ಸಮಾಜಕಾರ್ಯಕರ್ತರು ರಾಜಕೀಯ ಕ್ಷೇತ್ರಕ್ಕೆ ಬರಬೇಕು. ಸಮಾಜದಲ್ಲಿ ನಾಯಕತ್ವದ ಕುರಿತು ಮತ್ತು ಅಭಿವೃದ್ದಿ ಹಾಗೂ ಸಮಾಜದ ಸಬಲಿಕರಣದ ಕುರಿತು ಅಧ್ಯಯನ, ಪಾಠ ಕಲಿಸುವುದರೊಟ್ಟಿಗೆ, ಸಮಾಜದ ಒಟ್ಟಿಗೆ, ಸಮಾಜಕಾರ್ಯ ಕ್ಷೇತ್ರದ ಅಭಿವೃದ್ಧಿ, ಸಬಲತೆ ಹಾಗೂ ವಿಸ್ತರಣೆಗೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಅವಶ್ಯಕತೆ ಇದೆ. ನಿಮ್ಮ ಈ ಒಳ್ಳೆಯ ಆಲೋಚನೆ ಮತ್ತು ನಿರ್ಧಾರ ಸಮಾಜದ ಸಂಘಟನೆಯೊಂದಿಗೆ ಸಫಲವಾಗಲಿ ಹಾಗೂ ಮಾದರಿಯಾಗಲಿ ಎಂದು ಶುಭಹಾರೈಸುತ್ತೇನೆ.
ನಿಮ್ಮ ಅನುಭವ ಹಾಗೂ ನೀವು ಅನುಷ್ಠಾನಗೊಳಿಸುತ್ತಿರುವ ಕಾರ್ಯಚಟುವಟಿಕೆಗಳಿಗೆ, ಒಬ್ಬ ಸಮಾಜ ಕಾರ್ಯಕರ್ತನಾಗಿ ನಾನು ಯಾವಾಗಲೂ ಚಿರಋಣಿ. ಇಲ್ಲಿಯವರೆಗೂ ನಿಮ್ಮನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗಿಲ್ಲ ಹಾಗೂ ನಿಮ್ಮ ಯಾವ ತರಗತಿ, ಅಧಿವೇಶನ, ಸಭೆ, ವಿಚಾರ ಸಂಕಿರಣ, ಸಮ್ಮೇಳನ, ವಿಚಾರಗೋಷ್ಠಿ ಅಥವಾ ಚರ್ಚೆಯಲ್ಲಿ ಪಾಲ್ಗೊಳ್ಳಲು ಆಗಿಲ್ಲ. ಆದರೂ ನಿಮ್ಮ ವ್ಯಕ್ತಿತ್ವ, ನಿಮ್ಮ ಕಾರ್ಯವೈಖರಿ ಹಾಗೂ ನಿಮ್ಮ ಕಾರ್ಯಚಟುವಟಿಕೆಗಳು ನನಗೆ ಸದಾ ಪ್ರೇರಣೆ ಹಾಗೂ ಸ್ಫೂರ್ತಿದಾಯಕ ಆಗಿವೆ ಎಂದು ನಾನು ಮನಃಪೂರ್ವಕವಾಗಿ ಹೇಳಲು ಇಚ್ಚಿಸುತ್ತೇನೆ. ನೀವು ಕೈಗೊಳ್ಳುವ ಕಾರ್ಯಕ್ಷೇತ್ರ ಸದಾ ವಿಸ್ತಾರವಾಗುತ್ತಾ ಸಾಗಲಿ ಹಾಗೂ ಆ ಪ್ರತಿಯೊಂದು ಕಾರ್ಯಕ್ಷೇತ್ರವೂ ಸಮಾಜಕಾರ್ಯ ವೃತ್ತಿಗೆ, ಈ ಸಮಾಜಕ್ಕೆ ಹಾಗೂ ನಿಮ್ಮ ಬೆಳವಣಿಗೆ ಮತ್ತು ವಿಕಾಸಕ್ಕೆ ಪೂರಕವಾಗಿ, ಮಾದರಿಯಾಗಿ, ಪ್ರೇರಣೆಯಾಗಿ ಹಾಗೂ ಸ್ಪೂರ್ತಿದಾಯಕವಾಗಿ ಯಶಸ್ವಿಯಾಗಲಿ ಎಂದು ಶುಭಹಾರೈಕೆಗಳು ಹಾಗೂ ಪ್ರಾರ್ಥನೆ. ರಮೇಶ ಆಡಿನ (MSW, M.Phil., Ph.D. Pursuing), ಅರಭಾವಿ. ತಾ|| ಗೋಕಾಕ, ಜಿ|| ಬೆಳಗಾವಿ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|