ನನ್ನ ಗುರು
ಜೀವನದ ಉದ್ದ-ಅಗಲ ಅಳೆದು ತೋರಿದವ ಜ್ಞಾನದ ಭಂಡಾರದ ದಾರಿ ತೋರಿದವ ಜೀವನ ಮೌಲ್ಯಗಳ ಮನಕ್ಕೆ ಮೆತ್ತಿದವ ನನ್ನ ವ್ಯಕ್ತಿತ್ವವ ರೂಪಿಸಿದವ ಈ ನನ್ನ ಗುರು ಕಲಿಸಿದವ ಹಲವು ತರಹದ ವಿದ್ಯೆ ಸಮಯಪಾಲನೆ, ಶಿಸ್ತು, ಇಂಗ್ಲೀಷ್, ಕವಿತೆ ಮಾತು, ಶಬ್ದ, ಪ್ರೀತಿ, ಪ್ರೇಮ, ಹೀಗೆ ಅನೇಕ ಪ್ರೀತಿ ಕಣದ ಅವರ ಸಾನಿಧ್ಯ ಬಲು ಮೋಹಕ ಕ್ಷಣ-ಕ್ಷಣಕ್ಕೊಮ್ಮೆ ಸಿಗರೇಟ್ ಸೇದುವ ಚಟ ಆದರೆ ಭೋದನೆಯಲ್ಲಿ ತಲ್ಲೀನನಾದರೆ ನಿಲ್ಲುತ್ತಿರಲಿಲ್ಲ ಗಂಟೆಗಳ್ ಉರುಳುತ್ತಿದ್ದವು ನಿಮಿಷಗಳ ರೂಪದಲ್ಲಿ ಕೋಪ ಬರುವುದು ಬಲು ಅಪರೂಪ ಅವರಲ್ಲಿ ಬಂದರಂತೂ ಮಾಯವಾಗುತ್ತಿತ್ತು ಕ್ಷಣದಲ್ಲಿ ಕೋಪದಲ್ಲಾಡುತ್ತಿದ್ದ ಮಾತು ಬಲು ಸೊಗಸು ಮರೆಯಲಾಗದು ಅವನ್ನು ನನ್ನ ಮನಸ್ಸು ಜಾತಿ ಮತಗಳ ಎಣಿಸುತ್ತಿರಲಿಲ್ಲ ಭೇದ ಸಮಾಜದ ಬಗ್ಗೆ ಕಾಳಜಿ ಅವರಲ್ಲಿ ಸದಾ ಬತ್ತದ ಓದಿನ ಆಸಕ್ತಿ ಮರೆಯಲಾಗದು ಅವರ ಈ ಪ್ರವೃತ್ತಿ ಮನಸ್ಸು ಮಾಡಿದರೆ ಮಾಡಬಹುದಿತ್ತು ಬೇನಾಮಿ ಆಸ್ತಿ ಆದರೆ, ಅವರಲ್ಲೀಗ ಬಿಡಿಗಾಸಿದ್ದರೂ ಜಾಸ್ತಿ ಪುಸ್ತಕಗಳು ಅವರ ಆಸ್ತಿ ಮನದಲ್ಲಿ ಪೂಜಿಸುವ ಶಿಷ್ಯರು ಅವರಿಗೆ ಜಾಸ್ತಿ 15 ದಿನದ ಪಾಠ ಕೇಳಿ ನಾ ಅಂದುಕೊಂಡೆ ಮನದಲ್ಲಿ ನನ್ನ ಗುರು ಸತ್ತರೆ ಕಲಿಯುವುದು ಯಾರಲ್ಲಿ? ಎಂತಹಾ ದುರಾಲೋಚನೆ ಮನದಲ್ಲಿ ಕೇಳಿದೆ ಈ ರೀತಿ ಯೋಚಿಸಿದ ಶಿಷ್ಯರ ಮನದಲ್ಲಿ ಏಳಲು ಇಂತಹ ಆಲೋಚನೆ ನಿಲುಕದು ನಮ್ಮ ಗುರುವಿನ ಬೋಧನೆ ಅದಕ್ಕೆ ರಾಜ ಪ್ರತ್ಯಕ್ಷ ದೇವತಃನೆನ್ನಲು ರಾಜ ವ್ಯವಸ್ಥೆ ನಮ್ಮಲಿಲ್ಲ ರಾಜಕಾರಣಿಗಳೆನ್ನಲು ಅದನ್ನು ಹೇಳಿಸಿಕೊಂಡಿಲ್ಲ 24 ವರ್ಷಗಳು ನನಗೀಗ ಈ ಯೋಚನೆ ಬಂದಿರಲಿಲ್ಲ ಇಲ್ಲಿಯವರೆಗೆ ದೇವರನ್ನು ನಂಬುವುದಿಲ್ಲ ಗುರು ದೇವರು ಅಂದಿರಲಿಲ್ಲ ಈ ತರದ ಗುರು ಸಿಕ್ಕಿರಲಿಲ್ಲ ಇದುವಲ್ಲವೆ ಗುರುತನ ! ಇದುವಲ್ಲವೆ ದೊಡ್ಡತನ ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|