ಕೆಲವರಿಗೆ ಮನವ ಬಿಚ್ಚಿಡುತ್ತೇವೆ
ಕೆಲವರಿಂದ ಮನವ ಮುಚ್ಚಿಡುತ್ತೇವೆ ಅಪ್ಪ ಮಗನ ಮುಂದೆ ಆಸ್ತಿಯ ಬಿಚ್ಚಿಡುತ್ತಾನೆ ತನ್ನ ಮನವ ಬಚ್ಚಿಡುತ್ತಾನೆ ಪ್ರೇಯಸಿಗೆ ದೇಹವನ್ನು ಬಿಚ್ಚಿಡುತ್ತಾನೆ ಅವನ ಮನವ ಮುಚ್ಚಿಡುತ್ತಾನೆ ಮನವ ಬಿಚ್ಚಿಟ್ಟರೆ ಸಿಹಿ, ಬಚ್ಚಿಟ್ಟರೆ ಕಹಿ ನನಗೆ ಮನವ ಬಿಚ್ಚಿಡುವ ಎಷ್ಟು ಜನರಿದ್ದಾರೆ? ಎಷ್ಟು ಜನ ನನ್ನ ಮುಂದೆ ಮನವ ಮುಚ್ಚಿಡುತ್ತಾರೆ? ಜೀವನ ಮನವ ಬಿಚ್ಚಿಡುವ, ಮನವ ಬಚ್ಚಿಡುವ ಆಟ ಬಚ್ಚಿಟ್ಟ ಕಹಿಯ ಬಿಚ್ಚಿಟ್ಟು ಸಿಹಿಯಾಗಿಸಿ ಆಡಿ ಕೊನೆಗೆ ಎಲ್ಲವನು ಬಿಟ್ಟು ಓಡುವ ರಹಸ್ಯವಾದ ಓಟ ರಮೇಶ ಎಂ.ಎಚ್. ನಿರಾತಂಕ
0 Comments
ಅವಳ ನೋವು ಮನವ ಕಾಡುವುದಿಲ್ಲ
ನಾನು ಕೊಡುವತನವ ತೋರುವುದಿಲ್ಲ ನನ್ನ ತಾಯಿಯಂತೆ ಅವಳು ಎನಿಸುವುದಿಲ್ಲ ಮಾನವೀಯತೆ ನನ್ನ ಕೆಣಕುವುದಿಲ್ಲ ಸತ್ತಂತೆ ಬದುಕುತಿರುವೆ ಅನಿಸುವುದಿಲ್ಲ ನನ್ನ ಸಂತಸ, ಜೀವನಕ್ಕೆ ಆಕೆಯ ನೋವು ಕಾಣುವುದಿಲ್ಲ ಕಣ್ಣಿದ್ದು ಕುರುಡರು ನಾವು ಅನಿಸುವುದಿಲ್ಲ ನಮ್ಮದೆ ವೇದಾಂತ, ನಮ್ಮದೆ ಸಿದ್ದಾಂತಗಳೆಲ್ಲ ರಮೇಶ ಎಂ.ಎಚ್. ನಿರಾತಂಕ ಗೆಳೆಯನ ಮುಂದೆ ಸೋಲು
ಗೆಳೆಯನ ಮನಸ್ಸನ್ನು ಗೆಲ್ಲು ಗೆಳೆಯನ ಮನಸ್ಸು ನೋಯಿಸಿ ಗೆದ್ದೆ ಎಂಬ ಗೆಲುವು ಸಾಧಿಸಿ ನಗುವ ನಗುವಿಗೆ ಅರ್ಥವಿಲ್ಲ ಕಂದ ಗೆಳೆಯನಿಗಾಗಿ ಸೋತೆ ಎಂಬ ಖುಷಿಯ ಮುಂದ ಗೆಲುವು, ಸೋಲು ಎರಡರಾಗು ಉಂಟು ಸುಖ ಮನಸ್ಸು ಮಾಗಿ, ವಯಸ್ಸು ಆದ ಮೇಲೆ ಮರೆಯಬೇಕು ದುಃಖ ಜಗದ ನಂಟು, ಕಳಚಿ ಬೀಳುವುದು ಕಣ್ಣ ಮುಂದೆ ಗೆಲುವು, ಸೋಲು ಎಲ್ಲಾ ಮರೆಯಾಗುವುವು ನಮ್ಮ ಮುಂದೆ ರಮೇಶ ಎಂ.ಎಚ್. ನಿರಾತಂಕ ಸ್ನೇಹಿತ ಬೆನ್ನಿಗೆ ಚೂರಿ ಹಾಕಲು ಬಂದ
ಗೊತ್ತಾದರೂ ನೋಡಿ ಸುಮ್ಮನಾದೆ ಚೂರಿ ಚುಚ್ಚಿ ಗಾಯವಾಯಿತು ಸಾಯಲಿಲ್ಲ ನಾನು ಚೂರಿ ಹಾಕಿದ್ದು ಗೆಳೆಯನಿಗೆ ಗೊತ್ತಾಗಲಿಲ್ಲ ಎಂದುಕೊಂಡ ಅವನು ಆಸ್ಪತ್ರೆಗೆ ಬಂದು ಬಂಧುವಿನಂತೆ ಮಾತನಾಡಿಸಿದ ಮಾತನಾಡಿಸಿದೆ ಚೂರಿ ಚುಚ್ಚಿದ ಎಂಬ ದ್ವೇಷವಿಲ್ಲದೆ ವರ್ಷಗಳು ಕಳೆದವು ಗಾಯ ಮಾಯಿತು ಚುಚ್ಚಿದ ಚೂರಿ ಕಾಣೆಯಾಯಿತು ಚುಚ್ಚಿಸಿಕೊಂಡ ಮನಸು ಮರೆಯಿತು ಚೂರಿ ಚುಚ್ಚಿದವನ ಮನಸ್ಸಿಗೆ ಅರಿವಾಯಿತು ಚುಚ್ಚಿದ ಚೂರಿಯ ಪಾಪ ಪ್ರಜ್ಞೆ ಈಗ ಅವನ ಎದೆಯ ಇರಿಯಿತು ಕ್ಷಮಿಸು ಎಂದನವನು ಕ್ಷಮಿಸಿಬಿಟ್ಟೆ ನಾನು ಪಾಪ ಪ್ರಜ್ಞೆಗೆ ಕ್ಷಮೆ ಕೇಳಿ ಚೂರಿ ಚುಚ್ಚಿಸಿಕೊಂಡರೆ ಕ್ಷಮಿಸಿಬಿಡಿ ಅದುಮಿಟ್ಟ ದ್ವೇಷ ವಿಷವಾಗಿ ಎದೆಯ ತಲುಪುವ ಮುನ್ನ ಪಾಪ ಪ್ರಜ್ಞೆ ಬೆಳೆದು ನರಳಿ ಮರಣ ಹೊಂದುವ ಮುನ್ನ ಪ್ರೀತಿಯ ತವರು ಎದೆಯಾಗಲಿ ದ್ವೇಷ, ಪಾಪ ಪ್ರಜ್ಞೆಯು ಮಾಯವಾಗಲಿ ರಮೇಶ ಎಂ.ಎಚ್. ನಿರಾತಂಕ ಆಕಾಶದೆತ್ತರಕ್ಕೆ ಹಾರಿ
ಪ್ರಶಸ್ತಿ ಪದಕ ಪಡೆದು ನಿನ್ನ ಮನವ ನೀ ನೋಡದಿದ್ದರೆ ಎಚ್ಚರಿಕೆ ನೀ ಕನಸ ಕಾಣುತಿರುವೆ ರಮೇಶ ಎಂ.ಎಚ್. ನಿರಾತಂಕ ಮುಖದಲ್ಲಿ ನಗುವ ತೋರುತ
ಮನದಲ್ಲಿ ಕತ್ತಿ ಮಸೆಯಬಲ್ಲವರು ಜಾಸ್ತಿಯಾಗುತ್ತಿದ್ದಾರೆ ಮನದಲ್ಲಿ ಪ್ರೀತಿ ಬೆಸೆಯುವರು ಮಾಯವಾಗುತ್ತಿದ್ದಾರೆ ಕತ್ತಿಮಸೆದು ಕಳ್ಳನಗೆ ಬೀರಿ ಮೋಸ ಮಾಡಲು ಶಕ್ತಿ ಬೇಕು ಸಾಧಿಸುವುದೆಂತು ದ್ವೇಷ ಬಿತ್ತಿ ಎದೆಯಲ್ಲಿ ಗುಂಪಿನಲ್ಲಿ ಪ್ರೀತಿಯ ಮಾತು ಮನದಲ್ಲಿ ದ್ವೇಷದ ಪಿಸುಮಾತು ಮನದ ಒಳಕೋಣೆಯಲ್ಲಿ ಕಸ ತುಂಬುವಿರಿ ಎಷ್ಟು ದಿನ ಒಮ್ಮೆಯಾದರೂ ಇಣುಕಿ ನೋಡಿ ನಿಮ್ಮದೆ ಮನ ದ್ವೇಷವೆಂಬ ಕಸವ ಗುಡಿಸಿ ಹಾಕಿ ಗುಂಡಿ ತೋಡಿ ಪ್ರೀತಿಯೆಂಬ ಗಿಡ ನೆಟ್ಟು ಕಾಪಾಡಿ ಪ್ರೀತಿ ಹಣ್ಣು ಕೊಡುವುದು ದ್ವೇಷ ಮಣ್ಣಾಗುವುದು ಜಗವ ಸುತ್ತಿ, ಪುಸ್ತಕ ಓದಿ ರಮೇಶ ಎಂ.ಎಚ್. ನಿರಾತಂಕ ಸತ್ಯಕ್ಕೆ ಸಾವಿರ ಮುಖಗಳು
ನನ್ನ ಪಾಲಿನ ಸತ್ಯ ಇನ್ನೊಬ್ಬನ ಪಾಲಿನ ಸುಳ್ಳು ಹಸಿದವ ರೊಟ್ಟಿ ಕದ್ದದ್ದು ಸತ್ಯ ಹಸಿದವನ ಹಸಿವು ನೋಡಲು ಸಿಗದಿರುವ ಸತ್ಯ ತಾಯಿ ರೊಟ್ಟಿ ಕದ್ದ ಹಸಿದ ಕಂದನನು ಕಳ್ಳ ಅನ್ನದಿರುವುದು ಸತ್ಯ ಜಗವು ರೊಟ್ಟಿ ಕದ್ದವನು ಸಿಕ್ಕಿ ಬಿದ್ದರೆ ಸಾಯುವಂತೆ ಬಡಿಯುವುದು ಸತ್ಯ ಲಂಚದ ಹಣವ ಲೂಟಿ ಮಾಡಿ ಸತ್ಯಸಂಧರಂತೆ ನಟಿಸುವುದು ಸತ್ಯ ಕಷ್ಟಪಟ್ಟು ದುಡಿದು ಒಪ್ಪೊತ್ತಿನ ಊಟ ಸಿಗದಿರುವುದು ಸತ್ಯ ಕಣ್ಣಿಗೆ ಕಾಣದಿರುವ ಹಲವಾರು ಸತ್ಯ ಸ್ನೇಹಿತ ಪರೀಕ್ಷೆಯಲ್ಲಿ ಫೇಲಾದದ್ದು ಜಗತ್ತಿಗೆ ಬೇಡದ ಸತ್ಯ ಬಡತನ, ಹೊಟ್ಟೆಗೆ ಇಟ್ಟಿಲ್ಲದೆ ಓದಲು ಕಷ್ಟವಾದದ್ದು ಸತ್ಯ ರಮೇಶ ಎಂ.ಎಚ್. ನಿರಾತಂಕ ನನಗೆ ನನ್ನದೆ ಮನಸ್ಸಿದೆ
ನನಗೆ ನನ್ನದೆ ಕನಸ್ಸಿದೆ ಮನಸ್ಸು ಕನಸ್ಸಿನ ನಡುವೆ ಅಡೆ ತಡೆ ಬಂದರೆ ನಾ ಕುರುಡನಾಗುವೆ ಸದಾ ಕೇಳುವ ಕಿವಿ, ತೆರೆದ ಮನದಿಂದಿರುವೆ ಕಸ, ಕೊಳೆ ಸದ್ದು ಗದ್ದಲಕ್ಕೆ ಕಿವುಡಾಗುವೆ ನಾ ನಡೆದದ್ದೆ ದಾರಿ ಕಲ್ಲು ಮುಳ್ಳಿದ್ದರೂ ಸರಿ ಅಡ್ಡ ದಾರಿ ಹಿಡಿಯದೆ ತಲುಪುವೆನು ಗುರಿ ರಮೇಶ ಎಂ.ಎಚ್. ನಿರಾತಂಕ ಕಾಣದ ಕೈಗಿರಲಿ ನಮ್ಮ ನಮನ
