ಅಳುವವರ ಮುಂದೆ ಅತ್ತು ನಟಿಸಿದೆ
ನಗುವವರ ಮುಂದೆ ನಕ್ಕು ನಟಿಸಿದೆ ನಗಬೇಕೆಂದಾಗ ನಗುವುದು ಮರೆತುಹೋಗಿದೆ ಅಳುಬಂದಾಗ ಅಳು ಬಾರದೆ ನನ್ನನೆ ನಾ ಮರೆತೆ ಜಗದ ಜಂಗಡದಲ್ಲಿ ನನ್ನತನವ ತೊರೆದೆ ಜನರ ಸಂಗಡದಲ್ಲಿ ಮನವ ಮರೆತೆ, ಮಾನವೀಯತೆ ಮರೆತೆ ಹಣವ ಅರಸುತ ಒಂಟಿ ನಿಂತೆ ನನ್ನವರು ದೂರ ಸರಿದುದ ದೊಡ್ಡಸ್ತಿಕೆ ಅಂದುಕೊಂಡೆ ಕೊನೆಗಳಿಗೆ ನನ್ನ ಜೀವನದ ಕದವ ತಟ್ಟಲು ಹೆದರಿಕೊಂಡೆ ಹತ್ತಿರವಿದ್ದು ದೂರ ನಿಂತ ನನ್ನತನವ ಶಪಿಸಿಕೊಂಡೆ ನಾ ಮಾಡಿದ ತಪ್ಪ ನೀ ಮಾಡಬೇಡ ಎಂದು ಹಂಚಿಕೊಂಡೆ ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|