- General Books
- >
- ಶಿಕ್ಷಣ ಮತ್ತು ಅಭಿವೃದ್ಧಿ
ಶಿಕ್ಷಣ ಮತ್ತು ಅಭಿವೃದ್ಧಿ
SKU:
$0.00
Unavailable
per item
ಸಂಪಾದಕರ ಮಾತು
ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದಲು ಶಿಕ್ಷಣವೇ ಅಸ್ತ್ರವಾಗಿದೆ. ಮಗು ತಾನಿರುವ ಸಮಾಜದಲ್ಲಿ ಹೊಂದಿಕೊಂಡು ಬಾಳಲು ಶಿಕ್ಷಣ ಅತ್ಯಗತ್ಯ. ನಮ್ಮ ದೇಶದಲ್ಲಿ ವಿಭಿನ್ನ ಕಾಲ ಘಟ್ಟದಲ್ಲಿ ಶಿಕ್ಷಣ ವೈವಿಧ್ಯಮಯವಾದ ರೀತಿಯಲ್ಲಿ ಮೂಡಿ ಬಂದಿದೆ. ಸಾಂಸ್ಕೃತಿಕ ಅಂಶಗಳನ್ನು ಉಳಿಸಿ ಬೆಳೆಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಇಂತಹ ಶಿಕ್ಷಣ ಶ್ರೀಸಾಮಾನ್ಯನ ಸ್ವತ್ತಾಗಬೇಕೆಂದು, ಯಾವೊಬ್ಬ ಮಗುವು ಶಾಲೆಯಿಂದ ಹೊರಗುಳಿಯ ಬಾರದು ಎಂದು ಸಾಕಷ್ಟು ಪ್ರಯತ್ನಗಳು ನಡೆದಿವೆ. ಮಕ್ಕಳೇ ನಾಡಿನ ಸಂಪತ್ತು ಎಂದ ಸರ್ಕಾರ ಅವರಿಗಾಗಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿದ್ದಾಗ್ಯೂ ಲಕ್ಷಾಂತರ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದನ್ನು ಮನಗಂಡ ಸರ್ಕಾರ ಹಲವಾರು ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಆರೋಗ್ಯಕರವಾದ ಪ್ರಯತ್ನ ಮಾಡಿದೆ. ಬಡತನ ಹಸಿವು ಸಹಜವಾಗಿಯೇ ಮಕ್ಕಳನ್ನು ದುಡಿಮೆಯತ್ತ ತಳ್ಳುವುದರಿಂದ ಶಿಕ್ಷಣ ವಂಚಿತರಾಗಲು ಆಸ್ಪದವಾಗಿದೆ. ಆದರೂ ಪರಿಣಾಮಕಾರಿಯಾದ ಉಚಿತ ಸಮವಸ್ತ್ರ ವಿತರಣೆ, ಉಚಿತ ಪಠ್ಯಪುಸ್ತಕ ವಿತರಣೆ, ಬಿಸಿಯೂಟ ಯೋಜನೆ ಮುಂತಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದು ಬಡತನ ಬೇಗೆಯಲ್ಲಿ ಬೇಯುತ್ತಿರುವ ಮಕ್ಕಳಿಗೆ ಒಂದು ವರದಾನವಾಗಿದೆ. ಈ ಯೋಜನೆಯು ಜಾರಿಯಾಗುವುದಕ್ಕಿಂತ ಹಿಂದಿನ ಮತ್ತು ನಂತರದ ದಾಖಲಾತಿ, ಹಾಜರಾತಿ, ಫಲಿತಾಂಶ, ಕಲಿಕಾಸಕ್ತಿ ಮುಂತಾದುವುಗಳನ್ನು ಒಳಗೊಂಡಂತೆ, ಶ್ರೀಸಾಮಾನ್ಯನಿಗೂ ಬಿಸಿಯೂಟ ಯೋಜನೆಯ ಪ್ರಭಾವ ಹೇಗೆ ಬೀರಿದೆ ಎಂಬುದು ತಲುಪಿಸಲು ಶಿಕ್ಷಣದ ಮಹತ್ವದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಮಹದಾಶಯವನ್ನು ಹೊಂದಿ ಹೊರಹೊಮ್ಮಿದ ಚೊಚ್ಚಲ ಕೃತಿಯನ್ನು ಹೊರತರಲು ಅನುಮತಿ ನೀಡಿದ ಕುವೆಂಪು ವಿಶ್ವವಿದ್ಯಾಲಯಕ್ಕೆ ಗ್ರಂಥ ಮುದ್ರಿಸಲು ಆರ್ಥಿಕ ನೆರವು ನೀಡಿದ ಕನ್ನಡ ಮತ್ತು ಸಂಸ್ಕೃತ ಇಲಾಖೆ ಬೆಂಗಳೂರು ಇವರಿಗೆ ಕೃತಜ್ಞತೆಗಳು. ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಎಲ್ಲಾ ಪ್ರಾಧ್ಯಾಪಕ ವರ್ಗದವರಿಗೂ, ಮಾರ್ಗದರ್ಶಕರಾದ ಡಾ.ಎಂ. ಪೂರ್ವಾಚಾರ್, ಸಹ ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು ಶಿವಮೊಗ್ಗ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಕೃತಿಗೆ ಬೆನ್ನುಡಿ ಬರೆದು ಅದರ ಮೌಲ್ಯವನ್ನು ಇಮ್ಮಡಿಗೊಳಿಸಿದ ಗುರುಗಳಾದ ಪ್ರೊ.