ಕಂಡಕಂಡ ಕಡೆ ಏಕೆ ಬೇಕು ಗುಡಿ ಗೋಪುರಗಳೆ ಪ್ರದರ್ಶನ ಗುಡಿಸಲುಗಳೂ ಇಲ್ಲದಿರುವಾಗ ಗುಡಿಗಳು ಏಕೆ ಬೇಕೀಗ ಹೊಟ್ಟೆಗಳಿಗೆ ಹಿಟ್ಟಿಲ್ಲದಿರುವಾಗ ದೇವರುಗಳಿಗೇಕೆ ನೈವೇದ್ಯ ತಪ್ಪು ಮಾಡದಿದ್ದಲ್ಲಿ ಪಶ್ಚಾತ್ತಾಪ ಏಕೆ? ಪಾಪ ಮಾಡದಿದ್ದರೆ ಗುಡಿ ಸುತ್ತ ತಿರಗಲೇಕೆ? ರಮೇಶ ಎಂ.ಎಚ್. ನಿರಾತಂಕ ನನ್ನ ಗುರು
ಜೀವನದ ಉದ್ದ-ಅಗಲ ಅಳೆದು ತೋರಿದವ ಜ್ಞಾನದ ಭಂಡಾರದ ದಾರಿ ತೋರಿದವ ಜೀವನ ಮೌಲ್ಯಗಳ ಮನಕ್ಕೆ ಮೆತ್ತಿದವ ನನ್ನ ವ್ಯಕ್ತಿತ್ವವ ರೂಪಿಸಿದವ ಈ ನನ್ನ ಗುರು ಕಲಿಸಿದವ ಹಲವು ತರಹದ ವಿದ್ಯೆ ಸಮಯಪಾಲನೆ, ಶಿಸ್ತು, ಇಂಗ್ಲೀಷ್, ಕವಿತೆ ಮಾತು, ಶಬ್ದ, ಪ್ರೀತಿ, ಪ್ರೇಮ, ಹೀಗೆ ಅನೇಕ ಪ್ರೀತಿ ಕಣದ ಅವರ ಸಾನಿಧ್ಯ ಬಲು ಮೋಹಕ ಕ್ಷಣ-ಕ್ಷಣಕ್ಕೊಮ್ಮೆ ಸಿಗರೇಟ್ ಸೇದುವ ಚಟ ಆದರೆ ಭೋದನೆಯಲ್ಲಿ ತಲ್ಲೀನನಾದರೆ ನಿಲ್ಲುತ್ತಿರಲಿಲ್ಲ ಗಂಟೆಗಳ್ ಉರುಳುತ್ತಿದ್ದವು ನಿಮಿಷಗಳ ರೂಪದಲ್ಲಿ ಕೋಪ ಬರುವುದು ಬಲು ಅಪರೂಪ ಅವರಲ್ಲಿ ಬಂದರಂತೂ ಮಾಯವಾಗುತ್ತಿತ್ತು ಕ್ಷಣದಲ್ಲಿ ಕೋಪದಲ್ಲಾಡುತ್ತಿದ್ದ ಮಾತು ಬಲು ಸೊಗಸು ಮರೆಯಲಾಗದು ಅವನ್ನು ನನ್ನ ಮನಸ್ಸು ಜಾತಿ ಮತಗಳ ಎಣಿಸುತ್ತಿರಲಿಲ್ಲ ಭೇದ ಸಮಾಜದ ಬಗ್ಗೆ ಕಾಳಜಿ ಅವರಲ್ಲಿ ಸದಾ ಬತ್ತದ ಓದಿನ ಆಸಕ್ತಿ ಮರೆಯಲಾಗದು ಅವರ ಈ ಪ್ರವೃತ್ತಿ ಮನಸ್ಸು ಮಾಡಿದರೆ ಮಾಡಬಹುದಿತ್ತು ಬೇನಾಮಿ ಆಸ್ತಿ ಆದರೆ, ಅವರಲ್ಲೀಗ ಬಿಡಿಗಾಸಿದ್ದರೂ ಜಾಸ್ತಿ ಪುಸ್ತಕಗಳು ಅವರ ಆಸ್ತಿ ಮನದಲ್ಲಿ ಪೂಜಿಸುವ ಶಿಷ್ಯರು ಅವರಿಗೆ ಜಾಸ್ತಿ 15 ದಿನದ ಪಾಠ ಕೇಳಿ ನಾ ಅಂದುಕೊಂಡೆ ಮನದಲ್ಲಿ ನನ್ನ ಗುರು ಸತ್ತರೆ ಕಲಿಯುವುದು ಯಾರಲ್ಲಿ? ಎಂತಹಾ ದುರಾಲೋಚನೆ ಮನದಲ್ಲಿ ಕೇಳಿದೆ ಈ ರೀತಿ ಯೋಚಿಸಿದ ಶಿಷ್ಯರ ಮನದಲ್ಲಿ ಏಳಲು ಇಂತಹ ಆಲೋಚನೆ ನಿಲುಕದು ನಮ್ಮ ಗುರುವಿನ ಬೋಧನೆ ಅದಕ್ಕೆ ರಾಜ ಪ್ರತ್ಯಕ್ಷ ದೇವತಃನೆನ್ನಲು ರಾಜ ವ್ಯವಸ್ಥೆ ನಮ್ಮಲಿಲ್ಲ ರಾಜಕಾರಣಿಗಳೆನ್ನಲು ಅದನ್ನು ಹೇಳಿಸಿಕೊಂಡಿಲ್ಲ 24 ವರ್ಷಗಳು ನನಗೀಗ ಈ ಯೋಚನೆ ಬಂದಿರಲಿಲ್ಲ ಇಲ್ಲಿಯವರೆಗೆ ದೇವರನ್ನು ನಂಬುವುದಿಲ್ಲ ಗುರು ದೇವರು ಅಂದಿರಲಿಲ್ಲ ಈ ತರದ ಗುರು ಸಿಕ್ಕಿರಲಿಲ್ಲ ಇದುವಲ್ಲವೆ ಗುರುತನ ! ಇದುವಲ್ಲವೆ ದೊಡ್ಡತನ ರಮೇಶ ಎಂ.ಎಚ್. ನಿರಾತಂಕ ಮೊದಲು ನಾನು
ಆಮೇಲೆ ನೀನು ಮನಸ್ಸಲ್ಲಿ ಮೊದಲು ನೀನು ಆಮೇಲೆ ಮಾತಲ್ಲಿ ನಾನು ಮನಸ್ಸಲ್ಲಿ ಮಸೆವ ಕತ್ತಿ ಹೊರಗಡೆ ಹಲ್ಲುಗಿಂಜುವ ಪ್ರವೃತ್ತಿ ರಮೇಶ ಎಂ.ಎಚ್. ನಿರಾತಂಕ ಅವನು ಕಪ್ಪು
ಇವಳು ಬಿಳುಪು ಸೇರಿದರಾಗುವರು ಕಪ್ಪು ಬಿಳುಪು ಅವನಿಗೆ ಅಳಕು ಇವಳಿಗೆ ಬಿಳುಕು ಅವನನ್ನು ಮುಟ್ಟಿ ಕೈ ತೊಳೆಯಬೇಕು ಇವಳನ್ನು ಕೈ ತೊಳೆದು ಮುಟ್ಟಬೇಕು. ಹಣದ ಬಲ ಇವನ ಕಡೆ ಸೌಂದರ್ಯದ ರಾಶಿ ಇವಳೆಡೆ ಹಂಚಿಕೊಳ್ಳಲು ಇಬ್ಬರೂ ರೆಡಿ ಇದ ನೋಡಿ ಮನೆಯವರು ಸಿಡಿ ಮಿಡಿ ಕೊನೆಗೆ ಪ್ರೇಮಿಗಳ ಪಟ್ಟು ನೋಡಿ ಮನೆಯವರೆಂದರು ಹಾಳಾಗಿ ಹೋಗಲಿ ಬಿಟ್ಟು ಬಿಡಿ. ರಮೇಶ ಎಂ.ಎಚ್. ನಿರಾತಂಕ ಆಸ್ತಿಕನೂ ಅಲ್ಲ !
