- General Books
- >
- ಆತ್ಮೀಯರು
ಆತ್ಮೀಯರು
SKU:
$0.00
Unavailable
per item
ಪರಿವಿಡಿ
1. ರಾಮಚಂದ್ರನ ಚಿತ್ರ
2. ಬಾಗದಿಹ ನಿಲುವು-ಬಸವರಾಜ ಕಟ್ಟೀಮನಿಯವರದ್ದು
3. ವಿಶ್ವವನ್ನೇ ತಮ್ಮ ಹೃದಯದಲ್ಲಿಟ್ಟುಕೊಂಡು ಕಾಪಾಡಿದ ಸುತ್ತೂರ ಜಗದ್ಗುರು
ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು
4. ಬದುಕು-ಬರಹಗಳ ಸಮತೂಕ : ಡಾ. ಚೆನ್ನವೀರ ಕಣವಿ
5. ಚೌಕಟ್ಟಿಗೆ ಸಿಗದ ವ್ಯಕ್ತಿತ್ವ : ಡಾ. ಚಿದಾನಂದಮೂರ್ತಿ
6. ಗುರು-ಶಿಷ್ಯರ ಸೋಲು-ಗೆಲುವು-ವೀರಪ್ಪ ಮಾಸ್ತರನ್ನು ನೆನೆದು
7. ನಮ್ಮ ನಡುವೆಯೇ ಇರುವ ಒಂದು `ಲೆಜಂಡ್ ಶ್ರೀ ರಾಜಶೇಖರನ್ !
8. ಕೃತಜ್ಞತೆಯ ಸಮರ್ಪಣೆ-ಡಾ. ಸಿದ್ಧರಾಮಣ್ಣಗೆ
9. ನನ್ನ ಸಮ್ಮತಿಯಿಂದ ಮುಗುಳೊಡೆದು ಮೃದು ಮಧುರವಾಗಿ ಅರಳಿದ ದಾಂಪತ್ಯ : ವಿಜಯನಳಿನಿ=ರಮೇಶ
10. ಧೀರ ದೊರೆಸ್ವಾಮಿ
11. ಸ್ಥಿತಪ್ರಜ್ಞೆಯ ಅಪರಂಜಿ: ಪ್ರೊ. ಎಂ. ವಾಸುದೇವಮೂರ್ತಿ
12. ಆದರ್ಶ-ಅನಾದರ್ಶಗಳ ಸೋಜಿಗ: ಉಮಾ-ಶ್ರೀ
13. ಶೈಕ್ಷಣಿಕ ಮರುಭೂಮಿಯಲ್ಲೊಂದು ಓಯಸಿಸ್ : ಡಾ. ಟಿ. ತಿಪ್ಪೇಸ್ವಾಮಿ
14. ಆಧುನಿಕ ಸಮಾಜಕಾರ್ಯಕ್ಕೆ ಪ್ರಾಚ್ಯದ ಲೇಪನ : ಶ್ರೀಮತಿ ಸುಶೀಲಮ್ಮ
15. ಇಲ್ಲಿ, ಅಲ್ಲಿ, ಎಲ್ಲೆಲ್ಲೂ ಕೈಗೆ ಸಿಕ್ಕೂ ಸಿಗದ ಪಾದರಸ : ರಾ.ನಂ.
16. ಸ್ಥಾಯೀ ಭಾವ : ಪ್ರೊ. ಶೇಖರ್ ಪೂಜಾರ್
17. ಪ್ರೊ. ಎ.ಎಸ್.(ಆ.ಸೂ.) ವೆಂಕಟರಾಮಯ್ಯ
18. ಅಚ್ಚರಿಯ ಆಗರ ಗೊರುಚ
19. ವಿಶಾಲ ದೃಷ್ಟಿಯನ್ನು ನೀಡಿದ ಪ್ರೊ|| ಡೇವಿಡ್ ಹಾರ್ಸ್ಬ್ರೊ
20. ಅಲೆಮಾರಿ ಗೆಳೆಯ ಡಾ. ಮರಕಿಣಿ ಭಟ್ಟ
21. ಅಳುವ ಕಡಲಲ್ಲಿ ನಗುವಿನ ಹಾಯಿ ದೋಣಿಯನ್ನು ಸಾಗಿಸಿದ ಪ್ರೊ. ಗೋಪಾಲಕೃಷ್ಣ ಅಡಿಗ
22. ಅತಿರೇಕವೇ ಮೂರ್ತಿಗೊಂಡ ವ್ಯಕ್ತಿತ್ವದ ಡಾ. ಕೆ. ಈಶ್ವರನ್
23. ಮರೆಯಲಾದೀತೆ ಮೋಡದಲ್ಲಿ ಮರೆಯಾದ ಚಂದ್ರಪ್ಪನವರನ್ನು !
