ಮಗುವಿನ ಚಿಕಿತ್ಸೆಗೆ ರೂ. 15 ಕೋಟಿ ದಾನ ನೀಡಿದ ಅನಾಮಧೇಯ! ಮುಂಬೈ (ಪಿಟಿಐ): ಇತ್ತೀಚೆಗೆ ಕೇರಳಕ್ಕೆ ಸ್ಥಳಾಂತರಗೊಂಡ ಮುಂಬೈನ ದಂಪತಿ ತಮ್ಮ 16 ತಿಂಗಳ ಮಗುವಿನ ಚಿಕಿತ್ಸೆಗಾಗಿ ಜೀವರಕ್ಷಕ ಔಷಧವನ್ನು ಖರೀದಿಸಲು ಅನಾಮಧೇಯ ದಾನಿಯಿಂದ ರೂ. 15.31 ಕೋಟಿ ಪಡೆದಿದ್ದಾರೆ. ಮೆರೈನ್ ಎಂಜಿನಿಯರ್ ಆಗಿರುವ ಸಾರಂಗ್ ಮೆನನ್ ಮತ್ತು ಅದಿತಿ ನಾಯರ್ ಅವರ ಪುತ್ರ ನಿರ್ವಾಣ್, ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (ಎಸ್‌ಎಂಎ) ಟೈಪ್ 2 ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿದ್ದು, ಇದಕ್ಕೆ ಒಂದು ಬಾರಿ ಬಳಸುವ ಅಗತ್ಯ ಔಷಧದ ಬೆಲೆ ಸುಮಾರು ರೂ. 17.3 ಕೋಟಿ ಇದೆ. ರೂ.17.50 ಕೋಟಿ ಗುರಿ ಇಟ್ಟುಕೊಂಡು Milaap.org ನಲ್ಲಿ ಕ್ರೌಡ್‌ಫಂಡಿಂಗ್ ಪುಟ ಪ್ರಾರಂಭಿಸಲಾಗಿತ್ತು. ಆದರೆ ರೂ. 15.31 ಕೋಟಿ ನೀಡಿದ ವ್ಯಕ್ತಿಯ ಗುರುತು ತಿಳಿದಿಲ್ಲ. ಉಳಿದ ಮೊತ್ತವನ್ನು ಸಂಬಂಧಿಕರು ಮತ್ತು ಸ್ನೇಹಿತರ ಮೂಲಕ ಸಂಗ್ರಹಿಸಲು ಚಿಂತಿಸಿದ್ದೇವೆ. ಅಮೆರಿಕದಿಂದ ಮುಂಬೈಗೆ ಔಷಧ ಬರಬೇಕಿದೆ. ಬಳಿಕ ನಿರ್ವಾಣ್‌ನನ್ನು ಮತ್ತೆ ಮುಂಬೈಗೆ ಕರೆದೊಯ್ಯಬೇಕಾಗುತ್ತದೆ' ಎಂದು ನಾಯರ್ ಹೇಳಿದರು. ಔಷಧಕ್ಕೆ ಅಗತ್ಯವಾದ ಅನುಮತಿಗಳಿಗಾಗಿ ಕುಟುಂಬವು ಈಗಾಗಲೇ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಆಮದು-ರಫ್ತು ಇಲಾಖೆಯೊಂದಿಗೆ ಮಾತುಕತೆ ನಡೆಸಿದೆ. ಹಿಂದೂಜಾ ಆಸ್ಪತ್ರೆಯ ಮಕ್ಕಳ ನರರೋಗ ತಜ್ಞ ಡಾ. ನೀಲು ದೇಸಾಯಿ ಅವರು ಮಗುವಿಗೆ ಚಿಕಿತ್ಸೆ ನೀಡಲಿದ್ದಾರೆ. ತೋಳುಗಳು, ಕಾಲುಗಳು, ಮುಖ, ಗಂಟಲು, ನಾಲಿಗೆಯಲ್ಲಿ ಚಲನೆಯನ್ನು ಮಿದುಳು ಮತ್ತು ಬೆನ್ನುಹುರಿಯಲ್ಲಿನ ವಿಶೇಷ ನರ ಕೋಶಗಳು ನಿಯಂತ್ರಿಸುತ್ತವೆ. ಎಸ್‌ಎಂಎ ಸ್ಥಿತಿಯಲ್ಲಿ ಈ ನರಕೋಶಗಳು ನಶಿಸಿ ಹೋಗುತ್ತವೆ. ಕೃಪೆ: The Free Press Journal February 24, 2023 ನಮ್ಮ ಸುತ್ತಮುತ್ತಲು ಕೆಲವೊಮ್ಮೆ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿ ಸಿಲುಕಿಕೊಂಡಾಗ milaap.org ಯಲ್ಲಿ ಅವರ ಸಮಸ್ಯೆಗಳನ್ನು ದಾಖಲಿಸಿ ಅವರಿಗೆ Crowd Funding ನಿಂದ ಹಣ ದಾಖಲಿಸುವ ನಿಟ್ಟಿನಲ್ಲಿ ನೆರವಾಗಬೇಕು. ಅದರಲ್ಲೂ ಸಮಾಜಕಾರ್ಯ ಕ್ಷೇತ್ರದಲ್ಲಿ ವೃತ್ತಿಪರತೆ ಬೆಳೆಸಿಕೊಂಡವರು ಈ ರೀತಿಯ ಸಂಸ್ಥೆಗಳ ನೆರವು ಪಡೆದು ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಕ್ರಿಯಾಶೀಲರಾಗಬೇಕು.
ರಮೇಶ ಎಂ. ಎಚ್, ನಿರಾತಂಕ www.nirutapublications.org
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|