ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾ ದೇಶಕ್ಕೆ ಮೊದಲನೆಯ ಸಲ ರಾಷ್ಟ್ರಪತಿ ಆದ ನಂತರ ತನ್ನ ಸುರಕ್ಷೆಯ ಸೈನಿಕರ ಜೊತೆಯಲ್ಲಿ ಒಂದು ಹೊಟೇಲಿಗೆ ಊಟ ಮಾಡುವುದಕ್ಕೆ ಹೋಗಿದ್ದರು. ಎಲ್ಲರೂ ತಮಗೆ ಇಷ್ಟವಾದ ಊಟವನ್ನು ಆರ್ಡರ್ ಮಾಡಿದರು. ಅದೇ ಸಮಯದಲ್ಲಿ ಮಂಡೇಲಾ ಅವರ ಕುರ್ಚಿಯ ಎದುರುಗಡೆ ಒಬ್ಬ ವ್ಯಕ್ತಿ ಊಟಕ್ಕೆ ಅಪ್ಪಣೆ ಕೊಟ್ಟು ಎದುರು ನೋಡುತ್ತಿದ್ದನು. ನೆಲ್ಸನ್ ಮಂಡೇಲಾರವರು ತನ್ನ ಸುರಕ್ಷೆಯ ಸೈನಿಕರಿಗೆ ಈ ರೀತಿ ಹೇಳಿದರು: “ಆ ವ್ಯಕ್ತಿಯನ್ನು ಕರೆಯಿಸಿ, ಇಲ್ಲಿ ನನ್ನ ಟೇಬಲ್ ಬಳಿಯಲ್ಲಿಯೇ ಕುಳಿತುಕೊಳ್ಳಲಿ.” ಆ ವ್ಯಕ್ತಿ ಬಂದು ನೆಲ್ಸನ್ ಮಂಡೇಲಾರವರ ಎದುರು ಕುಳಿತುಕೊಂಡನು. ಎಲ್ಲರೂ ಊಟ ಮಾಡಲು ಶುರು ಮಾಡಿದರು. ಆ ವ್ಯಕ್ತಿಯೂ ಕೂಡ ಊಟ ಮಾಡಲು ಶುರು ಮಾಡಿದನು. ಆದರೆ ಆ ವ್ಯಕ್ತಿಯ ಕೈಗಳು ನಡುಗುತ್ತಿದ್ದವು. ಬೇಗನೆ ಊಟ ಮಾಡಿದ ಆ ವ್ಯಕ್ತಿ ತಲೆ ತಗ್ಗಿಸಿಕೊಂಡು ಹೊಟೇಲ್‍ನಿಂದ ಹೊರಟು ಹೋದ. ಆ ವ್ಯಕ್ತಿ ಹೊರಗಡೆ ಹೋದ ನಂತರ ಸುರಕ್ಷೆಯ ಅಧಿಕಾರಿ ಮಂಡೇಲಾರನ್ನು ಕೇಳಿದನು: “ಸರ್ ಆತನಿಗೆ ಜ್ವರ ಬಂದಿರಬಹುದು, ಹಾಗಾಗಿ ಊಟ ಮಾಡುವಾಗ ಅವನ ಕೈಗಳು ನಡುಗುತ್ತಿದ್ದವು.” ನೆಲ್ಸನ್ ಮಂಡೇಲಾ ನಸುನಗುತ್ತಾ ಹೇಳಿದರು: “ಆ ವ್ಯಕ್ತಿ ಆರೋಗ್ಯವಾಗಿಯೇ ಇದ್ದಾನೆ, ರೋಗಗ್ರಸ್ತನಲ್ಲ. ನಾನು ಯಾವ ಜೈಲಿನಲ್ಲಿ ಬಂಧಿಯಾಗಿದ್ದೆನೋ ಆ ಜೈಲಿನ ಜೈಲರ್ ಆಗಿದ್ದವನು ಆ ವ್ಯಕ್ತಿ. ನನಗೆ ಬಹಳ ಹಿಂಸೆ ಕೊಟ್ಟಿದ್ದನು. ನಾನು ಏಟು ತಿಂದೂ ಸುಸ್ತಾಗಿ ನೀರು ಕೇಳಿದಾಗ ಆ ವ್ಯಕ್ತಿ ನೀರು ಬೇಕಾ…? ಕುಡಿ ಎಂದು, ನನ್ನ ಮುಖದ ಮೇಲೆ ಮೂತ್ರ ಮಾಡುತ್ತಿದ್ದನು. ಈಗ ನಾನು ರಾಷ್ಟ್ರಪತಿ ಆಗಿದ್ದೇನೆ…!! ಆ ವ್ಯಕ್ತಿಗೆ ಮನವರಿಕೆ ಆಗಿದೆ, ತಾನು ಮಾಡಿದ ಕೆಲಸಕ್ಕೆ ಈಗ ತನಗೆ ಭಯಂಕರ ಶಿಕ್ಷೆ ಆಗಬಹುದು ಎಂದು. ಆದರೆ ಅದು ನನ್ನ ಸಂಸ್ಕಾರವಲ್ಲ. ನನಗೆ ಅನಿಸುತ್ತದೆ ದ್ವೇಷದ ಭಾವನೆಯಿಂದ ಕೆಲಸ ಮಾಡಿದರೆ ಅದು ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ. ಧೈರ್ಯ ಮತ್ತು ಸಹಿಷ್ಣುತೆ ಇದ್ದರೆ ಮಾನಸಿಕ ಪರಿಪಕ್ವತೆ ಪೂರ್ಣವಾಗಿ ಸಾಧಿಸುತ್ತದೆ.’ ನೋಡಿ! ಎಂತಹ ವ್ಯಕ್ತಿತ್ವ ನೆಲ್ಸನ್ ಮಂಡೇಲಾರದ್ದು. ಮಹಾನ್ ವ್ಯಕ್ತಿಗಳ ಈ ತರಹದ ಕ್ಷಮಾಗುಣ, ಉದಾರತೆಗಳೇ ಅವರನ್ನು ಆ ಮೇರುತನಕ್ಕೆ ಕೊಂಡೊಯ್ಯುವವು ಅಲ್ಲವೆ? Courtesy : Whatsapp
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|