿಸಿದ್ದಾರೆ. ನಾವು ಮಾಡುವ ವೃತ್ತಿ ಯಾವುದೇ ಇರಲಿ ಅದರಲ್ಲಿ ಹೊಸದನ್ನು ಕಲಿಯುವುದು, ಹೊಸತನವನ್ನು ತರುವುದು ಮುಖ್ಯವಾಗಿರುತ್ತದೆ. ನಮ್ಮಲ್ಲಿ ಉತ್ತಮ ನಾಯಕತ್ವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಇದರಿಂದ ನಮ್ಮ ವೃತ್ತಿಯಷ್ಟೇ ಅಲ್ಲದೇ ಅದರೊಂದಿಗೆ ನಾವೂ ಕೂಡ ಅಭಿವೃದ್ಧಿಯನ್ನು ಹೊಂದುತ್ತೇವೆ. ರಮೇಶ ನಿರಾತಂಕ Follow the Ramesha Nirathanka Channel on WhatsApp: https://whatsapp.com/channel/0029Va4OLwtEVccDbgEAFY1Y ಅಮೇರಿಕದ ಖ್ಯಾತ ಲೇಖಕರಾದ ವ್ಯಾಲೇಸ್ ಡಿ. ವ್ಯಾಟಲ್ಸ್ ಅವರು ಬರೆದ ಹಲವಾರು ಪುಸ್ತಕಗಳು ಪ್ರಸಿದ್ಧಿಯನ್ನು ಪಡೆದಿವೆ, ಅದರಲ್ಲಿ “ದಿ ಸೈನ್ಸ್ ಆಫ್ ಗೆಟ್ಟಿಂಗ್ ರಿಚ್” ಪುಸ್ತಕವು ಕೂಡ ಒಂದು. ಕೆಲವು ತತ್ವಗಳನ್ನು ಅನುಸರಿಸುವ ಮೂಲಕ ಯಾರಾದರೂ ಶ್ರೀಮಂತರಾಗಬಹುದು ಎಂದು ವಾಟಲ್ಸ್ ಅವರು ನಂಬಿದ್ದರು ಮತ್ತು ಅವರ ಪುಸ್ತಕವು ಅನೇಕರಿಗೆ ಸ್ಫೂರ್ತಿಯ ಮೂಲವಾಗಿದೆ. ಅವರು ತಮ್ಮ “ದಿ ಸೈನ್ಸ್ ಆಫ್ ಗೆಟ್ಟಿಂಗ್ ರಿಚ್” ಪುಸ್ತಕದಲ್ಲಿ ವ್ಯಾಪಾರದಲ್ಲಿ ಯಶಸ್ಸನ್ನು ಪಡೆಯುವುದರ ಬಗ್ಗೆ ಈ ರೀತಿಯಾಗಿ ಹೇಳಿದ್ದಾರೆ:
ನಿಮ್ಮ ವ್ಯಾಪಾರದ ಬಗ್ಗೆ ಇಟ್ಟುಕೊಂಡಿರುವ ಆಕಾಂಕ್ಷೆಗಳನ್ನು ಯಶಸ್ವಿಯಾಗಿಸಬೇಕೆಂದರೆ, ನೀವು ಈಗಾಗಲೇ ಯಾವ ಕ್ರಮಗಳನ್ನು ಅನುಸರಿಸುತ್ತಿದ್ದಿರೋ ಅಥವಾ ಯಾವ ಕ್ರಿಯೆಗಳಲ್ಲಿ ತೊಡಗಿಕೊಂಡಿರುವಿರೊ ಅದಕ್ಕಿಂತ ಹೆಚ್ಚಿನದನ್ನು ಮಾಡಬೇಕಾಗುತ್ತದೆ. ಜನರು ತಾವು ಬಯಸಿದ್ದಕ್ಕಿಂತ ಹೆಚ್ಚಿನದನ್ನು ನಿಮ್ಮಿಂದ ಪಡೆಯುತ್ತಿದ್ದಾರೆ ಎಂದು ಭಾವಿಸುವುದೇ ನಿಮ್ಮ ಯಶಸ್ಸಿನ ಕೀಲಿ ಇದ್ದಂತೆ. ಜನರು ತಮ್ಮ ಜೀವನಕ್ಕೆ ಹೆಚ್ಚು ಮೌಲ್ಯವನ್ನು ತರುವವರಿಗೆ ಸ್ವಾಭಾವಿಕವಾಗಿ ಆಕರ್ಷಿತರಾಗುತ್ತಾರೆ, ಇದು ಮಾನವ ಸ್ವಭಾವದ ಮೂಲ ತತ್ವವಾಗಿದೆ. ಆದ್ದರಿಂದ, ನೀವು ಜನರಿಗೆ ಅವರು ಪಾವತಿಸುತ್ತಿರುವ ವೆಚ್ಚಕ್ಕಿಂತ ಹೆಚ್ಚಿನ ಬಳಕೆಯ ಮೌಲ್ಯವನ್ನು ನೀಡುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ಗಮನಹರಿಸಿ. ಇದು ಅವರಿಗೆ ಸಂತೋಷವನ್ನು ನೀಡುವುದು ಮಾತ್ರವಲ್ಲ, ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತದೆ. ನೆನಪಿಡಿ, ಎಷ್ಟು ಹೆಚ್ಚಿನ ಮೌಲ್ಯವನ್ನು ನೀಡುತ್ತೀರೋ ಅಷ್ಟು ಹೆಚ್ಚು ನೀವು ಯಶಸ್ಸನ್ನು ಪಡೆಯುತ್ತೀರಿ ಎಂದು ಹೇಳಿದ್ದಾರೆ. ಶ್ರೀಮಂತರಾಗಲು ಸಂಪತ್ತನ್ನು ಹುಡುಕುವ ವ್ಯಕ್ತಿಗಳಿಗೆ ವಿಜ್ಞಾನವು ಒಂದು ಪ್ರಾಯೋಗಿಕ ಕೈಪಿಡಿಯಾಗಿದೆ. ವಿಶ್ವದಲ್ಲಿರುವ ಎಲ್ಲವೂ ಒಂದು ಮೂಲದಿಂದ ಉದ್ಭವಿಸುತ್ತದೆ ಮತ್ತು ಈ ಮೂಲವು ನಮ್ಮ ಭೌತಿಕ ಪ್ರಪಂಚದ ವಿವಿಧ ಅಂಶಗಳಾಗಿ ಪ್ರಕಟವಾಗುತ್ತದೆ ಎಂಬ ದೃಷ್ಟಿಕೋನವನ್ನು ಇದು ಅನುಸರಿಸುತ್ತದೆ. ವ್ಯಾಲೇಸ್ ಡಿ. ವ್ಯಾಟಲ್ಸ್ ಅವರ ಪುಸ್ತಕದಲ್ಲಿ ವಿವರಿಸಿರುವ ತತ್ವಗಳನ್ನು ಅನುಸರಿಸುವ ಮೂಲಕ, ಆರ್ಥಿಕ ಸಮೃದ್ಧಿ ಮತ್ತು ಯಶಸ್ಸನ್ನು ಸಾಧಿಸಲು ನೀವು ಸ್ಪಷ್ಟವಾದ ಯೋಜನೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. Follow the HR Learning and Skill Building Academy Channel on WhatsApp: https://whatsapp.com/channel/0029Va4vHVm1CYoX8FwvPZ1h ಮೊನ್ನೆ ಯೋಗಿ ಶ್ರೀನಿವಾಸ ಅರ್ಕ, ಸಂಸ್ಥಾಪಕರು-ಸೆಂಟರ್ ಫಾರ್ ಕಾನ್ಶಿಯಸ್ ಅವೆರ್ನೆಸ್-ಅರ್ಕಧಾಮ, ಮೈಸೂರು, ರವರೊಂದಿಗೆ ಚರ್ಚೆ ಮಾಡುತ್ತಾ ನಾವು ಬೇರೆಯವರಿಗೆ ಸಹಾಯ ಮಾಡುತ್ತೇವೆ. ಆದರೆ, ಅವರ ಕಡೆಯಿಂದ ನಮ್ಮಂತೆಯೇ ಅವರೂ ನಮಗೆ ಸಹಾಯ ಮಾಡಲಿ ಎಂದು ನಿರೀಕ್ಷೆ ಮಾಡುತ್ತೇವೆ. ಆದರೆ ಅವರು ಸಹಾಯ ಮಾಡುವಷ್ಟು ಸಮರ್ಥರಿದ್ದರೂ ನಮಗೆ ಸಹಾಯ ಮಾಡುವುದಿಲ್ಲ, ಅಂಥವರನ್ನು ಹೇಗೆ ನಿಭಾಯಿಸುವುದು ಎಂದೆ? ಆಗ ಅವರು ಎದುರಿನ ವ್ಯಕ್ತಿ ಸಹಾಯ ಮಾಡಲಿ ಎಂದು ಏಕೆ ನಿರೀಕ್ಷೆ ಮಾಡುತ್ತೀರಿ. ನೀವು ಒಂದು ಕನ್ನಡಿಯ ಮುಂದೆ ನಿಂತು ನಿಮ್ಮ ಪ್ರತಿಬಿಂಬ ನೋಡಲು ಹೊರಟರೆ, ನಿಮ್ಮ ಪ್ರತಿಬಿಂಬ ಕನ್ನಡಿಯಲ್ಲಿ ತೋರುತ್ತದೆ. ಅದೇ ಒಂದು ಗೋಡೆಯ ಮುಂದೆ ಪ್ರತಿಬಿಂಬ ನೋಡಲು ಹೊರಟರೆ ನಿಮ್ಮ ಪ್ರತಿಬಿಂಬ ನಿಮಗೆ ಕಾಣಿಸುವುದಿಲ್ಲ, ಅಲ್ಲವೇ ಎಂದು ಮುಗುಳ್ನಕ್ಕರು. ಅವರ ಮುಗುಳ್ನಗೆ ನನಗೆ ಹಾಗೂ ನನ್ನ ಪ್ರಶ್ನೆಗೆ ಉತ್ತರವಾಗಿತ್ತು. ನಾವುಗಳು ನಮ್ಮ ಎದುರಿನ ವ್ಯಕ್ತಿ ಗೋಡೆಯೇ ಅಥವಾ ಕನ್ನಡಿಯೇ ಎಂದು ಅರಿತುಕೊಳ್ಳಬೇಕಾಗುತ್ತದೆ. ಆಗ ಮಾತ್ರ ನಾವು ಸಹಾಯದ ನಿರೀಕ್ಷೆ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅರ್ಕಧಾಮ ಜಾಲತಾಣಕ್ಕೆ ಭೇಟಿ ನೀಡಿ: http://arkadhamaayurveda.com/ https://www.srinivasarka.org/ ರಮೇಶ ಎಂ.ಎಚ್. ಸಂಸ್ಥಾಪಕರು ನಿರಾತಂಕ ಸ್ವಯಂ ಸೇವಾ ಸಂಸ್ಥೆ
ಮಾನ್ಯರೇ,
ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರ ನೋಂದಣಿಗೆ ಹೆಚ್ಚಿನ ಕಾಲಾವಕಾಶ ನೀಡಿದ್ದು , ತಾವು, ತಮ್ಮ ಕುಟುಂಬದವರು ಹಾಗು ತಮ್ಮ ಸ್ನೇಹಿತರ ಹೆಸರನ್ನು ನೋಂದಯಿಸಿಕೊಳ್ಳಬೇಕಾಗಿ ವಿನಂತಿ. ಕಳೆದ ಚುನಾವಣೆಯಲ್ಲಿ ತಾವು ನೋಂದಾಯಿತರಾಗಿದ್ದರೂ, ಮತ್ತೆ ಹೊಸದಾಗಿ ನೋಂದಾಯಿಸಬೇಕಾಗಿ ವಿನಂತಿ. ಇದರೊಂದಿಗೆ ಲಗತ್ತಿಸಲಾದ ನಮೂನೆ 18ಅನ್ನು ಭರ್ತಿಮಾಡಿ ಈ ಕೆಳಕಂಡ ದಾಖಲಾತಿಗಳೊಂದಿಗೆ ನಿಮ್ಮ ಪ್ರದೇಶದ ತಹಸೀಲ್ದಾರ್ ಕಛೇರಿಯಲ್ಲಿ ದಿನಾಂಕ 09/12/2023ರ ಒಳಗಾಗಿ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ನಮ್ಮ ಕಛೇರಿಗೆ ಭೇಟಿ ನೀಡಬಹದು ಅಥವಾ ಕರೆ ಮಾಡಬಹುದು. ನಮೂನೆ 18ನ್ನು ಭರ್ತಿಮಾಡಲು ಮಾರ್ಗಸೂಚಿ ಅರ್ಹತೆ 1. ಭಾರತದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಯಾವುದಾದರೊಂದು ಪದವಿ ಪಡೆದಿರಬೇಕು. 2. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯಲ್ಲಿ ವಾಸವಾಗಿರಬೇಕು. 3. 1 ನವೆಂಬರ್ 2020 ರಕ್ಕಿಂತ ಮುಂಚಿತವಾಗಿ ಪದವಿ ಪಡೆದಿರಬೇಕು. ಅವಶ್ಯಕ ದಾಖಲೆಗಳು 1. ಅರ್ಜಿ 18 ರಲ್ಲಿ ಭರ್ತಿ ಮಾಡಬೇಕು (ಎರಡನೇ ಪುಟದಲ್ಲಿ ಸಹಿ ಮಾಡುವುದು) 2. ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರ 3. ಪದವಿ ಪತ್ರ ಅಥವಾ/ಎಲ್ಲಾ ವರ್ಷದ ಅಂಕಪಟ್ಟಿ (ನಕಲು ) (ಸ್ವಯಂ ದೃಢೀಕರಣವಾಗಿರಬೇಕು) 4. ಮತದಾರ ಗುರುತಿನ ಚೀಟಿಯ (ನಕಲು) ಅಥವಾ ಆಧಾರ್ ಕಾರ್ಡ್ (ಸ್ವಯಂ ದೃಢೀಕರಣವಾಗಿರಬೇಕು) > ಸೂಚನೆ : ಈ ಮೇಲೆ ಸೂಚಿಸಿದ ಎಲ್ಲಾ ದಾಖಲೆಗಳನ್ನು ಒಂದು ಪ್ರತಿಯಲ್ಲಿ ಸಲ್ಲಿಸಬೇಕು. > ಭರ್ತಿ ಮಾಡಿದ ಅರ್ಜಿಯನ್ನು ನಿಮ್ಮ ಪ್ರದೇಶದ ತಹಸೀಲ್ದಾರ್ ಕಛೇರಿಯಲ್ಲಿ ಸಲ್ಲಿಸತಕ್ಕದ್ದು. > ಪದವೀಧರ ಮತಕ್ಷೇತ್ರಕ್ಕೆ ನಡೆಯುವ ವಿಧಾನ ಪರಿಷತ್ತು ಚುನಾವಣೆಗೆ ನಿಮ್ಮ ಹೆಸರನ್ನು ಪ್ರತಿ ಬಾರಿಯ ಚುನಾವಣಾ ಸಂದರ್ಭದಲ್ಲಿ ನೋಂದಾಯಿಸತಕ್ಕದ್ದು. > ಅರ್ಜಿಯಲ್ಲಿ ದಪ್ಪ ಅಕ್ಷರಗಳಲ್ಲಿ ಭರ್ತಿ ಮಾಡಲು ಕೋರಿದೆ. ನಮ್ಮ ಕಛೇರಿಗಳ ವಿಳಾಸಗಳು: 1. ನಿರಾತಂಕ ಸಂಸ್ಥೆ #326, 2ನೇ ಮಹಡಿ, ಕ್ಯನರಾ ಬ್ಯಾಂಕ್ ಎದುರು, ಅಂಬೇಡ್ಕರ್ ಕಾಲೇಜಿನ ಹತ್ತಿರ, ಮಲ್ಲತ್ತಹಳ್ಳಿ, ಬೆಂಗಳೂರು-560056 📞ಮೊ: 6360820544, ದೂ: 080-23213710 ವಿಳಾಸದ ಲೊಕೇಶನ್ ಲಿಂಕ್: https://maps.app.goo.gl/y6KDSigAeFCACfcf7 2. ನಿರಾತಂಕ ಸಂಸ್ಥೆ #1495, ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ, 7ನೇ ಬ್ಲಾಕ್, ಉಪಕಾರ್ ಬಡಾವಣೆ, ಆರ್.