- Novels / Stories
- >
- ಚಿನ್ಮಯ ಕಥಾ-ಸಂಚಯ
ಚಿನ್ಮಯ ಕಥಾ-ಸಂಚಯ
SKU:
$0.00
Unavailable
per item
ಲೇಖಕರ ನುಡಿ
ಶತಶತಮಾನಗಳಿಂದಲೂ ಕಥಾಸಾಹಿತ್ಯ ವಿಸ್ತಾರಗೊಳ್ಳುತ್ತ, ಸದಭಿರುಚಿಯನ್ನು ವಾಚಕರಿಗೆ ನೀಡುತ್ತ ಬರುತ್ತಿರುವದು ಜನಮೆಚ್ಚುಗೆಯ ಪ್ರತೀಕ. ಕಥಾಪ್ರಪಂಚ ಇಂದು ಬಹು ಆಕರ್ಷಣೀಯ ವಸ್ತುವಾಗಿದೆಯೆಂಬುದರಲ್ಲಿ ಎರಡು ಮಾತಿಲ್ಲ. ಕಥೆ ಹೇಳುವುದಾಗಲಿ, ಕಥೆ ಕೇಳುವುದಾಗಲಿ ಸಂತೋಷವನ್ನೀಯುವ ಕಲೆಯಾಗಿ, ಅಬಾಲವೃದ್ಧರಿಂದ ಮೆಚ್ಚುಗೆ ಪಡೆಯುತ್ತಾ ಬಂದುದು ಶ್ಲಾಘನೀಯ. ಈ ಕಥಾ-ಸಾಹಿತ್ಯವು ತನ್ನ ರೂಪ, ಸ್ವರೂಪ, ವಿಧಾನ, ವಿನ್ಯಾಸಗಳಲ್ಲಿ ಪರಿವರ್ತನೆಯೊಡನೆ ವೈವಿಧ್ಯವನ್ನೂ ಸಾಧಿಸಿ ಜನಾದರಣೀಯವಾದ ಸಾಹಿತ್ಯ ಪ್ರಕಾರವೆನ್ನುವಂತಾಗಿದೆ.
ಇತ್ತೀಚೆಗೆ ಆಂಗ್ಲಭಾಷಾ ವ್ಯಾಸಂಗದ ವ್ಯಾಮೋಹದಲ್ಲಿ ಕನ್ನಡ ಭಾಷಾ ಬಳಕೆ ಸೊರಗುತ್ತಿರುವದನ್ನು ಗಮನಿಸಿದಾಗ ಮನಸ್ಸಿಗೆ ನೋವಾಗುತ್ತದೆ. ಅದಕ್ಕಾಗಿ ಕನ್ನಡ ಸಾಹಿತ್ಯ ಪ್ರಚಾರದ ಮೂಲಕ ಕನ್ನಡ ಭಾಷಾಭಿಮಾನ ಮಸುಕಾಗದಂತೆ ನೋಡಿಕೊಳ್ಳುವದೂ ನಮ್ಮ ಕರ್ತವ್ಯವಾಗಿದೆಯಲ್ಲವೇ ? ಇಂದಿನ ವೇಗದ ಯುಗದಲ್ಲಿ ಜೀವನದ ಓಟ ತ್ವರಿತವಾಗಿದ್ದು, ಜನತೆ ಆದಷ್ಟು ಬೇಗ ಓದಿ ಮುಗಿಸಿ ಮನರಂಜನೆ ಪಡೆಯುವ ಆತುರದಲ್ಲಿರುವಾಗ ಈ ಕಥಾಪ್ರಪಂಚವೇ ವಾಚಕರಿಗೆ ವಾಚನಾಭಿರುಚಿಯನ್ನು ಅಧಿಕಗೊಳಿಸಬಲ್ಲದೆಂಬ ವಿಶ್ವಾಸ ಉಂಟು.
ಆ ಕಾರಣಕ್ಕಾಗಿಯೇ ನಾನು ಅನೇಕ ಕಥೆಗಳನ್ನು ಬರೆದು ಕನ್ನಡ ನುಡಿಯ ವಿಕಾಸ ಹಾಗೂ ಘನತೆಗೆ ನನ್ನ ಅಳಿಲು ಸೇವೆಯನ್ನು ಸಲ್ಲಿಸಲು ಮುಂದಾದದ್ದು. ಈ ನನ್ನ ಚಿನ್ಮಯ ಕಥಾಸಂಕಲನವನ್ನು ವಾಚಕರ ಕೈಗಿರಿಸಲು ತುಂಬ ಹರ್ಷವಾಗುತ್ತದೆ.