24. ಮಧುರಯಾತನೆಯ ಇತಿಹಾಸವನ್ನು ನನ್ನ ಜೀವನದಲ್ಲಿ ಬರೆದ ಪ್ರೊ. ಜಯಲಕ್ಷಮ್ಮಣ್ಣಿ
25. ಮಲ್ಲೇಶ್ವರನಲ್ಲಡಗಿದ ಶ್ರೀ ಕೊಟ್ರಪ್ಪ
26. ಲೌಕಿಕ-ಅಲೌಕಿಕದ ಸಂಯೋಚಿತ ವ್ಯಕ್ತಿತ್ವದ ಇನಾಮಹೊಂಗಲದ ಶ್ರೀ ಚೆನ್ನವೀರ ಸ್ವಾಮಿಗಳು
27. ನನ್ನ ಬಾಳಿಗೆ ತಿರುವು ಕೊಟ್ಟ ಡಾ. ಬಿ.ಎಲ್. ಮಂಜುನಾಥ
28. ಅವ್ವನಾದ ಅಕ್ಕ : ಬಸಕ್ಕ
29. ಶೂನ್ಯ(ವನ್ನೆ) ಸಂಪಾದಿಸಿದ ಸ್ನೇಹಿತ, ಡಾ. ಟಿ.ವಿ. ನಾಗಪ್ಪ
30. ಮಾಡುವ ಮಾಟದಲ್ಲಿ ತಾನಿಲ್ಲದಿದ್ದ ಡಾ. ಶಾಂತಿನಾಥ ದೇಸಾಯಿ
31. ಗೊತ್ತಿಗೆ ಹಚ್ಚಿದ ಗುರು ಡಾ. ಸಿ.ಪಿ. ಗೋಯಲ್
ಅನುಬಂಧ
- ಸಮಾಜಕಾರ್ಯದ ಕಣಸುಗಾರ
ಲೇಖಕಿ-ಕು. ನಿವೇದಿತ ಬಿ.ಎಂ
ಇತ್ತೀಚೆಗೆ ಅಂದರೆ 2013 ಫೆಬ್ರುವರಿ-ಮಾರ್ಚ್ನಲ್ಲಿ, ಅಪ್ಪಾಜಿಯವರು ಹಳೆಯ ನೆನಪುಗಳನ್ನು ಕೆದಕುತ್ತಿದ್ದರು. ಆಗ ನಮಗೆಲ್ಲ ಅನಿಸಿದ್ದು, ಇವುಗಳನ್ನೇ ಪುಸ್ತಕ ರೂಪದಲ್ಲಿ ಹಿಡಿದು ಅವುಗಳು ಹಾರದಂತೆ ನೋಡಿಕೊಳ್ಳಬಾರದೇಕೆ, ಎಂದು. ಅಸಂಖ್ಯ ಅಸಂಘಟಿತ ಅನುಭವಗಳಲ್ಲಿ ಮುಖ್ಯವಾದವುಗಳನ್ನು, ಅಂದರೆ, ಅವರ ಜೀವನದ ಮೈಲುಗಲ್ಲುಗಳಿಗೆ ಕಾರಣೀಭೂತರಾದವರ ಬಗ್ಗೆ ಬರೆಯುವುದು ಉಚಿತವೆನಿಸಿತು. ಆಗಲೇ ಅನೇಕರ ಬಗ್ಗೆ ಕೆಲವು ಸಂದರ್ಭಗಳಲ್ಲಿ ಬರೆದಿದ್ದರು, ಪ್ರಕಟಿಸಿದ್ದರು. ಚದುರಿದ್ದ ಇನ್ನು ಕೆಲವು ಹಳೆಯ, ಬಾಡದ ಹೂವುಗಳನ್ನು ಮತ್ತೆ ಒಂದೆಡೆ ಜೋಡಿಸಿ, ಮತ್ತು ಮಾಸಿದ್ದರೂ ಹಸಿರಾಗಿರುವ ವ್ಯಕ್ತಿಗಳ-ವ್ಯಕ್ತಿತ್ವಗಳನ್ನು ಮತ್ತೊಮ್ಮೆ ಚಿಗುರುವಂತೆ ಮಾಡಿ, ಅವುಗಳ ತೋರಣವನ್ನು ಕಟ್ಟಿದ್ದೇವೆ. ಅಪ್ಪಾಜಿಯವರು ಇವರನ್ನೆಲ್ಲಾ ಮತ್ತೆ ಸಂಜೆಗಣ್ಣಿನಲ್ಲಿ ನೋಡುತ್ತಾ ಇದ್ದರು, ಅವುಗಳು ನಮ್ಮ ಕೈಗಳ ಮೂಲಕ ಸೂಕ್ಷ್ಮರೂಪದಿಂದ ಸ್ಥೂಲ ರೂಪಕ್ಕೆ ಇಳಿದಿವೆ.