ಟಿ.ಓ. ಆಫೀಸ್ ಹತ್ತಿರ, ಶ್ರೀ ಹನುಮಾನ್ ಟಿಂಬರ್ಸ್ & ಪ್ಲೈವುಡ್ಸ್ ಹಿಂಭಾಗ, ಬೆಂಗಳೂರು-560091. 📞ಮೊ: 8088433026, 8073067542 ವಿಳಾಸದ ಲೊಕೇಶನ್ ಲಿಂಕ್: https://maps.app.goo.gl/dJNx79QRZd3go64T7 -ರಮೇಶ ಎಂ.ಎಚ್ ಕಾಂಗ್ರೆಸ್ ಮುಖಂಡರು, ಉಲ್ಲಾಳು ವಾರ್ಡ್ https://www.rameshniratanka.com/ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ನಮ್ಮ ವಾಟ್ಸ್ಆಪ್ ಚಾನಲ್ಗಳಿಗೆ ಸೇರಿಕೊಳ್ಳಿ📢📢 Ullalu Ward -29 https://whatsapp.com/channel/0029Va4grCB5vKA1Z0W25I44 RameshaForUllalu Ward -29 https://whatsapp.com/channel/0029Va4929W30LKOxs9Tuq3U RameshaNiratanka https://whatsapp.com/channel/0029Va4OLwtEVccDbgEAFY1Y ----------------------------------------------------------------------------------------------- Voter Registration for Bangalore Graduate Constituency Election Dear Sir/Madam I would like to inform you that Registration for the Bangalore Graduates Constituency MLC elections has been extended. Please register yourself, your family members and your friends. Kindly note that irrespective of whether you have previously enrolled for elections in the past, you will still need to register again now. The attached Form 18 should be filled out and submitted along with the following documents at the Tahsildar office in your area by 09/12/2023. For more information, visit or call our office. Guidelines to Filling Form 18 Eligibility 1. Should be a Degree Holder (with any degree) with a degree completed at Any University in India. 2. Should be residing in Bangalore, Bangalore Rural or Ramanagar Districts. 3. Should have Graduated / Passed before 1st November 2020. Documents Required 1. Form 18 application (Signature on the 2nd Page) 2. 2 passport-size photos 3. Convocation Certificate or All Marks card (Xerox) Self Attested 4. Voter ID Xerox or AADHAAR CARD (self-attested) > Note: All Required Documents to be submitted in 1 set > Filled Form should be submitted in your Area's Tahsildar Office. > You must Enroll your Name on Every Graduate Constituency MLC Elections. > Please fill the applications in capital letters. Our office addresses are: Nirathanka #326, 2nd floor, opp. to Canara Bank, near Dr. AIT College, Mallathahalli, Bengaluru-560056 📞Mob: 6360820544, Ph: 080-23213710 Google Location Link: https://maps.app.goo.gl/y6KDSigAeFCACfcf7 Nirathanka #1495, Sir M Vishweshwaraiah Layout, 7th Block, Upkar Layout, near RTO Office, Behind Sri Hanuman Timbers & Plywoods, Bengaluru-560091 📞Mob: 8088433026, 8073067542 Google Location Link: https://maps.app.goo.gl/dJNx79QRZd3go64T7 - Ramesha M.H Congress Leader, Ullalu Ward https://www.rameshniratanka.com/ For more information join our whatsapp channels below📢📢 Ullalu Ward -29 https://whatsapp.com/channel/0029Va4grCB5vKA1Z0W25I44 RameshaForUllalu Ward -29 https://whatsapp.com/channel/0029Va4929W30LKOxs9Tuq3U RameshaNiratanka https://whatsapp.com/channel/0029Va4OLwtEVccDbgEAFY1Y ಉಲ್ಲಾಳು ವಾರ್ಡ್-130 ರ (ಪಿಕೆ) ಪೌರಕಾರ್ಮಿಕರಿಗೆ ಬಿ.ಪ್ಯಾಕ್ ತಂಡದಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿ ವಿತರಣೆ ಮಾಡಲಾಯಿತು
ವಂದನೆಗಳು ರಮೇಶ ನಿರಾತಂಕ ಬಿ.ಕ್ಲಿಪ್ ಸಿವಿಕ್ ಲೀಡರ್ Follow the Ramesha For Ullalu Ward -29 channel on WhatsApp: https://whatsapp.com/channel/0029Va4929W30LKOxs9Tuq3U ಯಶವಂತಪುರ ವಿಧಾನಸಭಾ ಕ್ಷೇತ್ರದ ಉಲ್ಲಾಳು ವಾರ್ಡಿನ ಹೆಚ್.ಎಮ್.ಟಿ. ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ನಿವಾಸಿಗಳು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
Follow the Ramesha For Ullalu Ward -29 channel on WhatsApp: https://whatsapp.com/channel/0029Va4929W30LKOxs9Tuq3U ಸಂಖ್ಯೆ: ದೇಹಿನಿ/ಸ/ಪ್ರಕಟಣೆ/ಸಿಆರ್-18/2023-24 ದಿನಾಂಕ: 30.09.2023 ಪ್ರಕಟಣೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿನಲ್ಲಿ ಈ ಕೆಳಕಂಡ ಯೋಜನೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಸೇವಾ ಸಿಂಧು ತಂತ್ರಾಂಶದ ಮುಖಾಂತರ Online ಅರ್ಜಿ ಸ್ವೀಕೃತಿ ಡಿ. ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ ಹಿಂದುಳಿದ ವರ್ಗಕ್ಕೆ ಸೇರಿದ ನಿರುದ್ಯೋಗಿ ಫಲಾನುಭವಿಗಳು ಕೃಷಿ ಅವಲಂಬಿತ ಚಟುವಟಿಕೆ, ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾ ವಲಯದಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಠ ರೂ. 2.00 ಲಕ್ಷಗಳವರೆಗೆ ಆರ್ಥಿಕ ನೆರವು, ಕನಿಷ್ಠ ರೂ. 1.00 ಲಕ್ಷಗಳವರೆಗಿನ ಸಾಲದಲ್ಲಿ ಶೇ.20 ರಷ್ಟು ಗರಿಷ್ಠ ರೂ. 20,000/- ಗಳ ಸಹಾಯಧನ ಹಾಗೂ ಗರಿಷ್ಠ ರೂ. 1.00 ಲಕ್ಷದಿಂದ ರೂ. 