ಜಾನ್ ಸಿ ಮ್ಯಾಕ್ಸ್ ವೆಲ್ ಒಬ್ಬ ಅಮೇರಿಕನ್ ಲೇಖಕ, ಭಾಷಣಕಾರ ಮತ್ತು ಪಾದ್ರಿಯಾಗಿದ್ದು, ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಇವರು ಹೆಚ್ಚಿನ ಪುಸ್ತಕಗಳನ್ನು ನಾಯಕತ್ವದ ಮೇಲೆ ಕೇಂದ್ರೀಕರಿಸಿ ಬರೆದಿದ್ದಾರೆ. ಇವರು ಬರೆದ “How Successful People Think” ಪುಸ್ತಕವು ಉತ್ತಮ ಪ್ರತಿಕ್ರಿಯೆ ಪಡೆದು ಪ್ರಸಿದ್ಧಿಯನ್ನು ಹೊಂದಿದೆ. ಈ ಪುಸ್ತಕದಲ್ಲಿ ಅವರು ಈ ರೀತಿಯಾಗಿ ಬರೆದಿದ್ದಾರೆ - ಒಬ್ಬ ವ್ಯಕ್ತಿ ದೊಡ್ಡ ಚಿತ್ರ ಚಿಂತನೆ ಅಂದರೆ ಉನ್ನತ ಮಟ್ಟದ ಚಿಂತನೆಯನ್ನು ಹೊಂದಿದ್ದರೆ ಅವನು ಯಾವುದೇ ವೃತ್ತಿಯಲ್ಲಿದ್ದರೂ ಅದರಿಂದ ಲಾಭವನ್ನು ಪಡೆಯುತ್ತಾನೆ ಎಂದು ಹೇಳಿದ್ದಾರೆ.
ಮಹೋನ್ನತ ಚಿಂತನೆಯುಳ್ಳವರು ಬೇಗ ಅಭಿವೃದ್ಧಿಯನ್ನು ಹೊಂದುತ್ತಾರೆ. ಪ್ರತಿಯೊಂದು ಮಾಹಿತಿಯನ್ನು ಕಟ್ಟುನಿಟ್ಟಾದ ಪರಿಕಲ್ಪನಾ ಚೌಕಟ್ಟಿನೊಳಗೆ ಹೊಂದಿಸಲು ಇವರು ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಇವರು ವ್ಯಾಪಕವಾದ ಆಲೋಚನೆಗಳನ್ನು ಹೊಂದಿದ್ದು, ಜಟಿಲವಾದ ಸಮಸ್ಯೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ದೊಡ್ಡ ಚಿತ್ರಣವನ್ನು ನೋಡುವ ಜನರು ತಮ್ಮ ಪ್ರತೀ ಅನುಭವದಲ್ಲಿ ಹೊಸ ಪಾಠವನ್ನು ಕಲಿಯುತ್ತಾರೆ. ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಯಶಸ್ಸು ಪಡೆದು ತಮ್ಮ ಪ್ರವೃತ್ತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಾರೆ. ವಿಭಿನ್ನವಾದ ಅನುಭವಗಳು, ಒಳ್ಳೆಯದು ಮತ್ತು ಕೆಟ್ಟದ್ದನ್ನು ತಿಳಿದುಕೊಳ್ಳುವುದರಿಂದ ನಾವು ಉನ್ನತವಾಗಿ ಆಲೋಚಿಸಲು ಮತ್ತು ದೊಡ್ಡ ಚಿತ್ರಣವನ್ನು ಅರ್ಥ ಮಾಡಿಕೊಳ್ಳಬಹುದು. ಇದರಿಂದ ಹೆಚ್ಚು ಕಲಿಯುವ ಅನುಭವದೊಂದಿಗೆ ಯಶಸ್ಸನ್ನು ಪಡೆಯಬಹುದು ಎಂದು ಮ್ಯಾಕ್ಸ್ ವೆಲ್ ಅವರು ತಮ್ಮ ಪುಸ್ತಕ ಮುಖಾಂತರ ತಿಳಿಸಿದ್ದಾರೆ. ನಾವು ಮಾಡುವ ವೃತ್ತಿ ಯಾವುದೇ ಇರಲಿ ಅದರಲ್ಲಿ ಹೊಸದನ್ನು ಕಲಿಯುವುದು, ಹೊಸತನವನ್ನು ತರುವುದು ಮುಖ್ಯವಾಗಿರುತ್ತದೆ. ನಮ್ಮಲ್ಲಿ ಉತ್ತಮ ನಾಯಕತ್ವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಇದರಿಂದ ನಮ್ಮ ವೃತ್ತಿಯಷ್ಟೇ ಅಲ್ಲದೇ ಅದರೊಂದಿಗೆ ನಾವೂ ಕೂಡ ಅಭಿವೃದ್ಧಿಯನ್ನು ಹೊಂದುತ್ತೇವೆ. ರಮೇಶ ನಿರಾತಂಕ Follow the Ramesha Nirathanka Channel on WhatsApp: https://whatsapp.com/channel/0029Va4OLwtEVccDbgEAFY1Y
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|