Ramesha Niratanka
  • Home
  • TEAM MEMBERS
  • Biography
  • Blog
  • Media and Gallery
  • Job Openings
  • Join Our Online Groups
  • Online Store
  • Nirathanka Citizens Connect
  • Contact
  • Home
  • TEAM MEMBERS
  • Biography
  • Blog
  • Media and Gallery
  • Job Openings
  • Join Our Online Groups
  • Online Store
  • Nirathanka Citizens Connect
  • Contact
  • General Books
  • >
  • ಮಹಾತ್ಮಾ ಗಾಂಧೀಜಿಯವರ ತತ್ವಚಿಂತನೆಗಳ ಪ್ರಸ್ತುತತೆ

ಮಹಾತ್ಮಾ ಗಾಂಧೀಜಿಯವರ ತತ್ವಚಿಂತನೆಗಳ ಪ್ರಸ್ತುತತೆ

SKU:
$0.00
Unavailable
per item
ಸಂಪಾದಕರ ನುಡಿ

ವಿಶ್ವದಾದ್ಯಂತ ಮಹಾತ್ಮ ಗಾಂಧೀಜಿ ಎಂದೇ ಖ್ಯಾತ ನಾಮರಾದ ಮೋಹನ್ ದಾಸ್ ಕರಮ್ ಚಂದ್ ಗಾಂಧೀಜಿಯವರು ಭಾರತದ ರಾಷ್ಟ್ರಪಿತ ಎಂದು ಸಹ ಪ್ರಸಿದ್ಧಿಯನ್ನು ಪಡೆದಿದ್ದಾರೆ, ನನ್ನ ಜೀವನವೇ ನನ್ನ ಸಂದೇಶ ಎಂದಿರುವ ಗಾಂಧೀಜಿಯವರ ಚಿಂತನೆ ಆಲೋಚನೆ ಮತ್ತು ಕ್ರಿಯೆಯನ್ನು ಒಳಗೊಂಡಿರುವಂತಹದ್ದಾಗಿದೆ. ಅವರ ಅದ್ಭುತವಾದ ಸಂಘಟನೆಯನ್ನು ಅಖಂಡ ಭಾರತದ ಜನತೆ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದರು. ಬ್ರಿಟೀಷ್ ವಸಾಹತುಶಾಹಿ ವಿರುದ್ದ ಹೋರಾಟ ಮಾಡಿದ ಮಹಾನ್ ವ್ಯಕ್ತಿಯಾಗಿದ್ದ ಅವರು ಇಡೀ ಭಾರತ ದೇಶದ ಜನರಲ್ಲಿ ಐಕ್ಯತೆಯನ್ನುಂಟು ಮಾಡಿದ ಮಹಾನ್ ಶಕ್ತಿಯೂ ಕೂಡ ಆಗಿದ್ದು, ಶಾಂತಿ ಮತ್ತು ಅಹಿಂಸೆ ಎಂಬ ಅಸ್ತ್ರಗಳಿಂದ ಭಾರತೀಯರನ್ನು ಒಗ್ಗೂಡಿಸಿದರು.  ಸುಮಾರು ಐದು ದಶಕಗಳ ಕಾಲ ಇವರು ಭಾರತದ ಸ್ವಾತಂತ್ರ್ಯಕ್ಕಾಗಿ ಸತ್ಯ, ಧರ್ಮ, ನ್ಯಾಯ, ನೀತಿ ಹಾಗೂ ಅಹಿಂಸೆ ಎಂಬ ತತ್ವಗಳನ್ನು ಮುಂದಿಟ್ಟುಕೊಂಡು ಮಹತ್ವದ ಹೋರಾಟವನ್ನೆ ಮಾಡಿದರು, ಇವರು ರಾಜಕೀಯ ಸ್ವಾತಂತ್ರ್ಯ ಮತ್ತು ಬ್ರಿಟೀಷರ ದಮನಕಾರಿ ಚಟುವಟಿಕೆಗಳ ವಿರುದ್ದ ವ್ಯಾಪಕವಾಗಿ ಹೋರಾಟ ನಡೆಸಿದರು. ಈ ಹೋರಾಟವು ಮಾನವ ಸಮಾನತೆ, ಮಾನವ ಗೌರವ, ಆತ್ಮಗೌರವ, ದೌರ್ಜನ್ಯ ವಿರೋಧಿ, ಅನ್ಯಾಯ ವಿರೋಧಿ ಹಾಗೂ ಹಿಂಸಾ ವಿರೋಧಿ ತತ್ವಗಳನ್ನು ಒಳಗೊಂಡಿತ್ತು.

ಇಂದಿಗೂ ಜಗತ್ತಿನ ಯಾವುದೇ ದೇಶದಲ್ಲಿ ಶಾಂತಿಯುತ ಮಾರ್ಗದಲ್ಲೇ ಕ್ರಾಂತಿಗಳು ಅಥವಾ ಬದಲಾವಣೆಗಳು ನಡೆಯುತ್ತಿದ್ದರೆ ಅವುಗಳಿಗೆ ಗಾಂಧೀಜಿಯವರ ಜೀವನ ಸಂದೇಶ ಸ್ಪೂರ್ತಿಯಾಗಿರುತ್ತದೆ. ಪ್ರಸ್ತುತ ಪ್ರಪಂಚದಾದ್ಯಂತ ಅಸಂಖ್ಯಾತ ಜನರು ಅವರ ಜೀವನ ಮತ್ತು ಭೋದನೆಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಗಾಂಧೀಜಿಯವರು ಧಾರ್ಮಿಕ, ರಾಜಕೀಯ, ಸಾಮಾಜಿಕ ವಿಚಾರಗಳಲ್ಲಿ ಎಲ್ಲಾ ರೀತಿಯ ಮೋಹಗಳಿಂದ ದೂರವಾಗಿ ಜೀವಿಸಬೇಕು ಎಂದಿದ್ದರು.  ಈಗಿನ ಜನಾಂಗಕ್ಕೆ ಗಾಂಧೀಜಿಯವರ ಜೀವನ ಶೈಲಿ ಆದರ್ಶಮಯವಾಗಿರುವುದರಿಂದ ತಮ್ಮ ಜೀವನವನ್ನು ಅವರ ಜೀವನ ಮಾರ್ಗಕ್ಕನುಗುಣವಾಗಿ ನಡೆಸಲು ಪ್ರಯತ್ನಿಸುವವರು ನಮ್ಮ ಮಧ್ಯೆ ಇದ್ದಾರೆ. ಏಕೆಂದರೆ ಗಾಂಧೀಜಿಯವರು ಸತ್ಯಾನ್ವೆಷಣೆಯನ್ನು ಮಾಡಿದರು, ಆ ಸತ್ಯವು ಇವತ್ತಿಗೂ ಮತ್ತು ಎಲ್ಲಾ ಕಾಲಕ್ಕೂ ಅನುಕರಣೀಯವಾಗಿದೆ, ದೇಶಕ್ಕೆ ಸ್ವಾತಂತ್ರ್ಯ ಪಡೆಯುವುದು ಗ್ರಾಮೀಣ ಜನರ ಜೀವನ ಸುಧಾರಣೆ ಮತ್ತು ಅಭಿವೃದ್ದಿಗೆ ಅಂದು ಬಹಳ ಅವಶ್ಯಕವಾಗಿತ್ತು, ಈ ಕಾರಣದಿಂದಲೇ ಗಾಂಧೀಜಿಯವರು ಸ್ವರಾಜ್ಯ ಪರಿಕಲ್ಪನೆಯನ್ನು ಮುಂದಿಟ್ಟರು.