2.00 ಲಕ್ಷದವರೆಗೆ ಶೇ. 15 ರಷ್ಟು ಗರಿಷ್ಠ ರೂ. 30,000/- ಸಹಾಯಧನ ಉಳಿಕೆ ಮೊತ್ತ ಶೇ. 4 ರ ಬಡ್ಡಿದರದಲ್ಲಿ ನಿಗಮದಿಂದ ನೇರ ಸಾಲ ಸೌಲಭ್ಯ ಪಡೆಯಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 98,000/- ಗಳು ಪಟ್ಟಣ ಪ್ರದೇಶದವರಿಗೆ ರೂ. 1,20,000/- ಗಳ ಒಳಗಿರಬೇಕು, ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು, ಪ್ರವರ್ಗ-1 ರಡಿಯಲ್ಲಿನ ಜಾತಿಗಳಲ್ಲಿ ಬರುವ ಅರ್ಜಿದಾರರು ಕನಿಷ್ಠ 7ನೇ ತರಗತಿ ಹಾಗೂ ಉಳಿದ ಇತರ ಪ್ರವರ್ಗಗಳಲ್ಲಿನ ಅರ್ಜಿದಾರರು 10ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು. ಗಂಗಾ ಕಲ್ಯಾಣ ನೀರಾವರಿ ಯೋಜನೆ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗ ನೀರಾವರಿ ಸೌಲಭ್ಯ ಒದಗಿಸಲಾಗುವುದು. ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಒಟ್ಟು ಘಟಕ ವೆಚ್ಚ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಗೆ ರೂ. 4.75 ಲಕ್ಷ ಇದರಲ್ಲಿ ವಿದ್ಯುದ್ಧೀಕರಣ ವೆಚ್ಚ ಪ್ರತಿ ಕೊಳವೆ ಬಾವಿಗೆ ರೂ. 75,000/- ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುವುದು. ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ. 50,000/- ಗಳ ಸಾಲವನ್ನು ಶೇ. 4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. ಈ ಯೋಜನೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 1 ಎಕರೆ ಜಮೀನು ಇರಬೇಕು. ಅರಿವು-ಶೈಕ್ಷಣಿಕ ಸಾಲ ಯೋಜನೆ ಈ ಯೋಜನೆಯಡಿ CET ಮೂಲಕ ಆಯ್ಕೆಯಾಗಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ಎಲ್ಲಾ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳಾದ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ 28 ಕೋರ್ಸ್ಗಳ ವ್ಯಾಸಂಗಕ್ಕೆ ವಾರ್ಷಿಕ 1.00 ಲಕ್ಷ ರೂ.ಗಳಂತೆ ಕೋರ್ಸ್ನ ಅವಧಿಗೆ ಗರಿಷ್ಠ 4.00 ಲಕ್ಷ ರೂ.ಗಳಿಂದ ರೂ. 5.00 ಲಕ್ಷ ರೂ.ಗಳಿಗೆ ವಾರ್ಷಿಕ ಶೇ. 2ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಅಭ್ಯರ್ಥಿ ಮತ್ತು ಅವರ ಕುಟುಂಬದವರ ವಾರ್ಷಿಕ ವರಮಾನವು ರೂ. 3.50 ಲಕ್ಷಗಳ ಮಿತಿಯಲ್ಲಿರಬೇಕು. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಲು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್.ಡಿ. ಪೋಸ್ಟ್ ಡಾಕ್ಟ್ರಲ್ ಮತ್ತು ಮಾಸ್ಟರ್ ಡಿಗ್ರಿ (ಇಂಜಿನಿಯರಿಂಗ್ & ಟೆಕ್ನಾಲಜಿ, ಮ್ಯಾನೇಜ್‌ಮೆಂಟ್ & ಕಾಮರ್ಸ್, ಸೈನ್ಸ್ & ಟೆಕ್ನಾಲಜಿ, ಅಗ್ರಿಕಲ್ಚರ್ & ಅಲೈಡ್ ಸೈನ್ಸಸ್ / ಟೆಕ್ನಾಲಜಿ, ಮೆಡಿಸಿನ್, ಹ್ಯುಮ್ಯಾನಿಟೀಸ್ & ಸೋಷಿಯಲ್ ಸೈನ್ಸಸ್) ವ್ಯಾಸಂಗಕ್ಕೆ ಪ್ರವೇಶ ಪಡೆದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಗರಿಷ್ಠ 8.00 ಲಕ್ಷ ರೂ.ಗಳ ಮಿತಿಯಲ್ಲಿರಬೇಕು. ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಶೇ. 60 ಕ್ಕಿಂತಲೂ ಹೆಚ್ಚಿನ ಅಂಕ ಪಡೆದಿರಬೇಕು. QS World Ranking 500 ರೊಳಗೆ ಬರುವ ವಿಶ್ವ ವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆದಿರಬೇಕು. ವಾರ್ಷಿಕ ಗರಿಷ್ಠ 10.00 ಲಕ್ಷ ಹಾಗೂ ಪೂರ್ಣ ಕೋರ್ಸ್ನ ಅವಧಿಗೆ ರೂ. 20.00 ಲಕ್ಷಗಳ ಸಾಲವನ್ನು ಬಡ್ಡಿರಹಿತವಾಗಿ ಒದಗಿಸಲಾಗುವುದು. ಸಾಲದ ಭದ್ರತೆಗೆ ನಿಗಮಕ್ಕೆ ಅರ್ಜಿದಾರರ / ಜಾಮೀನುದಾರ / ಪೋಷಕರ ಸ್ಥಿರಾಸ್ತಿಯನ್ನು ನಿಗಮಕ್ಕೆ ಆಧಾರ ಮಾಡಬೇಕು. ಅರ್ಜಿಯ ಜೊತೆಯಲ್ಲಿ ವಿದೇಶಿ ವಿಶ್ವವಿದ್ಯಾಲಯದ ಪ್ರವೇಶ ಪತ್ರ (Offer Letter) ವಿದ್ಯಾರ್ಥಿಯ ವಿಸಾ ಪಾಸ್‌ಪೋರ್ಟ್ ಮತ್ತು ಏರ್ ಟಿಕೇಟ್ ಪ್ರತಿ ಒದಗಿಸಬೇಕು. ಈ ಯೋಜನೆಯಡಿಯಲ್ಲಿ ಸೌಲಭ್ಯ ಒದಗಿಸಲು ಸೇವಾ ಸಿಂಧು ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸ್ವಾವಲಂಬಿ ಸಾರಥಿ ಯೋಜನೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನ ಖರೀದಿಗೆ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಶೇ. 50 ರಷ್ಟು, ಗರಿಷ್ಠ ರೂ. 3.00 ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುವುದು. ಸೌಲಭ್ಯ ಪಡೆಯಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 98,000/- ಗಳು ಪಟ್ಟಣ ಪ್ರದೇಶದವರಿಗೆ ರೂ. 1,20,000/- ಗಳ ಒಳಗಿರಬೇಕು, ಅರ್ಜಿದಾರರ ವಯಸ್ಸು 21 ರಿಂದ 45 ವರ್ಷಗಳ ಮಿತಿಯಲ್ಲಿರಬೇಕು. ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಇಚ್ಛಿಸುವ ಅರ್ಜಿದಾರರು ಲಘು ವಾಹನ ಚಾಲನ ಪರವಾನಗಿಯನ್ನು ಹೊಂದಿರಬೇಕು. ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ) ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಹಿಂದುಳಿದ ವರ್ಗಗಳಿಗೆ ಸೇರಿದವರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳು / ಉದ್ಯಮಗಳಿಗೆ ವಾಣಿಜ್ಯ ಬ್ಯಾಂಕುಗಳ ಮೂಲಕ ಸಾಲ ಪಡೆದಲ್ಲಿ ನಿಗಮದಿಂದ ಶೇ. 20 ರಷ್ಟು ಗರಿಷ್ಠ ರೂ. 1.00 ಲಕ್ಷಗಳ ಸಹಾಯಧನ ಮಂಜೂರು ಮಾಡಲು ಉಳಿಕೆ ಮೊತ್ತವನ್ನು ಬ್ಯಾಂಕ್‌ನಿಂದ ಸಾಲ ಪಡೆಯುವ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 98,000/-ಗಳು ಪಟ್ಟಣ ಪ್ರದೇಶದವರಿಗೆ ರೂ. 1,20,000/- ಗಳ ಒಳಗಿರಬೇಕು, ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆ ಹಿಂದುಳಿದ ವರ್ಗಗಳ ವಿದ್ಯಾವಂತ ಯುವಜನರನ್ನು ಗುರುತಿಸಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ತರಬೇತಿಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ITI’s, GTTC, KGTTI, ATDC ಗಳ ಮೂಲಕ ವಿವಿಧ ಅಲ್ಪಾವಧಿ ಮತ್ತು ಉತ್ಕೃಷ್ಟ ಕೌಶಲ್ಯ ತರಬೇತಿಯನ್ನು ನೀಡಿ ಅವರ ಉದ್ಯೋಗ ಸಾಮರ್ಥ್ಯವನ್ನು ಹಾಗೂ ಸಾಮಾಜಿಕ/ಆರ್ಥಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಉದ್ಯೋಗಿಮುಖಿಗಳನ್ನಾಗಿಸುವುದು. ಅರ್ಹತೆಗಳು: 10ನೇ ತರಗತಿ / ದ್ವಿತೀಯ ಪಿ.ಯು.ಸಿ. / ಪದವಿ / ಇಂಜಿನಿಯರಿಂಗ್ ವ್ಯಾಸಂಗವನ್ನು ಪೂರ್ಣಗೊಳಿಸಿರಬೇಕು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿ ನಮೂದಿಸಿದ ನಿಗಮದ ವ್ಯಾಪ್ತಿಗೆ ಒಳಪಡುವ ಜಾತಿಗಳಿಗೆ ಸೇರಿದವರಾಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 25 ವರ್ಷಗಳ ಒಳಗಿರಬೇಕು. ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಕುಟುಂಬದ ವಾರ್ಷಿಕ ವರಮಾನ / ಆದಾಯ ಮಿತಿ ಇರುವುದಿಲ್ಲ. ಪ್ರವರ್ಗ-2ಎ, 3ಎ ಮತ್ತು 3ಬಿಗೆ ಸೇರಿದ ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ / ಆದಾಯ ರೂ. 