ಎ. ರಾಮೇಗೌಡ, ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು, ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಶಿವಮೊಗ್ಗ ಇವರಿಗೆ ಅನಂತ ಅನಂತ ಧನ್ಯವಾದಗಳು. ಸದಾ ನನ್ನ ವೃತ್ತಿಪರ ಬದುಕಿಗೆ ಬೆನ್ನೆಲುಬಾಗಿರುವ ಪ್ರೊ. ಸೋಮಶೇಖರ್, ಕುಲಸಚಿವರು, ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ ಹಾಗೂ ಸ್ನಾತಕೋತ್ತರ ಸಮಾಜಶಾಸ್ತ್ರದ ಅಧ್ಯಾಪಕ ವೃಂದಕ್ಕೆ ಧನ್ಯವಾದಗಳು. ಹಾಗೆಯೇ ನನ್ನ ವಿದ್ಯಾಭ್ಯಾಸಕ್ಕೆ ಸದಾ ಪ್ರೋತ್ಸಾಹ ನೀಡುತ್ತಿದ್ದ ನೆಚ್ಚಿನ ತಾತ ದಿ|| ನಾಗಪ್ಪ, ನೆಚ್ಚಿನ ಅಜ್ಜಿ ದಿ|| ಹನುಮಕ್ಕ ಮತ್ತು ನಲ್ಮೆಯ ಮಾವಂದಿರಿಗೆ ಧನ್ಯವಾದಗಳು. ಗ್ರಂಥ ರಚನೆಗೆ ಸಹಕರಿಸಿದ ತಂದೆ ನಾಗಪ್ಪ.ಹೆಚ್, ತಾಯಿ ರತ್ನಮ್ಮ. ಎನ್, ಅಕ್ಕ ಶಶಿಕಲಾ, ತಮ್ಮ ದುರುಗೇಶ, ತಂಗಿ ಅಕ್ಷತ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು. ನನ್ನ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಸಲಹೆ ಸೂಚನೆಗಳನ್ನು ನೀಡುತ್ತಾ ಈ ಕೃತಿಗೆ ಕಾರಣರಾದ ಡಾ. ಶೀಲ, ಶ್ರೀ ಶಿವಕುಮಾರ್, ಡಾ. ಸವಿತಾ, ಶ್ರೀ ರುದ್ರೇಶ್, ಡಾ. ನೂತನ್‍ಕುಮಾರ್ ಡಿ, ಡಾ. ಗುರುರಾಜ್, ಡಾ. ವಾಣಿಪಾಲ್ವೆ, ಶ್ರೀ ಹೇಮಂತ್‍ಕುಮಾರ್ ಮತ್ತು ಶ್ರೀ ರವಿ ಬಿ.ಪಿ. ರವರಿಗೆ ಧನ್ಯವಾದಗಳು.
ಈ ಗ್ರಂಥ ಜಗತ್ತಿನಾದ್ಯಾಂತ ಹರಿದಾಡುವಂತೆ ರೂಪು ನೀಡಿ ಎಂದು ವಿಚಾರಗಳನ್ನು ಎಳೆ-ಎಳೆಯಾಗಿ ಮನವರಿಕೆ ಮಾಡಿಕೊಟ್ಟ ನಿರುತ ಪಬ್ಲಿಕೇಷನ್ಸ್‍ನ ರಮೇಶ. ಎಂ.ಹೆಚ್ ಇವರಿಗೆ ಕೃತಜ್ಞತೆಗಳು. ಅಚ್ಚುಕಟ್ಟಾಗಿ ಗ್ರಂಥ ಪ್ರಕಟಿಸಿ ಕೊಟ್ಟ ನಿರುತ ಪಬ್ಲಿಕೇಷನ್ಸ್ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳು. ಕೃತಿ ಹೊರತರಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಆತ್ಮೀಯರಿಗೂ ಹೃತ್ಪೂರ್ವಕವಾದ ಅನಂತ- ಅನಂತ ಧನ್ಯವಾದಗಳು.
ಡಾ. ಭಾಗ್ಯಮ್ಮ. ಎನ್ ಎಂಎ., ಪಿಎಚ್.ಡಿ.
ಸಿದ್ಧಾಪುರ ಅಂಚೆ, ಭೀಮಸಮುದ್ರ ರಸ್ತೆ, ಚಿತ್ರದುರ್ಗ (ತಾ), (ಜಿ)-577520
ಪರಿವಿಡಿ
ಅಧ್ಯಾಯ-01 : ಪೀಠಿಕೆ
ಅಧ್ಯಾಯ-02 : ಸಂಶೋಧನಾ ವಿಧಾನ
ಅಧ್ಯಾಯ-03 : ಶಾಲಾ ಶಿಕ್ಷಣ ಪದ್ಧತಿ
ಅಧ್ಯಾಯ-04 : ಶಿಕ್ಷಣದ ಸಾರ್ವತ್ರೀಕರಣಕ್ಕೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು
ಅಧ್ಯಾಯ-05 : ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಬಿಸಿಯೂಟ ಯೋಜನೆಯ ಪ್ರಭಾವದ ಚಿತ್ರಣ
ಅಧ್ಯಾಯ-06 : ಬಿಸಿಯೂಟ ಯೋಜನೆಯ ಬಗ್ಗೆ ಎಸ್.ಡಿ.ಎಂ.ಸಿ. ಪೋಷಕ ಮತ್ತು ಶಿಕ್ಷಕರ ಧೋರಣೆ
ಅಧ್ಯಾಯ-07 : ಸಾರಾಂಶ ಮತ್ತು ಉಪಸಂಹಾರ
ಪರಾಮರ್ಶನ ಗ್ರಂಥಗಳು
ಛಾಯಾಚಿತ್ರಗಳು