ಎಲ್ಲರ ಕಣ್ಣುಗಳು ಒಂದೇ ಆದರೆ ನೋಡುವ ನೋಟ ಬೇರೆ ಬೇರೆ
ಎಲ್ಲರ ಮನಸ್ಸು ಒಂದೇ ಆದರೆ ವಿಷಯ ಅರ್ಥೈಸುವ ಬಗೆ ಬೇರೆ ಬೇರೆ ಎಲ್ಲರ ಕಿವಿಗಳ ಬಗೆ ಒಂದೇ ಆದರೆ ಗ್ರಹಿಸುವ ವಿಧಾನ ಬೇರೆ ಬೇರೆ ಕೇಳಿದ್ದು ನೋಡಿದ್ದು, ಹೊಗಳಿದ್ದು, ತೆಗಳಿದ್ದು ಸುಳ್ಳಾಗಬಹುದು ಜೀವನದ ಕೊನೆಯವರೆಗೂ ಭ್ರಮೆಯಲ್ಲೇ ಬದುಕಬಹುದು ಜೀವನದ ಗುರಿ ಇದೆ ಎಂದು ನಂಬಿ ಕೊನೆಗೆ ಗುರಿ ತಲುಪದಿರಬಹುದು ಸಂಭ್ರಮ, ಸಂತಸವೆಂದು ಆಚರಿಸಿದ ಆಚರಣೆಗಳು ಅರ್ಥ ಕಳೆದುಕೊಳ್ಳಬಹುದು ಬುದ್ಧ ಎಂಬ ಪದ ಕಿವಿಗೆ ಬಿದ್ದೊಡನೆ ಬುದ್ಧನೇ ನಾನಾದಂತೆ ಭ್ರಮಿಸಬಹುದು ಧ್ಯಾನಿಸಿ, ಶ್ರಮಿಸಿ ಬುದ್ಧನಂತೆ ನಮ್ಮದೇ ಮಾರ್ಗವ ಕಂಡುಕೊಳ್ಳದಿದ್ದರೆ ಬುದ್ಧನಂತೆ ಜೀವನದ ಸಾರ ಕಳೆದುಕೊಂಡಂತೆ ಬದುಕಿನ ದಿನಗಳ ಸವೆಸಿದರೂ ಬದುಕಿದ್ದು ಸತ್ತಂತೆ ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|