8.00 ಲಕ್ಷಗಳಿಗಿಂತ ಕಡಿಮೆ ಇರಬೇಕು. ಅರ್ಜಿದಾರರು http://www.kaushalkar.com ಜಾಲತಾಣದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಮೇಲ್ಕಂಡ ಎಲ್ಲಾ ಯೋಜನೆಗಳು ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ ಮತ್ತು ಇದರ ಉಪ ಸಮುದಾಯಗಳನ್ನು ಹೊರತುಪಡಿಸಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ನಲ್ಲಿ ಉಳಿದ ಸಮುದಾಯಗಳಿಗೆ ಅನ್ವಯವಾಗುತ್ತದೆ. ಈ ಮೇಲ್ಕಂಡ ಎಲ್ಲಾ ಯೋಜನೆಗಳಡಿಯಲ್ಲಿ ಸೌಲಭ್ಯ ಒದಗಿಸಲು ಸೇವಾ ಸಿಂಧು ತಂತ್ರಾAಶದಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್ನಲ್ಲಿರುವಂತೆ ಅರ್ಜಿದಾರರ ಹೆಸರು, (ಶ್ರೀ / ಶ್ರೀಮತಿ ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದಲ್ಲಿಯೂ ಇದ್ದು ಹೊಂದಾಣಿಕೆಯಾಗಬೇಕು. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಮೇಲ್ಕಂಡ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವ ಹಿಂದುಳಿದ ವರ್ಗಗಳ ಅರ್ಜಿದಾರರು ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ http://sevasindhu.karnataka.gov.in ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. ನಿಗಮದ ವೆಬ್ಸೈಟ್ www.dbcdc.karnataka.gov.in ಇಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿರುತ್ತದೆ ಅಥವಾ ನಿಗಮದ ಸಹಾಯವಾಣಿ ಸಂಖ್ಯೆ: 080-22374832 ಮತ್ತು 8050770004 ಅಥವಾ 8050770005 ಆಯಾ ಜಿಲ್ಲಾ ಕಛೇರಿಯ ದೂರವಾಣಿ ಸಂಖ್ಯೆಗಳನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದ್ದು ಅದರಂತೆ ಸಂಪರ್ಕಿಸಬಹುದು. ಆನ್‌ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ: 31.10.2023 ರೊಳಗೆ ಸೇವಾಸಿಂಧು ತಂತ್ರಾಂಶದ ಮುಖಾಂತರ ಸಲ್ಲಿಸುವುದು. ಸೂಚನೆ:- ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಛೇರಿಯ ಅವಧಿಯಲ್ಲಿ ಉಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇರುತ್ತದೆ. ಸಂಖ್ಯೆ: ಕ.ವಿ.ಲಿ.ಅ.ನಿ/ಸಿ-1/ಸಿಆರ್-14/23-24 ದಿನಾಂಕ: 30.09.2023 ಪ್ರಕಟಣೆ 2023-24ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ನಿಗಮದ ಯೋಜನೆಗಳು ವೀರಶೈವ-ಲಿಂಗಾಯತ ಜಾತಿ ಹಾಗೂ ಉಪಜಾತಿಗೆ ಸೇರಿದ ಸಮುದಾಯದ ಜನರ (ಪ್ರವರ್ಗ- IIIಬಿ) ಅಬಿವೃದ್ಧಿಗಾಗಿ 2023-24ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.10.2023 (ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆಯ ದಿನಾಂಕ ಇರುವುದಿಲ್ಲ). 1. ಶೈಕ್ಷಣಿಕ ಸಾಲ ಯೋಜನೆಗಳು ಬಸವ ಬೆಳಗು ಯೋಜನೆ (Fresh Students) ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಅವರ ಕುಟುಂಬದ ವಾರ್ಷಿಕ ಆದಾಯ ರೂ. 3.50 ಲಕ್ಷ ಮಿತಿಯಲ್ಲಿರುವ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ಗಳಾದ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ 28 ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ವಾರ್ಷಿಕ ರೂ. 1.00 ಲಕ್ಷಗಳಂತೆ ಕೋರ್ಸ್ನ ಅವಧಿಗೆ ಗರಿಷ್ಠ ರೂ. 4.00 ಲಕ್ಷಗಳಿಂದ 5.00 ಲಕ್ಷಗಳವರೆಗೆ ವಾರ್ಷಿಕ ಶೇ. 2 ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ವಿದ್ಯಾರ್ಥಿಗಳು CET/NEET ಇತ್ಯಾದಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ಕೋಟಾದ ಸೀಟು ಪಡೆದಿರಬೇಕು. ಬಸವ ಬೆಳಗು ಯೋಜನೆ (Renewals): 2022-23ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 2ನೇ ಕಂತಿನ ನವೀಕರಣ ಸಾಲ ಮಂಜೂರು ಮಾಡಲು ವ್ಯಾಸಂಗ ದೃಢೀಕರಣ ಮತ್ತು ಹಿಂದಿನ ವರ್ಷದ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸುವುದು. ವಿದೇಶ ವಿದ್ಯಾವಿಕಾಸ ಯೋಜನೆ (Fresh Students) : ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಅವರ ಕುಟುಂಬದ ವಾರ್ಷಿಕ ಆದಾಯ ರೂ. 8.00 ಲಕ್ಷಗಳ ಮಿತಿಯಲ್ಲಿರುವ ವಿದ್ಯಾರ್ಥಿಗಳು QS World Ranking 500 ರೊಳಗೆ ಬರುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್ ಡಾಕ್ಟರಲ್, ಪಿಹೆಚ್.ಡಿ., ಮಾಸ್ಟರ್ ಡಿಗ್ರಿ ಕೋರ್ಸ್ಗಳಲ್ಲಿ ಉನ್ನತ ವ್ಯಾಸಂಗ ಪಡೆಯಲು ವಾರ್ಷಿಕ ಗರಿಷ್ಠ ರೂ. 10.00 ಲಕ್ಷಗಳಂತೆ 3 ವರ್ಷದ ಅವಧಿಗೆ ಒಟ್ಟು ರೂ. 20.00 ಲಕ್ಷಗಳನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ವಿದೇಶ ವಿದ್ಯಾವಿಕಾಸ ಯೋಜನೆ (Renewals): 2022-23ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 2ನೇ ಕಂತಿನ ನವೀಕರಣ ಸಾಲ ಮಂಜೂರು ಮಾಡಲು ವ್ಯಾಸಂಗ ದೃಢೀಕರಣ ಮತ್ತು ಹಿಂದಿನ ವರ್ಷದ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸುವುದು. 2. ಜೀವಜಲ ಯೋಜನೆ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 98,000/- ಹಾಗೂ ಪಟ್ಟಣ ಪ್ರದೇಶದವರಿಗೆ ರೂ. 1.20,000/- ಮಿತಿಯೊಳಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸುವ ಮುಖೇನ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆಬಾವಿ ಯೋಜನೆಗೆ ಘಟಕವೆಚ್ಚ ರೂ. 4.75 ಲಕ್ಷಗಳಲ್ಲಿ ರೂ. 4.25 ಲಕ್ಷಗಳು ಸಹಾಯಧನ, ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ. 50,000/- ಗಳ ಸಾಲವನ್ನು ಶೇ. 4 ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. ಉಳಿದ ಜಿಲ್ಲೆಗಳಿಗೆ ಘಟಕವೆಚ್ಚ ರೂ. 3.75 ಲಕ್ಷಗಳಲ್ಲಿ ರೂ. 3.25 ಲಕ್ಷ ಸಹಾಯಧನ. ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ. 50,000/- ಗಳ ಸಾಲವನ್ನು ಶೇ. 4 ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಇತರೆ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಒಳಗೆ ಜಮೀನು ಹೊಂದಿರಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ Farmer’s FRUIT ID ಮತ್ತು ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಹೊಂದಿರಬೇಕು. 3. ಕಾಯಕಕಿರಣ ಯೋಜನೆ ವೀರಶೈವ-ಲಿಂಗಾಯತ ಸಮುದಾಯದ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳಿಗನುಸಾರ ಈ ಕೆಳಕಂಡಂತೆ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲಾಗುವುದು.
