ವೇದಿಕೆಯ ಮೇಲೆ ಆಸೀನರಾಗಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿರವರಾದ ಪ್ರೊ. ನರಸಿಂಹಮೂರ್ತಿ. ಎನ್, ಮಾರ್ಗದರ್ಶಕರಾದ ಪ್ರೊ. ಕೆ ಭೈರಪ್ಪ, ಇಂದಿನ ಕಾರ್ಯಕ್ರಮದ ಕೇಂದ್ರಬಿಂದುವಾದ ಡಾ|| ಸಿ.ಆರ್.ಗೋಪಾಲ್, ನನ್ನ ಆತ್ಮೀಯ ಸ್ನೇಹಿತರಾದ ಶ್ರೀ. ಸಿದ್ಧರಾಮಣ್ಣ.ಎಸ್, ಆತ್ಮೀಯರು, ಹಿರಿಯರಾದ ಪ್ರೊ. ರಾಜೇಂದ್ರಕುಮಾರ್, ನಮ್ಮ ಪ್ರೀತಿಯ ಪ್ರೊ. ರಮೇಶ್ ಬಿ., ಅನುಪಸ್ಥಿತಿಯಲ್ಲಿ ಪ್ರೊ. ಆರ್.ಶಿವಪ್ಪ, ಹಿರಿಯ ಸಾಹಿತಿಗಳಾದ ಡಾ. ಎಸ್.ಹೆಚ್. ಸತ್ಯನಾರಾಯಣ, ನಿರಾತಂಕದ ಟ್ರಸ್ಟಿಯವರಾದ ಶ್ರೀಮತಿ. ಕುಸುಮ, ನನ್ನ ಆತ್ಮೀಯ ಗೆಳೆಯರಾದ ಡಾ. ಬಿ.ಕೆ. ಕೆಂಪೇಗೌಡ ರವರೇ ಗಂಭೀರವಾಗಿ ಪುಸ್ತಕಗಳನ್ನು ಓದುವವರು, ಬರೆಯುವವರು ವಿರಳವಾಗಿರುವ ಸಂದರ್ಭದಲ್ಲಿ ಪುಸ್ತಕ ಪ್ರಕಾಶನ ಅತ್ಯಂತ ಲಾಭ ತಂದು ಕೊಡುವ ಉದ್ದಿಮೆಯಲ್ಲ. ಆದರೂ ಸಮಾಜಕಾರ್ಯ ಕ್ಷೇತ್ರಕ್ಕೆ ಸಾಹಿತ್ಯ ಸೃಷ್ಟಿ ಮಾಡಬೇಕು ಎಂಬ ಸದುದ್ದೇಶದಿಂದ ನಿರುತ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಇದುವರೆಗೂ 100 ಕ್ಕೂ ಹೆಚ್ಚು ಕೃತಿಗಳನ್ನು ನಿರುತ ಪ್ರಕಾಶನದಿಂದ ಹೊರತರಲಾಗಿದೆ. ಈ ಪ್ರಯತ್ನದಲ್ಲಿ ಸಮಾಜಕಾರ್ಯ ಕ್ಷೇತ್ರಕ್ಕೆ ವಿಶೇಷವಾದ ಆದ್ಯತೆ ನೀಡಿ ಹತ್ತು-ಹಲವು ಸಮಾಜಕಾರ್ಯ ಕ್ಷೇತ್ರದ ಕೃತಿಗಳನ್ನು ಹೊರತಂದಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿ. ಶ್ರೀ ಸಿ.ಆರ್. ಗೋಪಾಲ್ ರವರು ಈ ಕಾರ್ಯಕ್ರಮದ ಕೇಂದ್ರಬಿಂದು ಎಂದರೆ ತಪ್ಪಾಗಲಾರದು. ಇವರ 2 ಕೃತಿಗಳನ್ನು ನಮ್ಮ ಸಂಸ್ಥೆಯಿಂದ ಇಂದು ಹೊರತರುತ್ತಿದ್ದೇವೆ. ಈಗಾಗಲೇ ಅವರ “ಸನ್ಮಾರ್ಗ”, “ಸಮುದಾಯ ಸಂಘಟನೆ” ಎಂಬ 2 ಕೃತಿಗಳನ್ನು ಪ್ರಕಟಿಸಿದ್ದೇವೆ. ಈ ಕೃತಿಗಳು ಓದುಗರಿಂದ ಅಪಾರ ಜನಮನ್ನಣೆ ಪಡೆದಿದೆ. ಶ್ರೀಯುತ ಗೋಪಾಲ್ ರವರು ಅತ್ಯಂತ ಸರಳ ಹಾಗೂ ಸ್ನೇಹಜೀವಿಗಳು. ನಿರಾತಂಕ ಬಳಗದಲ್ಲಿ ನಿಸ್ವಾರ್ಥವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರೊ. ಎಚ್.ಎಂ. ಮರುಳಸಿದ್ಧಯ್ಯರವರು ಕಾಲವಾದ ನಂತರ ಮಾರ್ಗದರ್ಶನ ನೀಡುತ್ತಿರುವವರಲ್ಲಿ ಪ್ರಮುಖರು.
ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಉಚಿತವಾಗಿ ಪ್ರಕಾಶನ ಮಾಡಲು ಹಾಗೂ ಲೇಖಕರಿಗೆ ಗೌರವಧನ ನೀಡಲು ನಿರುತ ಪಬ್ಲಿಕೇಷನ್ಸ್ ವತಿಯಿಂದ ಯೋಜನೆ ಸಿದ್ಧವಾಗಿದೆ. ಈಗಾಗಲೇ ಹಲವಾರು ಲೇಖಕರು ನಮ್ಮ ಸಂಸ್ಥೆಯ ಸಂಪರ್ಕದಲ್ಲಿದ್ದಾರೆ. ಈ ಪ್ರಯತ್ನದಲ್ಲಿ ಶ್ರೀ ಶೇಖರ್ ಗಣಗಲೂರು ರವರ “ಗೆಲುವು”, ಶ್ರೀ ಗಂಗಾಧರ ರೆಡ್ಡಿ ಎನ್. “ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ”, ಪವಿತ್ರ ಮತ್ತು ಡಾ. ಲೋಕೇಶ್ ಎಂ.ಯು. ರವರ “ಮನೋವೈದ್ಯಕೀಯ ಸಮಾಜಕಾರ್ಯ”, ಶ್ರೀ ಜಿ.ಎಸ್. ಲಕ್ಷ್ಮಿಪ್ರಸಾದ್ ರವರ “ಬದುಕಿನಾನಂದ ಕಲೆ”, ಶ್ರೀಮತಿ ಬೀನಾ ಕೃಷ್ಣಮೂರ್ತಿ ಹಾಗೂ ಶ್ರೀಮತಿ ಮೀನಾ ಜೈನ್ ರವರ “BE A JOB COACH” ಪುಸ್ತಕಗಳು ಈಗಾಗಲೇ ಮುದ್ರಣಕ್ಕೆ ಸಜ್ಜಾಗಿವೆ. ಸಮಾಜಕಾರ್ಯ ಕ್ಷೇತ್ರದಲ್ಲಿ ಸಂಘಟಿತ ಪ್ರಯತ್ನಗಳು ಆಗದಿರುವುದು ಹಾಗೂ ಎಲ್ಲರೂ ಒಂದೆಡೆ ಸೇರಿ ಅಸೋಸಿಯೇಷನ್‌ಗಳನ್ನು ಬಲಪಡಿಸದಿರುವುದು ಇಂದಿನ ದಿನದ ದುರಂತವೆಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಸಮಾಜಕಾರ್ಯ ಕ್ಷೇತ್ರದ ಹಿರಿಯರು ಪ್ರಯತ್ನ ಮಾಡಬೇಕು ಹಾಗೂ ಇದು ನಮ್ಮೆಲ್ಲರ ನೈತಿಕ ಜವಾಬ್ದಾರಿ ಎಂದು ಹೇಳಲು ಬಯಸುತ್ತೇನೆ. ಸಮಾಜಕಾರ್ಯದಲ್ಲಿ ತರಬೇತಿ ಪಡೆದು ಕೇವಲ ತಮ್ಮ ವೃತ್ತಿಯ ಉನ್ನತಿಗಾಗಿ ಪುಸ್ತಕಗಳನ್ನು ರಚಿಸದೆ ನೈಜ ಕಾರ್ಯಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಿರುವ ಕುರಿತು ಉದಾಹರಣೆ ಸಮೇತ ಲೇಖನ ಹಾಗೂ ಪುಸ್ತಕಗಳನ್ನು ಹೊರತರಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಸಾಗಬೇಕಾಗಿದೆ. ಸಮಾಜಕಾರ್ಯ ಕ್ಷೇತ್ರಕ್ಕೆಂದೇ ವಿಶಿಷ್ಟವಾದ ಗೂಗಲ್ ಗ್ರೂಪ್ ಅನ್ನು ರಚಿಸಿದ್ದೇವೆ. ಈ ಗ್ರೂಪ್‌ನಲ್ಲಿ 7000 ಕ್ಕೂ ಅಧಿಕ ಸಮಾಜಕಾರ್ಯ ಕ್ಷೇತ್ರದವರು ಸದಸ್ಯರಾಗಿದ್ದಾರೆ. ಇನ್ನೂ ಹಲವು ಆನ್‌ಲೈನ್ ಗ್ರೂಪ್‌ಗಳಲ್ಲಿ 20000 ಕ್ಕೂ ಹೆಚ್ಚು ಸಮಾಜಕಾರ್ಯ ಕ್ಷೇತ್ರದವರನ್ನು ಒಂದೆಡೆಗೆ ತಂದಿರುವುದು ಈ ವೇದಿಕೆಯ ಹೆಮ್ಮೆಯಾಗಿದೆ. ಇತ್ತೀಚೆಗಷ್ಟೆ 4ನೇ ವರ್ಷದ ಕನ್ನಡ ಸಮ್ಮೇಳನವನ್ನು ಆಯೋಜಿಸಿ ಅತ್ಯಂತ ಯಶಸ್ವಿಯಾಗಿಸಿರುವುದು ಈ ನಮ್ಮ ನಿರಾತಂಕ ಸಂಸ್ಥೆಯ ಹೆಮ್ಮೆಯಾಗಿದೆ. ಈ ಕಾರ್ಯಕ್ರಮವನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ಯೂನಿವರ್ಸಿಟೀಸ್ ಸೋಷಿಯಲ್ ವರ್ಕ್ ಅಲ್ಯೂಮ್ನಿ ಯ ಸಹಯೋಗದೊಂದಿಗೆ ಹಮ್ಮಿಕೊಂಡಿರುವುದು ಅತ್ಯಂತ ಸಂತಸದ ಸಂಗತಿ. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ರಮೇಶ ಎಂ.ಎಚ್. ನಿರಾತಂಕ
2 Comments
11/15/2022 07:50:40 am
Responsibility she heavy fast better. Ground skill simple several debate star friend. Wrong four sure why.
Reply
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|