ಕಳೆದ ಎಂಟು ವರ್ಷಗಳ ಹಿಂದೆ ನನ್ನಲ್ಲಿ ಸಾಹಿತ್ಯದೊಲವನ್ನೂ ಹಾಗೂ ಸ್ಫೂರ್ತಿಯನ್ನೂ ತುಂಬಿ ಮುನ್ನಡಿಸಿದ ನನ್ನ ಗುರು ಡಾ. ಹೆಚ್.ಎಮ್. ಮರುಳಸಿದ್ಧಯ್ಯನವರಿಗೆ ಚಿರಋಣಿ. ಅವರು ತೋರಿಸಿದ ಪ್ರೀತಿ, ಔದಾರ್ಯಗಳು ನನ್ನಲ್ಲಿ ಹೊಸ ನಿರೀಕ್ಷೆಯನ್ನು ಮೂಡಿಸಿದವು. ಅದೇ ಪ್ರೇರಣೆಯಿಂದಲೇ ನನ್ನ ನಾಲ್ಕು ಕವನ ಸಂಕಲನಗಳನ್ನು ಹೊರತರಲು ಆಸ್ಪದವಾಯಿತು. ಅದರಿಂದ ವಾಚಕರ ಪ್ರೋತ್ಸಾಹವೂ ದೊರಕಿ ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿತು.
ಅದೇ ಚೇತನವೇ ನನ್ನ ಹತ್ತು ಕಥೆಗಳನ್ನೊಳಗೊಂಡ ಈ ಕಥಾಸಂಕಲನವನ್ನು ಪ್ರಕಟಿಸಲು ಮುನ್ನಡೆಸಿತು. ಕಥಾವಸ್ತು, ವಿಷಯ ನಿರೂಪಣೆ, ಕಥಾತಂತ್ರಗಳನ್ನಾಧರಿಸಿ ರಚನೆಗೊಳಿಸಿದ್ದಾಗಿದೆ. ವಾಚಕರಿಗೆ ನನ್ನ ಈ ಕಥಾಸಂಕಲನವು ಮೆಚ್ಚುಗೆಯಾಗುವದೆಂದು ಆಶಿಸುವೆ.
ನನ್ನ ಸಾಹಿತ್ಯ ಕೃಷಿಗೆ ನಿರಂತರ ಪ್ರೋತ್ಸಾಹವನ್ನೀಯುತ್ತಾ ಬಂದಿರುವ ನನ್ನ ಭಾವನವರಾದ ಶ್ರೀ ಎಸ್.ಡಿ. ಕರ್ಪುರಮಠ (ವಿಜಯಪುರ) ಅವರಿಗೆ ನನ್ನ ನಮನಗಳು. ಅಲ್ಲದೆ ಶ್ರೇಷ್ಠ ಸಾಹಿತಿಗಳಾದ ಪ್ರೊ. ಜಿ.ಎಸ್. ಹನ್ನೆರಡಮಠರಿಗೂ ನನ್ನ ವಂದನೆಗಳು.
ಸದಾಕಾಲವೂ ಸದಿಚ್ಛೆಯನ್ನು ಬಯಸಿ ಪ್ರೋತ್ಸಾಹವನ್ನೀಯುತ್ತಿರುವ ನನ್ನ ಮಕ್ಕಳಾದ ಡಾ|| ಜಯಶಂಕರ, ಶ್ರೀ ಚಂದ್ರಶೇಖರ, ಶ್ರೀ ರಾಜೇಂದ್ರರಿಗೆ ಹಾಗೂ ಸೊಸೆಯಂದಿರಾದ ಡಾ|| ನಿರ್ಮಲಾ, ಡಾ|| ಸಂಗೀತ, ವೀಣಾರಿಗೆ ಕೃತಜ್ಞತೆಗಳು.
ಸೊಗಸಾಗಿ ಮುದ್ರಿಸಿಕೊಟ್ಟ ನಿರುತ ಪಬ್ಲಿಕೇಷನ್ಸ್ ಮಾಲಿಕರಾದ ಶ್ರೀ ರಮೇಶ ಎಂ.ಎಚ್. ಅವರಿಗೂ ಕೃತಜ್ಞತೆಗಳು.
ಎಂ.ಎಂ. ಹಿರೇಮಠ
ಬೆಂಗಳೂರು
ಪರಿವಿಡಿ
1. ನಾಯಿಯ ಸ್ವಾಮಿನಿಷ್ಠೆ
2. ನನ್ನ ಪ್ರಯಾಣದಲ್ಲೊದಗಿದ ಅನನ್ಯ ಕ್ಷಣಗಳು
3. ವೈಧವ್ಯದ ಕೂಪದಿಂದೆದ್ದು ಬಂದ ಸರೋಜ
4. ಜ್ಯೋತಿಷಿಯ ಪ್ರಸಂಗಾವಧಾನ
5. ಕೆಸರಿನಿಂದೆತ್ತಿ ತಂದ ಕಮಲಪುಷ್ಪ
6. ಕರುಳಿನ ಕರೆ
7. ಸಾಧನೆಗೆ ಸಂದ ಸದ್ಗತಿ
8. ಸಾಹಸಕ್ಕೆ ದೊರೆತ ಸನ್ಮಾನ
9. ಮಾನವತೆ ಮೆರೆದ ಗಂಧರ್ವ
10. ಅನಂತದಲ್ಲಿ ಅಂತ್ಯಕಂಡ ಸೀನಾ