4. ಭೋಜನಾಲಯ ಕೇಂದ್ರ ಸಮುದಾಯದ ಜನರು ಹೋಟೆಲ್ (ಖಾನಾವಳಿ) ಉದ್ಯಮ ಕೈಗೊಳ್ಳಲು ಈ ಯೋಜನೆಯಲ್ಲಿ ಸಾಲ ಮತ್ತು ಸಹಾಯಧನ ನೀಡಲಾಗುವುದು. ಹೋಟೆಲ್ ಉದ್ದಿಮೆ ಕೈಗೊಳ್ಳಲು ಘಟಕ ವೆಚ್ಚ ರೂ. 5.00 ಲಕ್ಷ ಇದರಲ್ಲಿ ರೂ. 4,60,000/- ಸಾಲ ಮತ್ತು ರೂ. 40,000/- ಸಹಾಯಧನ ನೆರವು ನೀಡಲಾಗುವುದು. ಹೋಟೆಲ್ ಸ್ಥಾಪನೆ ಮಾಡಲು ಫಲಾನುಭವಿಗಳು ತಮ್ಮ ಸ್ವಂತ ಹೆಸರಿನಲ್ಲಿ ಕನಿಷ್ಠ 20x30 ಅಡಿ ಅಳತೆಯುಳ್ಳ ನಿವೇಶನ ಹೊಂದಿರಬೇಕು. 5. ವಿಭೂತಿ ನಿರ್ಮಾಣ ಘಟಕ ವೀರಶೈವ-ಲಿಂಗಾಯತ ಸಮುದಾಯದವರು ವಿಭೂತಿಯನ್ನು ತಯಾರಿಸಲು ಸಾಲ ಮತ್ತು ಸಹಾಯಧನ ನೀಡುವ ಯೋಜನೆ ಇದಾಗಿದೆ. ಕುಟುಂಬದ ವಾರ್ಷಿಕ ವರಮಾನ ರೂ. 3.50 ಲಕ್ಷಗಳು ಮತ್ತು 18 ರಿಂದ 55 ವರ್ಷಗಳ ವಯೋಮಿತಿಯಲ್ಲಿರುವವರು ಅರ್ಜಿ ಸಲ್ಲಿಸಬಹುದು. ವಿಭೂತಿ ನಿರ್ಮಾಣ ಘಟಕ ನಿರ್ಮಿಸಲು ಘಟಕ ವೆಚ್ಚ. ರೂ. 4.00 ಲಕ್ಷ ಇದರಲ್ಲಿ ರೂ. 3,60,000/- ಸಾಲ ಮತ್ತು ರೂ. 40,000/- ಸಹಾಯಧನ ವಾರ್ಷಿಕ ಶೇ. 3%ರ ಬಡ್ಡಿದರದಲ್ಲಿ ನೆರವು ನೀಡಲಾಗುವುದು. 6. ಸ್ವಾವಲಂಬಿ ಸಾರಥಿ ಯೋಜನೆ : (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ) ನಿರುದ್ಯೋಗಿ ಚಾಲಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರ ವಾಹನ (ಹಳದಿ ಬೋರ್ಡ್) ಖರೀದಿಗೆ ಪಡೆಯುವ ಸಾಲಕ್ಕೆ ಶೇ. 50 ರಷ್ಟು ಅಥವಾ ಗರಿಷ್ಠ 3.00 ಲಕ್ಷಗಳ ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. ಫಲಾನುಭವಿಗಳು ಉಳಿದ ಮೊತ್ತವನ್ನು ಬ್ಯಾಂಕ್ / ಹಣಕಾಸು ಸಂಸ್ಥೆಗಳ ಮೂಲಕ ಅವರು ವಿಧಿಸುವ ಚಾಲ್ತಿ ಬಡ್ಡಿದರದಲ್ಲಿ ಸಾಲ ಪಡೆಯುವುದು. 7. ಸ್ವಯಂ ಉದ್ಯೋಗ ಸಾಲ ಯೋಜನೆ : (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ) ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅವರು ಕೈಗೊಳ್ಳುವ ಕೃಷಿ / ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಯಂತ್ರೋಪಕರಣಗಳನ್ನು ಕೊಳ್ಳುವ ಆರ್ಥಿಕ ಚಟುವಟಿಕೆಗಳು/ಉದ್ಯಮಗಳಿಗೆ ವಾಣಿಜ್ಯ ಬ್ಯಾಂಕ್‌ಗಳ ಮೂಲಕ ಸಾಲ ಪಡೆದಿದ್ದಲ್ಲಿ ನಿಗಮದಿಂದ ಶೇ. 20 ರಷ್ಟು ಅಥವಾ ಗರಿಷ್ಠ ರೂ. 1.00 ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುವುದು. ವಿಶೇಷ ಸೂಚನೆ
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಾಲತಾಣ http://kvldcl.karnataka.gov.in ಅಥವಾ ನಿಗಮದ ದೂರವಾಣಿ ಸಂಖ್ಯೆ 080-22865522 / 9900012351 ಅನ್ನು ಸಂಪರ್ಕಿಸಬಹುದು. ಅಥವಾ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ. ಸಂಖ್ಯೆ: ಕ.ಮ.ಸ.ಅ.ನಿ/ಸಿಆರ್-53/2023-24 ದಿನಾಂಕ: 27.09.2023 ಪ್ರಕಟಣೆ 2023-24ನೇ ಸಾಲಿಗೆ ಸಾಲ-ಸೌಲಭ್ಯ ಒದಗಿಸಲು ಅರ್ಜಿಗಳ ಆಹ್ವಾನ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿನಲ್ಲಿ ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಹಾಗೂ ಈ ಯೋಜನೆಗಳಡಿ ಸಾಲ-ಸೌಲಭ್ಯವನ್ನು ಪಡೆಯಲು ಇಚ್ಛಿಸುವವರು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.10.2023. (ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆ ದಿನಾಂಕ ಇರುವುದಿಲ್ಲ). ಅರ್ಜಿ ಸಲ್ಲಿಸಲು ಇರಬೇಕಾದ ಸಾಮಾನ್ಯ ಅರ್ಹತೆಗಳು 1) ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ (ನಿ.) ದ ವತಿಯಿಂದ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಪ್ರವರ್ಗ-3-ಬಿ ಅಡಿಯಲ್ಲಿ 2(ಎ) ಯಿಂದ 2(ಎಫ್) ವರೆಗೆ ಬರುವ ಸಮುದಾಯಕ್ಕೆ ಸೇರಿರಬೇಕು. 2) ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಮೂನೆ-3ಬಿ ಯಲ್ಲಿ ಪಡೆದಿರಬೇಕು (ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು), 3) ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು, 4) ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು, 5) ಸರ್ಕಾರಿ ಸೌಲಭ್ಯವನ್ನು (ಸಾಲ-ಸಹಾಯಧನ) ಪಡೆಯುವ ಸಂಬಂಧ ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಸಿರಬೇಕು, 6) ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ. 33%, ವಿಕಲಚೇತನರಿಗೆ ಶೇ.5% ಹಾಗೂ ತೃತೀಯ ಲಿಂಗಗಳಿಗೆ ಶೇ. 1% ಮೀಸಲಾತಿ ಇರಿಸಿದೆ, 7) ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. (ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಮಾತ್ರ ಇಬ್ಬರಿಗೆ ಅವಕಾಶವಿರುತ್ತದೆ.) 1. ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆ (ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ) ಯೋಜನೆಯ ಅರ್ಹತೆಗಳು: 1) ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 98,000/- ಮತ್ತು ನಗರ ಪ್ರದೇಶದವರಿಗೆ ರೂ. 1,20,000/- ಗಳ ಮಿತಿಯೊಳಗಿರಬೇಕು. 2) ಅರ್ಜಿದಾರರು 18 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು. 3) ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. 4) ಈ ಯೋಜನೆಯಲ್ಲಿ ಕನಿಷ್ಠ ರೂ. 1,00,000/- ಗಳಿಂದ ಗರಿಷ್ಠ ರೂ. 2,00,000/- ಗಳ ಸಾಲ ಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ. 15% ರಷ್ಟು ಕನಿಷ್ಠ ರೂ. 20,000/- ಗಳಿಂದ ಗರಿಷ್ಠ ರೂ. 30,000/- ಗಳವರೆಗೆ ಸಹಾಯಧನ ಹಾಗೂ ಶೇ. 85ರಷ್ಟು ಸಾಲವನ್ನು ವಾರ್ಷಿಕ ಶೇ. 4 ರ ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುವುದು, 2 ತಿಂಗಳ ವಿರಾಮ ಅವಧಿ ಇರುತ್ತದೆ ನಂತರ ಸಾಲವನ್ನು 34 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. 2. ಜೀಜಾವು-ಜಲಭಾಗ್ಯ ಯೋಜನೆಯ (ಗಂಗಾ ಕಲ್ಯಾಣ ನೀರಾವರಿ ಯೋಜನೆ) ಅರ್ಹತೆಗಳು 1) ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ರೂ. 98,000/- ಗಳ ಮಿತಿಯೊಳಗಿರಬೇಕು. 2) ಅರ್ಜಿದಾರರು 18 ವರ್ಷ ಮೇಲ್ಪಟ್ಟಿರಬೇಕು. 3) ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು. 4) ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. 5) ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿಲ್ಲದೆ ಇರುವ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. 6) ಈ ಯೋಜನೆಯಲ್ಲಿ ಘಟಕ ವೆಚ್ಚ ರೂ. 3.75 ಲಕ್ಷಗಳು (ವಿದ್ಯುದ್ಧೀಕರಣ ಸೇರಿ) ಹಾಗೂ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ. 4.75 ಲಕ್ಷಗಳು. (ವಿದ್ಯುದ್ಧೀಕರಣ ಸೇರಿ) ಹಾಗೂ ಅವಶ್ಯವಿದ್ದಲ್ಲಿ ರೂ. 50,000/- ಗಳ ಸಾಲವನ್ನು ಶೇ. 4 ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. 3. ಶೈಕ್ಷಣಿಕ ಸಾಲ ಯೋಜನೆಗಳು: Fresh Students
