ನಿರಾತಂಕ ಬಳಗದ ಸಮಾನ ಮನಸ್ಕ ಗೆಳೆಯರು ಲೋಕಾಭಿರಾಮವಾಗಿ ತಿಂಗಳಿಗೊಮ್ಮೆ ಅನೌಪಚಾರಿಕವಾಗಿ ಭೇಟಿ ಮಾಡುವುದು ನಿರಾತಂಕ ಆರಂಭವಾದಾಗಿನಿಂದಲೂ ನಡೆದುಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಕೆಲವೊಮ್ಮೆ ಪ್ರಮುಖ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ‘Nirathanka Club House’ ಎಂಬ ಹೆಸರು ನೀಡಿದ್ದೇವೆ. ನಿಮಗೂ ಆಸಕ್ತಿ ಇದ್ದರೆ, ಈ ಗುಂಪಿನ ಧ್ಯೇಯೋದ್ದೇಶಗಳನ್ನು ಓದಿ ಇಷ್ಟವಾದರೆ ಸದಸ್ಯರಾಗಬಹುದು.
ಈ ರೀತಿಯ ಗುಂಪಿನ ಒಡನಾಟದಲ್ಲಿದ್ದಾಗಲೇ ನಮಗೆ ಅನ್ಯರ ಬದುಕಿನ ಅನುಭವಗಳು ನಮಗೆ ದಕ್ಕುವುದು. ನಮ್ಮ ಬದುಕಿನ ಕೆಲವು ದಿಕ್ಕುಗಳು ಬದಲಾಗುವುದು. ನನಗೆ ಹಲವು ಸಂದರ್ಭಗಳಲ್ಲಿ ಹೊಸ ಆಲೋಚನೆಗಳು ಸಿಕ್ಕಿದ್ದು ಇಲ್ಲಿಂದಲೇ. ಉದಾ: ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ. ಈ ರೀತಿ ಸಮಾನ ಮನಸ್ಕ ಗೆಳೆಯರ ತಂಡದಲ್ಲಿ ಚರ್ಚೆಯಲ್ಲಿದ್ದಾಗ ಹುಟ್ಟಿದ ಒಂದು ಚಿಂತನೆ, ‘Leaders Talk’ ಎಂಬ ಪುಸ್ತಕವೂ ಅಷ್ಟೆ. ಹೀಗೆ ಉದಾಹರಿಸುತ್ತಾ ಹೋದರೆ ಹತ್ತು-ಹಲವು ಉದಾಹರಣೆಗಳನ್ನು ನೀಡಬಹುದು. ಕರ್ನಾಟಕದ ಬೇರೆ ಭಾಗಗಳಲ್ಲಿ ತಂಡಗಳನ್ನು ರಚಿಸಿಕೊಳ್ಳಬೇಕೆಂದು ಬಯಸುವವರೂ ಸಹ ತಮ್ಮದೇ ತಂಡಗಳನ್ನು ಇತರೆ ಭಾಗಗಳಲ್ಲಿ ಕಟ್ಟಿಕೊಳ್ಳಲು ಬೇಕಾದ ನೆರವು ನೀಡಲು ನಿರಾತಂಕ ಸಿದ್ಧವಿದೆ. ಮುಂದಿನ ದಿನಗಳಲ್ಲಿ ಹತ್ತು ಹಲವು ಹೊಸ ಚಿಂತನೆ ಆಲೋಚನೆಗಳು ಈ ಸಮಾನ ಮನಸ್ಕ ಗೆಳೆಯರ ತಂಡದಿಂದ ಹೊರಹೊಮ್ಮಲಿ ಎಂಬ ಸದಾಶಯವಷ್ಟೆ. ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|