ನಾಸ್ತಿಕನೂ ಅಲ್ಲ ! ಆಸ್ತಿಕನೆನ್ನಲು ಆಸ್ತಿ ಇಲ್ಲ ಆಸ್ತಿಕರೆಂದವರು ಆಸ್ತಿಕರಲ್ಲ ನಾಸ್ತಿಕರೆಂದವರು ನಾಸ್ತಿಕರಲ್ಲ ಆಸ್ತಿಕನಲ್ಲಿ ಪುರಾವೆ ಇಲ್ಲ ಪುರಾಣವಿದೆ ನಾಸ್ತಿಕನೆನಲು ಈ ನನ್ನ ಜ್ಞಾನ ಸಾಲದೆ ? ಇಲ್ಲದ್ದನ್ನು ಇದೆ ಎಂದು ಹೇಳುವುದು ಹೇಗೆ ಇರಬಹುದು ಎಂದರೆ ಕಾಣರೆ ಕಂಡದ್ದು ನಂಬಿ ಇರುವತನಕ ರಮೇಶ ಎಂ.ಎಚ್. ನಿರಾತಂಕ ಬೀದಿಯಲ್ಲಿ ನೋಡಿದ್ದು ಒಂದೇ ಸಾವು,
ಆ ಮನದಲ್ಲಿ ತುಂಬಿ ಮಡುಗಟ್ಟಿತು ನೋವು ಪ್ರಶ್ನೆಗಳು ಉದ್ಭವಿಸಿದವು ಹಲವು ಹಲವು ಜ್ಞಾನೋದಯದೆಡೆಗೆ ನಡೆಸಿದವು ಒಂದೇ ದಿನ ಸಾಕಾಯಿತು ಜಗದ ಸಂಕಷ್ಟವನು ಅಳೆದು ನೋಡಲು ಒಂದೇ ಸಾವು ಸಾಕಾಯಿತು ಸಿದ್ದಾರ್ಥ ಬುದ್ಧನಾಗಲು ದಿನವಿಡೀ ನೋಡುತಿದ್ದೆವು ನಾವು ಸಾಲು ಸಾಲುಗಳ ಸಾವು ನಮ್ಮಲ್ಲಿ ಮಡುಗಟ್ಟಬಹುದೆ ನೋವು? ಪ್ರಶ್ನೆಗಳೇಳುತಿಹವೆ ಹಲವು ಹಲವು ಜ್ಞಾನೋದಯ ಬುದ್ಧನಿಗೆ ಜ್ಞಾನ ಜಗದಗಲಕೆ ಸತ್ಯ ಅಹಿಂಸೆಗಳ ಕೊಡುಗೆ ಜಗಕೆ ಹುಡುಕಿದರೆ ಸಿಗಬಹುದು ನಮ್ಮೊಳಗೆ ಎಲ್ಲಿದ್ದೇವೆ ನಾವು ನಾಗರೀಕತೆಯ ನೆಪದಲಿ? ತಂತ್ರಜ್ಞಾನದ ಬೆಳಕಿನ ಕತ್ತಲಲ್ಲಿ ಮಾರಾಟ ಮಾಡುವ ವ್ಯವಹಾರಿಕತೆಯಲಿ ಮಾನವೀಯತೆಯನ್ನು ಮುಚ್ಚಿಡುತ ಬಾಂಬುಗಳಲ್ಲಿ ಎಲ್ಲಿದ್ದೇವೆ ನಾವು? ಎಲ್ಲಿದ್ದೇವೆ ಎಲ್ಲಿದ್ದೇವೆ ? ರಮೇಶ ಎಂ.ಎಚ್. ನಿರಾತಂಕ ಅಲ್ಲಿ ಚಪ್ಪಾಳೆ ಸತ್ಯಕ್ಕೆ
ಇಲ್ಲಿ ಚಪ್ಪಾಳೆ ಸುಳ್ಳಿಗೆ ಅಲ್ಲಿ ಹೊಗಳುವೆವು ನ್ಯಾಯಕ್ಕೆ ಇಲ್ಲಿ ಮಾಡುತಿಹೆವು ಅನ್ಯಾಯ ಬ್ರಹ್ಮಚಾರಿಯನು ಹೊಗಳುತ ಸಂಸಾರಿಯಾಗುತಲಿಹೆವು ವರದಕ್ಷಿಣೆಗೆ ಪ್ರತಿಭಟನೆ ವಧುವಿನೆಡೆ ಶೋಷಣೆ ರಮೇಶ ಎಂ.ಎಚ್. ನಿರಾತಂಕ ನಗುತ ಹಲ್ಲು ಕಿರಿಯುವೆ, ಮನದಲ್ಲಿ ನಗುವಿರುವುದಿಲ್ಲ.
