- Human Resource
- >
- ಜನಸಂಪದ
ಜನಸಂಪದ
SKU:
$0.00
Unavailable
per item
ಲೇಖಕರ ಮಾತು
ಮಾನವ ಸಂಪನ್ಮೂಲ ನಿರ್ವಹಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಹೊರಬಂದಿರುವ ಪುಸ್ತಕಗಳು ವಿರಳ. ಅದರಲ್ಲೂ ವೃತ್ತಿಯಲ್ಲಿದ್ದುಕೊಂಡು ಅದರಿಂದ ಪಡೆದ ಅನುಭವಗಳನ್ನಾಧರಿಸಿದ ಹೊತ್ತಿಗೆಗಳು ಅಷ್ಟಾಗಿ ಹೊರಬಂದಿಲ್ಲ. `ಜನಸಂಪದ' ಈ ಕೊರತೆಯನ್ನು ಸ್ವಲ್ಪಮಟ್ಟಿಗಾದರೂ ನಿವಾರಿಸುತ್ತದೆಂಬುದು ನನ್ನ ಪ್ರಾಮಾಣಿಕ ಅನಿಸಿಕೆಯಾಗಿದೆ.
ಈ ಪ್ರಬಂಧಗಳನ್ನು ಬರೆಯುವ ಸಂದರ್ಭದಲ್ಲಿ ನನ್ನ ಅರಿವಿಗೆ ಮೂಡಿಬಂದ ಮುಖ್ಯ ಗುರಿಯೆಂದರೆ, ಸುಮಾರು ಹತ್ತೊಂಬತ್ತು ವರ್ಷಗಳ ನನ್ನ ವೃತ್ತಿಜೀವನದಲ್ಲಿ ಇದುವರೆಗೆ ನಾನು ಪಡೆದುಕೊಂಡ ವೈಯಕ್ತಿಕ ಅನುಭವಗಳನ್ನಾಧರಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರವನ್ನು ಹೊಸದಾಗಿ ಪ್ರವೇಶಿಸಿರುವ ನನ್ನ ಕಿರಿಯ ಸಹೋದ್ಯೋಗಿಗಳಿಗೆ ಹಾಗೂ ಮುಂದೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಯಸುವ ಯುವ ಪೀಳಿಗೆಗೆ ಈ ಪ್ರಬಂಧಗಳ ಮೂಲಕ ವಾಸ್ತವಿಕ ನೆಲೆಯನ್ನು ಅವರಿಗೆ ಪರಿಚಯಿಸಿ ಅವರ ಬೆಳವಣಿಗೆಗೆ ನೆರವಾಗಬೇಕೆಂಬುದು.
ಇದಲ್ಲದೆ ಕಾರ್ಮಿಕ ಸಂಘದ ನಾಯಕರಿಗೆ, ಉತ್ಪಾದನಾ ಮತ್ತು ಸೇವಾ ವಿಭಾಗಗಳ ಮುಖ್ಯಸ್ಥರು ಮತ್ತು ನಿರ್ವಾಹಕರಿಗೆ ಈ ಪ್ರಬಂಧಗಳು ಪ್ರಸ್ತುತವಾಗುತ್ತವೆ ಎಂಬ ನಂಬಿಕೆ ನನ್ನದು.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಪಿಯುಸಿ ಮತ್ತು ಡಿಗ್ರಿ ಹಂತಗಳಲ್ಲಿ ಅಂತರ ಕಾಲೇಜು ಲೇಖನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದ ನನ್ನ ಒಂದೆರಡು ಲೇಖನಗಳು ಪುಸ್ತಿಕೆಗಳಲ್ಲಿ ಪ್ರಕಟಗೊಂಡಿತ್ತಾದರೂ ನನ್ನ ಸೃಜನಾತ್ಮಕ ಬರವಣಿಗೆಯ ಕಾರ್ಯ ಮುಂದೆ ಪ್ರಗತಿ ಕಾಣಲಿಲ್ಲ. ವೃತ್ತಿಯಲ್ಲಿ ಮೊದಲಿನಿಂದಲೂ ನನ್ನ ಅಧಿಕೃತ ಕೆಲಸದಲ್ಲಿ ಉದ್ಯೋಗಿಗಳಿಗಾಗಿ ಹೊರಡಿಸುವ ಸುತ್ತೋಲೆಗಳು, ಸೂಚನಾ ಫಲಕಗಳಲ್ಲಿ ಪ್ರಕಟಿಸುವ ಮಾಹಿತಿಗಳು, ಟಿಪ್ಪಣಿಗಳು, ತರಬೇತಿ ಕಾರ್ಯಕ್ರಮಗಳಲ್ಲಿ ಬಳಸುವ ಸ್ಲೈಡುಗಳು, ಸಭೆ-ಸಮಾರಂಭಗಳಿಗಾಗಿ ನಡೆಸುವ ಪೂರ್ವ ಸಿದ್ಧತೆ, ಇವೇ ಅಲ್ಲದೆ ವಿಸ್ತೃತವಾಗಿ ನನ್ನ ಡೈರಿಯಲ್ಲಿ ಬರೆದುಕೊಳ್ಳುವ ಅಭ್ಯಾಸ-ಇವು ಮಿತ ಪ್ರಮಾಣದಲ್ಲಾದರೂ ಬರೆಯುವ ಕ್ರಿಯೆಯಲ್ಲಿ, ನನ್ನನ್ನು ನಾನು ವ್ಯಕ್ತಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನನ್ನ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಹಾಯಕವಾಗಿವೆಯೆನ್ನಬಹುದು. `ಜನಸಂಪದ'ದ ಮೂಲಕ ನನ್ನಲ್ಲಿ ಸುಪ್ತವಾಗಿದ್ದ ಬರಹಗಾರನನ್ನು ಬಡಿದೆಬ್ಬಿಸಿ ಅವನನ್ನು ಹೊರಗೆಡಹುವ ಅವಕಾಶ ಒದಗಿಬಂತು. ಈ ಪ್ರಯತ್ನ ಇಲ್ಲಿಗೇ ಕೊನೆಗೊಳ್ಳದೆ ಮುಂದೆ ಇನ್ನೂ ಹೆಚ್ಚಿನ ಸೃಜನಾತ್ಮಕ ಬರವಣಿಗೆಯ ಕ್ರಿಯೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆಂಬುದು ನನ್ನ ಆಶಯವಾಗಿದೆ.
ಎಸ್.ವಿ. ಮಂಜುನಾಥ್
ಸಹನಿರ್ದೇಶಕರು, ಅಜೀ಼ಮ್ ಪ್ರೇಮ್ಜಿ ವಿಶ್ವವಿದ್ಯಾಲಯ, ಕರ್ನಾಟಕ
ಪರಿವಿಡಿ
1. ವೃತ್ತಿ ಜೀವನದಲ್ಲಿ ನನ್ನ ಬೆಳವಣಿಗೆಗೆ ಕಾರಣರಾದ ರೂವಾರಿಗಳು
2. ಪ್ರಾರಂಭದ ಅಡಿಪಾಯದ ಅಗತ್ಯತೆ
3. ಉಪನಾಯಕನಾಗಿ ಪಡೆದ ಗಟ್ಟಿ ಅನುಭವ
4. ವೃತ್ತಿಪರ ಸಂಬಂಧಗಳಲ್ಲಿನ ಹೋರಾಟಗಳು
5. ವೃತ್ತಿಯಲ್ಲಿ ಭಾಷೆ ಮತ್ತು ಸಂವಹನ ಸಾಮರ್ಥ್ಯಗಳ ಮಹತ್ವ
6. ಗಂಡ-ಹೆಂಡತಿಯರಿಬ್ಬರೂ ವೃತ್ತಿಪರರಾದಾಗ
7. ಕಾರ್ಮಿಕ ಸಂಘಗಳೊಂದಿಗಿನ ನನ್ನ ಒಡನಾಟ
8. ವೃತ್ತಿಯಲ್ಲಿ ಮಾನವೀಯ ಮೌಲ್ಯಗಳ ಪ್ರಭಾವ
9. ಕ್ರಿಕೆಟ್, ಸಂಗೀತ ಮತ್ತು ವೃತ್ತಿ ಬದುಕು
10. ಮಾನವ ಸಂಪನ್ಮೂಲ ಕ್ಷೇತ್ರದ ಮುಂದಿನ ಹಾದಿ-ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನಿರೀಕ್ಷೆಗಳನ್ನು ಸಾಕಾರಗೊಳಿಸುವತ್ತ