ಗೆಲ್ಲಲು ಹೊರಟವರು ನಾವು
ಯಾರನ್ನು ಗೆಲ್ಲಬೇಕು ನಾವು ನೀವು ಸ್ನೇಹಿತರ ಮನಸ್ಸನ್ನು ಸಮಾಜದಲ್ಲಿರುವ ಜನರನ್ನು ಜಗತ್ತಿಗೆ ಹೊತ್ತು ತಂದ ಜನ್ಮದಾತರನ್ನು ಜೀವನ ಹಂಚಿಕೊಂಡ ಜೀವನ ಸಂಗಾತಿಯನ್ನು ಜನ್ಮ ನೀಡಿದ ಮಕ್ಕಳನ್ನು ಹೊನ್ನು, ಹೆಣ್ಣು, ಮಣ್ಣನ್ನು ಯಾವುದು ಮೊದಲು ಯಾವುದು ಆನಂತರ ಎಲ್ಲವನ್ನು ಗೆಲ್ಲಬೇಕು ಎಂಬರು ಹಲವರು ಕೆಲವು ಗೆದ್ದರೆ ಸಾಕು ಎಂಬುತ ಸಾಗುವರು ಕೆಲವರು ಗೆಲ್ಲಲು ಮತ್ತಷ್ಟಿವೆ ಎಂಬ ದಾವಂತದಲ್ಲಿ ಹೆಜ್ಜೆ ಹಾಕುವರು ಕೆಲವರು ಕಣ್ಣ ಮುಂದಿನ ಕೆಲಸವನ್ನು ಕಂಡು ಕಾಣದಂತೆ ಕುಂತಿಹರು ಹಲವರು ಅಹಂಕಾರವನ್ನು ಗೆಲ್ಲಲು ಗೊತ್ತಿಲ್ಲ ಪ್ರೀತಿಯಿಂದ ಬದುಕಲು ಕಲಿಯಲಿಲ್ಲ ಸ್ನೇಹದ ಅರ್ಥ ಹುಡುಕಲಿಲ್ಲ ಸಮಾಜದ ನೋವು ತಿಳಿಯಲಿಲ್ಲ ಗೆಲ್ಲಲು ನೀನು ಯಾರು? ಯಾವ ಊರು? ಹೇಗೆ ಬಂದೆ, ಎಲ್ಲಿಗೆ ಹೊರಟಿರುವೆ ? ಪ್ರಶ್ನೆಗಳು ಸಾವಿರಾರು ಕೆಲವರು ಒಗಟಿನ ಪ್ರಶ್ನೆಗಳ ಹುಡುಕಲು ಹೊರಡುವರು ಹಲವರು ಆಟವಾಡಿಕೊಂಡು ಸುಮ್ಮನೆ ಕಾಲಕಳೆಯುವರು ಉತ್ತರ ಸಿಕ್ಕವರು ಮೌನದಲ್ಲಿ ಕುಂತು ಧ್ಯಾನಿಸುವರು ಉತ್ತರ ಸಿಗದವರು ಜಗದ ನಾಟಕ ನೋಡುತ ಆಡುತ ನಿದ್ರಿಸುವರು ಅವರವರ ದಾರಿ ಅವರವರೆ ಕಂಡುಕೊಂಡ ಜಾಣರು ನಾವು ಕಂಡುಕೊಂಡದ್ದೇ ದಾರಿ ಸತ್ಯವೆಂದುಕೊಂಡು ಸಾಗುತಿರುವೆವು ರಮೇಶ ಎಂ.ಎಚ್. #ನಿರಾತಂಕಕವನ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|