ಶ್ರೀ ವೆಂಕಟ್ ಪುಲ್ಲಾರವರು ನಾನು ಕಂಡ ವ್ಯಕ್ತಿಗಳಲ್ಲಿ ಅತ್ಯಂತ ಪ್ರಾಮಾಣಿಕರು, ಮೇಧಾವಿ. TISS Mumbai ನಿಂದ ಪದವಿ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿ ಹಲವು ಅನುಭವಗಳನ್ನು ತಮ್ಮದಾಗಿಸಿಕೊಂಡವರು. ಹಲವು ಸಮಾಜಕಾರ್ಯ ಕ್ಷೇತ್ರದಲ್ಲಿನ ಅವರ ವಿದ್ಯಾರ್ಥಿಗಳಾಗಿದ್ದವರು ಇಂದು ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳಲ್ಲಿ ಇಂದು ಕೆಲಸ ನಿರ್ವಹಿಸುತ್ತಿದ್ದಾರೆ. ಹಲವು ಕಿರಿಯ ವೃತಿಪರರಿಗೆ ಮಾರ್ಗದರ್ಶನ ನೀಡಿ ಇಂದು ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಸಹಕಾರ ನೀಡಿದ್ದಾರೆ. ಇದೆಲ್ಲವನ್ನು ಹೊರತುಪಡಿಸಿ ವೆಂಕಟ್ ರವರ ಬಳಿ ಒಂದು ಸಮಸ್ಯೆ ಹೇಳಿದರೆ ಅದನ್ನು ಅವರು ಬಗೆಹರಿಸುವ ವಿಧಾನ ಕಂಡು ನಾವು ಬೆರಗಾಗಬೇಕಾಗುತ್ತದೆ. ಹಲವು ಸಂದರ್ಭಗಳಲ್ಲಿ ನನಗೆ ಈ ಅನುಭವ ಆಗಿದೆ. ವೆಂಕಟ್ ಪುಲ್ಲಾರವರು ನನಗೆ ಆತ್ಮೀಯರು. ಅವರು ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಬರುತ್ತಿದ್ದೇನೆ, ನನ್ನದೊಂದು ಕಾರ್ಯಕ್ರಮ ಆಯೋಜಿಸಲು ಸಾಧ್ಯವೇ ಎಂದರು. ನಾನು ಸಾಧ್ಯ, ಆದರೆ ಆ ಕಾರ್ಯಕ್ರಮಕ್ಕೆ ಸ್ಪಂದನೆ ಹೇಗೆ ಸಿಗುತ್ತದೋ ಗೊತ್ತಿಲ್ಲ ಸರ್ ಎಂದೆ. ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸುವುದು ಕಷ್ಠಕರ ಎಂಬ ಅರಿವು ನನಗಿತ್ತು. ಕಾರ್ಯಕ್ರಮದ ದಿನಾಂಕ, ಸ್ಥಳ, ಬ್ರೋಚರ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೊರಡಿಸಿದೆವು. ಕೆಲವು ದಿನಗಳಾದರೂ ನೀರಸ ಪ್ರತಿಕ್ರಿಯೆ. ಶ್ರೀ ವೆಂಕಟ್ ಪುಲ್ಲರವರು ಕಾರ್ಯಕ್ರಮಕ್ಕೆ ಪ್ರತಿಕ್ರಿಯೆ ಹೇಗಿದೆ ಎಂದರು. ಸರ್ ನಾವು ಅಂದುಕೊಂಡಷ್ಟು ಚೆನ್ನಾಗಿ ಈ ಕಾರ್ಯಕ್ರಮಕ್ಕೆ ನೋಂದಣಿಯಾಗುತ್ತಿಲ್ಲ ಎಂದೆ. ಸರಿ ಹಾಗಿದ್ದರೆ ಕಾರ್ಯಕ್ರಮ ರದ್ದುಗೊಳಿಸಿ ಈ ಕಾರ್ಯಕ್ರಮ ಆಯೋಜಿಸಿ ನಿಮಗೆ ಆರ್ಥಿಕ ನಷ್ಟ ಆಗುವುದು ಬೇಡ ಎಂದರು ಹಾಗೂ ಈ ಕಾರ್ಯಕ್ರಮ ಆಯೋಜಿಸಲು ನೀವು ವ್ಯಯಿಸಿದ ಶ್ರಮಕ್ಕೆ ಹಾಗೂ ನಾನು ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ನನಗೆ ಬೇಸರವಾಗುತ್ತಿದೆ ಎಂದರು. ವೆಂಕಟ್ ಪುಲ್ಲರ ವ್ಯಕ್ತಿತ್ವವನ್ನು ಹಲವು ಸಂದರ್ಭಗಳಲ್ಲಿ ನಾನು ಹತ್ತಿರವಿದ್ದು ನೋಡಿದ್ದೇನೆ. ಈ ಮಾತುಗಳು ನನಗೆ ಆಶ್ಚರ್ಯವನ್ನು ಉಂಟು ಮಾಡಲಿಲ್ಲ. ಆದರೆ ವ್ಯಕ್ತಿ ಬೆಳೆಯ ಬೆಳೆಯುತ್ತ ಸೂಕ್ಷ್ಮತೆಗಳನ್ನು ಗ್ರಹಿಸುವುದನ್ನು ಮರೆತುಬಿಡುತ್ತಾನೆ. ಆದರೆ ವೆಂಕಟ್ ಪುಲ್ಲರ ಮಾತುಗಳಲ್ಲಿ ಪ್ರಾಮಾಣಿಕತೆ ಹಾಗೂ ನನ್ನ ಬಗ್ಗೆ ಇರುವ ಕಳಕಳಿ ಕಂಡು ನನಗೆ ಸಂತಸವಾಯಿತು.
ಈ ಕಾರ್ಯಕ್ರಮ ಆಯೋಜಿಸಿ ಹಾಗೂ ಇದರಿಂದ ಬರುವ ಹಣ ಎಲ್ಲವೂ ಒಂದು ಕಡೆಯಾದರೆ, ವೆಂಕಟ್ ಪುಲ್ಲರವರಿಗೆ ಈ ಕಾರ್ಯಕ್ರಮ ರದ್ದಾಯಿತು ಎಂಬ ಬೇಸರ ತರಿಸಬಾರದು ಎಂಬ ಭಾವ ನನ್ನಲ್ಲಿ ಮೂಡಿತು. ಈ ಘಟನೆಯನ್ನು ನನ್ನ ಕೆಲವು ಸ್ನೇಹಿತರಲ್ಲಿ ಹೇಳಿಕೊಂಡೆ. ಅವರು ಈ ರೀತಿಯ ನಿಷ್ಕಲ್ಮಷ ವ್ಯಕ್ತಿಗಳು ಅಪರೂಪ. ಹಾಗಾಗಿ ಈ ಕಾರ್ಯಕ್ರಮ ಆಯೋಜಿಸು. ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಹಾಗೂ Participants ಕಳುಹಿಸುತ್ತೇವೆ ಎಂದರು. ನನಗೂ ಈ ಕಾರ್ಯಕ್ರಮ ರದ್ದು ಮಾಡುವುದು ಬೇಡ ಎಂದೆನಿಸಿತು. ಹೀಗೆ ವ್ಯಕ್ತಿಗಳ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ಕೆಲವೊಮ್ಮೆ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡು ಮುನ್ನಡೆಯಬೇಕಾಗಿ ಬಿಡುತ್ತದೆ ಅಲ್ಲವೆ. ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|