ಸ್ನೇಹಿತ ಬೆನ್ನಿಗೆ ಚೂರಿ ಹಾಕಲು ಬಂದ
ಗೊತ್ತಾದರೂ ನೋಡಿ ಸುಮ್ಮನಾದೆ ಚೂರಿ ಚುಚ್ಚಿ ಗಾಯವಾಯಿತು ಸಾಯಲಿಲ್ಲ ನಾನು ಚೂರಿ ಹಾಕಿದ್ದು ಗೆಳೆಯನಿಗೆ ಗೊತ್ತಾಗಲಿಲ್ಲ ಎಂದುಕೊಂಡ ಅವನು ಆಸ್ಪತ್ರೆಗೆ ಬಂದು ಬಂಧುವಿನಂತೆ ಮಾತನಾಡಿಸಿದ ಮಾತನಾಡಿಸಿದೆ ಚೂರಿ ಚುಚ್ಚಿದ ಎಂಬ ದ್ವೇಷವಿಲ್ಲದೆ ವರ್ಷಗಳು ಕಳೆದವು ಗಾಯ ಮಾಯಿತು ಚುಚ್ಚಿದ ಚೂರಿ ಕಾಣೆಯಾಯಿತು ಚುಚ್ಚಿಸಿಕೊಂಡ ಮನಸು ಮರೆಯಿತು ಚೂರಿ ಚುಚ್ಚಿದವನ ಮನಸ್ಸಿಗೆ ಅರಿವಾಯಿತು ಚುಚ್ಚಿದ ಚೂರಿಯ ಪಾಪ ಪ್ರಜ್ಞೆ ಈಗ ಅವನ ಎದೆಯ ಇರಿಯಿತು ಕ್ಷಮಿಸು ಎಂದನವನು ಕ್ಷಮಿಸಿಬಿಟ್ಟೆ ನಾನು ಪಾಪ ಪ್ರಜ್ಞೆಗೆ ಕ್ಷಮೆ ಕೇಳಿ ಚೂರಿ ಚುಚ್ಚಿಸಿಕೊಂಡರೆ ಕ್ಷಮಿಸಿಬಿಡಿ ಅದುಮಿಟ್ಟ ದ್ವೇಷ ವಿಷವಾಗಿ ಎದೆಯ ತಲುಪುವ ಮುನ್ನ ಪಾಪ ಪ್ರಜ್ಞೆ ಬೆಳೆದು ನರಳಿ ಮರಣ ಹೊಂದುವ ಮುನ್ನ ಪ್ರೀತಿಯ ತವರು ಎದೆಯಾಗಲಿ ದ್ವೇಷ, ಪಾಪ ಪ್ರಜ್ಞೆಯು ಮಾಯವಾಗಲಿ ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|