ಪ್ರಸ್ತುತ ಇರುವ ಜ್ವಲಂತ ಸಮಸ್ಯೆಗಳ ಹಿನ್ನೆಲೆಯಲ್ಲಿ, ಈ ಗ್ರಂಥವು ಗಾಂಧೀಜಿಯವರ ತತ್ವಜ್ಞಾನ ಮತ್ತು ಭಾರತದಲ್ಲಿನ ಇತ್ತೀಚಿನ ವಿದ್ಯಮಾನಗಳು, ಗಾಂಧೀಜಿ ಮತ್ತು ಅಧಿಕಾರ ವಿಕೇಂದ್ರಿಕರಣ, ಗಾಂಧೀಜಿಯವರ ತತ್ವ ಮತ್ತು ಎಂ. ಜಿ. ನರೇಗಾ, ಗಾಂಧೀಜಿಯವರ ದೃಷ್ಟಿಕೋನದಲ್ಲಿ ಮಹಿಳಾ ಸಾಮಾಜಿಕ ವಿಮೋಚನೆ, ಗಾಂಧೀಜಿಯವರ ದೃಷ್ಟಿಯಲ್ಲಿ ಮಹಿಳಾ ಸಬಲೀಕರಣ, ಪರಿಪೂರ್ಣತೆಯ ಬದುಕಿಗೆ ಗಾಂಧೀಜಿಯವರ ಪೂರ್ಣ ತತ್ವಗಳು, ಮಹಾತ್ಮ ಗಾಂಧೀಜಿಯವರ ತತ್ವಗಳು ಮತ್ತು ಜೀವನ ಮಾರ್ಗಸೂತ್ರಗಳು, ಗಾಂಧೀಜಿಯವರ ಚಿಂತನೆ ಹಾಗೂ ಭಾರತದಲ್ಲಿನ  ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬದಲಾವಣೆಗಳು, 21ನೇ ಶತಮಾನದಲ್ಲಿ ಗಾಂಧಿ ತತ್ವಚಿಂತನೆಗಳ ಪ್ರಸ್ತುತತೆ, ಗಾಂಧೀಜಿ ವ್ಯಕ್ತಿತ್ವ ಮತ್ತು ಸಂದೇಶ ಎಂಬ ಪ್ರಮುಖ ಶೀರ್ಷಿಕೆಗಳಲ್ಲಿ ಅವರ ವಿಚಾರ ಧಾರೆಯನ್ನು ಪ್ರಸ್ತುತಪಡಿಸುತ್ತದೆ.

ಹೀಗೆ, ಈ ಸಂಪುಟವು ಮೌಲ್ಯಯುತವಾದಂತಹ ಪ್ರಮುಖ ಶೀರ್ಷಿಕೆಗಳು ಹಾಗೂ ಉಪ ಶೀರ್ಷಿಕೆಗಳನ್ನು ಒಳಗೊಂಡಿದ್ದು, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ ಮುಂತಾದ ಸಮಾಜ ವಿಜ್ಞಾನ ನಿಕಾಯದ ಹಾಗೂ ಕನ್ನಡ, ಆಂಗ್ಲ, ಹಿಂದಿ ಮುಂತಾದ ಭಾಷೆಗಳ ಕಲಾ ನಿಕಾಯದ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಅಧ್ಯಾಪಕ ಮಿತ್ರರಿಗೆ, ಗಾಂಧಿ ತತ್ವ ಸಿದ್ಧಾಂತಗಳ ಅಧ್ಯಯನಕಾರರಿಗೆ ಹಾಗೂ ವಿಶೇಷವಾಗಿ, ಭಾರತ ಸಂವಿಧಾನದ ಭಾಗ-ಗಿರ ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿ ಒಳಗೊಂಡಿರುವ ಗಾಂಧಿ ತತ್ವಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಬೇಕೆನ್ನುವ ಆಶಯವುಳ್ಳ ನೀತಿ ನಿರೂಪಕರಿಗೂ ಅತ್ಯಂತ ಹೆಚ್ಚಿನ ಸಂಪನ್ಮೂಲವನ್ನು ಒದಗಿಸಬಲ್ಲ ಗ್ರಂಥವಾಗಿದೆ ಎನ್ನುವ ನಂಬಿಕೆಯು ನನ್ನದಾಗಿದೆ.