ಈ ಕೃತಿಯಲ್ಲಿ ಕಾಲೇಜಿನ ಸ್ನೇಹಿತ ರಾಮಚಂದ್ರನಿಂದ ಹಿಡಿದು `ಗೊತ್ತಿಗೆ ಹಚ್ಚಿದ ಗುರು ಗೋಯಲ್ ರವರೆಗೂ ಇರುವ ಚಿತ್ರಣಗಳನ್ನು ಕಾಣಬಹುದು. ಈ ಚಿತ್ರಣಗಳು ಅವರ ಜೀವನಾನುಭವದ ವೃಕ್ಷವಾಗಲು ಕಾರಣೀಭೂತವಾಗಿವೆ. ಇಲ್ಲಿ ಬರುವ ವ್ಯಕ್ತಿಗಳು ಬೇರೆ ಬೇರೆ ಗುಂಪುಗಳಿಗೆ, ಪ್ರದೇಶಗಳಿಗೆ ಸೇರಿದವರಾಗಿದ್ದಾರೆ, ಇಲ್ಲಿ ಪುರುಷರಿದ್ದಾರೆ, ಮಹಿಳೆಯರಿದ್ದಾರೆ, ಅಕ್ಷರಸ್ಥರಿದ್ದಾರೆ, ಅನಕ್ಷರಸ್ಥರಿದ್ದಾರೆ, ಅತ್ಯುನ್ನತ ಪದವಿಗಳನ್ನು ಪಡೆದವರಿದ್ದಾರೆ. ರಕ್ತ ಸಂಬಂಧಿಕರಿದ್ದಾರೆ, ರಕ್ತ ಸಂಬಂಧಿಕರಲ್ಲದಿದ್ದರೂ ಸಂಬಂಧಿಕರಿಗಿಂತ ಕಡಿಮೆಯೇನೂ ಅಲ್ಲದವರಿದ್ದಾರೆ.
ಇವರೆಲ್ಲರೂ ಸೇರಿ, ನಮ್ಮ ತಂದೆಯವರ ಜೀವನಾನುಭವದ ವೃಕ್ಷದ ಬೇರುಗಳಾಗಿದ್ದಾರೆ-ಕಾಂಡಗಳಾಗಿದ್ದಾರೆ-ರೆಂಬೆ ಕೊಂಬೆಗಳಾಗಿ ಹರಡಿದ್ದಾರೆ. ಇವರಷ್ಟೇ ಅಲ್ಲ, ಇನ್ನೂ ಅನೇಕರು ಪ್ರಭಾವಗಳನ್ನು ಬೀರಿದ್ದಾರೆ ; ಇವರುಗಳಿಂದ ಒಳ್ಳೆಯದೂ ಆಗಿದೆ ಕೆಟ್ಟದ್ದೂ ಆಗಿದೆ. ಆ ಪ್ರಭಾವಗಳು ಕ್ಷಣಿಕವಾಗಿರಬಹುದು, ದೀರ್ಘವಾಗಿರಬಹುದು. ಆದರೆ ಎಲ್ಲವನ್ನೂ ದಾಖಲಿಸುವುದು ಕರಕಷ್ಟ. ಇವರೂ ಮರದ ಭಾಗದಲ್ಲಿ ಅಲ್ಲಲ್ಲಿ ನುಸುಳಿ ಕುಳಿತಿದ್ದಾರೆ.
ಈ ಪುಸ್ತಕಗಳಲ್ಲಿ ಬರುವ ವ್ಯಕ್ತಿಗಳ ಇಡೀ ಜೀವನದ ವಿವರಗಳನ್ನೇನೂ ಇಲ್ಲಿ ಕೊಟ್ಟಿಲ್ಲ. ಆದರೆ ಅವರ ನೆಪದಲ್ಲಿ ತಂದೆಯವರು ತಮ್ಮ ಜೀವನದ ತುಣುಕುಗಳನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ, ಎಂದು ಅನಿಸುತ್ತದೆ. ಅವರೆಲ್ಲರೂ, ಇವರ ವ್ಯಕ್ತಿತ್ವದ ರೂಪಣಿಕೆಗೆ, ಜೀವನದ ನಿರ್ವಹಣೆಗೆ ನೇರವಾಗಿಯೋ ಪರೋಕ್ಷವಾಗಿಯೋ ನೆರವು ನೀಡಿದ್ದಾರೆ ಎಂಬುದನ್ನು ಕೃತಜ್ಞತಾಪೂರಕವಾಗಿ ನೆನೆದುಕೊಂಡಿರುವುದು ಕಾಣಿಸುತ್ತದೆ.
ಈ ಪುಸ್ತಕ ನಿಮಗೆಲ್ಲ ಮೆಚ್ಚುಗೆ ಆಗಬಹುದೆಂದು ನಾವು ಭಾವಿಸಿದ್ದೇವೆ.
ಜುಲೈ 2013
- ಕುಟುಂಬದ ಸದಸ್ಯರು