4. ಮರಾಠ ಮಿಲ್ಟ್ರಿ ಹೋಟೆಲ್ ಯೋಜನೆಯ ಅರ್ಹತೆಗಳು: 1) ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶದವರಿಗೆ ರೂ. 8.00 ಲಕ್ಷಗಳು ಮೀರತಕ್ಕದಲ್ಲ. 2) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 55 ವರ್ಷಗಳನ್ನು ಮೀರಿರತಕ್ಕದ್ದಲ್ಲ. 3) ಈ ಯೋಜನೆಯ ಘಟಕ ವೆಚ್ಚ ಗರಿಷ್ಠ ರೂ. 5.00 ಲಕ್ಷ ಸಾಲ, ರೂ. 40,000/- ಸಹಾಯಧನ ಆಗಿರುತ್ತದೆ. 4) ಸಾಲವನ್ನು ವಾರ್ಷಿಕ ಶೇ. 4 ರ ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುವುದು. 5) 03 ವರ್ಷಗಳಲ್ಲಿ ಮಾಸಿಕ ಕಂತುಗಳಲ್ಲಿ ಮಂಜೂರಾತಿ ಆದೇಶದಲ್ಲಿ ನಿಗದಿಪಡಿಸಿರುವಂತೆ ಅಸಲು ಮತ್ತು ಬಡ್ಡಿಯನ್ನು ಮರುಪಾವತಿಸುವುದು. 5. ಸ್ವಯಂ ಉದ್ಯೋಗ ಸಾಲ ಯೋಜನೆಯ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ) ಅರ್ಹತೆಗಳು: 1) ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 98,000/- ಮತ್ತು ನಗರ ಪ್ರದೇಶದವರಿಗೆ ರೂ. 1,20,000/- ಗಳ ಮಿತಿಯೊಳಗಿರಬೇಕು. 2) ಅರ್ಜಿದಾರರು 18 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು. 3) ಈ ಯೋಜನೆಯಡಿ ಉದ್ಯೋಗ ಪ್ರಾರಂಭಿಸಲು ಬ್ಯಾಂಕ್/ಸಹಕಾರಿ ಸಂಘಗಳಿಂದ ಸಾಲ ಪಡೆಯಬೇಕು ಹಾಗೂ ನಿಗಮದಿಂದ ಶೇ. 20 ರಷ್ಟು ಅಥವಾ ಗರಿಷ್ಠ ರೂ. 3.00 ಲಕ್ಷಗಳನ್ನು ನಿಗಮದಿಂದ ಸಹಾಯಧನ ಮಂಜೂರು ಮಾಡಲಾಗುವುದು. 4) ಬ್ಯಾಂಕ್‌ಗಳು ಮಂಜೂರು ಮಾಡುವ ಸಾಲಕ್ಕೆ ಬ್ಯಾಂಕ್‌ಗಳು ಚಾಲ್ತಿಯಲ್ಲಿರುವ ಬಡ್ಡಿಯನ್ನು ವಿಧಿಸಲಾಗುತ್ತದೆ. 6. ಸ್ವಾವಲಂಬಿ ಸಾರಥಿ ಯೋಜನೆಯ ಅರ್ಹತೆಗಳು: 1) ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 98,000/- ಮತ್ತು ನಗರ ಪ್ರದೇಶದವರಿಗೆ ರೂ. 1,20,000/- ಗಳ ಮಿತಿಯೊಳಗಿರಬೇಕು. 2) ಅರ್ಜಿದಾರರು 21 ವರ್ಷ ಮೇಲ್ಪಟ್ಟು 45 ವರ್ಷದ ಒಳಗಿನವರಾಗಿರಬೇಕು. 3) ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಇಚ್ಛಿಸುವ ಅರ್ಜಿದಾರರು ಲಘುವಾಹನ ಚಾಲನಾ ಪರವಾನಿಗೆಯನ್ನು ಹೊಂದಿರಬೇಕು. 4) ಅರ್ಜಿದಾರರು ನಿರುದ್ಯೋಗಿಯಾಗಿರಬೇಕು. 5) ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಯು ಸ್ವಯಂ ಟ್ಯಾಕ್ಸಿ ಚಾಲನೆ (Yellow Board) ಉದ್ದೇಶಕ್ಕೆ ವಾಹನವನ್ನು ನೋಂದಾಯಿಸತಕ್ಕದ್ದು. 6) ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನವನ್ನು (ಟ್ಯಾಕ್ಸಿ, ಟಾಟಾ ಎಸಿ, ಗೂಡ್ಸ್ ವಾಹನ ಇತ್ಯಾದಿ ನಾಲ್ಕು ಚಕ್ರಗಳ ವಾಹನ) ಖರೀದಿಸಲು ಬ್ಯಾಂಕ್ / ಹಣಕಾಸು ಸಂಸ್ಥೆಗಳು ಮಂಜೂರು ಮಾಡಿದ ಸಾಲದ ಶೇ. 50 ರಷ್ಟು ಅಥವಾ ಗರಿಷ್ಠ ರೂ. 3.00 ಲಕ್ಷಗಳವರೆಗೆ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡುವುದು. ಉಳಿದ ಮೊತ್ತವನ್ನು ಬ್ಯಾಂಕ್ / ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆಯುವುದು ಈ ಸಾಲಕ್ಕೆ ಬ್ಯಾಂಕ್ / ಹಣಕಾಸು ಸಂಸ್ಥೆಗಳು ನಿಗದಿಪಡಿಸುವ ಬಡ್ಡಿಯನ್ನು ಪಾವತಿಸಬೇಕು. 7. ಸ್ವಾತಂತ್ರ್ಯ ಅಮೃತ್ ಮಹೋತ್ಸವ ಮುನ್ನಡೆ ಯೋಜನೆಯ ಅರ್ಹತೆಗಳು: ಮರಾಠ ಸಮುದಾಯದ ಯುವಜನತೆಯನ್ನು ಕೌಶಲ್ಯ ಅಭಿವೃದ್ಧಿಪಡಿಸಿ ಉದ್ಯೋಗಮುಖಿಗಳನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ ITI’s, GTTCs, KGTTIs ಇತ್ಯಾದಿಗಳಲ್ಲಿ ಅಲ್ಪಾವಧಿ ಕೋರ್ಸುಗಳ ಮೂಲಕ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಕೌಶಲ್ಯ ಕರ್ನಾಟಕ ತಂತ್ರಾಂಶದ (https://www.kaushalkar.com) ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ವಿಶೇಷ ಸೂಚನೆ
ಸಂಪರ್ಕ ವಿವರ: ನಿಗಮದ ಸಹಾಯವಾಣಿ: 8867537799 / ದೂ. ಸಂ: 080-29903994 (ಬೆಳಿಗ್ಗೆ: 10.00 ರಿಂದ ಸಂಜೆ: 5.30 ರವರೆಗೆ ಸಂಪರ್ಕಿಸಬಹುದಾಗಿದೆ). ಯೋಜನೆಗಳ ಮಾರ್ಗಸೂಚಿಗಳು, ಸಲ್ಲಿಸಬೇಕಾದ ದಾಖಲೆಗಳು, ಜಿಲ್ಲಾ ವ್ಯವಸ್ಥಾಪಕರ ಕಛೇರಿ ವಿಳಾಸಗಳನ್ನು ಹಾಗೂ ಹೆಚ್ಚಿನ ವಿವರಗಳನ್ನು https://kmcdc.karnataka.gov.in ಇಲ್ಲಿ ತಿಳಿಯಬಹುದಾಗಿದೆ. ಸಂಖ್ಯೆ: ಕವಿಸಅನಿ/ಸಿ.ಆರ್-01/2023-24 ದಿನಾಂಕ: 01/10/2023. ಪ್ರಕಟಣೆ 2023-24ನೇ ಸಾಲಿಗೆ ಅನುಷ್ಠಾನಗೊಂಡಿರುವ ಯೋಜನೆಗಳಿಗೆ ಅರ್ಜಿಗಳ ಆಹ್ವಾನ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿನಲ್ಲಿ ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಹಾಗೂ ಈ ಯೋಜನೆಗಳಡಿ ಸಹಾಯಧನ / ಸಾಲ-ಸೌಲಭ್ಯವನ್ನು ಪಡೆಯಲು ಇಚ್ಛಿಸುವವರು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31.10.2023. (ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆಯ ದಿನಾಂಕ ಇರುವುದಿಲ್ಲ) ಅರ್ಜಿ ಸಲ್ಲಿಸಲು ಇರಬೇಕಾದ ಸಾಮಾನ್ಯ ಅರ್ಹತೆಗಳು. 1) ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. 2) ನಿಗಮದ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವವರು ಸರ್ಕಾರದ ಆದೇಶ ಸಂಖ್ಯೆ: ಸಕಇ/225/ಬಿಸಿಎ/2000 ದಿನಾಂಕ: 30/03/2002 ರನ್ವಯ ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪಜಾತಿಗಳಿಗೆ ಸೇರಿರಬೇಕು. 3) ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ. 4) ವಯೋಮಿತಿ 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು. 5) ನಿಗಮದ/ಸರ್ಕಾರದ ಯಾವುದಾದರೂ ಯೋಜನೆಗಳಡಿ ಈ ಹಿಂದೆ ಸೌಲಭ್ಯ ಪಡೆದಿರಬಾರದು. 6) ಕುಟುಂಬದ ಒಬ್ಬರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು. 7) ಅರಿವು ಯೋಜನೆಯಡಿ ವಯೋಮಿತಿ 18 ವರ್ಷಗಳಿಂದ 30 ವರ್ಷಗಳ ಮಿತಿಯಲ್ಲಿರಬೇಕು ವಾರ್ಷಿಕ ವರಮಾನ ರೂ. 3.50/- ಲಕ್ಷಗಳು. 8) ಸ್ವಾವಲಂಬಿ ಸಾರಥಿ ಯೋಜನೆಯಡಿ ಅರ್ಜಿದಾರರು 21 ವರ್ಷ ಮೇಲ್ಪಟ್ಟು 45 ವರ್ಷದ ಮಿತಿಯಲ್ಲಿರಬೇಕು. 9) ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಾಗೂ ಬ್ಯಾಂಕ್ ಖಾತೆಯನ್ನು ತಮ್ಮ ಆಧಾರ್ ಸಂಖ್ಯೆಗೆ ಜೋಡಣೆ ಮಾಡಿರಬೇಕು. 10) ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 98,000/- ಮತ್ತು ನಗರ ಪ್ರದೇಶದವರಿಗೆ ರೂ. 1,20,000/- ಗಳ ಮಿತಿಯೊಳಗಿರಬೇಕು. 11) ಆಯ್ಕೆ ಮಾಡುವಾಗ ಮಹಿಳೆಯರಿಗೆ 33% ವಿಕಲಚೇತನರಿಗೆ 5% ಹಾಗೂ ತೃತೀಯ ಲಿಂಗಿಗಳಿಗೆ ಶೇ 1% ಮೀಸಲಾತಿ ಇರಿಸಿದೆ. ರಾಜ್ಯ ಸರ್ಕಾರದ/ನಿಗಮದ ಯೋಜನೆಗಳ ವಿವರ:- ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸುವ ಯೋಜನೆಗಳು:- (1) ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, (2) ಸ್ವಯಂ ಉದ್ಯೋಗ ನೇರಸಾಲ ಯೋಜನೆ. (3) ಅರಿವು-ಶೈಕ್ಷಣಿಕ ನೇರಸಾಲ ಯೋಜನೆ (ಹೊಸದು). (4) ಅರಿವು-ಶೈಕ್ಷಣಿಕ ನೇರಸಾಲ ಯೋಜನೆ (ನವೀಕರಣ). (5) ಗಂಗಾ ಕಲ್ಯಾಣ ಯೋಜನೆ – ಈ ಯೋಜನೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು ಇತರೇ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಹೊಂದಿರಬೇಕು. (6) ಸ್ವಯಂ ಉದ್ಯೋಗ ನೇರಸಾಲ (ಬ್ಯಾಂಕ್‌ಗಳ ಸಹಯೋಗದೊಂದಿಗೆ). (7) ಸ್ವಾವಲಂಬಿ ಸಾರಥಿ ಯೋಜನೆ. (8) ವಿದೇಶಿ ವ್ಯಾಸಂಗ ಯೋಜನೆ-ಈ ಯೋಜನೆಯಡಿ ವಾರ್ಷಿಕ ವರಮಾನವು ರೂ. 8.00/- ಲಕ್ಷಗಳ ಮಿತಿಯಲ್ಲಿರಬೇಕು. (9) ಸ್ವಾತಂತ್ರ್ಯ ಅಮೃತ ಮುನ್ನಡೆ ಯೋಜನೆ-ಈ ಯೋಜನೆಯಡಿ ಅರ್ಜಿಯನ್ನು www.kaushalkar.com ನಲ್ಲಿ ಸಲ್ಲಿಸಬೇಕು.
ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿಗಳನ್ನು ಸಲ್ಲಿಸಲುಯ ಕೊನೆಯ ದಿನಾಂಕ: 31/10/2023ರ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಡಿ ದೇವರಾಜ ಅರಸು ನಿಗಮ ಸ್ವಯಂ ಉದ್ಯೋಗ ಸಾಲ ಯೋಜನೆ (ವ್ಯಾಪಾರ ಚಟುವಟಿಕೆ)
ಗಂಗಾ ಕಲ್ಯಾಣ ಯೋಜನೆ
ಸ್ವಾವಲಂಬಿ ಸಾರಥಿ ಯೋಜನೆ
ಉಪ್ಪಾರ ಅಭಿವೃದ್ಧಿ ನಿಗಮ ಸ್ವಯಂ ಉದ್ಯೋಗ ಸಾಲ ಯೋಜನೆ (ವ್ಯಾಪಾರ ಚಟುವಟಿಕೆ)
ಗಂಗಾ ಕಲ್ಯಾಣ ಯೋಜನೆ
ಸ್ವಾವಲಂಬಿ ಸಾರಥಿ ಯೋಜನೆ
ವೀರಶೈವ ಲಿಂಗಾಯತ ನಿಗಮ ಸ್ವಯಂ ಉದ್ಯೋಗ ಸಾಲ ಯೋಜನೆ (ವ್ಯಾಪಾರ ಚಟುವಟಿಕೆ)
ಗಂಗಾ ಕಲ್ಯಾಣ ಯೋಜನೆ
ಸ್ವಾವಲಂಬಿ ಸಾರಥಿ ಯೋಜನೆ
ವಕ್ಕಲಿಗ ಅಭಿವೃದ್ಧಿ ನಿಗಮ ಸ್ವಯಂ ಉದ್ಯೋಗ ಸಾಲ ಯೋಜನೆ (ವ್ಯಾಪಾರ ಚಟುವಟಿಕೆ)
ಗಂಗಾ ಕಲ್ಯಾಣ ಯೋಜನೆ
ಸ್ವಾವಲಂಬಿ ಸಾರಥಿ ಯೋಜನೆ
ವಿಶ್ವಕರ್ಮ ಸಮುದಾಯ ನಿಗಮ ಸ್ವಯಂ ಉದ್ಯೋಗ ಸಾಲ ಯೋಜನೆ (ವ್ಯಾಪಾರ ಚಟುವಟಿಕೆ)
ಗಂಗಾ ಕಲ್ಯಾಣ ಯೋಜನೆ
ಸ್ವಾವಲಂಬಿ ಸಾರಥಿ ಯೋಜನೆ
ಸವಿತಾ ಸಮಾಜ ನಿಗಮ ಸ್ವಯಂ ಉದ್ಯೋಗ ಸಾಲ ಯೋಜನೆ (ವ್ಯಾಪಾರ ಚಟುವಟಿಕೆ)
ಗಂಗಾ ಕಲ್ಯಾಣ ಯೋಜನೆ
ಸ್ವಾವಲಂಬಿ ಸಾರಥಿ ಯೋಜನೆ
ಮರಾಠ ನಿಗಮ ಸ್ವಯಂ ಉದ್ಯೋಗ ಸಾಲ ಯೋಜನೆ (ವ್ಯಾಪಾರ ಚಟುವಟಿಕೆ)
ಗಂಗಾ ಕಲ್ಯಾಣ ಯೋಜನೆ
ಸ್ವಾವಲಂಬಿ ಸಾರಥಿ ಯೋಜನೆ
ಮಡಿವಾಳ ಮಾಚಿದೇವ ನಿಗಮ ಸ್ವಯಂ ಉದ್ಯೋಗ ಸಾಲ ಯೋಜನೆ (ವ್ಯಾಪಾರ ಚಟುವಟಿಕೆ)
ಗಂಗಾ ಕಲ್ಯಾಣ ಯೋಜನೆ
ಸ್ವಾವಲಂಬಿ ಸಾರಥಿ ಯೋಜನೆ
ಕರ್ನಾಟಕ ಅಲೆಮಾರಿ ನಿಗಮ ಸ್ವಯಂ ಉದ್ಯೋಗ ಸಾಲ ಯೋಜನೆ (ವ್ಯಾಪಾರ ಚಟುವಟಿಕೆ)
ಗಂಗಾ ಕಲ್ಯಾಣ ಯೋಜನೆ
ಸ್ವಾವಲಂಬಿ ಸಾರಥಿ ಯೋಜನೆ
ದಿನಾಂಕ: 16-09-2023 ಶನಿವಾರದಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಉಲ್ಲಾಳು ವಾರ್ಡ್-29ರಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಿರಾತಂಕ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ 'ಮಕ್ಕಳ ಕೈಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ಸ್ಪರ್ಧೆ'ಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ ಬಹುಮಾನ ರೂ. 5,000, ದ್ವಿತೀಯ ಬಹುಮಾನ ರೂ.2,500 ಹಾಗೂ ತೃತೀಯ ಬಹುಮಾನ ರೂ. 1,000 ಗಳನ್ನು ನೀಡಿ ಅವರ ಕಲಾಪ್ರತಿಭೆಯನ್ನು ಪ್ರೋತ್ಸಾಹಿಸಲಾಯಿತು ಹಾಗೂ ಅಂದೇ ಸಾರ್ವಜನಿಕರಿಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಅನೇಕ ಸ್ಥಳೀಯ ನಿವಾಸಿಗಳು ತಮ್ಮ ಮಕ್ಕಳೊಡನೆ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಸ್ಪರ್ಧೆಯಲ್ಲಿ ಈ ಕೆಳಕಂಡ ಮಕ್ಕಳು ವಿಜೇತರಾದರು:-
1. ಪ್ರಥಮ ಬಹುಮಾನ ರೂ. 5,000 ಪಡೆದವರು: ಪಲ್ಲವಿ 2. ದ್ವಿತೀಯ ಬಹುಮಾನ ರೂ.2,500 ಪಡೆದವರು: ಸೃಜನ್ 3. ಮೂರನೇ ಬಹುಮಾನ ರೂ. 1,000 ಪಡೆದವರು: ಅಯಲಪ್ಪ ರಮೇಶ ಎಂ.ಎಚ್. ನಿರಾತಂಕ ಹೆಚ್ಚಿನ ಮಾಹಿತಿಗಾಗಿ: www.rameshniratanka.com ಸದಾ ಕಾಲ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿ ನಿಸ್ವಾರ್ಥ ಸೇವೆಯಿಂದ ಸಮಾಜಕ್ಕಾಗಿ ಏನಾದರೂ ಒಂದಿಷ್ಟು ಕೆಲಸ ಮಾಡುವ ಕನಸು ಹೊತ್ತು ಅವಿರತವಾಗಿ ಶ್ರಮಿಸುತ್ತಿರುವ ಸರಳತೆಯಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತಹ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಹೃದಯಿಗಳಾದ ನೀವು ಜಯಶೀಲರಾಗಬೇಕೆಂಬುದೇ ನನ್ನ ಆಶಯ.
ವಿ ದಾಸಣ್ಣ ಪಾವಗಡ ಸಂಸ್ಥಾಪಕರು ಮತ್ತು ಕಾರ್ಯದರ್ಶಿಗಳು, ವಿಶ್ವ ಗ್ರಾಮೋದಯ ಟ್ರಸ್ಟ್ ಪಾವಗಡ. www.vishwagramodaya.org The true social workers are real political persons. Politics is for social services. But many people think that it is to enjoy power, earn name, fame and money. Social service is an eye washing trick for them. Since the true social workers are not aware of service technic, fake person acts like social servant. The person like Ramesha Niratanka are rare in politics. I personally welcome him if he wants to come to politics.
Kallarepura Mahadevaiah ರಮೇಶ ಎಂ.ಎಚ್. MSW, PGDELT ಸಮಾಜಕಾರ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ಕಾರಣಕ್ಕಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದ, `ನಿರುತ ಪ್ರಕಾಶನ’ ಸಂಸ್ಥೆಯ ಮುಖ್ಯಸ್ಥರಾದ ಮತ್ತು ನನ್ನ ಆತ್ಮೀಯರಾದ ಮಾನ್ಯ ರಮೇಶ ಎಂ.ಎಚ್. ರವರು ರಾಜಕೀಯ ಕ್ಷೇತ್ರ ಪ್ರವೇಶಿಸುತ್ತಿರುವುದು ನನಗಂತೂ ಒಂದು ಸಂತಸದ ಸುದ್ದಿಯೆ. ಮಿತ್ರ ರಮೇಶರವರು ವಿದ್ಯಾವಂತ, ಸಮಾಜಕಾರ್ಯ ಸಾಹಿತ್ಯ ಪ್ರಕಾಶಕ, ಉತ್ತಮ ಸಂಘಟಕ, ಯೋಜನೆ ಮತ್ತು ಅನುಷ್ಠಾನ ನಿಪುಣ, ಕನ್ನಡ ಪ್ರೇಮಿ, ಶ್ರೇಷ್ಠ ಮಾತುಗಾರ, ವಿಕಾಶವಾದಿ ಹಾಗೂ ಸಹೃದಯಿ. ಇಂಥವರು ರಾಜಕೀಯಕ್ಕೆ ಬಂದರೆ ಸಮುದಾಯ, ಸಮಾಜಗಳು ನಿಶ್ಚಯವಾಗಿಯೂ ಅಭ್ಯುದಯದತ್ತ ಮುಖ ಮಾಡಬಹುದು.
ಸಮಾಜಕಾರ್ಯಕರ್ತರು ರಾಜಕೀಯ ಕ್ಷೇತ್ರಕ್ಕೆ ಬರಬೇಕು. ಸಮಾಜದಲ್ಲಿ ನಾಯಕತ್ವದ ಕುರಿತು ಮತ್ತು ಅಭಿವೃದ್ದಿ ಹಾಗೂ ಸಮಾಜದ ಸಬಲಿಕರಣದ ಕುರಿತು ಅಧ್ಯಯನ, ಪಾಠ ಕಲಿಸುವುದರೊಟ್ಟಿಗೆ, ಸಮಾಜದ ಒಟ್ಟಿಗೆ, ಸಮಾಜಕಾರ್ಯ ಕ್ಷೇತ್ರದ ಅಭಿವೃದ್ಧಿ, ಸಬಲತೆ ಹಾಗೂ ವಿಸ್ತರಣೆಗೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಅವಶ್ಯಕತೆ ಇದೆ. ನಿಮ್ಮ ಈ ಒಳ್ಳೆಯ ಆಲೋಚನೆ ಮತ್ತು ನಿರ್ಧಾರ ಸಮಾಜದ ಸಂಘಟನೆಯೊಂದಿಗೆ ಸಫಲವಾಗಲಿ ಹಾಗೂ ಮಾದರಿಯಾಗಲಿ ಎಂದು ಶುಭಹಾರೈಸುತ್ತೇನೆ.