ದಯೆ ತೋರುವೆ, ಮನದಲ್ಲಿ ಕರುಣೆ ಇರುವುದಿಲ್ಲ. ಸಂತಸದಲ್ಲಿ ಸಂಭ್ರಮ ಆಚರಿಸುವೆ, ಮನದಲ್ಲಿ ಸಂತಸದ ಭಾವನೆ ಚಿಮ್ಮುವುದಿಲ್ಲ. ಅಳುವಂತೆ ನಟಿಸುವೆ, ಮರುಕ್ಷಣ ಸಂತಸದ ನಗು ಚೆಲ್ಲುವೆ. ಎಲ್ಲವೂ ಅನಿವಾರ್ಯ ಎನ್ನುವೆ, ತಲೆ ಹೋಗುವಂತಹದೇನಿರುವುದಿಲ್ಲ. ಭ್ರಮೆ, ನಶೆಯ ಬದುಕಿನಲ್ಲಿ ತೇಲುತ ಸಮಯ ಕಳೆಯುತಲಿರುವ ಹುಚ್ಚು ಬದುಕಿನ ಬೆನ್ನು ಹತ್ತಿ ಸವಾರಿ ಹೊರಟಿರುವೆ. ರಮೇಶ ಎಂ.ಎಚ್. ನಿರಾತಂಕ #ನಿರಾತಂಕಕವನ ನಾಲ್ಕು ಜನ ಸ್ನೇಹಿತರಿರಬೇಕು
ಕೇಳಿದಾಗ ಕೇಳಿದಷ್ಟು ಹಣ ಕೊಡುವಂತಿರಬೇಕು ಸಿನಿಮಾಗೆ ಕರೆದರೆ ಬರುವಂತಿರಬೇಕು ತಪ್ಪು ಮಾಡಿದರೆ ಮುಖಕ್ಕೆ ಹೊಡೆದು ತಿದ್ದುವಂತಿರಬೇಕು ನಾಲಗೆಯ ಮಾತಿಗೂ, ಹೃದಯಕ್ಕೆ ಸಂಬಂಧ ಹೊಂದಿರಬೇಕು ಸ್ನೇಹಿತನಿಗೆ ಲಾಟರಿ ಹೊಡೆದರೆ ಹೊಟ್ಟೆಹುರಿದು ಸಾಯದಂತಿರಬೇಕು ಸ್ನೇಹಿತನ ಸಂಬಳ ಜಾಸ್ತಿಯಾದಾಗ ಕುಣಿದು ಕುಪ್ಪಳಿಸುವಂತಿರಬೇಕು ಯಾವುದಾದರೂ ಕೆಲಸಕ್ಕೆ ಕೈಹಾಕಿದರೆ ಸಹಕರಿಸುವಂತಿರಬೇಕು ಎಣ್ಣೆ ಹೊಡಿಯಲು ಕೂತರೆ ಬಲವಂತಪಡಿಸಿ ಕುಡಿಸದಂತಿರಬೇಕು ಎಲ್ಲದಕ್ಕೂ ಹೂ ಎನುತ ತಿಪ್ಪೆ ಸಾರಿಸದಂಗಿರಬೇಕು ನೋವನ್ನು ಹಂಚಿಕೊಳ್ಳುವಂತಿರಬೇಕು ತಪ್ಪನ್ನು ಕ್ಷಮಿಸುವಂತಿರಬೇಕು ಹಾಕಿದ ಗೆರೆಯನ್ನು ದಾಟದಂತಿರಬೇಕು ಮನದ ಮಾತುಗಳಿಗೆ ಬೆಲೆ ಕೊಡುವಂತಿರಬೇಕು ಕಣ್ಣ ಭಾಷೆ ಅರ್ಥ ಮಾಡಿಕೊಳ್ಳುವಂತಿರಬೇಕು ಸ್ನೇಹಿತರು ಕಚ್ಚಾಡಿದರೆ ಕೂಡಿಸಿ ಹೊಲಿಸುವಂತಿರಬೆಕು ನಾಚಿಕೆಯ ಬಿಟ್ಟು ಎಲ್ಲವನ್ನು ಮಾತನಾಡುವಂತಿರಬೇಕು ಈ ರೀತಿಯ ಪದ್ಯವನ್ನು ಬರೆದಾಗ ಮುಂದುವರಿಸುವಂತಿರಬೇಕು ಸಾಧ್ಯವಾದರೆ ಮುಂದುವರೆಸಿ ನಿಮ್ಮ ಸಲಹೆ ನೀಡಿ. ರಮೇಶ ಎಂ.ಎಚ್. ನಿರಾತಂಕ #ನಿರಾತಂಕಕವನ |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|