ಪ್ರಸಕ್ತ ಕಾರ್ಯಕ್ಕಾಗಿ, ಲೇಖನಗಳನ್ನು ಒದಗಿಸಿದ ಎಲ್ಲಾ ಲೇಖಕ ಮಿತೃರುಗಳಿಗೂ ವಿಶೇಷವಾಗಿ ಕರ್ನಾಟಕದ ಮಾಜಿ ಅಡ್ವೋಕೇಟ್ ಜನರಲ್‍ರಾಗಿರುವ ಪ್ರೊ. ರವಿವರ್ಮ ಕುಮಾರ್, ಪ್ರಸಿದ್ದ ಚಿಂತಕರು ಹಾಗೂ ವಿಮರ್ಶಕರಾಗಿರುವ ಪ್ರೊ. ಜಿ. ರಾಮಕೃಷ್ಣ ಅವರುಗಳಿಗೂ ಹಾಗೂ ಈ ಗ್ರಂಥಕ್ಕೆ ಮುನ್ನುಡಿ ಬರೆದು ಪ್ರೋತ್ಸಾಹಿಸಿದ ನನ್ನ ಗೌರವಾನ್ವಿತ ಗುರುಗಳು, ಮಾರ್ಗದರ್ಶಕರು ಆಗಿರುವ ಪ್ರೊ. ಎಸ್.ಎ. ಪಾಳೇಕರ್‍ರವರಿಗೂ ಚಿರಋಣಿಯಾಗಿರುವನು.
​
ನನ್ನ ಜೀವನದಲ್ಲಿ ಪ್ರತಿಯೊಂದು ಕಾರ್ಯಕ್ಕೂ ಸದಾ ಕಾಲ ಬೆನ್ನೆಲುಬಾಗಿ ನಿಂತು ನನ್ನನ್ನು ಆಶೀರ್ವದಿಸುತ್ತಿರುವ ನನ್ನ ಪೂಜ್ಯ ತಂದೆಯವರಾದ ಶ್ರೀ ಶ್ರೀನಿವಾಸರಾವ್ ಹಾಗೂ ತಾಯಿಯವರಾದ ಶ್ರೀಮತಿ ಈಶ್ವರಮ್ಮ ಇವರಿಗೆ ಈ ಕೃತಿಯನ್ನು ಸಮರ್ಪಿಸುತ್ತಿದ್ದೇನೆ.
 