ನಿಮ್ಮ ಅನುಭವ ಹಾಗೂ ನೀವು ಅನುಷ್ಠಾನಗೊಳಿಸುತ್ತಿರುವ ಕಾರ್ಯಚಟುವಟಿಕೆಗಳಿಗೆ, ಒಬ್ಬ ಸಮಾಜ ಕಾರ್ಯಕರ್ತನಾಗಿ ನಾನು ಯಾವಾಗಲೂ ಚಿರಋಣಿ. ಇಲ್ಲಿಯವರೆಗೂ ನಿಮ್ಮನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗಿಲ್ಲ ಹಾಗೂ ನಿಮ್ಮ ಯಾವ ತರಗತಿ, ಅಧಿವೇಶನ, ಸಭೆ, ವಿಚಾರ ಸಂಕಿರಣ, ಸಮ್ಮೇಳನ, ವಿಚಾರಗೋಷ್ಠಿ ಅಥವಾ ಚರ್ಚೆಯಲ್ಲಿ ಪಾಲ್ಗೊಳ್ಳಲು ಆಗಿಲ್ಲ. ಆದರೂ ನಿಮ್ಮ ವ್ಯಕ್ತಿತ್ವ, ನಿಮ್ಮ ಕಾರ್ಯವೈಖರಿ ಹಾಗೂ ನಿಮ್ಮ ಕಾರ್ಯಚಟುವಟಿಕೆಗಳು ನನಗೆ ಸದಾ ಪ್ರೇರಣೆ ಹಾಗೂ ಸ್ಫೂರ್ತಿದಾಯಕ ಆಗಿವೆ ಎಂದು ನಾನು ಮನಃಪೂರ್ವಕವಾಗಿ ಹೇಳಲು ಇಚ್ಚಿಸುತ್ತೇನೆ. ನೀವು ಕೈಗೊಳ್ಳುವ ಕಾರ್ಯಕ್ಷೇತ್ರ ಸದಾ ವಿಸ್ತಾರವಾಗುತ್ತಾ ಸಾಗಲಿ ಹಾಗೂ ಆ ಪ್ರತಿಯೊಂದು ಕಾರ್ಯಕ್ಷೇತ್ರವೂ ಸಮಾಜಕಾರ್ಯ ವೃತ್ತಿಗೆ, ಈ ಸಮಾಜಕ್ಕೆ ಹಾಗೂ ನಿಮ್ಮ ಬೆಳವಣಿಗೆ ಮತ್ತು ವಿಕಾಸಕ್ಕೆ ಪೂರಕವಾಗಿ, ಮಾದರಿಯಾಗಿ, ಪ್ರೇರಣೆಯಾಗಿ ಹಾಗೂ ಸ್ಪೂರ್ತಿದಾಯಕವಾಗಿ ಯಶಸ್ವಿಯಾಗಲಿ ಎಂದು ಶುಭಹಾರೈಕೆಗಳು ಹಾಗೂ ಪ್ರಾರ್ಥನೆ. ರಮೇಶ ಆಡಿನ (MSW, M.Phil., Ph.D. Pursuing), ಅರಭಾವಿ. ತಾ|| ಗೋಕಾಕ, ಜಿ|| ಬೆಳಗಾವಿ In a world filled with aspirations for a better society, the expectation often falls on someone to act. That someone, we believe, should be one of us. When one among us steps forward to initiate positive change, it becomes our collective responsibility to stand beside them and ensure their success in delivering the best for society. Today, we proudly introduce our dear friend, Shri Ramesha M.H., a humanitarian, a seasoned social worker, a visionary thinker, an author, a publisher, a change catalyst, a youth empowerment advocate, an HR professional, and an entrepreneur. Shri Ramesha has made a resolute decision to enter the realm of politics by contesting in the BBMP Election - 2023 from Ullalu Ward 29.
Hakan Akbas I told my son, "You will marry the girl I choose.",
He said, "NO!" I told him, "She is Bill Gates' daughter." He said, "OK." I called Bill Gates and said, "I want your daughter to marry my son." Bill Gates said, "NO." I told Bill Gates, My son is the CEO of World Bank." Bill Gates said, "OK." I called the President of World Bank and asked him to make my son the CEO. He said, "NO." I told him, "My son is Bill Gates' son-in-law." He said, "OK." This is exactly how politics works... ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾಂಗಣದ ಮೆಟ್ಟಿಲುಗಳ ಮೇಲಿಂದ ಒಬ್ಬರು ಕಾಲು ಜಾರಿ ಬಿದ್ದರು. ಅದನ್ನು ಗಮನಿಸಿದಾಗ ಕ್ರೀಡಾಂಗಣದ ಮೆಟ್ಟಿಲುಗಳ ತುದಿಯಲ್ಲಿ ಯಾವುದೇ ರೀತಿಯಾದ ಆಧಾರಕ್ಕಾಗಿ ಗ್ರಿಲ್ ಅಥವಾ ತಡೆಗೋಡೆಯನ್ನು ನಿರ್ಮಿಸಿರುವುದು ಕಂಡು ಬರಲಿಲ್ಲ. ಮೆಟ್ಟಿಲು ಮತ್ತು ನೆಲಕ್ಕೆ ಸುಮಾರು 10-15 ಅಡಿ ಅಂತರವಿದೆ. ಇದು ಯಾವ ರೀತಿಯ ವಿನ್ಯಾಸ? ಏತಕೆ ಮೆಟ್ಟಿಲುಗಳಿಗೆ ತಡೆಗೋಡೆಯನ್ನು ನಿರ್ಮಿಸಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಆದರೆ ಇಲ್ಲಿ ದಿನನಿತ್ಯ ಓಡಾಡುವವರ ಸಂಖ್ಯೆ ಸಾಕಷ್ಟಿದೆ, ಅದರಲ್ಲಿ, ಮಕ್ಕಳು, ವಯಸ್ಕರು, ವಿದ್ಯಾರ್ಥಿಗಳು, ಎಲ್ಲರೂ ಇದ್ದಾರೆ. ಎಲ್ಲರಿಗೂ ಇದರಿಂದ ತೊಂದರೆಯಾಗುತ್ತಿದೆ. ಮೆಟ್ಟಿಲುಗಳಲ್ಲಿ ಕುಳಿತುಕೊಳ್ಳಲು ಭಯ ಪಡುವಂತಾಗಿದೆ. ತಮ್ಮಲ್ಲಿ ನನ್ನದೊಂದು ವಿನಂತಿಯೇನೆಂದರೆ, ಬೆಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯವರು ಇದನ್ನು ಗಮನಿಸಿ ಆದಷ್ಟು ಬೇಗ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲಿ ಎಂದು ಭಾವಿಸಿದ್ದೇನೆ.
ನಿರಾತಂಕ ಬಳಗದ ಸಮಾನ ಮನಸ್ಕ ಗೆಳೆಯರು ಲೋಕಾಭಿರಾಮವಾಗಿ ತಿಂಗಳಿಗೊಮ್ಮೆ ಅನೌಪಚಾರಿಕವಾಗಿ ಭೇಟಿ ಮಾಡುವುದು ನಿರಾತಂಕ ಆರಂಭವಾದಾಗಿನಿಂದಲೂ ನಡೆದುಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಕೆಲವೊಮ್ಮೆ ಪ್ರಮುಖ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ‘Nirathanka Club House’ ಎಂಬ ಹೆಸರು ನೀಡಿದ್ದೇವೆ. ನಿಮಗೂ ಆಸಕ್ತಿ ಇದ್ದರೆ, ಈ ಗುಂಪಿನ ಧ್ಯೇಯೋದ್ದೇಶಗಳನ್ನು ಓದಿ ಇಷ್ಟವಾದರೆ ಸದಸ್ಯರಾಗಬಹುದು.
ಈ ರೀತಿಯ ಗುಂಪಿನ ಒಡನಾಟದಲ್ಲಿದ್ದಾಗಲೇ ನಮಗೆ ಅನ್ಯರ ಬದುಕಿನ ಅನುಭವಗಳು ನಮಗೆ ದಕ್ಕುವುದು. ನಮ್ಮ ಬದುಕಿನ ಕೆಲವು ದಿಕ್ಕುಗಳು ಬದಲಾಗುವುದು. ನನಗೆ ಹಲವು ಸಂದರ್ಭಗಳಲ್ಲಿ ಹೊಸ ಆಲೋಚನೆಗಳು ಸಿಕ್ಕಿದ್ದು ಇಲ್ಲಿಂದಲೇ. ಉದಾ: ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ. ಈ ರೀತಿ ಸಮಾನ ಮನಸ್ಕ ಗೆಳೆಯರ ತಂಡದಲ್ಲಿ ಚರ್ಚೆಯಲ್ಲಿದ್ದಾಗ ಹುಟ್ಟಿದ ಒಂದು ಚಿಂತನೆ, ‘Leaders Talk’ ಎಂಬ ಪುಸ್ತಕವೂ ಅಷ್ಟೆ. ಹೀಗೆ ಉದಾಹರಿಸುತ್ತಾ ಹೋದರೆ ಹತ್ತು-ಹಲವು ಉದಾಹರಣೆಗಳನ್ನು ನೀಡಬಹುದು. ಕರ್ನಾಟಕದ ಬೇರೆ ಭಾಗಗಳಲ್ಲಿ ತಂಡಗಳನ್ನು ರಚಿಸಿಕೊಳ್ಳಬೇಕೆಂದು ಬಯಸುವವರೂ ಸಹ ತಮ್ಮದೇ ತಂಡಗಳನ್ನು ಇತರೆ ಭಾಗಗಳಲ್ಲಿ ಕಟ್ಟಿಕೊಳ್ಳಲು ಬೇಕಾದ ನೆರವು ನೀಡಲು ನಿರಾತಂಕ ಸಿದ್ಧವಿದೆ. ಮುಂದಿನ ದಿನಗಳಲ್ಲಿ ಹತ್ತು ಹಲವು ಹೊಸ ಚಿಂತನೆ ಆಲೋಚನೆಗಳು ಈ ಸಮಾನ ಮನಸ್ಕ ಗೆಳೆಯರ ತಂಡದಿಂದ ಹೊರಹೊಮ್ಮಲಿ ಎಂಬ ಸದಾಶಯವಷ್ಟೆ. ರಮೇಶ ಎಂ.ಎಚ್. ನಿರಾತಂಕ |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|