ಒಂಟಿಯಾಗಿ ಇರುವುದು ಕಲಿಯಲಿಲ್ಲ
ಒಬ್ಬನೆ ಕುಳಿತರೆ ಮನಸ್ಸು ನಲಿಯುವುದಿಲ್ಲ ಅಲ್ಲಿ-ಇಲ್ಲಿ ಅಡ್ಡಾಡಿದರೆ ದಿನ ಮುಗಿಯಿತು ಮನಸ್ಸಿಗೆ ಬಂದಂತೆ ಕುಣಿದಾಡಿದರೆ ವರುಷ ಉರುಳಿತು ಬದುಕು ಸಾಗುತ್ತಿದೆ ಅಂದುಕೊಂಡು ಸಾಗುತ್ತಿದ್ದೇವೆ ನಿಲ್ದಾಣ ಬಂದಾಗ ಏನು ಮಾಡಲಿಲ್ಲ ಎಂದು ಕೊರಗುತ್ತೇವೆ ಒಮ್ಮೆ ಯೋಚಿಸಿ ಏನು ಮಾಡುತ್ತಿದ್ದೇವೆ ಇದುವರೆಗೂ ಏನು ಮಾಡಿದ್ದೇವೆ ಬಾಲ್ಯದ ಬದುಕು ಸಂತಸ ತಂದಿತ್ತು ಶಾಲೆಯ ದಿನಗಳು ಬದುಕು ಕಲಿಸಲು ಹೊರಟಿತ್ತು ಕಾಲೇಜಿನ ದಿನಗಳು ಕನಸ ಕಂಡಿತ್ತು ಕೆಲಸದ ದಿನಗಳು ಪೈಪೋಟಿ ಕಲಿಸಿತ್ತು ಓಡಲು ಹೊರಟೆವು ಯಾವುದನ್ನು ಹಿಂದಿಕ್ಕಲೋ ಗೊತ್ತಿಲ್ಲ ಅಪ್ಪ, ಅಮ್ಮ, ಮಕ್ಕಳಿಗೆ, ಸಂಬಂಧಿಕರಿಗೆ ಸಮಯವಿಲ್ಲ ಸ್ನೇಹ, ಪ್ರೀತಿ, ಮಮತೆ ಎಲ್ಲವೂ ವ್ಯಾಪಾರ ವ್ಯವಹಾರಗಳಾಗಿ ಸಂತಸ ಹುಡುಕುತ್ತಾ ವಿದೇಶಿ ಪ್ರಯಾಣಿಗರಾಗಿ ಜಗದ ನಿಯಮ ಮರೆತು ಮೆರೆದು ಸಾಧಿಸಿದ್ದೇವೆಂಬ ಭ್ರಮೆಯಲ್ಲಿ ಮಿಂದು ಜಗದ ಪಯಣ ಮುಗಿಸುತ್ತಿರುವೆವು ಅಪ್ಪಿ ಇನ್ನಾದರೂ ಪ್ರೀತಿ ಕೊಡಿ ಮಮತೆಯಿಂದ ಮಾತನಾಡಿ ಸಂಬಂಧಗಳ ಅರಿತು ನೋಡಿ ಒಂಟಿಯಾಗಿ ಧ್ಯಾನ ಮಾಡಿ ಇಂದೇ ಕೊನೆಯ ದಿನ ಎಂದು ಬದುಕಿನೋಡಿ ಜೀವನದ ಸುಖವ ನೋಡಿ... ರಮೇಶ ನಿರಾತಂಕ #ನಿರಾತಂಕಕವನ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|