ನಾನೇನು ತಪ್ಪು ಮಾಡದ ಪರಮಾತ್ಮನಲ್ಲ
ಒಮ್ಮೊಮ್ಮೆ ತಪ್ಪುಗಳನ್ನು ಎತ್ತಿ ತೋರಿದಾಗ ತಲೆ ಬಾಗುವುದಿಲ್ಲ ನನ್ನ ತಪ್ಪು ತಿದ್ದು ನನ್ನಗೆಳೆಯ, ನಾ ನಿನ್ನ ತಪ್ಪು ತಿಳಿಯುವುದಿಲ್ಲ ತಪ್ಪು ಹೇಳಲು ಕೇಳಲು ಒಂದು ರೀತಿ ಇದೆ, ಸಮಯವಿದೆ ಸಂಯಮದಿ ಕಾದು ಹೇಳದ ವಿಷಯ ಜಗದಿ ಮತ್ತೆ ಏನಿದೆ ನನ್ನ ಆರು ನಿನಗೆ ಒಂಬತ್ತರಂತೆ ಕಾಣಬಹುದು ನನ್ನ ದೃ ಷ್ಟಿಯಿಂದ ಒಮ್ಮೆ ನೋಡು ಸತ್ಯ ಕಾಣ ಸಿಗುವುದು ನಾ ತಪ್ಪು ಮಾಡಿದರೆ ಕ್ಷಮಿಸಿ ಬಿಡು ಮನವ ಬಿಚ್ಚಿ ಮಾತನಾಡು ನಿನ್ನ ಅನಿಸಿಕೆಯನ್ನು ತಿಳಿಸಿಬಿಡು ಮಿಗಿಲಲ್ಲ ತಪ್ಪು ಸ್ನೇಹಕಿಂತ ಮನದಿ ಕೊರಗಿ ಕೊರಗಿ ಅನುಭವಿಸದಿರು ಏಕಾಂತ ತಪ್ಪು ಮಾಡದವರು ಯಾರಿಲ್ಲ ಜಗದಲಿ ಎಲ್ಲರೂ ಸ್ವಾರ್ಥಿಗಳೆ ಮನದಲಿ ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|