ಡಾ. ಮೌನೇಶ್ವರ ಶ್ರೀನಿವಾಸರಾವ್


​ಪರಿವಿಡಿ


ಮುನ್ನುಡಿ
ಸಂಪಾದಕರ ನುಡಿ
ಪರಿವಿಡಿ  
1.   ಗಾಂಧೀಜಿಯವರ ತತ್ವಜ್ಞಾನ ಮತ್ತು ಭಾರತದಲ್ಲಿನ ಇತ್ತೀಚಿನ ವಿದ್ಯಮಾನಗಳು
               ಪ್ರೊ. ರವಿವರ್ಮ ಕುಮಾರ್
2.  ಗಾಂಧೀಜಿ ಮತ್ತು ಅಧಿಕಾರ ವಿಕೇಂದ್ರಿಕರಣ
               ಎಸ್. ಪುಷ್ಪಲತ
3.  ಗಾಂಧೀಜಿಯವರ ತತ್ವ ಮತ್ತು ಎಂ.ಜಿ ನರೇಗಾ
               ಕು. ಬಸಮ್ಮಾ ಆರ್. ಕೋರಿ
4.  ಗಾಂಧೀಜಿಯವರ ದೃಷ್ಠಿಕೋನದಲ್ಲಿ ಮಹಿಳಾ ಸಾಮಾಜಿಕ ವಿಮೋಚನೆ          
               ಡಾ. ಅನುರಾಧ ಎಸ್.
5.  ಗಾಂಧೀಜಿಯವರ ದೃಷ್ಟಿಯಲ್ಲಿ ಮಹಿಳಾ ಸಬಲೀಕರಣ
              ಕೋಮಲ ಬಿ.
6.  ಪರಿಪೂರ್ಣತೆಯ ಬದುಕಿಗೆ ಗಾಂಧೀಜಿಯವರ ಪೂರ್ಣ ತತ್ವಗಳು      
               ಡಾ. ಎಚ್. ಆರ್. ರೇಣುಕ ಹಾಗೂ ಶ್ರೀ ವೆಂಕಟರೆಡ್ಡಿ ರಾಮರೆಡ್ಡಿ
7.  ಮಹಾತ್ಮ ಗಾಂಧೀಜಿಯವರ ತತ್ವಗಳು ಮತ್ತು ಜೀವನ ಮಾರ್ಗಸೂತ್ರಗಳು   
              ಶ್ರೀ.ಎಂ.ಶಿವಯ್ಯ ಹಾಗೂ ಜಿ. ದಾಕ್ಷಾಯಿಣಿ
8.  ಗಾಂಧೀಜಿಯವರ ಚಿಂತನೆ ಹಾಗೂ ಭಾರತದಲ್ಲಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬದಲಾವಣೆಗಳು   
               ಡಾ. ಮೌನೇಶ್ವರ ಶ್ರೀನಿವಾಸರಾವ್
9.  21ನೇ ಶತಮಾನದಲ್ಲಿ ಗಾಂಧಿ ತತ್ವಚಿಂತನೆಗಳ ಪ್ರಸ್ತುತತೆ
               ಡಾ. ಬಿ. ಸಿ. ಸವಿತ
10. ಗಾಂಧೀಜಿ ವ್ಯಕ್ತಿತ್ವ ಮತ್ತು ಸಂದೇಶ
               ಶ್ರೀಮತಿ ಎಂ. ಎಸ್. ರಾಜೇಶ್ವರಿ
11.  ಗಾಂಧೀಜಿಯವರ ತತ್ವಜ್ಞಾನ ಮತ್ತು ಭಾರತದಲ್ಲಿನ ಇತ್ತೀಚಿನ ವಿದ್ಯಮಾನಗಳು: ವಿಮರ್ಶಾತ್ಮಕ ಅವಲೋಕನ
               ಪ್ರೊ. ಜಿ. ರಾಮಕೃಷ್ಣ
  • Facebook
  • Twitter
  • Pinterest
  • Google+
Buy Now

Site
Home
Team Members
Biography
Nirathanka Citizens Connect
Awards / Books
Media and Gallery
Blog
Job Openings
Online Groups
Online Store
​Contact
Vertical Divider
Follow us on
Picture
Ramesha For Ullal Ward
Picture
ramesha_for_ullal_ward
Picture
Ramesha for Ullal Ward
Picture
Ramesha Niratanka
Picture
Nirathanka
Picture
Ramesha for Ullal Ward
Vertical Divider
Contact us
Ph: 080-23213710
Mob: 
+91-80730 67542
          +91-83102 41136
E-mail: [email protected]

Our Other Websites
  • www.nirutapublications.org
  • www.hrkancon.com 
  • www.niratanka.org  
  • www.mhrspl.com


Picture
Follow Ramesha For Ullalu Ward WhatsApp Channel
Follow Nirathanka Citizens Connect WhatsApp Channel


COPYRIGHT © 2020 RAMESHANIRATANKA. ALL RIGHTS RESERVED.
Website Designing & Developed by : ​M&HR Solutions Private Limited (www.mhrspl.com)
  • Home
  • TEAM MEMBERS
  • Biography
  • Blog
  • Media and Gallery
  • Job Openings
  • Join Our Online Groups
  • Online Store
  • Nirathanka Citizens Connect
  • Contact