ರಮೇಶ ಎಂ.ಎಚ್. ನಿರಾತಂಕ ನಿರಾತಂಕ ಸಂಸ್ಥೆ 2007 ರಲ್ಲಿ ಆರಂಭಿಸಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಾಜಕಾರ್ಯದ ತತ್ವ ಸಿದ್ಧಾಂತಗಳ ಅಡಿಯಲ್ಲಿ ಆಯೋಜಿಸಿಕೊಂಡು ಬರುತ್ತಿದ್ದೇವೆ. “ಸಮಾಜಕಾರ್ಯದ ಹೆಜ್ಜೆಗಳು”ಪತ್ರಿಕೆ ಹಾಗೂ ಹಲವಾರು ಪುಸ್ತಕಗಳನ್ನು ಪ್ರಕಟಿಸಿ 100 ಕ್ಕೂ ಹೆಚ್ಚು ಸಾಹಿತ್ಯಲೋಕಕ್ಕೆ ಹಾಗೂ 10ಕ್ಕೂ ಹೆಚ್ಚು ಕೃತಿಗಳನ್ನು ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ನಿರಾತಂಕವನ್ನು ಅತ್ಯಂತ ದೂರದೃಷ್ಟಿಯಿಂದ ಕಟ್ಟಿದ ಸಂಸ್ಥೆಯಾಗಿದೆ. ಆತಂಕವನ್ನು ದೂರ ಸರಿಸಿ, ವಿಶ್ವಮಾನವ ಸಂದೇಶವ ಪಸರಿಸಿ, ನೆಮ್ಮದಿಯ ಬದುಕು ನಮ್ಮದಾಗಲಿ ಎನುತ, ಸಮಾನ ಮನಸ್ಕ ಗೆಳೆಯರೆಲ್ಲರೂ ಸೇರಿ ಕಟ್ಟಿದ ಸಹೃದಯಿಗಳ ತಂಡ ನಿರಾತಂಕ. ಭಾಷೆ, ನೆಲ, ಕೈಗಾರಿಕೆ ಹಾಗೂ ಮಾನವ ಸಂಪನ್ಮೂಲಗಳು ಕೂಡಾ ಸಹ ಅವಿನಾಭಾವವಾಗಿ ಬೆಸೆದುಕೊಂಡಿವೆ. ಆಧುನಿಕವಾಗಿ ನಮಗೆ ದಿನನಿತ್ಯದ ಒಡನಾಟದಲ್ಲಿ ಆಂಗ್ಲ ಭಾಷೆ ಅನಿವಾರ್ಯ ಹಾಗೂ ಮಹತ್ವ ಎಂದು ಎನಿಸಿದರೂ ಕೂಡ ತಾಯಿ ಭಾಷೆ ನಮ್ಮ ಮನದಲ್ಲಿ ಅಗ್ರಸ್ಥಾನ ಪಡೆದಿರುತ್ತದೆ. ಬದುಕಲು ಕಲಿಯಿರಿ ಸ್ವಾಮಿ ಜಗದಾತ್ಮಾನಂದ ತಮ್ಮ ಕೃತಿಯಲ್ಲಿ ಹೀಗೆ ಹೇಳಿದ್ದಾರೆ :-
“ನದಿ ಎಂದು ಹೇಳಿದಾಗ ನದಿಯ ಉಗಮ ಸ್ಥಾನ, ಅದರ ಪಾತ್ರ, ಅದರ ಇಕ್ಕೆಲಗಳಲ್ಲಿರುವ ಕಟ್ಟಡ, ಪಟ್ಟಣಗಳು ಅದು ಸೇರುವ ಸಮುದ್ರ ಇವು ನಮ್ಮ ಅರಿವಿಗೆ ನಿಲುಕುತ್ತವೆ. ಆದರೆ ಇದು ನದಿಯ ಪೂರ್ಣ ಸ್ವರೂಪವಲ್ಲ. ನದಿಯ ಸ್ವರೂಪದ ಇನ್ನೊಂದು ಮುಖವಿದೆ. ಅದು ಸೂಕ್ಷ್ಮವಾದುದು, ಸೂರ್ಯ ಕಿರಣಗಳು ಸಮುದ್ರದ ನೀರನ್ನು ಆವಿಯಾಗಿಸುತ್ತವೆ. ಗಾಳಿ ಅದನ್ನು ಪರ್ವತಾಗ್ರಹಕ್ಕೆ ಒಯ್ಯುತ್ತದೆ. ಅಲ್ಲಿ ಮಳೆಯಾಗಿ ಸುರಿದು ನೀರು ನದಿಯಲ್ಲಿ ಹರಿದು, ತಿರುಗಿ ಸಮುದ್ರವನ್ನು ಸೇರುತ್ತದೆ. ಅಂತೆಯೇ ನಮ್ಮ ಜೀವನ ಪ್ರವಾಹದಲ್ಲೂ ಕಾಣದ ಶಕ್ತಿಗಳು ಕೆಲಸ ಮಾಡುತ್ತಿವೆ. ಹಾಗೆಯೇ ಭಾಷೆಯೂ ಕೂಡ ಕೈಗಾರಿಕೆ ಹಾಗೂ ದೇಶದ ಅಭಿವೃದ್ಧಿ ಪ್ರಮುಖ ಪಾತ್ರ ವಹಿಸುತ್ತದೆ.” ಸಮ್ಮೇಳನದ ಉದ್ದೇಶಗಳು:
ಈ ಮೂರು ವರ್ಷಗಳಲ್ಲಿ ಸಮ್ಮೇಳನ ನಡೆದು ಬಂದ ದಾರಿ:-
ಈ ಸಮ್ಮೇಳನ ರೂಪುಗೊಳ್ಳಲು ಸಹಕಾರಿಯಾಗಿ ನಿಂತವರಲ್ಲಿ ನಮ್ಮ ಮಾರ್ಗದರ್ಶಕರಾದ
ಈ ಸಮ್ಮೇಳನ ಮೊದಲ ವರ್ಷ ಹುಟ್ಟುಹಾಕಿ ಇದುವರೆಗೂ ಹೆಗಲು ಕೊಟ್ಟು ನಿಂತವರು
ನಂತರ ನಮ್ಮ ತಂಡದಲ್ಲಿ ಸಕ್ರಿಯವಾಗಿ ಪಾತ್ರವಹಿಸಿದ ಸದಸ್ಯರುಗಳು :-
ಈ ನಮ್ಮ ಸಮ್ಮೇಳನಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವ ಸಂಘ ಸಂಸ್ಥೆಗಳು: ಕೊನೆಯದಾಗಿ ದೇಣಿಗೆ ನೀಡಿ ಸಹಕರಿಸುತ್ತಿರುವ ಹಾಗೂ ಈ ಸಮ್ಮೇಳನ ಯಶಸ್ವಿಯಾಗಲು ಸಹಕರಿಸುತ್ತಿರುವ ಮಾಧ್ಯಮದವರು, ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ರಮೇಶ ಎಂ.ಎಚ್. ನಿರಾತಂಕ
1 Comment
|
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|